Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 26 June 2022

ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು-Bharatakke Yuropiyannara Agamana SSLC Social Science Question Answers

 

ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು  -Bharatakke Yuropiyannara Agamana SSLC Social Science Question Answers 



ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು-Bharatakke Europeannara Agamana SSLC Social Science Question Answers:

ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು-Bharatakke Yuropiyannara Agamana SSLC Social Science Question Answers

ಭಾರತಕ್ಕೆ ಯುರೋಪಿಯನ್ನರ ಆಗಮನ ಒಂದು ಅಂಕದ ಪ್ರಶ್ನೋತ್ತರಗಳು


1➤ ಮೆಡಿಟರೇನಿಯನ್ ಹಾಗೂ ಯುರೋಪಿನ ವ್ಯಾಪಾರವು ಈ ದೇಶದ ಏಕಸ್ವಾಮ್ಯತೆಗೆ ಒಳಪಟ್ಟಿತ್ತು.

2➤ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ

3➤ ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಮೊದಲು ಬಂದು ತಲುಪಿದ್ದು ಕ್ರಿ ಶ ________ ರಲ್ಲಿ.

4➤ 17ನೇ ಶತಮಾನದವರಗೆ ಅರಬಿಯನ್ ಸಮುದ್ರದ ಮೇಲೆ ವ್ಯಾಪಾರಿ ಏಕಸ್ವಾಮ್ಯತೆಯನ್ನು ಹೊಂದಿದವರು

5➤ ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ

6➤ ಮೊದಲ ಕರ್ನಾಟಿಕ್ ಯುದ್ಧದ ಸಂದರ್ಭದಲ್ಲಿ ಇದ್ದ ಕರ್ನಾಟಿಕದ ನವಾಬ

7➤ ಕರ್ನಾಟಿಕ್ ಯದ್ಧಗಳ ಸಂದರ್ಭಗಳಲ್ಲಿ ಫ್ರೆಂಚರ ನಾಯಕತ್ವವನ್ನು ವಹಿಸಿದವನು -

8➤ ಫ್ರೆಂಚರ ಅವನತಿಗೆ ಕಾರಣವಾದ ಕದನ

9➤ ಫ್ರೆಂಚರನ್ನು ವಾಂಡಿವಾಷ್ ಕದನದಲ್ಲಿ ಸಂಪೂರ್ಣ ವಾಗಿ ಸೋಲಿಸಿದ ಇಂಗ್ಲೀಷ್ ಸೇನಾಧಿಕಾರಿ-

10➤ ಸಿರಾಜ್-ಉದ್-ದೌಲ್‌ನು ಈ ಪ್ರಾಂತ್ಯದ ನವಾಬನಾಗಿದ್ದನು-

11➤ ಪ್ಲಾಸಿಕದನದಲ್ಲಿ ಇಂಗ್ಲೀಷ್ ಸೇನೆಯ ನೇತೃತ್ವ ವಹಿಸಿದ್ದವನು-

12➤ ಸಿರಾಜುದೌಲನ ನಂತರ ಅಥವಾ ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವನು -

13➤ ಮೀರ್ ಕಾಸಿಂನ ತ್ರಿಮೈತ್ರಿ ಕೂಟದಲ್ಲಿದ್ದ ಔದ್‌ನ ನವಾಬ.

14➤ ಬಕ್ಸಾರ ಕದನ ನಡೆದ ವರ್ಷ-

15➤ ಬಂಗಾಲ ಪ್ರಾಂತ್ಯದಲ್ಲಿ ಬ್ರಿಟಿಷರಿಗೆ ದಿವಾನಿ ಹಕ್ಕನ್ನು ನೀಡಿದವರು.-

16➤ ಬಂಗಾಳದಲ್ಲಿ ದ್ವಿ-ಸರಕಾರವನ್ನು ಜಾರಿಗೆ ತಂದವನು.

ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು-Bharatakke Yuropiyannara Agamana SSLC Social Science Question Answers

ಭಾರತಕ್ಕೆ ಯುರೋಪಿಯನ್ನರ ಆಗಮನ : ಬಹು ಆಯ್ಕೆ ಪ್ರಶ್ನೆಗಳು

1➤ ಮಧ್ಯಯುಗದಲ್ಲಿ ಭಾರತದ ಸಾಂಬಾರ ಪದಾರ್ಥಗಳು ಹೆಚ್ಚಾಗಿ ರಫ್ತಾಗುತ್ತಿದ್ದ ಯುರೋಪಿನ ಸಾಮ್ರಾಜ್ಯಗಳು

ⓐ ಇಟಲಿ & ಇಂಗ್ಲೆಂಡ
ⓑ ಗ್ರೀಕ್ & ರೋಮ್
ⓒ ಗ್ರೀಕ್ & ಇಟಲಿ
ⓓ ಇಟಲಿ & ಪೋರ್ಚಗಲ್

2➤ ಪಶ್ಚಿಮ ಯುರೋಪಿನ ರಾಷ್ಟ್ರಗಳು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದವು. ಏಕೆಂದರೆ

ⓐ ಅಧಿಕ ಲಾಭ ಗಳಿಸಲು
ⓑ ವಸಾಹತುಶಾಹಿ ನೀತಿ ಅನುಸರಿಸಲು
ⓒ ಇಟಲಿಯ ಏಕಸ್ವಾಮ್ಯವನ್ನು ಮುರಿಯಲು
ⓓ ಸಾಗರ ಮಾರ್ಗಗಳ ಮೇಲೆ ಹಿಡಿತ ಸಾಧಿಸಲು

3➤ ಹೊಸ ಭೂಪ್ರದೇಶಗಳನ್ನು ಅನ್ವೇಷಿಸಲು ಸಮುದ್ರಯಾನಕ್ಕೆ ಪ್ರೋತ್ಸಾಹ ನೀಡಿದ ರಾಷ್ಟ್ರಗಳು.

ⓐ ಸ್ಪೇನ್ & ಪೋರ್ಚಗಲ್
ⓑ ಪೋರ್ಚಗಲ್ & ಬ್ರಿಟನ್
ⓒ ಪೋರ್ಚಗಲ್ & ಫ್ರಾನ್ಸ್
ⓓ ಬ್ರಿಟನ್ & ಫ್ರಾನ್ಸ್

4➤ ಬ್ರಿಟಿಷರು ಭಾರತದಲ್ಲಿ ವಶಪಡಿಸಿಕೊಂಡ ಮೊದಲ ಪ್ರಾಂತ್ಯ,

ⓐ ಮದ್ರಾಸ್
ⓑ ಹೈದ್ರಾಬಾದ್
ⓒ ಬಂಗಾಳ
ⓓ ಕರ್ನಾಟಿಕ್

5➤ ಬ್ರಿಟಿಷ್ ವ್ಯಾಪಾರಿಗಳು ಭಾರತದಲ್ಲಿ ಒಡೆಯರಾದದ್ದು ಈ ಅಂಶಗಳಿಂದ.

ⓐ ರಾಜಕೀಯ ಮುತ್ಸದ್ದಿತನ & ಕುಟಿಲತೆಯಿಂದ
ⓑ ಸೈನ್ಯದ ಬಲದಿಂದ
ⓒ ವ್ಯಾಪಾರದಲ್ಲಿ ಪ್ರಾಭಲ್ಯ ಹೊಂದುವದರ ಮೂಲಕ
ⓓ ರಾಜಕೀಯ ಪ್ರಾಭಲ್ಯದಿಂದ

6➤ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲು ದೇಶಿಯ ಸಂಸ್ಥಾನಗಳ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದವರು.

ⓐ ಪೋರ್ಚಗೀಸರು & ಬ್ರಿಟಿಷರು
ⓑ ಬ್ರಿಟಿಷರು & ಫ್ರೆಂಚರು
ⓒ ಫ್ರೆಂಚರು & ಡಚ್ಚರು
ⓓ ಡಚ್ಚರು & ಪೋರ್ಚಗೀಸರು

7➤ ಕರ್ನಾಟಿಕ್ ಯುದ್ಧಗಳು ಇವರ ನಡುವೆ ನಡೆದವು.

ⓐ ಬ್ರಿಟಿಷರು & ಡಚ್ಚರು
ⓑ ಡಚ್ಚರು & ಫ್ರೆಂಚರು
ⓒ ಬ್ರಿಟಿಷರು & ಪೋರ್ಚಗೀಸರು
ⓓ ಬ್ರಿಟಿಷರು & ಫ್ರೆಂಚರು

ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು-Bharatakke Yuropiyannara Agamana SSLC Social Science Question Answers

ಭಾರತಕ್ಕೆ ಯುರೋಪಿಯನ್ನರ ಆಗಮನ: ಒಂದು ವಾಕ್ಯದಲ್ಲಿ ಉತ್ತರಿಸಿ.

1. ಯುರೋಪಿನಲ್ಲಿ ಭಾರತದ ಯಾವ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದ್ದಿತು?

ಉತ್ತರ: ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ದಾಲ್ಟಿನ್ನಿ, ಏಲಕ್ಕಿ, ಶುಂಠಿ ಇತ್ಯಾದಿ ವಸ್ತುಗಳಿಗೆ ಯುರೋಪಿನ ಜನರಿಂದ ಯಥೇಚ್ಛ ಬೇಡಿಕೆ ಇತ್ತು.


2. ಮಧ್ಯಯುಗದಲ್ಲಿ ಯುರೋಪ ಮತ್ತು ಏಷ್ಯಾ ಖಂಡಗಳ ನಡುವಿನ ವ್ಯಾಪಾರವು ಯಾವ ಮಾರ್ಗಗಳ ಮೂಲಕ ಅಥವಾ ನಡೆಯುತ್ತಿತ್ತು? ಅಥವಾ ಭಾರತದೊಂದಿಗೆ ಯುರೋಪಿನ ವ್ಯಾಪಾರವು ಹೇಗೆ ನಡೆಯುತ್ತಿತ್ತು?

ಉತ್ತರ: ಮಧ್ಯಯುಗದಲ್ಲಿ ಯುರೋಪ ಮತ್ತು ಏಷ್ಯಾ ಖಂಡಗಳ ನಡುವಿನ ವ್ಯಾಪಾರವು ಪರ್ಶಿಯನ್ ಕೊಲ್ಲಿ, ಕೆಂಪುಸಮುದ್ರ ಮತ್ತು ಮೆಡಿಟೇರಿಯನ್ ಸಮುದ್ರಗಳ ಜಲಮಾರ್ಗ ಮತ್ತು ಭಾರತದ ವಾಯುವ್ಯ ಭಾಗದ ಮೂಲಕ ನಡೆಯುತ್ತಿತ್ತು.


3. ಇಟಲಿಯ ಸಂಪದ್ಭರಿತ ನಗರಗಳಾವುವು?

ಉತ್ತರ : ಇಟಲಿಯ ಸಂಪದ್ಭರಿತ ನಗರಗಳು ವಿನಿಸ್,  ಜಿನೋವಾ, ಮಿಲಾನ್ ಮತ್ತು ಪ್ಲಾರೆನ್ಸ್.

4. ನೌಕಾಯಾನದಲ್ಲಿ ನಾವಿಕರಿಗೆ ಸಹಾಯಕವಾದ ವೈಜ್ಞಾನಿಕ ಸಲಕರಣೆಗಳಾವುವು?

ಉತ್ತರ: ನೌಕಾಯಾನದಲ್ಲಿ ನಾವಿಕರಿಗೆ ವೈಜ್ಞಾನಿಕ ಸಲಕರಣೆಗಳಾದ ದಿಕ್ಕೂಚಿ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು ಸಹಾಯಕವಾದವು.


5. ಪ್ಲಾಸಿ ಕದನವು ಯಾವಾಗ, ಯಾರ ಯಾರ ನಡುವೆ ನಡೆಯಿತು?

ಉತ್ತರ: ಕ್ರಿಶ 1757 ಜೂನ್ 23 ರಂದು ಬಂಗಾಳದ ನವಾಬ ಸಿರಾಜುದೌಲ್ ಮತ್ತು ಬ್ರಿಟಿಷರಿಗೂ ನಡೆಯಿತು.


6. ಬ್ರಿಟಿಷರು 24 ಪರಗಣಗಳ ಮೇಲಿನ ಜಮೀನ್ದಾರಿ ಹಕ್ಕನ್ನು ಹೇಗೆ ಪಡೆದರು?

ಉತ್ತರ: ಪ್ಲಾಸಿ ಕದನದ ನಂತರ ಮೀರ್‌ಜಾಫರನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿ ಪ್ರತಿಯಾಗಿ ಅವನಿಂದ ಬ್ರಿಟಿಷರು 24 ಪರಗಣಗಳ ಮೇಲಿನ ಜಮೀನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.


7. ಮೀರಜಾಫರನನ್ನು ಬ್ರಿಟಿಷರು ಪದಚ್ಯುತಗೊಳಿಸಲು ಕಾರಣವೇನು?

ಉತ್ತರ: ಮೀರಜಾಫರ್‌ನು ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಮುಂದಾಗಿದ್ದರಿಂದ ಬ್ರಿಟಿಷರು ಅವನನ್ನು ಪದಚ್ಯುತಗೊಳಿಸಿದರು.


8. ಮೀರ್‌ಕಾಸಿಮನನ್ನು ಬಂಗಾಳದ ನವಾಬನನ್ನಾಗಿ ಮಾಡಿದ್ದರಿಂದ ಅವನು ಬ್ರಿಟಿಷರಿಗೆ ಬಳುವಳಿಯಾಗಿ ನೀಡಿದ ಪ್ರದೇಶಗಳಾವವು?

ಉತ್ತರ : ಬರ್ದವಾನ್, ಮಿಡ್ನಾಪುರ ಮತ್ತು ಚಿತ್ತಗಾಂಗ್.

ಭಾರತಕ್ಕೆ ಯುರೋಪಿಯನ್ನರ ಆಗಮನ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು-Bharatakke Yuropiyannara Agamana SSLC Social Science Question Answers

ಭಾರತಕ್ಕೆ ಯುರೋಪಿಯನ್ನರ ಆಗಮನ: ಈ ಕೆಳಗಿನ ಪ್ರಶ್ನೆಗಳಿಗೆ 2 - 3 ವಾಕ್ಯಗಳಲ್ಲಿ ಉತ್ತರಿಸಿ.

1. ಯುರೋಪಿಯನ್ನರಿಗೆ ಭಾರತದ ಸಾಂಬಾರ ಪದಾರ್ಥಗಳು ಬಹಳ ಪ್ರಿಯವಾಗಿದ್ದವು ಎಂಬುದನ್ನು ಹೇಗೆ ಹೇಳುವಿರಿ.

ಉತ್ತರ : ಯುರೋಪಿಯನ್ನರಿಗೆ ಭಾರತದ ಪದಾರ್ಥಗಳು ಬಹಳ ಪ್ರಿಯವಾಗಿದ್ದವು ಹೇಗೆಂದರೆ

  1. ಪ್ರಾಚೀನ ಕಾಲದಿಂದಲೂ ಭಾರತ ಹಾಗೂ ಯುರೋಪಿನ ಮಧ್ಯ ವಾಣಿಜ್ಯ ಸಂಬಂಧಗಳು ಬೆಸೆದುಕೊಂಡಿದ್ದವು.
  2. ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಇತ್ಯಾದಿ ವಸ್ತುಗಳಿಗೆ ಯುರೋಪಿನ ಜನರಿಂದ ಯಥೇಚ್ಛ ಬೇಡಿಕೆಯಿತ್ತು.
  3. ಈ ವಸ್ತುಗಳನ್ನು ಯುರೋಪಿನ ಗ್ರೀಕ್ & ರೋಮನ್ ಸಾಮ್ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು.


2. ಮಧ್ಯಯುಗದಲ್ಲಿ ಮೆಡಿಟೇರಿಯನ್ & ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು ಈ ಹೇಳಿಕೆಯನ್ನು ಸಮರ್ಥಿಸಿ.

ಉತ್ತರ :

  1. ಇಟಲಿಯು ತನ್ನ ಸಂಪದ್ಭರಿತವಾದ ನಗರಗಳಾದ ವೆನಿಸ್, ಜಿನೀವಾ, ಮಿಲಾನ್, ಪ್ಲಾರೆನ್ಸ್ ಮೂಲಕ ಭಾರತದ ಪದಾರ್ಥಗಳನ್ನು ವಿತರಣೆ ಮಾಡುವ ಸಾಂಬಾರ ಕೇಂದ್ರವಾಗಿತ್ತು.
  2. ಇಲ್ಲಿ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳಿಗೆ ನೇರವಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮಧ್ಯ ಯುಗದಲ್ಲಿ ಮೆಡಿಟೇರಿಯನ್ & ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು.

3. ಪಶ್ಚಿಮ ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕುವ ಪ್ರಯತ್ನಕ್ಕೆ ಕಾರಣವೇನು?

