ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 24-06-2022 ರ ಪ್ರಚಲಿತ ವಿದ್ಯಮಾನಗಳು

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 24-06-2022 ರ ಪ್ರಚಲಿತ ವಿದ್ಯಮಾನಗಳು 

 


ಎನ್‌ಐಎ ಮುಖ್ಯಸ್ಥರಾಗಿ ದಿನಕರ್ ಗುಪ್ತ ನೇಮಕ

ಎನ್‌ಐಎ ಮುಖ್ಯಸ್ಥರಾಗಿ ದಿನಕರ್ ಗುಪ್ತ ನೇಮಕ



ಪಂಜಾಬ್‌ನ ಮಾಜಿ ಡಿಜಿಪಿ ಹಾಗೂ 1987 ಬ್ಯಾಚ್ ಐಪಿಎಸ್ ಅಧಿಕಾರಿ ದಿನಕರ ಗುಪ್ತ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮುಖ್ಯಸ್ಥರಾಗಿ‌ನೇಮಕಗೊಂಡಿದ್ದಾರೆ.‌ಗುಪ್ತಾ ಅವರು 2024ರ ಮಾ.31 ರವರೆಗೆ ಸೇವೆ ಸಲ್ಲಿಸಲಿದ್ದಾರೆ. ದಿನಕರ್ ಗುಪ್ತಾ ಅವರನ್ನು ಎನ್‌ಐಎ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಗೃಹ ಸಚಿವಾಲಯದ ಪ್ರಸ್ತಾವನೆಗೆ ಸಂಸತ್ ನೇಮಕಾತಿ ಸಮಿತಿ ಅನುಮತಿ ನೀಡಿದೆ.


  • ಕಾಂಗ್ರೆಸ್ ಸರ್ಕಾರದಲ್ಲಿ 1987 ಬ್ಯಾಚ್‌ನ ಐಪಿಎಸ್ ಅಧಿಕಾರಿ ದಿನಕರ್ ಅವರನ್ನು ಪಂಜಾಬ್ ಪೋಲಿಸ್ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕಲಾಗಿತ್ತು.
  • ಪಂಜಾಬ್ ಪೋಲಿಸ್ ಗೃಹ ನಿರ್ಮಾಣ ಕಾರ್ಪೋರೇಷನ್ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ದಿನಕರ್ ಅವರ), ಸ್ಥಾನಕ್ಕೆ 1988 ಬ್ಯಾಚ್ ಐಪಿಎಸ್ ಅಧಿಕಾರಿ ಇಟ್ಬಾಲ್ ಪ್ರೀತ್ ಸಿಂಗ್ ಅವರನ್ನು ನೇಮಿಸಲಾಗಿತ್ತು.

 

ರಾಷ್ಟ್ರೀಯ ತನಿಖಾ ಸಂಸ್ಥೆಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ:

ಇದೊಂದು ಭಾರತದ ಪ್ರಾಥಮಿಕ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯಾಗಿದೆ. ಗೃಹ ವ್ಯವಹಾರಗಳ ಸಚಿವಾಲಯದ ಲಿಖಿತ ಘೋಷಣೆಯ ಅಡಿಯಲ್ಲಿ ರಾಜ್ಯಗಳಿಂದ ವಿಶೇಷ ಅನುಮತಿಯಿಲ್ಲದೆ ರಾಜ್ಯಗಳಾದ್ಯಂತ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳ ತನಿಖೆಯನ್ನು ನಿರ್ವಹಿಸಲು ಏಜೆನ್ಸಿಗೆ ಅಧಿಕಾರವಿದೆ.

  • • ಸ್ಥಾಪನೆ : 31 ಡಿಸೆಂಬರ್ 2008
  • • ಸ್ಥಾಪಕರು : ರಾಧಾ ವಿನೋದರಾಜು
  • • ಪ್ರಸ್ತುತ ಮುಖ್ಯಸ್ಥರು : ವೈ. ಸಿ ಮೋದಿ
  • • ಪೋಷಕ ಸಂಸ್ಥೆ : ಗೃಹ ವ್ಯವಹಾರಗಳ ಸಚಿವಾಲಯ


ಎಕಾನಾಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್ ವರದಿ ಬಿಡುಗಡೆ

ಎಕಾನಾಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್ ವರದಿ ಬಿಡುಗಡೆ


 

ಪ್ರಸಕ್ತ ಸಾಲಿನ ಎಕಾನಾಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್ ವಾರ್ಷಿಕ ವರದಿ ಬಿಡುಗಡೆಯಾಗಿದ್ದು ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುದ್ಧದಿಂದ ಹಾನಿಗೊಳಗಾಗಿರುವ ಸಿರಿಯಾದ ರಾಜಧಾನಿ ಡಮಾಸ್ಕಸ್ ಕನಿಷ್ಠ ವಾಸಯೋಗ್ಯ ನಗರವೆಂಬ ಪಟ್ಟ ಹೊಂದಿದೆ.


ಸ್ಥಿರತೆ ಉತ್ತಮ ಮೂಲಭೂತ ಸೌಕರ್ಯ, ಆರೋಗ್ಯ, ಸಂಸ್ಕೃತಿ ಮತ್ತು ಮನರಂಜನೆಗಾಗಿ ಸಾಕಷ್ಟು ಅವಕಾಶಗಳನ್ನು ಹೊಂದಿರುವ ಕಾರಣಕ್ಕಾಗಿ ವಿಯೆನ್ನಾ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಈವರೆಗೆ ಮೊದಲ ಸ್ಥಾನದಲ್ಲಿದ್ದ ಆಗ್ಲೆಂಡ್, ಕರೋನಾ ವೈರಸ್ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ 34ನೇ ಸ್ಥಾನಕ್ಕೆ ಜಾರಿದೆ.


ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನಿಯನ್ ರಾಜಧಾನಿ ಕಿಯೆವನ್ನು ಈ ಬಾರಿ ಪಟ್ಟಿಗೆ ಸೇರಿಸಲಾಗಿಲ್ಲ. ರಷ್ಯಾದ ನಗರಗಳಾದ ಮಾಸ್ಕೊ 15 ಮತ್ತು ಸೇಂಟ್ ಪೀಟರ್ಸ್ ಬರ್ಗ್ 13ನೇ ರ್ಯಾಂಕ್‌ಗೆ ಕುಸಿದಿವೆ.

* 2018 ಮತ್ತು 2019 ರಲ್ಲಿಯೂ ವಿಯೆನ್ನಾ ಮೊದಲ ಸ್ಥಾನದಲ್ಲಿತ್ತು.

* ಲಂಡನ್ 33, ಸ್ಪೇನ್‌ನ ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್ ಕ್ರಮವಾಗಿ 35 ಮತ್ತು 43, ಇಟಲಿಯ ಮಿಲಾನ್ 49, ಅಮೆರಿಕಾದ ನ್ಯೂಯಾರ್ಕ್ 51, ಚೀನಾದ ಬೀಜಿಂಗ್ 71ನೇ ಸ್ಥಾನದಲ್ಲಿವೆ.

 

ಪ್ರಮುಖ ನಗರಗಳ ರ್ಯಾಂಕಿಂಗ್

  1. ವಿಯೆನ್ನಾ (ಆಸ್ಟ್ರಿಯಾ) : 1ನೇ ಸ್ಥಾನ
  2. ಕೋಪನ್ ಹೇಗನ್‌ (ಡೆನ್ಮಾರ್ಕ್) : 2ನೇ ಸ್ಥಾನ
  3. ಜ್ಯೂರಿಚ್ (ಸ್ವಿಟ್ಟರ್‌ಲ್ಯಾಂಡ್) : 3ನೇ ಸ್ಥಾನ
  4. ಕ್ಯಾಲ್ಗರಿ (ಕೆನಡಾ) : 3ನೇ ಸ್ಥಾನ
  5. ವ್ಯಾಂಕೋವರ್ (ಕೆನಡಾ) : 5ನೇ ಸ್ಥಾನ
  6. ಜಿನೇವಾ (ಸ್ವಿಟ್ಟರ್‌ಲ್ಯಾಂಡ್) : 6ನೇ ಸ್ಥಾನ


ಎಕಾನಾಮಿಸ್ಟ್ ಇಂಟೆಲಿಜೆನ್ಸಿ ಯೂನಿಟ್ ಕುರಿತಾದ ಸಂಪೂರ್ಣ ಮಾಹಿತಿ

  • * ಸ್ಥಾಪನೆ : 1946
  • * ಪ್ರಧಾನ ಕಚೇರಿ ಲಂಡನ್
  • * ಅಂಗಸಂಸ್ಥೆಗಳು : ಬಜಿಯಾನ್, ಕ್ಲಿಯರ್ ಸ್ಟೇಟ್, ಕ್ಯಾನ್ ಬ್ಯಾಕ್ ಕನ್ಸಲ್ಟಿಂಗ್


ಕಾರ್ಯಗಳು

  • ಮಾಸಿಕ ದೇಶದ ವರದಿ ಪ್ರಕಟಣೆ
  • ದೇಶಗಳ ಐದು ವರ್ಷದ ಆರ್ಥಿಕ ಮುನ್ಸೂಚನೆ ಪ್ರಕಟ
  • ದೇಶದ ಅಪಾಯ ಸೇವಾವರದಿಗಳು ಮತ್ತು ಕೈಗಾರಿಕಾ ವರದಿಗಳಂತಹ ಸಂಶೋಧನೆ ಮತ್ತು ವಿಶ್ಲೇಷಣೆಯ ಮೂಲಕ ಮೂನ್ಸೂಚನೆ ಮತ್ತು ಸಲಹಾ ಸೇವೆಗಳನ್ನು ಒದಗಿಸುತ್ತದೆ.

 

ಜಿಸ್ಯಾಟ್‌ - 24 ಉಪಗ್ರಹ ಉಡಾವಣೆ

ಜಿಸ್ಯಾಟ್‌ - 24 ಉಪಗ್ರಹ ಉಡಾವಣೆ

 

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ವಾಣಿಜ್ಯ ವಿಭಾಗವಾಗಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ 24 ಐಎಲ್) ಜಿಸ್ಯಾಟ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವಲ್ಲಿ ಸಫಲವಾಗಿದೆ.


ಬಾಹ್ಯಾಕಾಶ ಕ್ಷೇತ್ರದಲ್ಲಿ 2020ರಲ್ಲಿ ಸುಧಾರಣೆಗಳು ಆದ ಬಳಿಕ ಬೇಡಿಕೆ ಆಧರಿಸಿ ಉಪಗ್ರಹ ಉಡಾವಣೆ ಮಾಡಿದ್ದು ಇದೇ ಮೊದಲು ಎಂಬುದು ಗಮನಾರ್ಹ. ಈಗ ಉಡಾವಣೆಯಾಗಿರುವ ಇಡೀ ಉಪಗ್ರಹವನ್ನು ಟಾಟಾ ಪ್ಲೇಗಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಆ ಕಂಪನಿಗೆ ದೇಶಾದ್ಯಂತ ಇನ್ನಷ್ಟು ಉತ್ಕೃಷ್ಟ ಸೇವೆ ಕೊಡ ಅನುಕೂಲವಾಗಲಿದೆ.


ಜಿಸ್ಯಾಟ್-24 ಉಪಗ್ರಹವನ್ನು ಎನ್‌ಎಸ್‌ಐಎಲ್ ಗಾಗಿ ಇಸ್ರೋ ಅಭಿವೃದ್ಧಿಪಡಿಸಿಕೊಟ್ಟಿದೆ. 4180 ಕೆ.ಜಿ ತೂಕವಿರುವ ಈ ಉಪಗ್ರಹವನ್ನು ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾ ದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಏರಿಯನ್ 5 ರಾಕೆಟ್ ನಲ್ಲಿಟ್ಟು ಉಡಾವಣೆ ಮಾಡಲಾಗಿದೆ.


ಹಾಸನದಲ್ಲಿರುವ ಇಸ್ರೋ ಮಾಸ್ಟರ್ ಕಂಟ್ರೋಲ್ ಘಟಕದ ನಿಯಂತ್ರಣಕ್ಕೆ ಉಪಗ್ರಹ ಬಂದಿದ್ದು, ಅದು ಉತ್ತಮ ಸ್ಥಿತಿಯಲ್ಲಿರುವ ಸಂಬಂಧ ಸಂಕೇತಗಳು ಲಭಿಸಿವೆ. ಜಿಸ್ಯಾಟ್-24 ಜತೆಗೆ ಮಲೇಷ್ಯಾದ ಮತ್ತೊಂದು ಉಪಗ್ರಹವನ್ನೂ ಏರಿಯಾನ್ ನೌಕೆ ಕಕ್ಷೆಗೆ ಸೇರಿಸಿದೆ.


