Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 20 June 2022

Agniveer Recruitment 2022: ಭೂಸೇನೆ ಅಗ್ನಿವೀರ ಹುದ್ದೆಗೆ ಅಧಿಸೂಚನೆ ಪ್ರಕಟ ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ

 Agniveer Recruitment 2022: ಭೂಸೇನೆ ಅಗ್ನಿವೀರ ಹುದ್ದೆಗೆ ಅಧಿಸೂಚನೆ ಪ್ರಕಟ ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ



Indian Army Agniveer Recruitment: ಹಲವು ಗೊಂದಲ ಹಾಗೂ ಹೋರಾಟಗಳ ನಡುವೆಯೇ ಕೇಂದ್ರ ರಕ್ಷಣಾ ಇಲಾಖೆ  ಗ್ನಿವೀರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರ ಘೋಷಿಸಿದ್ದ ಅಗ್ನಿಪಥ ಯೋಜನೆಯ ಅಗ್ನಿವೀರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಭೂಸೇನೆ ಅಗ್ನಿವೀರರ ನೇಮಕಾತಿಗೆ ನೋಟಿಫಿಕೇಶನ್‌ ಬಿಡುಗಡೆ ಆಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ರಕ್ಷಣಾ ಸಚಿವಾಲಯದ ಮಹತ್ವದ ಯೋಜನೆ 'ಅಗ್ನಿಪಥ' ದಡಿ ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಧಿಕೃತ ನೋಟಿಫಿಕೇಶನ್‌ ಅನ್ನು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಭೂಸೇನೆ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು,  ಆಸಕ್ತರು ಭೂಸೇನೆ ಅಗ್ನಿವೀರರ ಹುದ್ದೆಗಳಿಗೆ ವೆಬ್‌ಸೈಟ್‌ JOININIDANARMY.NIC.IN ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗಿದೆ. ಭೂಸೇನೆ ಅಗ್ನಿವೀರರ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಮಾಹಿತಿಗಳನ್ನು ಓದಿಕೊಳ್ಳಿ.


Agniveer Recruitment 2022: ಭೂಸೇನೆ ಅಗ್ನಿವೀರ ನೇಮಕಾತಿ ವಿಭಾಗಗಳು

  • ಅಗ್ನಿವೀರ್ ಜೆನೆರಲ್ ಡ್ಯೂಟಿ
  • ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್)
  • ಅಗ್ನಿವೀರ್ ಕ್ಲರ್ಕ್
  • ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್
  • ಅಗ್ನಿವೀರ್ ಟ್ರೇಡ್ಸ್‌ಮನ್

Agniveer Recruitment 2022: ಭೂಸೇನೆ ಅಗ್ನಿವೀರರಿಗೆ ವಿಭಾಗವಾರು ವಿದ್ಯಾರ್ಹತೆ

  • ಅಗ್ನಿವೀರ್ ಜೆನೆರಲ್ ಡ್ಯೂಟಿ: 10 ನೇ ತರಗತಿ ವಿದ್ಯಾರ್ಹತೆಯನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ, ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  • ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್): ವಿಜ್ಞಾನ (ಫಿಸಿಕ್ಸ್‌, ಮ್ಯಾಥ್ಸ್‌, ಕೆಮಿಸ್ಟ್ರಿ, ಇಂಗ್ಲಿಷ್‌ ) ದ್ವಿತೀಯ ಪಿಯು (12ನೇ ತರಗತಿ) ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳನ್ನು ಗಳಿಸಿರಬೇಕು.
  • ಅಗ್ನಿವೀರ್ ಕ್ಲರ್ಕ್: ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್‌, ಕಲಾ, ಕಾಮರ್ಸ್‌), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  • ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್: ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್‌, ಕಲಾ, ಕಾಮರ್ಸ್‌), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  • ಅಗ್ನಿವೀರ್ ಟ್ರೇಡ್ಸ್‌ಮನ್: ಅಗ್ನಿವೀರ್ ಟ್ರೇಡ್ಸ್‌ಮನ್‌ ಹುದ್ದೆಗಳು 8ನೇ ತರಗತಿ ಪಾಸಾದವರಿಗೆ ಹಾಗೂ 10ನೇ ತರಗತಿ ಪಾಸಾದವರಿಗೆ ಇಬ್ಬರಿಗೂ ಲಭ್ಯ ಇವೆ. ಸಿಂಪಲ್‌ ಪಾಸ್‌ ಆಗಿದ್ದರೂ ಪರವಾಗಿಲ್ಲ. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ತೆಗೆದಿರಬೇಕು.

Agniveer Recruitment 2022: ಮಹತ್ವದ ಮಾಹಿತಿ 

  • ಅರ್ಜಿ ಸ್ವೀಕಾರ ಆರಂಭ ದಿನಾಂಕ : ಜುಲೈ, 01, 2022
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
  • ಅಗ್ನಿವೀರ್ ಹುದ್ದೆಯ ಅವಧಿ : 4 ವರ್ಷ


Agniveer Recruitment 2022: ಅಗ್ನಿಪಥ ಸ್ಕೀಮ್ ಅರ್ಜಿಗೆ ವಯಸ್ಸಿನ ಅರ್ಹತೆಗಳೇನು?

ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 23 ವರ್ಷವನ್ನು 2022-23ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ನಿಗಧಿಪಡಿಸಲಾಗಿದೆ. ಮುಂದಿನ ವರ್ಷದಲ್ಲಿ ಗರಿಷ್ಠ ವಯೋಮಿತಿ 21 ವರ್ಷವೇ ಇರಲಿದೆ.

Agniveer Recruitment 2022: ಇತರೆ ಅರ್ಹತೆಗಳು

  • ಎನ್‌ಸಿಸಿ ಕೋಟಾ ಪರಿಗಣಿಸಲಾಗುತ್ತದೆ.
  • ಕ್ರೀಡಾ ಕೋಟಾ ಪರಿಗಣಿಸಲಾಗುತ್ತದೆ.
  • ಅರ್ಜಿ ಸಲ್ಲಿಸುವಾಗ ನಿಗಧಿತ ವಿದ್ಯಾರ್ಹತೆಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

Agniveer Recruitment 2022: ಆಯ್ಕೆ ಪ್ರಕ್ರಿಯೆ ಹೀಗಿರುತ್ತೆ:

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

Agniveer Recruitment 2022 ದೇಶಾದ್ಯಂತ ಕೆಲಸ:

ಅಗ್ನಿವೀರ್ ಹುದ್ದೆಗಳನ್ನು ದೇಶದ ಯಾವುದೇ ಮೂಲೆಯ ರಕ್ಷಣಾ ಘಟಕಗಳಲ್ಲಿ ನೇಮಕ ಮಾಡಲಾಗುತ್ತದೆ. ಅಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


Agniveer Recruitment 2022: ರಜೆಗಳ ಮಾಹಿತಿ

ಅಗ್ನಿವೀರ್ ಹುದ್ದೆಗೆ ಸೇರಿದ ಅಭ್ಯರ್ಥಿಗಳಿಗೆ ವಾರ್ಷಿಕ 30 ರಜೆಗಳು ಸಿಗುವ ಅವಕಾಶ ಇರುತ್ತದೆ. ಮೆಡಿಕಲ್ ರಜೆಗಳು ವೈದ್ಯರ ಸಲಹೆ ಮೇರೆಗೆ ನಿರ್ಧರಿತವಾಗುತ್ತವೆ.

Agniveer Recruitment 2022: ಭೂಸೇನೆ ಅಗ್ನಿವೀರರಿಗೆ ವೇತನ ಮತ್ತು ಭತ್ಯೆಗಳು

  • ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
  • ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
  • ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
  • ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.


Agniveer Recruitment 2022: ಸೇವಾನಿಧಿ ಪ್ಯಾಕೇಜ್‌

ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್‌ ಅನ್ನು ಅಭ್ಯರ್ಥಿಗೆ ನೀಡಲಾಗುತ್ತದೆ.


Agniveer Recruitment 2022: ಅಗ್ನಿವೀರ್ ಹುದ್ದೆಗೆ ನೀಡುವ ಸೇವಾ ನಿಧಿ ಪ್ಯಾಕೇಜ್, ಇತರೆ ಭತ್ಯೆಗಳ ವಿವರ

  • ರಿಸ್ಕ್‌ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.
  • ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ. ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್‌ ಸೌಲಭ್ಯ ಇರಲಿದೆ. ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ. ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ. ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ. ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads