ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 25-06-2022 ರ ಪ್ರಚಲಿತ ವಿದ್ಯಮಾನಗಳು
ನೀತಿ ಆಯೋಗದ ನೂತನ ಸಿಇಒ ಆಗಿ ಪರಮೇಶ್ವರನ್ ನೇಮಕ
ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ನೇಮಕಗೊಂಡಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಿಂದ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅವರು ಕಳೆದ ವರ್ಷದ ಜುಲೈನಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಸಿಇಒ ಆಗಿರುವ ಅಮಿತಾಭ್ ಕಾಂತ್ ಅವರ ಅಧಿಕಾರಾವಧಿ ಜೂನ್ 30ಕ್ಕೆ ಪೂರ್ಣಗೊಳ್ಳಲಿದೆ. ಅಯ್ಯರ್ ಅವರು 2 ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
* ಉತ್ತರ ಪ್ರದೇಶ ಕೇಡರ್‌ನ 1981ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪರಮೇಶ್ವರನ್, ಪ್ರಧಾನಿ ಮೋದಿ ಅವರ 'ಸ್ವಚ್ಛ ಭಾರತ ಯೋಜನೆ'ಯ ಶಕ್ತಿಯಾಗಿದ್ದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ತಜ್ಞರಾಗಿಯೂ ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೀತಿ ಆಯೋಗದ ಕುರಿತಾದ ಸಂಪೂರ್ಣ ಮಾಹಿತಿ
- NITI- National Institution for Transforming India
- ಇದು ಯೋಜನಾ ಆಯೋಗದ ಬದಲಿಗೆ ಆರಂಭವಾಗಿದೆ
- ಘೋಷಣೆ: 15 ಆಗಷ್ಟ 2014
- ಅಧಿಕೃತವಾಗಿ ಜಾರಿಗ ಬಂದದ್ದು: 01-01-2015
- ಅಧ್ಯಕ್ಷರು: ಪ್ರಧಾನ ಮಂತ್ರಿಗಳು
- ಪ್ರಥಮ ಉಪಾಧ್ಯಕ್ಷರು - ಅರವಿಂದ ಪನಗರಿಯಾ
- ಪ್ರಸ್ತುತ ಉಪಾಧ್ಯಕ್ಷರು - ಸುಮನ್ ಬೇರಿ
- ಪ್ರಸ್ತುತ ಸಿಇಒ - ಅಮಿತಾಬ್ ಕಾಂತ್ (ನಿರ್ಗಮಿತ)
ಪರಮೇಶ್ವರನ್ ಅಯ್ಯರ್ (ನಿಯೋಜಿತ) ಇದು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ರೂಪಿಸುವಿಕೆ ಮತ್ತು ನಿರ್ದೇಶನ ನೀಡುವ ಸಂಸ್ಥೆಯಾಗಿದೆ.
ಬೇಹುಗಾರಿಕಾ ದಳದ ನಿರ್ದೇಶಕರಾಗಿ ತಪನ್ ಕುಮಾರ್ ದೇಕಾ ನೇಮಕ
ಬೇಹುಗಾರಿಕಾ ದಳದ ನಿರ್ದೇಶಕರನ್ನಾಗಿ ತಪನ್ ಕುಮಾರ್ ದೇಕಾರನ್ನು ಸರ್ಕಾರ ನೇಮಿಸಿದೆ. ಬಿಕ್ಕಟ್ಟು ನಿವಾರಣೆಯ ನಿಪುಣರೆಂದೇ ಖ್ಯಾತರಾದ ದೇಕಾ, ಮುಂಬೈ ಮೇಲಿನ 26/11 ದಾಳಿಯ ವೇಳೆ ಮಹತ್ವದ ಪಾತ್ರವಹಿಸಿದ್ದರು. ದೇಕಾ ಹಾಲಿ ಬೇಹುಗಾರಿಕೆ ದಳದಲ್ಲಿನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿಯಾದ ದೇಕಾ, 1988ರ ಬ್ಯಾಚ್‌ನ ಐಎಎಸ್ ಅಧಿಕಾರಿ, ಬೇಹುಗಾರಿಕಾ ದಳದ ಮುಖ್ಯಸ್ಥರಾದ ಅರವಿಂದ ಕುಮಾರ್ ಜೈನ್ 30 ರಂದು ನಿವೃತ್ತರಾಗಲಿದ್ದಾರೆ. ಅವರಿಗೆ ಕಳೆದ ವರ್ಷ ಒಂದು ವರ್ಷ ಸೇವಾ ಅವಧಿ ವಿಸ್ತರಣೆ ದೊರಕಿತ್ತು. ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ ಮುಖ್ಯಸ್ಥರಾಗಿರುವ ಸಮಂತ್ ಗೋಯೆಲ್‌ರ ಅಧಿಕಾರವಧಿಯನ್ನು ಸರ್ಕಾರ ಇನ್ನೊಂದು ವರ್ಷ ವಿಸ್ತರಿಸಿದೆ. ಬೇಹುಗರಿಕಾ ದಳದಲ್ಲಿ ವಿಶೇಷ
ನಿರ್ದೇಶಕರಾಗಿದ್ದ “ಸ್ವಾಗತ್ ದಾಸ್‌ನ್ನು” ಅಂತರಿಕ ಭದ್ರತೆಯ ವಿಶೇಷ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಇಂಟೆಲಿಜೆನ್ಸಿ ಬ್ಯೂರೋ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:
ಗುಪ್ತಚರ ಬ್ಯೂರೋ ಭಾರತದ ಆಂತರಿಕ ಭದ್ರತೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಪ್ರತಿ ಗುಪ್ತಚರ ಸಂಸ್ಥೆಯಾಗಿದೆ.