ಬೇಡಿಕೆ ಆಧಾರಿತ ಉಪಗ್ರಹ ಈವರೆಗೆ ಇಸ್ರೋ‌ತಾನಾಗಿಯೇ ಉಪಗ್ರಹಗಳನ್ನು ಉಡಾವಣೆ ಮಾಡಿ, ಕಕ್ಷೆಗೆ ಸೇರಿಸಿದ ಬಳಿಕ ಅದನ್ನು ಅಗತ್ಯ ಇರುವವರಿಗೆ ಗುತ್ತಿಗೆ ಕೊಡುತ್ತಿತ್ತು. ಹೀಗಾಗಿ ಉಡಾವಣೆಗೂ ಮೊದಲೇ ಅದನ್ನು ಗುತ್ತಿಗೆ ಪಡೆಯುವ‌ ಬದ್ಧತೆ ಬಹುತೇಕ ಗ್ರಾಹಕರಿಂದ ಇಸ್ರೋಗೆ ಸಿಗುತ್ತಿರಲಿಲ್ಲ 2020ರಲ್ಲಿ ಬಾಹ್ಯಾಕಾಶ ರಂಗ ಸುಧಾರಣೆಯಾದ ಬಳಿಕ ಬೇಡಿಕೆ ಆಧರಿಸಿದ ಉಡಾವಣೆ ಸೌಲಭ್ಯವನ್ನು ಜಾರಿಗೆ ತರಲಾಯಿತು. ಇದರರ್ಥ ಉಪಗ್ರಹ ಉಡಾವಣೆಗೂ ಮುನ್ನ ಅದರ ಗ್ರಾಹಕರು ಯಾರು, ಅದು ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬ ಲಭಿಸುತ್ತದೆ. ಇಂತಹ ಉಪಗ್ರಹಗಳ ನಿರ್ಮಾಣ ಸಾಗಣೆ, ವಿಮೆ, ಉಡಾವಣೆ, ಕಕ್ಷೆಯಲ್ಲಿ ನಿರ್ವಹಣೆ, ಮಾಲೀಕತ್ವ ಎಲ್ಲವೂ ಎನ್‌ಎಸ್‌ಐಎಲ್ ಹೊಂದಿರುತ್ತದೆ. ಅದಕ್ಕೆ ಗ್ರಾಹಕರು ಬಾಡಿಗೆ ಪಾವತಿ ಮಾಡಬೇಕಾಗುತ್ತದೆ.


ಈ ಮಾದರಿಯ ಮೊದಲ ಉಪಗ್ರಹ ಇದಾಗಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಉಪಗ್ರಹ ಉಡಾವಣೆಯಾಗುವ ನೀರಿಕೆ ಇದೆ.

 

ಇಸ್ರೋ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

  • ISRO : Indian Space Resaarch Organisation
  • ಸ್ಥಾಪನೆ : 15 ಆಗಸ್ಟ್ 1969
  • ಕೇಂದ್ರ ಕಚೇರಿ : ಬೆಂಗಳೂರು
  • ಸ್ಥಾಪಕ : ವಿಕ್ರಮ್ ಸಾರಾಭಾಯಿ
  • ಪೋಷಕ ಸಂಸ್ಥೆ: ಬಾಹ್ಯಾಕಾಶ ಇಲಾಖೆ
  • ಪ್ರಸ್ತುತ ಮುಖ್ಯಸ್ಥರು: ಎಸ್ ಸೋಮನಾಥನ್


ಸುದ್ದಿಯಲ್ಲಿರುವ ರಾಷ್ಟ್ರಪತಿ ಚುನಾವಣೆ

ಸುದ್ದಿಯಲ್ಲಿರುವ ರಾಷ್ಟ್ರಪತಿ ಚುನಾವಣೆ

 

ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಈಗಾಗಲೇ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ರಾಷ್ಟ್ರಪತಿ ಹುದ್ದೆಗೆ ಸಂಬಂಧಿಸಿದಂತೆ ಅನೇಕ ಕುತೂಹಲಕಾರಿ ಹಲಕಾರಿ ಅಂಶಗಳಿವೆ.


ರಾಷ್ಟ್ರಪತಿ ಹುದ್ದೆಗೆ ಅರ್ಹತೆ


ಭಾರತದ ಸಂವಿಧಾನದ ಪ್ರಕಾರ ಚುನಾವಣೆಗೆ ಸ್ಪರ್ಧಿಸಲು ಕೆಲವೊಂದು ಷರತ್ತುಗಳನ್ನು ಪೂರ್ಣಗೊಳಿಸಬೇಕಾಗಿದೆ. 


  • ಮುಖ್ಯವಾಗಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವವರು ಭಾರತದ ಪ್ರಜೆಯಾಗಿರಬೇಕು.
  • 35 ವರ್ಷ ಪೂರ್ಣಗೊಂಡಿರಬೇಕು.
  • ಹಾಗೂ ಲೋಕಸಭೆಯ ಚುನಾವಣೆಗೆ ಸ್ಪರ್ದಿಸಲು ಅರ್ಹರಾಗಿರಬೇಕು.
  • ಅದೇ ರೀತಿ ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿ ಯಾವುದೇ ರಾಜ್ಯ ಸರ್ಕಾರದಲ್ಲಿ ಇಲ್ಲದೆ ಸ್ಥಳೀಯ ಅಥವಾ ಪ್ರಾಧಿಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೇ ಹೊಂದಿದ್ದರೆ ಅಂತಹವರು ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ.
  • ಈ ಎಲ್ಲ ಅರ್ಹತೆಗಳನ್ನು ಪೂರೈಸಿದವರಷ್ಟೆ ಚುನಾವಣೆಗೆ ಸ್ಪರ್ಧಿಸಲು ನಾಮನಿರ್ದೇಶನ ಮಾನ್ಯಗೊಳ್ಳುತ್ತದೆ. 
  • ಇದೊಂದು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ.


ರಾಷ್ಟ್ರಪತಿ ವೇತನ


ರಾಷ್ಟ್ರಪತಿಗಳಾಗಿ ಆಯ್ಕೆಯಾದವರು ತಿಂಗಳಿಗೆ 5 ಲಕ್ಷ ರೂ ವೇತನ ಪಡೆಯುತ್ತಾರೆ. 1951ರ ರಾಷ್ಟ್ರಪತಿಗೆ ಸಾಧನೆ ಮತ್ತು ಪಿಂಚಣಿ ಕಾಯ್ದೆಯಂತೆ ವೇತನವನ್ನು ನಿಗದಿಪಡಿಸಲಾಗಿರುತ್ತದೆ. ದೇಶದಲ್ಲಿ ಸರ್ಕಾರದ ಅಧಿಕೃತ ವೇತನ ರಾಷ್ಟ್ರಪತಿಗಳದ್ದಾಗಿರುತ್ತದೆ. 


2018ರಲ್ಲಿ ರಾಷ್ಟ್ರಪತಿ ಅವರ ವೇತನ ತಿಂಗಳಿಗೆ 1.50 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಏರಿಕೆಯಾಯಿತು. ಆರಂಭದಲ್ಲಿ ಭಾರತದ ರಾಷ್ಟ್ರಪತಿ ಅವರಿಗೆ ತಿಂಗಳಿಗೆ 10,000 ರೂ, ವೇತನ ನೀಡಲಾಗುತ್ತಿತ್ತು. 1998ರಲ್ಲಿ ಈ ಮೊತ್ತ 50,000 ರೂ. ಗೆ ಹೆಚ್ಚಳವಾಯಿತು. ಮಾಸಿಕ ವೇತನ ಜತೆಗೆ ರಾಷ್ಟ್ರಪತಿ ಅವರು ಹಲವು ಭತ್ಯೆಗಳನ್ನೂ ಪಡೆಯುತ್ತಾರೆ.

 

ರಾಷ್ಟ್ರಪತಿಯವರ ನಿವಾಸ


ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳಿಗೆ ಹೊಸ ದೆಹಲಿಯಲ್ಲಿರುವ ರಾಷ್ಟ್ರಪತಿಗಳ ಭವನವೇ ಅಧಿಕೃತ ನಿವಾಸವಾಗಿರುತ್ತದೆ ಸ್ವತಂತ್ರ್ಯ ಪೂರ್ವದಲ್ಲಿ ವೈಸ್‌ರಾಯ ಅವರಿಗಾಗಿ ನಿರ್ಮಿಸಲಾಗಿದ್ದ ನಿವಾಸ ಇಂದು ರಾಷ್ಟ್ರಪತಿ ಭವನವಾಗಿದೆ. 1929ರಲ್ಲಿ ಪೂರ್ಣಗೊಂಡಿರುವ ರಾಷ್ಟ್ರಪತಿ ಭವನವು 340 ಕೋಣೆಗಳನ್ನು ಹೊಂದಿದ್ದು ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದೆ. ಸಭಾಂಗಣಗಳು, ಅತಿಥಿ ಕೋಣೆಗಳು ಮತ್ತು ಕಚೇರಿಗಳನ್ನು ಭವನ ಒಳಗೊಂಡಿದೆ. 330 ಎಕರೆ ಎಸ್ಟೇಟ್‌ನಲ್ಲಿ 5 ಎಕರೆ ವಿಸ್ತೀರ್ಣದಲ್ಲಿ "ಎಚ್" ಆಕಾರದ ಕಟ್ಟಡ ವಿನ್ಯಾಸದ ಪರಿಕಲ್ಪನೆ ಸರ್ ಎಡ್ವಿನ್ ಲೂಟಿಯನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರಾಗಿದ್ದಾಗಿದೆ.


ರಾಷ್ಟ್ರಪತಿಯವರ ಭದ್ರತೆ


ಭಾರತದ ರಾಷ್ಟ್ರಪತಿಗಳಿಗೆ ರಾಷ್ಟ್ರಪತಿ ಅಂಗರಕ್ಷಕ ದಳ ಭದ್ರತೆ ಒದಗಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಪಿಬಿಜಿ ಅತ್ಯಂತ ಹಳೆಯದಾದ ದಳವಾಗಿದೆ. ಅಲ್ಲದೆ ಜಗತ್ತಿನ ಏಕೈಕ ಅಶ್ವದಳ ಹೊಂದಿರುವ ಮಿಲಿಟರಿ ಘಟಕವಾಗಿದೆ. ತರಬೇತಿ ಪಡೆದ ಅರೇಸೆನಾಪಡೆಯಾಗಿರುವುದರಿಂದ ಯುದ್ಧದ ಸಮಯದಲ್ಲಿಯೂ ನಿಯೋಜನೆ ಗೊಳಿಸಬಹುದಾಗಿದೆ.


ರಾಷ್ಟ್ರಪತಿಯವರ ರಜಾ ತಾಣಗಳು


ರಾಷ್ಟ್ರಪತಿ ಅವರಿಗೆ ಎರಡು ರಜಾತಾಣಗಳಿದ್ದು, ಒಂದು ಉತ್ತರದಲ್ಲಿದ್ದರೆ ಮತ್ತೊಂದು ದಕ್ಷಿಣದಲ್ಲಿದೆ. ಅದರಂತೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿನ ಮಹೋಬ್ರಾ ಗಿರಿಧಾಮಕ್ಕೆ ರಾಷ್ಟ್ರಪತಿ ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ಭೇಟಿ ನೀಡುತ್ತಾರೆ. ಈ ವೇಳೆ ಅವರ ಕಚೇರಿ ಸಿಬ್ಬಂದಿ ಎಲ್ಲ ಅವರೊಂದಿಗೆ ಅಲ್ಲಿಗೆ ತೆರಳುತ್ತಾರೆ. ಇಲ್ಲಿ ರಾಷ್ಟ್ರಪತಿ ಅವರು 1850ರಲ್ಲಿ 10,628 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಿಸಲಾದ ಭವ್ಯ ಬಂಗಲೆಯಲ್ಲಿ ನೆಲೆಸಿರುತ್ತಾರೆ.


ಇನ್ನು ಆಂಧ್ರ ಪ್ರದೇಶದ ಹೈದರಾಬಾದ್‌ನ ಬೊಲರಂನಲ್ಲಿರುವ ರಾಷ್ಟ್ರಪತಿ ನಿಲಯಕ್ಕೆ ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ಭೇಟಿ ನೀಡಿ, ತಮ್ಮ ಸಿಬ್ಬಂದಿಯೊಂದಿಗೆ ರಾಷ್ಟ್ರಪತಿ ಅವರು ವಾಸ್ತವ್ಯ ಹೂಡುತ್ತಾರೆ. 1860 ರಲ್ಲಿ 90 ಏಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವು ಒಂದು ಅಂತಸ್ತಿನದಾಗಿದ್ದು, 11 ಕೋಣೆಗಳನ್ನು ಒಳಗೊಂಡಿದೆ.

 

ನಿವೃತ್ತಿ ನಂತರದ ಸೌಲಭ್ಯಗಳು


  • ಭಾರತದ ರಾಷ್ಟ್ರಪತಿಯಾಗಿದ್ದವರು ನಿವೃತ್ತ ಬಳಿಕ ಸಾಕಷ್ಟು ಪ್ರಯೋಜನಗಳನ್ನು ಹೊಂದಲಿದ್ದಾರೆ. ಉದಾ: ಮಾಸಿಕ 1.5 ಲಕ್ಷ ರೂ, ಪಿಂಚಣಿ
  • ರಾಷ್ಟ್ರಪತಿ ಅವರ ಪತ್ನಿ ಅಥವಾ ಪತಿಗೆ ತಿಂಗಳಿಗೆ 30,000 ರೂ. ಗಳನ್ನು ನೀಡಲಾಗುತ್ತದೆ.
  • ವಾಸಕ್ಕಾಗಿ ಉಚಿತ ಬಾಡಿಗೆ ಬಂಗಲೆ, 2 ಉಚಿತ ದೂರವಾಣಿ ಹಾಗೂ ಮೊಬೈಲ್ ಫೋನ್‌ಗಳು, ಐವರು ಸಹಾಯಕ ಸಿಬ್ಬಂದಿ (ವಾರ್ಷಿಕ ಸಿಬ್ಬಂದಿ ವೆಚ್ಚ 60,000 ರೂ)
  • ಸಂಗಾತಿಯೊಂದಿಗೆ ರೈಲು ಅಥವಾ ವಿಮಾನ ಸಂಚಾರ ಉಚಿತ.


ರಾಷ್ಟ್ರಪತಿಯವರಿಗೆ ಸಂಬಂಧಿಸಿದ ಸಂವಿಧಾನದ ಪ್ರಮುಖ ವಿಧಿಗಳು

  • 54ನೇ ವಿಧಿ - ರಾಷ್ಟ್ರಪತಿ ಚುನಾವಣೆ
  • 55ನೇ ವಿಧಿ - ರಾಷ್ಟ್ರಪತಿ ಚುನಾವಣೆ ರೀತಿ
  • 50ನೇ ವಿಧಿ - ರಾಷ್ಟ್ರಪತಿಯವರ ಅಧಿಕಾರಾವಧಿ
  • 58ನೇ ವಿಧಿ – ಅರ್ಹತೆಗಳು
  • 60ನೇ ವಿಧಿ - ಪ್ರಮಾಣವಚನ 61ನೇ ವಿಧಿ- ಪದಚ್ಯುತಿ


ಪ್ರಚಲಿತ ಘಟನೆಗಳ ಪ್ರಶೋತ್ತರಗಳು

1. ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಕನ್ನಡಿಗ ಯಾರು?

ಎ) ಜಿ.ಎಚ್.ಪಟೇಲರು 

ಬಿ) ಚಂದ್ರ ಆರ್ಯ 

ಸಿ) ಅನಂತ ಕುಮಾರ್‌ 

ಡಿ) ಕೆ. ಗೋವಿಂದಯ್ಯ

 

2.ಭಯೋತ್ಪಾದನಾ ವಿರೋಧಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಎ) ಮೇ-1

ಬಿ) ಮೇ-20

ಸಿ) ಮೇ-21

ಡಿ) ಮೇ-31

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area