ಉತ್ತರ : ಯುರೋಪಿಯನ್ನರು ಪರ್ಯಾಯ ವ್ಯಾಪಾರ ಮಾರ್ಗ ಹುಡುಕಲು ಕಾರಣಗಳು

  1. ಮಧ್ಯ ಯುಗದಲ್ಲಿ ಮೆಡಿಟೇರಿಯನ್ ಹಾಗೂ ಯುರೋಪಿನ ವ್ಯಾಪಾರವು ಇಟಲಿಯ ಏಕಸ್ವಾಮ್ಯತೆಗೆ ಒಳಪಟ್ಟಿತ್ತು.
  2. ಕ್ರಿಶ 1400ರ ಹೊತ್ತಿಗೆ ಈ ವ್ಯಾಪಾರವು ಅತ್ಯಂತ ಲಾಭದಾಯಕವಾಗಿತ್ತು.
  3. ಇಟಲಿಯ ಏಕಸ್ವಾಮ್ಯವನ್ನು ಮುರಿಯಲು ಯುರೋಪಿಯನ್ ದೇಶಗಳು ಭಾರತಕ್ಕೆ ಒಂದು ಪರ್ಯಾಯ ವ್ಯಾಪಾರ ಮಾರ್ಗವನ್ನು ಹುಡುಕಲು ಪ್ರಯತ್ನಿಸಿದರು.
  4. ಸ್ಪೇನ್ & ಪೋರ್ಚಗಲ್ & ಯುರೋಪಿನ ಇತರ ಭೂಪ್ರದೇಶಗಳನ್ನು ಹುಡುಕುವ ದೇಶಗಳು ಹೊಸ ನಾವಿಕರಿಗೆ ಪ್ರೋತ್ಸಾಹ ನೀಡಿದವು.


4. ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಪ್ರೇರಣೆಯಾದ ಅಂಶಗಳು ಯಾವುವು? (ಎಪ್ರಿಲ್ 2015, ಜೂನ್ 2015)

ಉತ್ತರ : ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಪ್ರೇರಣೆಯಾದ ಅಂಶಗಳು

  1. ವೈಜ್ಞಾನಿಕ ಸಲಕರಣೆಗಳಾದ ದಿಕ್ಕೂಚಿ, ಗ್ರಹೋನ್ನತಿ ಮಾಪಕ, ಸಿಡಿಮದ್ದು, ನೌಕಾ ಉಪಕರಣಗಳು, ಭೂಪಟ ಇತ್ಯಾದಿಗಳು.
  2. ಪೂರ್ವ ದೇಶಗಳ ಸಂಪತ್ತಿನ ಬಗ್ಗೆ ಹೇಳಲಾಗುತ್ತಿದ್ದ ಕಥೆಗಳು,
  3. ಧರ್ಮಪ್ರಚಾರಕ್ಕಾಗಿ ಉತ್ಸುಕರಾಗಿದ್ದ ಮಿಷಿನರಿಗಳು ಭಾರತಕ್ಕೆ ಪರ್ಯಾಯ ಹೊಸ ಜಲಮಾರ್ಗವನ್ನು ಹುಡುಕಲುಪ್ರೇರಣೆಯನ್ನು ನೀಡಿದವು.


5. “ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ. (ಎಪ್ರಿಲ್ 2016)

ಉತ್ತರ : ಜ್ಞಾನ ಪುನುರುಜೀವನ ಕಾಲದಲ್ಲಿ ಯುರೋಪಿನಲ್ಲಿ ನಡೆದ ಅನೇಕ ವೈಜ್ಞಾನಿಕ ಸಂಶೋಧನೆಗಳು ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಗ್ರಹೋನ್ನತಿ ಮಾಪಕ. ಸಿಡಿಮದ್ದು, ಉಪಕರಣಗಳು, ಭೂಪಟ ಇತ್ಯಾದಿಗಳು ನಾವಿಕರಿಗೆ ಹೊಸ ಜಲಮಾರ್ಗಗಳನ್ನು ಕಂಡು  ಹಿಡಿಯಲು ಸಹಾಯಕವಾದವು.

6. ಭಾರತದಲ್ಲಿ ಬ್ರಿಟಿಷರು ಸಾಮ್ರಾಜ್ಯದ ಒಡೆಯರಾಗಲು ಅವರ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯೇ ಕಾರಣ ಈ‌ಹೇಳಿಕೆಯನ್ನು ಸಮರ್ಥಿಸಿ. ಅಥವಾ ಬ್ರಿಟಿಷರು ಸಾಮ್ರಾಜ್ಯದ ಒಡೆಯರಾದದ್ದು ಹೇಗೆ? ಅಥವಾ ಭಾರತದ ಏಕಸ್ವಾಮ್ಯವನ್ನು ಹೇಗೆ ಪಡೆದರು?


ಉತ್ತರ: ಬ್ರಿಟಿಷ್ ವ್ಯಾಪಾರಿಗಳು ಸಾಮ್ರಾಜ್ಯದೊಡೆಯರಾದದ್ದು ಕೇವಲ ಸೈನ್ಯ ಬಲದಿಂದಲ್ಲ. ಬದಲಿಗೆ ರಾಜಕೀಯ ಮುತ್ಸದ್ದಿತನ ಮತ್ತು ಕುಟಿಲತೆಯನ್ನು ಉಪಯೋಗಿಸಿದರು. ಹೇಗೆಂದರೆ ಭಾರತೀಯ ರಾಜರಲ್ಲಿದ್ದ ಅನೈಕ್ಯತೆ & ಆಂತರಿಕ ಕಲಹಗಳನ್ನು ಉಪಯೋಗಿಸಿ ಒಬ್ಬರ ಮೇಲೆ ಒಬ್ಬರನ್ನು ಮೇಲೆತ್ತಿ ಅವರಲ್ಲಿಯೇ ಒಡಕನ್ನುಂಟು ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು.


7. ಕರ್ನಾಟಿಕ್ ಯುದ್ಧಗಳು ಇಂಗ್ಲೀಷರು ಭಾರತದಲ್ಲಿ ನೆಲೆಯೂರಲು ಹೇಗೆ ಸಹಾಯಕವಾದವು ಎಂಬುದನ್ನು ವಿವರಿಸಿ.

ಉತ್ತರ : ಕರ್ನಾಟಿಕ್ ಯುದ್ಧಗಳು ಇಂಗ್ಲೀಷರು ಭಾರತದಲ್ಲಿ ನೆಲೆಯೂರಲು ಸಹಾಯಕವಾದ ಅಂಶಗಳು 

  1. ಮೊದಲನೇ ಕರ್ನಾಟಿಕ್ ಯುದ್ಧದಲ್ಲಿ ಬ್ರಿಟಿಷರು ಸೋತರೂ, ಮದ್ರಾಸ್ ಒಪ್ಪಂದದಿಂದ ಒಪ್ಪಂದದಿಂದ ಫ್ರೆಂಚರು ಮದ್ರಾಸನ್ನು ಇಂಗ್ಲೀಷರಿಗೆ ಬಿಟ್ಟುಕೊಟ್ಟರು.
  2. ಎರಡನೇ ಕರ್ನಾಟಿಕ್ ಯುದ್ಧದಲ್ಲಿ ಫ್ರೆಂಚರ ಬೆಂಬಲಿತ ಚಂದಾಸಾಹೇಬನನ್ನು ಬ್ರಿಟಿಷರು ತಿರುಚಿನಾಪಳ್ಳಿಯಲ್ಲಿ ಕೊಂದು ಆರ್ಕಾಟನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
  3. ಮೂರನೇ ಕರ್ನಾಟಿಕ್ ಯುದ್ಧದ ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ಬ್ರಿಟಿಷರು ಸೋಲಿಸಿ ಸಂಪೂರ್ಣವಾಗಿ ಭಾರತದಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡರು.
  4. ಈ ರೀತಿ ಕರ್ನಾಟಿಕ್ ಯುದ್ಧಗಳು ಇಂಗ್ಲೀಷರು ಭಾರತದಲ್ಲಿ ನೆಲೆಯೂರಲು ಸಹಾಯ ಮಾಡಿದವು.

8. ಎರಡನೇ ಕರ್ನಾಟಿಕ್ ಯುದ್ಧದಿಂದ ಇಂಗ್ಲೀಷರು & ಫ್ರೆಂಚರು ಪ್ರಬಲರಾದರು. ಹೇಗೆ ಸಮರ್ಥಿಸಿ.

ಉತ್ತರ :

  1. ಹೈದ್ರಾಬಾದ & ಕರ್ನಾಟಿಕ್ ಪ್ರದೇಶಗಳಲ್ಲಿ ನವಾಬನ ಪದವಿಗಾಗಿ ಪೈಪೋಟಿ ಏರ್ಪಟ್ಟಿತ್ತು.
  2. ಕರ್ನಾಟಿಕ್‌ನಲ್ಲಿ ಇಂಗ್ಲೀಷರು ಅನ್ವರುದ್ದೀನನಿಗೆ, ಫ್ರೆಂಚರು ಚಂದಾ ಸಾಹೇಬನಿಗೆ ಬೆಂಬಲ ನೀಡಿದರು.
  3. ರಾಬರ್ಟ್ ಕ್ಲೈವ್  ನು ತಿರುಚಿನಾಪಳ್ಳಿಯ ಮೇಲೆ ದಾಳಿ ಮಾಡಿ ಚಂದಾಸಾಹೇಬನನ್ನು ಕೊಂದು ಅದನ್ನು ವಶಪಡಿಸಿಕೊಂಡನು. ಇದರಿಂದ ಕರ್ನಾಟಕದಲ್ಲಿ ಬ್ರಿಟಿಷರ ಪ್ರಾಬಲ್ಯ ಸ್ಥಾಪಿಸಿದರು.
  4. ಹೈದ್ರಾಬಾದಿನಲ್ಲಿ ಇಂಗ್ಲೀಷರ ಬೆಂಬಲಿಗ ನಾಸಿರ್‌ಜಂಗನನ್ನು ಫ್ರೆಂಚರು ಸೋಲಿಸಿ ಹೈದ್ರಾಬಾದನ್ನು ವಶಪಡಿಸಿಕೊಂಡರು. ಇಲ್ಲಿ ಫ್ರೆಂಚರು ಪ್ರಾಬಲ್ಯ ಸ್ಥಾಪಿಸಿದರು.


9. 3ನೇ ಕರ್ನಾಟಿಕ್ ಯುದ್ಧದ ಪರಿಣಾಮಗಳೇನು?

ಉತ್ತರ : 3ನೇ ಕರ್ನಾಟಿಕ್ ಯುದ್ಧದ ಪರಿಣಾಮಗಳು

  1. 3ನೇ ಕರ್ನಾಟಿಕ್ ಯುದ್ಧವು ಬ್ರಿಟಿಷರು & ಫ್ರೆಂಚರ ನಡುವೆ ನಡೆಯಿತು.
  2. ಈ ಯುದ್ಧದಲ್ಲಿ ಫ್ರೆಂಚರು ಸಂಪೂರ್ಣವಾಗಿ ಸೋತರು.
  3. ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಬ್ರಿಟಿಷರು ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂದಿರುಗಿಸಿದರು.
  4. ಫ್ರೆಂಚರು ಕೋಟೆಗಳನ್ನು ಕಟ್ಟಿ ರಕ್ಷಿಸಿಕೊಳ್ಳುವಂತಿರಲಿಲ್ಲ. ಅವು ಕೇವಲ ವ್ಯಾಪಾರಿ ಕೇಂದ್ರವಾಗಿಯಷ್ಟೆ ಕಾರ್ಯ ನಿರ್ವಹಿಸಬೇಕಿತ್ತು.


10. ಪ್ಲಾಸಿ ಕದನದ ಪರಿಣಾಮಗಳೇನು? ಅಥವಾ  ಫಲಿತಾಂಶಗಳೇನು?  (ಜೂನ್ 2015)

ಉತ್ತರ : ಪ್ಲಾಸಿ ಕದನದ ಫಲಿತಾಂಶ ಅಥವಾ ಪರಿಣಾಮಗಳು -

  1. ಸಿರಾಜುದೌಲ್ ಕದನದಲ್ಲಿ ಕೊಲ್ಲಲ್ಪಟ್ಟನು.
  2. ಬ್ರಿಟಿಷರೊಂದಿಗೆ ಸಹಕರಿಸಿದ ಮೀರ್‌ಜಾಫರ್‌ನನ್ನು ಬಂಗಾಳದ ನವಾಬನನ್ನಾಗಿ ನೇಮಿಸಿದರು.
  3. ಬ್ರಿಟಿಷರು ಮೀರ್‌ಜಾಫರ್‌ನಿಂದ 24 ಪರಗಣಗಳ ಜಮಿನ್ದಾರಿ ಹಕ್ಕನ್ನು ಪಡೆದುಕೊಂಡು ಅತ್ಯಂತ ಪ್ರಭಲರಾದರು.


11. ಬಕ್ಸಾರ್ ಕದನಕ್ಕೆ ಕಾರಣಗಳೇನು?