- ಸ್ಥಾಪನೆ - 1887
- ಕೇಂದ್ರ ಕಚೇರಿ - ನವದೆಹಲಿ
- ಪೋಷಕ ಸಂಸ್ಥೆ - ಗೃಹ ವ್ಯವಹಾರಗಳ ಸಚಿವಾಲಯ
- ಧ್ಯೇಯ ವಾಕ್ಯ: "Always Alert"
ಜಗತ್ತಿನ ಅತಿದೊಡ್ಡ ಬ್ಯಾಕ್ಟಿರಿಯಾ ಪತ್ತೆ
ಬ್ಯಾಕ್ಟಿರಿಯಾ ಅಂದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತದೆ. ಕೆಲವು ಬ್ಯಾಕ್ಟಿರಿಯಾ ಕಾಯಿಲೆಗಳಿಗೆ ಕಾರಣವಾದರೆ, ಇನ್ನು ಕೆಲವು ಆರೋಗ್ಯಕಾರಿ. ಆದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವ ಬ್ಯಾಕ್ಟಿರಿಯಾ ಇದೇ ಮೊದಲ ಬಾರಿಗೆ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿರುವುದು ಪತ್ತೆಯಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ದೊಡ್ಡ ಬ್ಯಾಕ್ಟಿರಿಯಾ ಪತ್ತೆಯಾಗಿದೆ. ಅಂದರೆ ವೆಸ್ಟ್ ಇಂಡೀಸ್ ನಲ್ಲಿ ಪತ್ತೆಯಾಗಿರುವ ಬ್ಯಾಕ್ಟಿರಿಯಾ ಬರೀ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿದೆ. ಸಾಮಾನ್ಯವಾಗಿ ಬ್ಯಾಕ್ಟಿರಿಯಾ 1-5 ಮೈಕ್ರೋ ಮೀಟರ್ ಉದ್ದವಿರುತ್ತದೆ. ಇದನ್ನು ಮೈಕ್ರೋಸ್ಕೋಪ್ ನಲ್ಲಿ ಅಂದರೆ ದುರ್ಬಿನು ಇಟ್ಟು ನೋಡಿದರೆ ಮಾತ್ರ ಅದು ಕಾಣಿಸುತ್ತಿತ್ತು.
ಆದರೆ ಇದೀಗ ಪತ್ತೆಯಾಗಿರುವ ಬ್ಯಾಕ್ಟಿರಿಯಾ 10,000 ಮೈಕ್ರೋ ಮೀಟರ್ ಉದ್ದವಿದ್ದು, ಬರೀ ಕಣ್ಣಿಗೆ ಕಾಣಿಸುತ್ತದೆ. “ಥಿಯೋಮಾಗ್ರೆಟಿಯಾ ಮೆಗ್ನಿಫಿಸಿಯಾ” ಎಂದು ಈ ಹೊಸ ಬ್ಯಾಕ್ಟಿರಿಯಾಗೆ ಹೆಸರಿಡಲಾಗಿದ್ದು, ಇದು ಸಾಮಾನ್ಯವಾದ ಬ್ಯಾಕ್ಟಿರಿಯಾಗಿಂತ 50 ಪಟ್ಟು ದೊಡ್ಡದಾಗಿದೆ.
ಈ ಬ್ಯಾಕ್ಟಿರಿಯಾದ ಸೆಲ್ ಕೂಡ ಸಾಮಾನ್ಯ ಬ್ಯಾಕ್ಟಿರಿಯಾದ ಸೆಲ್‌ಗಳಿಗಿಂತ 9000 ಪಟ್ಟು ದೊಡ್ಡದಾಗಿದೆ.
ಬ್ಯಾಕ್ಟೀರಿಯಾ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ
- ಇವು “ಕಶಾಂಗ”ದ ಮೂಲಕ ಚಲಿಸುತ್ತವೆ.
- “ವಿದಳನದ” ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.
- ಬ್ಯಾಕ್ಟಿರಿಯಾ ಕಂಡುಹಿಡಿದವರು - “ಲೇವನ್ ಹಾಕ್”
- ಬ್ಯಾಕ್ಟಿರಿಯಾಗಳ ಪಿತಾಮಹ - ರಾಬರ್ಟ್ ಕೋಚ್
- ಇದರ ಕೋಶದ ಅನುವಂಶೀಯ ವಸ್ತು – ಡಿ. ಎನ್. ಎ
ಮಂಕಿಪಾಕ್ಸ್ ಸಾಂಕ್ರಾಮಿಕ ರೋಗ
ಡಬ್ಲ್ಯುಎಚ್‌ಎನ್ ಮಂಕಿಪಾಕ್ಸ್ ಈವರೆಗೆ ಸುಮಾರು 42 ದೇಶಗಳಲ್ಲಿ 3,417 ಜನರಿಗೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ನೆಟ್‌ವರ್ಕ್ (ಡಬ್ಲ್ಯುಎಚ್‌ಎನ್) ಮಂಕಿಪಾಕ್ಸ್ ಕಾಯಿಲೆಯನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಡಬ್ಲ್ಯುಎಚ್ಎನ್ ಮಂಕಿಪಾಕ್ಸೋಮೀಟರ್ ಎನ್ನುವ 2 ಹೊಸ ಜಾಲತಾಣವನ್ನು ಅಭಿವೃದ್ಧಿ ಪಡೆಸಿದ್ದು, ಇದು ಜಾಗತಿಕವಾಗಿ ಮಂಕಿಪಾಕ್ಸ್ ಸೋಂಕಿತರ ಮಾಹಿತಿ ನೀಡುತ್ತದೆ.
ಇದರ ಪ್ರಕಾರ 3,417 ಮಂಕಿಪಾಕ್ಸ್ ಪ್ರಕರಣಗಳು ಜಾಗತಿಕವಾಗಿ ವರದಿಯಾಗಿದ್ದು, ಹಲವು ಖಂಡಗಳಲ್ಲಿ ಸೋಂಕು ಹರಡಿದೆ. ಈ ಹಿನ್ನೆಲೆಯಲ್ಲಿ ಮಂಕಿಪಾಕ್ಸ್ 'ಸಾಂಕ್ರಾಮಿಕ' ಎಂದು ವಿಜ್ಞಾನಿ ಹಾಗೂ ನಾಗರಿಕಾ ಜಾಗತಿಕ ಸಹಯೋಗ ಸಂಸ್ಥೆ ಘೋಷಿಸಿದೆ. ಸಿಡುಬಿಗಿಂತ ಮಂಕಿಪಾಕ್ಸ್ ಸಾವಿನ ದರವು ಕಡಿಮೆಯಾಗಿದ್ದರೂ, ಸೋಂಕು ಜಾಗತಿಕವಾಗಿ ಹರಡಿ ಹಲವಾರು ಜನರ ಸಾವಿಗೆ ಕಾರಣವಾಗಬಹುದು, ಅಥವಾ ಸೋಂಕಿತರನ್ನು ದೃಷ್ಟಿಹೀನ ಅಥವಾ ಅಂಗವಿಕಲರನ್ನಾಗಿಸಬಹುದು.
ಕಾರ್ ಕ್ರ್ಯಾಶ್ ಟೆಸ್ಟ್ ನಿಯಮ ಜಾರಿ
ಮುಂದಿನ ದಿನಗಳಲ್ಲಿ ಕಾರು ಸುರಕ್ಷಿತ ಎಂಬ ಪರೀಕ್ಷೆಯಲ್ಲೂ ತೆರ್ಗಡೆಯಾಗಬೇಕು ಅದಕ್ಕಾಗೆ ಕ್ರ್ಯಾಶ್ ಟೆಸ್ಟ್ ನಿಯಮ ಜಾರಿಗೆ ತರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. ಟೆಸ್ಟ್‌ನಲ್ಲಿ ಉತ್ತಿರ್ಣಗೊಂಡ ಕಾರುಗಳಿಗೆ ರ್ಯಾಂಕಿಂಗ್ ನೀಡಲಾಗುತ್ತದೆ. ಅದರ ಆಧಾರದಲ್ಲಿ ಕಾರು ಸುರಕ್ಷಿತವೇ ಅಲ್ಲವೇ ಎಂಬುದು ಖಚಿತಗೊಳ್ಳುತ್ತದೆ. ಇದರಿಂದ ದೇಶದಲ್ಲಿ ಉತ್ಪಾದನೆಯಾಗುವ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಅರ್ಹತೆ ಹೆಚ್ಚಲಿದೆ.
ದೇಶೀಯವಾಗಿಯೂ ಕಾರು ಉತ್ಪಾದಕರು ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಲು ಇದು ನೆರವಾಗಲಿದೆ. ಅದಕ್ಕಾಗಿ 'ಭಾರತ ಹೊಸ ಕಾರು ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಗ್ರಾಹಕ ಕೇಂದ್ರಿಯ ವ್ಯವಸ್ಥೆ ಇದು ವಿದೇಶಗಳಲ್ಲಿ ಇರುವ ಕಾರು ಸುರಕ್ಷೆ ಪರೀಕ್ಷೆ ಗಳ ಅನುಸಾರ ಇಲ್ಲೂ ನಿಯಮ ರೂಪಿಸಲಾಗುತ್ತದೆ.
ಸ್ಪರ್ಧೆಗೆ ಅವಕಾಶ ಕಾರು ಉತ್ಪಾದನೆಗೆ ಅಗತ್ಯವಾದ ಮೂಲವಸ್ತು ತಯಾರಕರ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡುವ ನಿಟ್ಟಿನಲ್ಲಿ ಕ್ರ್ಯಾಶ್ ಟೆಸ್ಟ್ ನೆರವಾಗಲಿದೆ. ಕಾರ್ ಕ್ರ್ಯಾಶ್ ಟೆಸ್ಟ್ ನಿಗದಿತ ಕಾರು ಉತ್ಪಾದಕ ಸಂಸ್ಥೆಯು ಕಾರು ಬಳಕೆಗೆ ಯೋಗ್ಯ ಮತ್ತು ಸುರಕ್ಷಿತವೇ ಎಂಬ ಪರೀಕ್ಷೆ ಪ್ರಯಾಣಿಕರ ಮಾದರಿ ಇರಿಸಿ, ಚಲಿಸುತ್ತಿರುವ ಕಾರನ್ನು ತಡೆಗೆ ಡಿಕ್ಕಿ ಹೊಡೆಸಲಾಗುತ್ತದೆ. ಆಗ ಕಾರಿಗೆ ಎಷ್ಟು ಹಾನಿಯಾಗಿದೆ ಪ್ರಯಾಣಿಕರ ಮಾದರಿಗೆ ಎಲ್ಲೆಲ್ಲಿ ಘಾಸಿಯಾಗಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ.
ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಶ್ರೇಯಾಂಕ ನೀಡಲಾಗುತ್ತದೆ. ಎಂಜಿನ್‌ನ ಗುಣಮಟ್ಟ ಶಾಕ್ ಅಬ್ಬಾರ್ಬ‌್ರಗಳು, ಬ್ರೇಕ್ ಕ್ಷಮತೆ, ಏರ್ ಬ್ಯಾಗ್ ಸೂಕ್ತ ಸಮಯದಲ್ಲಿ ತೆರೆದುಕೊಂಡಿದೆಯೇ ಎಂಬಿತ್ಯಾದಿಗಳ ಸಹಿತ ಸಮಗ್ರ ಅಂಶಗಳ ಅಧ್ಯಯನ ನಡೆಸಲಾಗುತ್ತದೆ. ರ್ಯಾಂಕಿಂಗ್ 1 ರಿಂದ 5ರ ನಡುವೆ ಸದ್ಯ ದೇಶದ ಕಾರು ಉತ್ಪಾದಕ ಸಂಸ್ಥೆಗಳು ವಿದೇಶಗಳಲ್ಲಿ ಕ್ಯಾಶ್ ಟೆಸ್ಟ್ ನಡೆಸುತ್ತಿದ್ದವು.
ಹೊಸ ವ್ಯವಸ್ಥೆ
- ಇನ್ನು ಮುಂದೆ ದೇಶದಲ್ಲಿ ಕ್ರಾಶ್ ಟೆಸ್ಟ್: - ಇದಕ್ಕೆ ಭಾರತ್ ನ್ಯೂಕ ಅಸೆಸೆಂಟ್ ಪ್ರೋಗ್ರಾಂ ಜಾರಿಗೆ ಕಾರು ಉತ್ಪಾದಕರಿಗೆ ಸ್ವಯಂ ಪ್ರೇರಣೆಯಿಂದ ಅದರಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ:- ಶೇ. 50 ರಷ್ಟು ರಸ್ತೆ ಅಪಘಾತ ತಡೆ ಉದ್ದೇಶ
- ದೇಶವನ್ನು ಜಾಗತಿಕ ಆಟೊಮೊಬೈಲ್ ಹಬ್ ಆಗಿ ಪರಿವರ್ತಿಸುವುದು
- ಆತ್ಮನಿರ್ಭರ ಪರಿಕಲ್ಪನೆಗೆ ಒತ್ತು.
ಗ್ರಹಗಳ ಪರೇಡ್
ಸೂರ್ಯೋದಯಕ್ಕೂ ಒಂದು ಗಂಟೆ ಮುನ್ನ ಪೂರ್ವ ದಿಕ್ಕಿನತ್ತ ನೋಡಿದರೆ ಖಗೋಳ ಕೌತುಕವೊಂದು ನಿಮಗೆ ಗೋಚರಿಸಲಿದ್ದು, ಈ ವಿಸ್ಮಯವನ್ನು ಈಗ ಕಣ್ಣುಂಬಿಕೊಳ್ಳಲು ಸಾಧ್ಯವಾದಿದ್ದರೆ ಮತ್ತೆ 18 ವರ್ಷ ಕಾಯಬೇಕು. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಪರೇಡ್ ನಡೆಸುವ ರೀತಿ ಗೋಚರಿಸಲಿದ್ದು, ಈ ಗ್ರಹಗಳ ಪರೇಡ್ ವೀಕ್ಷಣೆಗೆ ಒಂದು ಖಚಿತ ಸೂತ್ರವೂ ಇದೆ. ಯಾವುದೋ ದಿಕ್ಕಿನಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ.
ನಸುಕಿನ 4 ಗಂಟೆಯಿಂದ ಪೂರ್ವದ ದಿಗಂತದೆಡೆಗೆ ಕಣ್ಣ ಹಾಯಿಸಿದರೆ ಈ ವಿಸ್ಮಯದ ಟೆಲಿಸ್ಕೋಪ್ ಇಲ್ಲದೆಯೂ ಐದೂ ಗ್ರಹಗಳು ಬರಿಗಣ್ಣಿಗೆ ಕಾಣುತ್ತವೆ. ಈಗಾಗಲೆ ಒಂದು ವಾರದಿಂದ ಈ ವಿಸ್ಮಯ ಕಾಣಸಿಗುತ್ತಿದ್ದು, ಇನ್ನೊಂದು ವಾರ ಹೀಗೇಯೇ ಮುಂದುವರಿಯಲಿದೆ.
ಪೂರ್ವದಿಂದ ಪಶ್ಚಿಮದೆಡೆಗೆ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು ವೀಕ್ಷಣೆ ಮಾಡಬಹುದು. ಚಂದ್ರ ಕೂಡ ಬುಧ ಮತ್ತು ಮಂಗಳ ಗ್ರಹಗಳ ನಡುವೆ ಇರುವುದು ಕಾಣಸಿಗಲಿದೆ. ಶನಿ ಗ್ರಹದಲ್ಲಿ ಹಲವು ರಿಂಗ್‌ಗಳು, ಗುರು ಗ್ರಹದಲ್ಲಿ ನಾಲ್ಕು ಉಪಗ್ರಹಗಳು, ಮಂಗಳ ಗ್ರಹದಲ್ಲಿ ಬಣ್ಣ ಬಣ್ಣಗಳು, ಶುಕ್ರಗ್ರಹದಲ್ಲಿ ಕಾಣಲು ಬ್ರೆಟ್‌ನೆಸ್ ಮನಸ್ಸಿಗೆ ಮುದ ನೀಡಲಿವೆ. ಬುಧ ಗ್ರಹ ಸೂರ್ಯನಿಗೆ ಸಮೀಪ ಇರುವುದರಿಂದ ಬರಿಗಣ್ಣಿಗೆ ಗೋಚರಿಸುವುದು ಅಪರೂಪ. ಸಾಮಾನ್ಯ ಟೆಲೆಸ್ಕೋಪ್‌ನಲ್ಲೂ ಕಾಣಸಿಗುವುದಿಲ್ಲ. ವಿಶೇಷ ಟೆಲಿಸ್ಕೋಪ್‌ನಲ್ಲಿ ಬುಧನ ದರ್ಶನ ಸಾಧ್ಯ.
- ಎರಡು, ಮೂರು ಒಂದೇ ರೇಖೆಗಳಲ್ಲಿ (ಪರೇಡ್ ರೀತಿ) ಇರುವಂತೆ ಆಗಾಗ ಕಾಣಿಸುತ್ತದೆ. ಐದು ಗ್ರಹಗಳ ಪರೇಡ್ ದೃಶ್ಯ ಅಪರೂಪ. ನೋಡಲು ಒಂದೇ ಸರಳ ರೇಖೆಯಲ್ಲಿ ಕಾಣಿಸುತ್ತವೆ. ಆದರೆ, ವಾಸ್ತವವಾಗಿ ಆ ರೀತಿ ಇರುವುದಿಲ್ಲ.
- ಐದು ಗ್ರಹಗಳ ಪರೇಡ್ ಮಾಡುತ್ತಿರುವಂತೆ ಭಾಸವಾಗುವ ಈ ದೃಶ್ಯಗಳು 2004 ರಲ್ಲಿ ಕಂಡುಬಂದಿದ್ದವು. 18 ವರ್ಷಗಳ ನಂತರ ಮತ್ತೆ ಆ ದೃಶ್ಯಗಳನ್ನು ನೋಡಲು ಸಾಧ್ಯವಾಗುತ್ತಿದ್ದು, 2040ರಲ್ಲಿ ಮತ್ತೆ ಕಾಣಲು ಸಾದ್ಯವಾಗುತ್ತದೆ.
ಸ್ಫೂರ್ತಿ ಯೋಜನೆ
ಸ್ಫೂರ್ತಿ ಯೋಜನೆಯನ್ನು 2015 ರಲ್ಲಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಹದಿಹರೆಯದ ಹೆಣ್ಣು ಮಕ್ಕಳ ಮೂಲಕವೇ ಹೆಣ್ಣು ಮಕ್ಕಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವುದು, ಶಿಕ್ಷಣ ನೀಡುವುದು, ಆತ್ಮ ವಿಶ್ವಾಸ ತುಂಬುವುದು ಸೇರಿದಂತೆ ಅನೇಕ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಸ್ಪೂರ್ತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಆಯ್ದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 13 ರಿಂದ 16 ವರ್ಷ ವಯಸ್ಸಿನ 3,600 ಕ್ಕೂ ಹೆಚ್ಚು ಹದಿಹರೆಯದ ಹೆಣ್ಣು ಮಕ್ಕಳನ್ನು ಗುರುತಿಸಿ ಅವರ ಮೂಲಕ ಸಮೀಕ್ಷೆ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 30 ಸಾವಿರಕ್ಕೂ ಕುಟುಂಬಗಳು, 1,55 ಲಕ್ಷ ವ್ಯಕ್ತಿಗಳನ್ನು ಸಂದರ್ಶಿಸಲಾಯಿತು. 2014-15 ರಲ್ಲಿ ಬಾಲ್ಯ ವಿವಾಹದಲ್ಲಿ ರ ನಂಬರ್ ಒನ್ ಇದ್ದ ಕೊಪ್ಪಳ ಜಿಲ್ಲೆ, ಸದ್ಯ ಏಳನೆ ಸ್ಥಾನಕ್ಕೆ ಇಳಿದಿದೆ.
ರೋ ವರ್ಸಸ್ ವೇಡ್ ತೀರ್ಪ ರದ್ದುಗೊಳಿಸಿದ ಅಮೆರಿಕ ಸುಪ್ರೀಂಕೋರ್ಟ್
ಗರ್ಭಪಾತವನ್ನು ಸಾಂವಿಧಾನಿಕ ಹಕ್ಕನ್ನಾಗಿ ಮಾಡಿದ 1973ರ ಐತಿಹಾಸಿಕ 'ರೋ ವರ್ಸಸ್ ವೇಡ್' ತೀರ್ಪನ್ನು ಅಮೆರಿಕದ ಸುಪ್ರೀಂಕೋರ್ಟ್ ರದ್ದುಗೊಳಿಸುವುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
* ಸಂವಿಧಾನವು ಗರ್ಭಪಾತದ ಹಕ್ಕನ್ನು ದೃಢಪಡಿಸುವುದಿಲ್ಲ. ವರ್ಸಸ್ ವೇಡ್ ತೀರ್ಪನ್ನು ರದ್ದುಪಡಿಸಲಾಗಿದ್ದು ರೋ ಗರ್ಭಪಾತವನ್ನು ನಿಯಂತ್ರಿಸುವ ಅಧಿಕಾರವನ್ನು ಜನತೆ ಮತ್ತು ಅವರು ಆಯ್ಕೆ ಮಾಡುವ ಪ್ರತಿನಿಧಿಗಳಿಗೆ ಹಿಂದಿರುಗಿಸಲಾಗಿದೆ.
1973ರ ತಿರ್ಪಿನ ಪ್ರಕಾರ, ಭ್ರೂಣವು ಗರ್ಭಕೋಶದ ಹೊರಗೆ ಬದುಕಬಲ್ಲ ಸಮಯದ ವರೆಗೆ ಗರ್ಭಪಾತಕ್ಕೆ ಅವಕಾಶ ನೀಡಲಾಗುತ್ತದೆ. ಆ ಸಮಯದಲ್ಲಿ ಗರ್ಭಕೋಶದಲ್ಲಿ ಬದುಕುವ ಶಕ್ತಿಯನ್ನು 28 ವಾರ ಎಂದು ಪರಿಗಣಿಸಲಾಗಿದೆ. ಆದರೆ, ತಜ್ಞರ ಪ್ರಕಾರ, ಈ ಅವಧಿಯನ್ನು 22ರಿಂದ 24 ವಾರಗಳ ವರೆಗೆ ಇಳಿಸಬಹುದಾಗಿದೆ. 1973 ರ ತೀರ್ಪು ಅಮೆರಿಕದ ಅತ್ಯಂತ ವಿವಾದಾತ್ಮಕ ತೀರ್ಪು ಎಂದು ಪರಿಗಣಿಸಲ್ಪಟ್ಟಿದೆ.
ಫಿಫಾ ರ್ಯಾಂಕಿಂಗ್ ಪ್ರಕಟ
ಫಿಫಾ ಬಿಡುಗಡೆ ಮಾಡಿದ ನೂತನ ಬ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಫುಟ್‌ಬಾಲ್ ತಂಡ ಎರಡು ಸ್ಥಾನ ಮೇಲಕ್ಕೇರಿ 104ನೇ ಸ್ಥಾನ ಗಳಿಸಿದೆ. ಇತ್ತೀಚೆಗೆ ನಡೆದ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಎರಡು ಸ್ಥಾನ ಮೇಲಕ್ಕೇರಿದೆ. ಆದರೆ ಏಷ್ಯಾದ ತಂಡಗಳ ಬ್ಯಾಂಕಿಂಗ್‌ನಲ್ಲಿ ಭಾರತದ ಸ್ಥಾನ (19ನೇ ಬ್ಯಾಂಕ್) ಬದಲಾಗಿಲ್ಲ. ಫಿಫಾ ಬ್ಯಾಂಕಿಂಗ್ ನಲ್ಲಿ 23ನೇ ಸ್ಥಾನದಲ್ಲಿರುವ ಇರಾನ್, ಏಷ್ಯಾದಲ್ಲಿ ಅಗ್ರಸ್ಥಾನ ಹೊಂದಿದೆ.
ಬ್ರೆಜಿಲ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು ಬೆಲ್ಜಿಯಂ ಎರಡನೇ ಸ್ಥಾನದಲ್ಲಿದೆ. ಅರ್ಜೆಂಟಿನಾ 3, ಪ್ರಾನ್ಸ್ 4 ಹಾಗೂ ಇಂಗ್ಲೆಂಡ್ 5ನೇ ಸ್ಥಾನದಲ್ಲಿವೆ.
FIFA ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ
- ಸ್ಥಾಪನೆ : 21 ಮೇ 1904
- ಕೇಂದ್ರ ಕಚೇರಿ - ಜುರಿಚ್, ಸ್ವೀಟರ್ ಲ್ಯಾಂಡ
- ಅಧ್ಯಕ್ಷರು - ನಿಯಾನಿ ಇನ್ಫಾಂಟಿನೋ
- ಅಂಗ ಸಂಸ್ಥೆಗಳು - ಕಾನ್ಫೆಡರೇಶನ್ ಆಫ್ ಆಫ್ರಿಕನ್ ಫುಟ್ಬಾಲ್, ಯುಎಎಸ್ ಸಾರ್ಕ್ ಅರ್ಲಿ ವಾರ್ನಿಂಗ್
ಲೇಖಕ ಡಾ. ಗುರುಲಿಂಗ ಕಾಪಸೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ. ಡಾ. ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ. ಸ. ಖಾಂಡೇಕರ್ ಅವರ “ಒಂದು ಪುಟದ ಕಥೆ” ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ.
“ಒಂದು ಪುಟದ ಕಥೆ” (ಮೂಲದಲ್ಲಿ 'ಏಕಾ ಪಾನಚಿಗೋಷ್ಠ) ಯು ಖಾಂಡೇಕರ್ ಅವರ ಆತ್ಮಕಥೆಯಾಗಿದೆ. ಖಾಂಡೇಕರ್ ಅವರು ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರು ಅವರ 'ಯಯಾತಿ' ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿಯು ಬಂದಿತ್ತು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದ ಅನುವಾದ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಮಾಡಿತು. ಪ್ರಶಸ್ತಿಯು 50 ಸಾವಿರ ರೂಪಾಯಿ, ಸ್ಮೃತಿ ಫಲಕ, ಶಾಲು ಸನ್ಮಾನ ಒಳಗೊಂಡಿರುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಭಾರತದ ಸಾಹಿತ್ಯಕ ಗೌರವವಾಗಿದೆ ಇದನ್ನು ಸಾಹಿತ್ಯ ಅಕಾಡೆಮಿ “ಭಾರತದ ರಾಷ್ಟ್ರೀಯ ಅಕಾಡೆಮಿ ಆಫ್ ಲೆಟರ್ಸ್” ವಾರ್ಷಿಕ ವಾಗಿ ಸಾಹಿತ್ಯಕ ಅರ್ಹತೆಯ ಅತ್ಯುತ್ತಮ ಪುಸ್ತಕಗಳ ಬರಹಗಾರರಿಗೆ ನೀಡುತ್ತದೆ.
- * ಪ್ರಥಮ ಪ್ರಶಸ್ತಿ – 1954
- * ಪ್ರಶಸ್ತಿ: ಭಾರತದಲ್ಲಿ ಉನ್ನತ ಸಾಹಿತ್ಯ ಪ್ರಶಸ್ತಿ
ದಿನಾಂಕ 25-06-2022 ರ ಪ್ರಚಲಿತ ವಿದ್ಯಮಾನಗಳ ಪ್ರಶೋತ್ತರಗಳು
1. ಭಯೋತ್ಪಾದನಾ ವಿರೋಧಿ ದಿನವನ್ನು ಯಾರ ಪುಣ್ಯ ಸ್ಮರಣಾರ್ಥವಾಗಿ ಆಚರಿಸಲಾಗುವುದು?
ಎ) ಲಾಲ ಬಹದ್ದೂರ ಶಾಸ್ತ್ರೀ
ಬಿ) ಚೌಧರಿ ಚರಣ ಸಿಂಗ್
ಸಿ) ಜವಾಹರ ಲಾಲ ನೆಹರೂ
ಡಿ) ರಾಜೀವ್ ಗಾಂಧೀ
2. ವಿಶ್ವ ಸಾಂಸ್ಕೃತಿಕ ವೈವಿಧ್ಯದ ದಿನ ಎಂದು ಯಾವ ದಿನವನ್ನು ಆಚರಿಸಲಾಗುತ್ತದೆ?
ಎ) ಮೇ – 11
ಬಿ) ಮೇ-21
ಸಿ) ಮೇ – 31
ಡಿ) ಮೇ 01
3. ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಎ) ಮೇ-05
ಬಿ) ಮೇ-09
ಸಿ) ಮೇ–22
ಡಿ) ಮೇ-28
No comments:
Post a Comment
If you have any doubts please let me know