ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Vistarane SSLC Social Science Question Answers
ಒಂದು ಅಂಕದ ಪ್ರಶೋತ್ತರಗಳು:
1➤ ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?2➤ ಸಹಾಯಕ ಸೈನ್ಯ ಪದ್ಧತಿಯನ್ನು ಯಾರು ಜಾರಿಗೆ ತಂದರು?
3➤ ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಯಾವಾಗ ಜಾರಿಗೆ ತಂದನು?
4➤ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಯಾವುದು?
5➤ ಎರಡನೇ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
6➤ ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು?
7➤ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ನೀತಿಯನ್ನು ಜಾರಿಗೆ ತರಲಾದ ವರ್ಷ ಯಾವುದು?
8➤ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ನೀತಿಯನ್ನು ಯಾರು ಜಾರಿಗೆ ತಂದರು?
9➤ ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿ ಕೊಂಡವರು ಯಾರು?
10➤ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ರಾಜ್ಯಗಳಾವುವು?
11➤ ಲಾರ್ಡ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು?
12➤ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗೆ ಒಳಪಟ್ಟ ರಾಜ್ಯಗಳಾವುವು?
13➤ ಪಂಜಾಬಿನ ಮೇಲೆ ಬ್ರಿಟಿಷರು ನೇರ ಆಳ್ವಿಕೆಯನ್ನು ಹೇರಲು ಹೋರಟಾಗ ಪ್ರತಿಭಟಿಸಿದವರು ಯಾರು ?
14➤ ಡಾಲ್ ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ಯಾವ ನೀತಿಯ ಮೂಲಕ ಸಾಧಿಸಿದನು?
15➤ ಬ್ರಿಟಿಷರು ಭಾರತದಲ್ಲಿ ರಾಜಕೀಯ ಅಸ್ತ್ರವಾಗಿ ಜಾರಿಗೊಳಿಸಿದ ನೀತಿ ಯಾವುದು?
ಆಂಗ್ಲೋ-ಮರಾಠಾ ಯುದ್ಧಗಳು | |||
---|---|---|---|
ಕ್ರ.ಸಂ | ಯುದ್ಧಗಳು | ವರ್ಷ | ಒಪ್ಪಂದ |
1 | ಮೊದಲನೆಯ ಆಂಗ್ಲೋ-ಮರಾಠಾ ಯುದ್ಧ | 1775-1782 | ಸಾಲಬಾಯ್ ಒಪ್ಪಂದ |
2 | ಎರಡನೆಯ ಆಂಗ್ಲೋ ಮರಾಠಾ ಯುದ್ಧ | 1803-1805 | ಬೆಸ್ಸಿನ್ ಒಪ್ಪಂದ |
3 | ಮೂರನೆಯ ಆಂಗ್ಲೋ ಮರಾಠಾ ಯುದ್ಧ | 1817-18 | - |
ಇಂಗ್ಲೀಷರ ಪ್ರಮುಖ ನೀತಿಗಳು | |||
---|---|---|---|
ಕ್ರ.ಸಂ | ನೀತಿಗಳು | ವರ್ಷ | ವ್ಯಕ್ತಿಗಳು |
1 | ಸಹಾಯಕ ಸೈನ್ಯ ಪದ್ಧತಿ | 1798 | ಲಾರ್ಡ ವೆಲ್ಲಸ್ಲಿ |
2 | ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ | 1848 | ಲಾರ್ಡ ಡಾಲ್ ಹೌಸಿ |
II. ಎರಡು ಅಂಕದ ಪ್ರಶೋತ್ತರಗಳು.
1. ಭಾರತೀಯ ರಾಜ್ಯಗಳನ್ನು ಉಪಾಯವಾಗಿ ಕಬಳಿಸಿದ ಬ್ರಿಟಿಷರ ಎರಡು ನೀತಿಗಳಾವುವು?
ಉತ್ತರ:-
- ಸಹಾಯಕ ಸೈನ್ಯ ಪದ್ಧತಿ
- ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ
2. ಸಹಾಯಕ ಸೈನ್ಯ ಪದ್ಧತಿಯ ನಿಭಂದನೆಗಳಾವುವು?
- ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ಲಾರ್ಡ ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದನು.
- ಈ ಒಪ್ಪಂದಕ್ಕೆ ಒಳಗಾದ ರಾಜರು ಬ್ರಿಟಿಷ್ ಸೈನ್ಯದ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕಾಗಿತ್ತು
- ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕಾಗಿತ್ತು.
- ಬ್ರಿಟಿಷರ ಅನುಮತಿ ಇಲ್ಲದೇ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನುರನ್ನು ನೇಮಿಸಿಕೊಳ್ಳವಂತಿರಲಿಲ್ಲ
- ಸೈನ್ಯದ ವೆಚ್ಚವನ್ನು ದೇಶಿಯ ರಾಜರೇ ನೋಡಿಕೊಳ್ಳಬೇಕಾಗಿತ್ತು
- ಭಾರತೀಯ ರಾಜರು ಯುದ್ಧ ಅಥವಾ ಸಂಧಾನ ಮಾಡಿಕೊಳ್ಳುವುದಕ್ಕೆ ಗವರ್ನರ್ ಜನರಲ್ ಅನುಮತಿ ಬೇಕಿತ್ತು.
- ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುತ್ತಿತ್ತು.
- ದೇಶಿಯ ರಾಜ್ಯರು ಯುದ್ಧ ಮತ್ತು ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ ಜನರಲ್ ಅನುಮತಿ ಪಡೆಯಬೇಕಾಗಿತ್ತು
3. ಬ್ರಿಟಿಷರ ಅಧಿಕಾರ ವಿಸ್ತರಣೆಯಲ್ಲಿ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ನೀತಿ ಹೇಗೆ ಸಹಕಾರಿಯಾಯಿತು?
- ಲಾರ್ಡ ಡಾಲ್ ಹೌಸಿ 1848 ರಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದನು.
- ಈ ನೀತಿಯ ಪ್ರಕಾರ “ಭಾರತೀಯ ರಾಜರು ಮಕ್ಕಳಿಲ್ಲದೇ ಮೃತರಾದರೆ ಅವರು ದತ್ತು ತೆಗೆದುಕೊಂಡಿದ್ದ ಪುತ್ರರರಿಗೆ ಉತ್ತಾರಾಧಿಕಾರತ್ವದ ಹಕ್ಕಿರಲಿಲ್ಲ”
- ಇಂತಹ ರಾಜ್ಯಗಳು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು.
- ಈ ನೀತಿಗೆ ಒಳಪಟ್ಟ ರಾಜ್ಯಗಳೆಂದರೆ-ಸತಾರಾ, ಜೈಪುರ, ಸಂಬಲಪುರ್, ಉದಯಪುರ, ಝಾನ್ಸಿ, ನಾಗಪುರ.
4. ಮೊದಲ ಆಂಗ್ಲೋ-ಮರಾಠ ಯುದ್ಧಕ್ಕೆ ಕಾರಣಗಳೇನು?
- ಮರಾಠರ ಬಲಿಷ್ಠ ಪೇಳ್ವೆ ಮಾಧವರಾವ್‌ನ ಮರಣದ ನಂತರ ಅವನ ತಮ್ಮ ನಾರಾಯಣರಾಯನು ಪೇಳ್ವೆ ಸ್ಥಾನಕ್ಕೆ ಬಂದನು
- ಆದರೆ ರಘುನಾಥರಾಯನಿಂದ ಪೇಳ್ವೆ ನಾರಾಯಣರಾಯನ ಕೊಲೆಯಾಯಿತು.
- ಪೇಶ್ವೆ ಸ್ಥಾನದ ಕಲಹದಲ್ಲಿ ನಾನಾ ಫಡ್ನವೀಸ್‌ನ ನೇತೃತ್ವದಲ್ಲಿ ನಾರಾಯಣರಾಯನ ಮಗ ಎರಡನೇ ಮಾಧವರಾವನಿಗೆ ಮರಾಠರು ಪಟ್ಟಕಟ್ಟಿದರು.
- ರಘೋಬನು ಬ್ರಿಟಿಷರ ಬೆಂಬಲವನ್ನು ಕೊರಿದನು.
- ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು.
- ಬ್ರಿಟಿಷರ ಮತ್ತು ಮರಾಠರ ನಡುವೆ ಯುದ್ಧ ನಡೆದು ಕೊನೆಗೆ ಸಾಲ್‌ಬಾಯ್ ಒಪ್ಪಂದದೊಂದಿಗೆ ಕೊನೆಗೊಂಡಿತು
5. ಎರಡನೇ ಆಂಗ್ಲೋ-ಮರಾಠಾ ಯುದ್ಧವನ್ನು ವಿವರಿಸಿರಿ?
- ಮರಾಠರ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣ.
- ಹೋಳ್ಕರ ಮನೆತನದ ಯಶವಂತರಾವ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್‌ರಾವ ಹಾಗೂ ಪೇಶ್ವೆ ಎರಡನೇ ಬಾಜಿರಾವ ಇನ್ನಂದು ಕಡೆಗಿದ್ದರು.
- ಹೋಳ್ಕರ್ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಗಳ ಸೈನ್ಯವನ್ನು ಸೋಲಿಸಿತು. ಪೇಳ್ವೆ ಬ್ರಿಟಿಷರ ಸಹಾಯ ಯಾಚಿಸಿದನು
- ಇದು ಲಾರ್ಡ ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ದೊರೆಯಿತು.
- ಪೇಶ್ವೆ ಯು “ಬಸ್ಸಿನ್ ಒಪ್ಪಂದಕ್ಕೆ” ಸಹಿ ಹಾಕುವ ಮೂಲಕ ಸಹಾಯಕ ಸೈನ್ಯಪದ್ಧತಿಯನ್ನು ಒಪ್ಪಿದನು.
- ಈ ಒಪ್ಪಂದವನ್ನು ಅನೇಕ ಮರಾಠ ನಾಯಕರು ವಿರೋಧಿಸಿದರು.
- ಎಲ್ಲಾ ನಾಯಕರನ್ನು ಲಾರ್ಡ ವೆಲ್ಲೆಸ್ಲಿ ಅನೇಕ ಯುದ್ಧಗಳಲ್ಲಿ ಸೋಲಿಸಿದನು.
6. ಮೂರನೇ ಆಂಗ್ಲೋ-ಮರಾಠಾ ಯುದ್ಧವನ್ನು ವಿವರಿಸಿರಿ?
- ಮರಾಠರ ಮನೆತನಗಳು ತಮ್ಮ ಘನತೆ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.
- ಮರಾಠರ ಪೇಶ್ವ ಕೂಡಾ ಬ್ರಿಟಿಷ್ ನಿಯಂತ್ರಣದಿಂದ ಪಾರಲಾಗಲು ಹವಣಿಸುತ್ತಿದ್ದನು.
- ಪೇಶ್ವೆ ಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.
- ನಾಗಪುರದ ಅಪ್ಪಾಸಾಹೇಬ & ಮಲ್ದಾರರಾವ ಹೋಳ್ಕರ ಕೂಡಾ ಬ್ರಿಟಿಷರ ವಿರುದ್ಧ ದಂಗೆ ಎದ್ದು ಬ್ರಿಟಿಷರ ಕೈಯಲ್ಲಿ ಸೋತರು.
- ಎರಡನೇ ಬಾಜೀರಾವನು ಬ್ರಿಟಿಷರ ವಿರುದ್ಧ ಕೋರೆಗಾವ್ ಮತ್ತು ಅಪ್ಪಿ ಯುದ್ಧದಲ್ಲಿ ಸೋತು ಶರಣಾದನು
- ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜೀರಾಯನಿಗೆ ವಿಶ್ರಾಂತಿ ವೇತನ ನೀಡಿದರು.
No comments:
Post a Comment
If you have any doubts please let me know