ಉತ್ತರ : ಬಕ್ಸಾರ್ ಕದನಕ್ಕೆ ಕಾರಣ

  1. ಇಂಗ್ಲೀಷರ ಹಿಡಿತದಿಂದ ಹೊರಬರಲು ಮೀರಕಾಸಿಂ ಪ್ರಯತ್ನಿಸಿದಾಗ ಬ್ರಿಟಿಷರು ಅವನನ್ನು ಪದಚ್ಯುತ ಗೊಳಿಸಿ ಮೀರಜಾಫರನನ್ನು ಮತ್ತೆ ಬಂಗಾಳದ ನವಾಬನನ್ನಾಗಿ ಮಾಡಿದರು.
  2. ಮೀರಕಾಸಿಂನು ಮೊಘಲ್ ಚಕ್ರವರ್ತಿ ಷಾ ಅಲಂ, ಔದ್‌ನ ನವಾಬ ಷೂಜ ಉದ್ ದೌಲ್ ರೊಡನೆ ತ್ರಿಮೈತ್ರಿಕೂಟ ಒಪ್ಪಂದ ಮಾಡಿಕೊಂಡು ಬ್ರಿಟಿಷರ ವಿರುದ್ಧ 1764 ರಲ್ಲಿ ದಾಳಿಮಾಡಿದನು.

12. ಬಕ್ಸಾರ್ ಕದನದ ಪರಿಣಾಮಗಳೇನು?

ಉತ್ತರ : ಬಕ್ಸಾರ್ ಕದನದ ಪರಿಣಾಮಗಳು

  1. ಈ ಯುದ್ಧದಲ್ಲಿ ಮೀರ್‌ಕಾಸಿಮ್‌ನ ಒಕ್ಕೂಟ ಸೈನ್ಯ ಸೋಲು ಅನುಭವಿಸಿತು.
  2. ಈ ಕದನದ ಪರಿಣಾಮವಾಗಿ ಬಿಹಾರ, ಒರಿಸ್ಸಾ ಮತ್ತು
  3. ಬಂಗಾಳ ಪ್ರಾಂತ್ಯಗಳು ಇಂಗ್ಲೀಷರ ವಶವಾದವು.
  4. ಮೊಘಲ್ ಚಕ್ರವರ್ತಿ ಷಾ ಆಲಂ ದಿವಾನಿ ಹಕ್ಕನ್ನು ಇಂಗ್ಲಿಷರಿಗೆ ನೀಡಿದನು.
  5. ರಾಬರ್ಟ್‌ ಕ್ಲೈವ್ ನು ಬಂಗಾಳದಲ್ಲಿ ದ್ವಿ ಸರ್ಕಾರವನ್ನು ಜಾರಿಗೆ ತಂದನು.


13. ದ್ವಿ - ಸರಕಾರ ಪದ್ಧತಿಯನ್ನು ವಿವರಿಸಿರಿ. ಅಥವಾ ಬ್ರಿಟೀಷರಿಗೆ ಭಾರತದಲ್ಲಿ ಭದ್ರವಾಗಿ ನೆಲೆಯೂರಲು ದ್ವಿ-ಸರ್ಕಾರ ಪದ್ಧತಿಯು ನೆರವಾಯಿತು ಹೇಗೆ? ಸಮರ್ಥಿಸಿರಿ. (ಎಪ್ರಿಲ್ 2015)

ಉತ್ತರ : ದ್ವಿ - ಸರಕಾರ ಪದ್ಧತಿ

  1. 1765 ರಲ್ಲಿ ರಾಬರ್ಟ್ ಕ್ಲೈವ್ ನು ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು.
  2. ಇಂಗ್ಲೀಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರ ಪಡೆದರು.
  3. ಆಡಳಿತ, ನ್ಯಾಯ ಪ್ರತಿಪಾದನೆ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನವಾಬನು ನಿರ್ವಹಿಸುತ್ತಿದ್ದನು. ಇದನ್ನೆ ದ್ವಿ ಸರ್ಕಾರವೆಂದು ಕರೆಯಲಾಗಿದೆ.
  4. ಹೀಗೆ ಬ್ರಿಟೀಷರಿಗೆ ಭಾರತದಲ್ಲಿ ಭದ್ರವಾಗಿ ನೆಲೆಯೂರಲು ದ್ವಿ ಸರ್ಕಾರ ಪದ್ಧತಿಯು ನೆರವಾಯಿತು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads