ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 23-06-2022 ರ ಪ್ರಚಲಿತ ವಿದ್ಯಮಾನಗಳು

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 23-06-2022 ರ ಪ್ರಚಲಿತ ವಿದ್ಯಮಾನಗಳು 

 

 

ಚೀನಾದಿಂದ ಆಮದು ಪ್ರಮಾಣ ಏರಿಕೆ


 

ಪ್ರಸಕ್ತ ಸಾಲಿನಲ್ಲಿ ಭಾರತವು ಚೀನಾದಿಂದ ಅತಿ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದು, 2021ಕ್ಕೆ ಹೋಲಿಸಿದರೆ 2022ನೇ ಆರ್ಥಿಕ ವರ್ಷದಲ್ಲಿ ಆಮದು ಪ್ರಮಾಣ ಶೇ. 45.51 ರಷ್ಟು ಏರಿಕೆಯಾಗಿದೆ. ಈ ವರ್ಷ ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಮೌಲ್ಯ 7.02 ಟ್ರಿಲಿಯನ್ ರುಪಾಯಿಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಕಳೆದವರ್ಷ ಭಾರತ ಚೀನಾದಿಂದ 4.82 ಟ್ರಿಲಿಯನ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು.


* ಚೀನಾದಿಂದ ಅತಿದೊಡ್ಡ ಆಮದುಗಳಲ್ಲಿ ಖನಿಜ, ಇಂಧನಗಳು, ಖನಿಜ ತೈಲಗಳು, ರಾಸಾಯನಿಕಗಳು, ರಸಗೊಬ್ಬರ, ಪ್ಲಾಸ್ಟಿಕ್, ಕಬ್ಬಿಣ ಮತ್ತು ಉಕ್ಕು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಉಪಕರಣಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿವೆ. ದ್ವಿಪಕ್ಷಿಯ ರಾಜಕೀಯ ಉದ್ವಿಗ್ನತೆಯ ನಡುವೆಯೂ ಚೀನಾದಿಂದ ಆಮದು ಶೇ. 45 ರಷ್ಟು ಹೆಚ್ಚಾಗಿದೆ.


ಅಮೆರಿಕದ ವೈಜ್ಞಾನಿಕ ಸಲಹೆಗಾರ್ತಿಯಾಗಿ ಆರ್ತಿ ಪ್ರಭಾಕರ ನೇಮಕ


 


ಭಾರತ ಮೂಲದ ಅಮೆರಿಕ ನಿವಾಸಿ ಡಾ. ಆರ್ತಿ ಪ್ರಭಾಕರ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕ ಮಾಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯ ಕಚೇರಿಗೆ ಮುಖ್ಯ ನಿರ್ದೆಶಕರಾಗಿ ಆಯ್ಕೆಯಾದ ಮೊದಲ ಮಹಿಳಾ, ಆನಿವಾಸಿ ಇವರಾಗಿದ್ದಾರೆ. 'ಆರ್ತಿ ಅವರು ಅತ್ಯಂತ ಗೌರವಾನ್ವಿತ ಮತ್ತು ಪ್ರತಿಭಾನ್ವಿತ ಎಂಜಿನಿಯರ್‌ ಆಗಿದ್ದು, ಮುಂದಿನ ದಿನಗಳಲ್ಲಿ ವಿಜ್ಞಾನದ ಮೂಲಕ ನಮ್ಮ ಕಠಿಣ ಸವಾಲುಗಳನ್ನು ಎದುರಿಸಲು ದಾರಿ ಮಾಡಿಕೊಡಲಿದ್ದಾರೆ' ಎಂದು ಬ್ರೆಡನ್ ವಿಶ್ವಾಸದಿಂದ ಇವರ ನೇಮಕ ಮಾಡಿದ್ದಾರೆ.


ಬ್ರಿಕ್ಸ್ ಸಮ್ಮೇಳನ



 

ಉಕ್ರೇನ್ ಮೇಲಿನ ರಷ್ಯಾ ಯುದ್ಧದಿಂದ ಉಂಟಾದ ಭೌಗೋಳಿಕ ರಾಜಕೀಯ ಪ್ರಕ್ಷುಬ್ದತೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ 5 ಸದಸ್ಯ ರಾಷ್ಟ್ರಗಳ ಗುಂಪಿನಲ್ಲಿ ಬ್ರಿಕ್ಸ್ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ನಿಂಗ್ ಮತ್ತು ರಷ್ಯಾದ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆಯಲ್ಲಿ ಭಾಗಹಿಸಲಿದ್ದಾರೆ.

* ಜೂನ್ 23 ಮತ್ತು 24 ರಂದು ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ವರ್ಷದ ಗುಂಪಿನ ನೆತೃತ್ವವನ್ನು - ಚೀನಾ ವಹಿಸಿಕೊಂಡಿದ್ದು, ಶೃಂಗ ಸಭೆಯನ್ನು ಆಯೋಜಿಸುತ್ತಿದೆ. ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡಿದೆ. ಇದು ಜಾಗತಿಕ ಜನಸಂಖ್ಯೆಯ ಶೇ. 41 ಜಾಗತಿಕ ವ್ಯಾಪಾರದ ಶೇ. 16 ರಷ್ಟುನ್ನು ಪ್ರತಿನಿಧಿಸುತ್ತದೆ. ಬ್ರೆಜಿಲ್ ಅಧ್ಯಕ್ಷ ಜೈರ್‌ ಬೋಲ್ಪನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಷೋಸಾ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


* ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಮಾನ್ಯ ಕಾಳಜಿಯ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಚರ್ಚಿಸಲು ಬ್ರಿಕ್ಸ್ ಒಂದು ವೇದಿಕೆಯಾಗಿದೆ ಎಂದು ಅದು ಹೇಳಿದೆ. ಗುಂಪು ಬಹುಪಕ್ಷೀಯ ವ್ಯವಸ್ಥೆಯನ್ನು ಹೆಚ್ಚು ಪ್ರತಿನಿಧಿಸುವ ಮತ್ತು ಒಳಗೊಳ್ಳುವಂತೆ ಮಾಡಲು ನಿಯಮಿತವಾಗಿ ಸುಧಾರಣೆ ಕರೆ ನೀಡಿದೆ 14ನೇ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಭಯೋತ್ಪಾದನೆ, ವ್ಯಾಪಾರ, ಆರೋಗ್ಯ, ಸಾಂಪ್ರದಾಯಿಕ ಔಷದ, ಪರಿಸರ, ವಿಜ್ಞಾನ, ಮತ್ತು ತಂತ್ರಜ್ಞಾನ, ಮತ್ತು ನಾವೀನ್ಯತೆ, ಕೃಷಿ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮತ್ತು ಎಂಎಸ್‌ಎಂಗಳಂತಹ ಕ್ಷೇತ್ರಗಳಲ್ಲಿ ಬ್ರಿಕ್ಸ್ ನೊಳಗಿನ ಸಹಕಾರವನ್ನು ಒಳಗೊಳ್ಳುವ ನೀರಿಕ್ಷೆಯಿದೆ.


ಸಮ್ಮೇಳನದ ಪ್ರಮುಖ ಅಂಶಗಳು


ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿರೇಖೆಯ ನಡುವೆ ಶೃಂಗಸಭೆಯು ನಡೆಯುತ್ತಿದೆ. ಸದ್ಯ ಶೃಂಗಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಯಲಿದೆಯೆ ಎಂಬುದು ಕುತೂಹಲಕಾರಿ ಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 23 ಮತ್ತು 24 ರಂದು ವರ್ಚುವಲ್ ರೂಪದಲ್ಲಿ ಚೀನಾ ಆಯೋಜಿಸಿರುವ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಜೂನ್ 24 ರಂದು ಅತಿಥಿ ರಾಷ್ಟ್ರಗಳೊಂದಿಗೆ ಜಾಗತಿಕ ಅಭಿವೃದ್ಧಿ ಕುರಿತು ಉನ್ನತ ಮಟ್ಟದ ಸಂವಾದ ವನ್ನು ಒಳಗೊಂಡಿರುತ್ತದೆ. ಬ್ರಿಕ್ಸ್ ಬಹುಪಕ್ಷಿಯ ವ್ಯವಸ್ಥೆಯ ಸುಧಾರಣೆ, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಜಾಗತಿಕ ಆರ್ಥಿಕ ಚೇತರಿಕೆಯಂತಹ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಶೃಂಗಸಭೆಗೆ ಮುನ್ನ, ಮೋದಿ ಅವರು ಬ್ರಿಕ್ಸ್ ವ್ಯಾಪಾರ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.

 

ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್‌ಬ್ರಿಕ್ಸ್ ರಾಷ್ಟ್ರಗಳ ಉನ್ನತ ಭದ್ರತಾ ಅಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು. ವಿಶ್ವಾಸನೀಯತೆ, ಇಕ್ವಿಟಿ ಮತ್ತು‌ ಹೊಣೆಗಾರಿಕೆಯೊಂದಿಗೆ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಬಹುಪಕ್ಷೀಯ ‌ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳುವಾಗ ವ್ಯವಸ್ಥೆಯ ತುರ್ತು‌ಯಾವುದೇ ವಿರುದ್ಧ ಮೀಸಲಾತಿಯಿಲ್ಲದೆ ಸಹಕಾರವನ್ನು ಉತ್ತೇಜಿಸಲು ದೋವಲ್ ತಮ್ಮ ಭಾಷಣದಲ್ಲಿ ಭಯೋತ್ಪಾದೆಯ ಕರೆ ನೀಡಿದರು.


ಸುದ್ದಿಯಲ್ಲಿರುವ ಸತಿ ಸೇತುವೆ


 


ಪ್ರಧಾನಿ ನರೇಂದ್ರ ಮೋದಿ ಅವರು‌ ಲುಂಬಿನಿಗೆ ಭೇಟಿ ನೀಡಿದ ಬಳಿಕ ಭಾರತದ ರಾಷ್ಟ್ರೀಯ ಜಲವಿದ್ಯುತ್ ನಿಗಮ ಪಶ್ಚಿಮ ನೇಪಾಳದಲ್ಲಿ ಕಳೆಗುಂದಿದ್ದ ಪಶ್ಚಿಮ ಸೆತಿ ಯೋಜನೆಗೆ ಮರುಜೀವ ನೀಡಲು ಮುಂದಾಗಿದೆ. ಇದರೊಂದಿಗೆ ಭಾರತ, ನೇಪಾಳದಲ್ಲಿ ಮಹತ್ವಾಕಾಂಕ್ಷೆಯ ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಯೋಜನೆಯು ಎರಡೂ ದೇಶಗಳಿಗೆ ವಿದ್ಯುತ್ ಒದಗಿಸುವುದರ ಜತೆಗೆ ವ್ಯಾಪಾರ ಹಾಗೂ ರಾಜಕೀಯ ಸಂಬಂಧವನ್ನು ಮರುಸ್ಥಾಪಿಸಲು ನೆರವಾಗಲಿದೆ.


* ಇದಕ್ಕೂ ಮೊದಲು 2012ರಿಂದ 2018ರ ನಡುವೆ‌ ಇದನ್ನು ಚೀನಾ ನಿರ್ವಹಿಸುತ್ತಿತ್ತು. ಈ ಯೋಜನೆಯನ್ನು ಚೀನಾ ಹಿಂಪಡೆದು 4 ವರ್ಷಗಳ ಬಳಿಕ ಈಗ ಅದನ್ನು ಭಾರತ ಕೈಗೆತ್ತಿಕೊಂಡಿದೆ. ಅಲ್ಲದೆ ಈಗಾಗಲೇ ಭಾರತದ ರಾಷ್ಟ್ರೀಯ ಜಲವಿದ್ಯುತ್ ನಿಗಮ (ಎನ್‌ಎಚ್‌ಪಿಸಿ) ಪಶ್ಚಿಮ ನೇಪಾಳದಲ್ಲಿ ಪ್ರಾಥಮಿಕ ಕಾರ್ಯ ಆರಂಭಿಸಿದೆ.

ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಭಾರತಕ್ಕೆ ಭೇಟಿ ನೀಡುವುದಕ್ಕೂ ಮೊದಲೇ ಯೋಜನೆ ಕುರಿತು ಅನೌಪಚಾರಿಕ ಮಾತುಕತೆ ಆರಂಭ ಗೊಂಡಿತ್ತು ಅವರು. ಭಾರತ ನೇಪಾಳದ ವಿದ್ಯುತ್ ಮಾರುಕಟ್ಟೆಯಾಗಿದೆ. ಅಲ್ಲದೆ, ಪಶ್ಚಿಮ ಸತಿ ಯೋಜನೆಯನ್ನು ಭಾರತಕ್ಕೆ ನೀಡುವುದಾಗಿಯೂ ಘೋಷಿಸಿದ್ದರು.


ಸತಿ ಸೇತುವೆಯ ಪ್ರಮುಖಾಂಶಗಳು:


ಈ ಮೊದಲು 750 ಮೆಗಾವ್ಯಾಟ್ಸ್ ಪಶ್ಚಿಮ ಸೆತಿ ಜಲವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಚೀನಾದ ಶ್ರೀ ಗೋರ್ಜಸ್ ಕಾರ್ಪೊರೇಷನ್‌ನ ಅಂಗಸಂಸ್ಥೆ ಪಿಡಬ್ಲ್ಯೂ ಇನ್‌ವೆಸ್ಟ್‌ಮೆಂಟ್ ಕಾರ್ಪೊರೇಷನ್ 2018ರಲ್ಲಿ ತನಗೆ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗದು ಎಂದು ನೇಪಾಳ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಯೋಜನೆ ಅತ್ಯಂತ ಹೆಚ್ಚಿನ ವೆಚ್ಚದ್ದಾಗಿರುವುದರಿಂದ ಅದನ್ನು ನಿರ್ವಹಿಸಲು ತಾನು ಆರ್ಥಿಕವಾಗಿ ಅಸಮರ್ಥವಾಗಿರುವುದಾಗಿ ಯೋಜನೆ ಕೈಬಿಡುತ್ತಿರುವುದಾಗಿ ಚೀನಾ ಸಂಸ್ಥೆ ತಿಳಿಸಿತ್ತು.

 

ನೇಪಾಳ ಮತ್ತು ಭಾರತ ನಡುವಿನ ಬಿಕ್ಕಟ್ಟು 2015ರ ಆರ್ಥಿಕ ದಿಬ್ಬಂಧನಕ್ಕೆ ಕಾರಣವಾಯಿತು. ಮಾಜಿ ಪ್ರಧಾನಿ ಓಲಿ ಅವರನ್ನು ಪದಚ್ಯುತಗೊಳಿಸಿ ದೆವುಬಾ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರೊಂದಿಗೆ ಸ್ನೇಹ ಹಸ್ತ ಚಾಚುವ ಮೂಲಕ ರಾಜಕೀಯ ಸಂಬಂಧವನ್ನು ವೃದ್ಧಿಸಲು ಮುಂದಾದರು. ಪಶ್ಚಿಮ ಸತಿ‌ಯೋಜನೆಯು ನೇಪಾಳದ ಪಶ್ಚಿಮ ಭಾಗವನ್ನು ಒಳಗೊಂಡಿದೆ. ಆರಂಭದಲ್ಲಿ 750 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಪ್ರಸ್ತಾಪಿಸಲಾದ ಯೋಜನೆಗೆ‌ಎನ್‌ಎಚ್‌ಪಿಸಿ ಯಾವ ಬದಲಾವಣೆಗಳು ಅಥವಾ ವಿಸ್ತರಣೆ ಮಾಡುತ್ತದೆ ಎನ್ನುವುದು ಸಹ ಸ್ಪಷ್ಟವಾಗಿಲ್ಲ‌ ಆದರೆ, ಯೋಜನೆಯು ದೇಶೀಯ ಬಳಕೆಯ ಜತೆಗೆ ಭಾರತಕ್ಕೆ ವಿದ್ಯುತ್ ಸರಬರಾಜು‌ ಮಾಡಲು ವರ್ಷಪೂರ್ತಿ ಉತ್ಪಾದಿಸುವ ಇರಾದೆ ಹೊಂದಿದೆ. ಯೋಜನೆಯು ಯಶಸ್ವಿಯಾದಲ್ಲಿ ನೇಪಾಳದಲ್ಲಿ ಮತ್ತೆ ಭಾರತದ ಗೌರವ ಮರು ಸ್ಥಾಪನೆಯಾಗಲಿದೆ. ಇದರೊಂದಿಗೆ ಭವಿಷ್ಯದ ಜಲವಿದ್ಯುತ್ ಯೋಜನೆಗಳಿಗೆ ಮತ್ತಷ್ಟು ಮಹತ್ವ ದೊರಕಲಿದೆ ಎಂದು ನೀರಿಕ್ಷಿಸಲಾಗಿದೆ.


ನೇಪಾಳ ಸುಮಾರು 2,000 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸಬಲ್ಲದಾಗಿದ್ದರೂ ಕೇವಲ 900 ಮೆಗಾವ್ಯಾಟ್ಸ್ ಸಾಮರ್ಥ್ಯವನ್ನಷ್ಟೇ ಉತ್ಪಾದಿಸುತ್ತಿರುವದರಿಂದ ಆಗಾಧ ಪ್ರಮಾಣದ ವಿದ್ಯುತ್ ಕೊರತೆ ಎದುರಿಸುತ್ತಿದೆ. ಪ್ರಸ್ತುತ ನೇಪಾಳ 364 ಮೆಗಾವ್ಯಾಟ್ ವಿದ್ಯುತ್‌ ಅನ್ನು ಭಾರತಕ್ಕೆ ಮಾರಾಟ ಮಾಡುತ್ತಿದೆಯಾದರೂ, ವರ್ಷಗಳವರೆಗೆ ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು ಎನ್ನುವುದು ಗಮನಾರ್ಹ. ಯೋಜನೆಗಳ ಕುರಿತು ಭಾರತ ಮತ್ತು ನೇಪಾಳದ ನಡುವೆ ಒಪ್ಪಂದವಾದಲ್ಲಿ, ಪ್ರವಾಹ ನಿಯಂತ್ರಣ, ನೌಕಾಯಾನ, ಮೀನುಗಾರಿಕೆ, ನೀರಾವರಿಯಂತಹ ಹಲವು ಪ್ರಯೋಜನಗಳಾಗಲಿವೆ ಅಲ್ಲದೆ, ಯೋಜನೆ ಯಶಸ್ವಿಯಾದಲ್ಲಿ ವಿದ್ಯುತ್ ವೆಚ್ಚ ಪ್ರಸ್ತುತ ದರಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಲಿದೆ. ಆ ಮೂಲಕ ಎರಡೂ ಕಡೆಯ ಜನರಿಗೆ ಯೋಜನೆಯಿಂದ ಬಹುಪಯೋಗವಾಗಲಿದೆ.


ನೇಪಾಳ ಸುಮಾರು 6,000 ನದಿಗಳಿದ್ದು ಇದರಿಂದ ಅದು ವಿದ್ಯುತ್ ಮೂಲಗಳಲ್ಲಿ ಸಂಪದ್ಭರಿತವಾಗಿದೆ ಜೊತೆಗೆ ಅಂದಾಜು 83,000 ಮೆಗಾವ್ಯಾಟ್‌ಗಳಷ್ಟು ಸಾಮರ್ಥ್ಯದ ವಿದ್ಯುತ್ ಉತ್ಪಾದಿಸಬಲ್ಲದ್ದಾಗಿದೆ. ಭಾರತ ಹಲವು ಬಾರಿ ಅಧಿಕೃತವಾಗಿ ನೇಪಾಳವನ್ನು ಈ ವಿಷಯವಾಗಿ ಸಂಪರ್ಕಿಸಿದ್ದು ನೇಪಾಳದ ನದಿ ನೀರಿನ ಹಕ್ಕುಗಳನ್ನು ತನಗೆ ನಿಡುವಂತೆಯೂ ಮನವಿ ಮಾಡಿತ್ತು. ಹಾಗೆ ನೋಡಿದರೆ, ನೇಪಾಳ, ಭಾರತವನ್ನು ಕಾರ್ಯಸಾಧ್ಯ ಮಾರುಕಟ್ಟೆಯಾಗಿಯೇ ಪರಿಗಣಿಸುತ್ತದೆ. ಹೀಗಾಗಿಯೇ ಭಾರತ ಆ ದೇಶದ ಉತ್ತರದ ಪ್ರಮುಖ ನದಿಗಳನ್ನು ಬಳಸಿಕೊಳ್ಳುವ ಬಗ್ಗೆ ತನಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿದೆ.


ಅಂತರರಾಷ್ಟ್ರೀಯ ಒಲಿಂಪಿಕ್ ದಿನ : International Olympic Day 23 June


 


ಜೂನ್ 23, 1948 ರಲ್ಲಿ ಸೇಂಟ್ ಮೋರಿಟ್ಸ್ (ಸ್ವಿಟ್ಜರ್ಲೆಂಡ್) ನಲ್ಲಿ ನಡೆದ 42 ನೇ ಅಧಿವೇಶನದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಯು (IOC) ಜೂನ್ 23 ನ್ನು ಒಲಂಪಿಕ್ ದಿನವನ್ನಾಗಿ ಆಚರಿಸುವ ಕಲ್ಪನೆಯನ್ನು ಅಂಗೀಕರಿಸಿತು.


ಈ ಆಚರಣೆಯನ್ನು 1894 ರಲ್ಲಿ ಪ್ಯಾರಿಸ್‌ನಲ್ಲಿ ರಚನೆಯಾದ IOC ಯ ನೆನಪಿಗಾಗಿ ಬಳಸಲಾಗುತ್ತದೆ.


Note: 


  • Theme 2022: The power that sport has to build a better world, by strightly people‌ together in peace.
  • 1894 ರಲ್ಲಿ ಪಿಯರೆ ಡಿ ಕೊಬರ್ಟಿನ್ ಮತ್ತು ಡೆಮೆಟ್ರಿಯಾಸ್ ವಿಕೆಲಾಸ್ ಇದನ್ನು ಸ್ಥಾಪಿಸಿದರು.
  • ಆಧುನಿಕ ಬೇಸಿಗೆ ಮತ್ತು ಚಳಿಗಾಲದ ಒಲಂಪಿಕ್ಸ್ ಕ್ರೀಡಾಕೂ ಟವನ್ನು ಸಂಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ.
  • ಕೇಂದ್ರ ಕಛೇರಿ : ಲೌಸೇನ್, ಸ್ವಿಟ್ಟರ್‌ಲ್ಯಾಂಡ್
  • ಇದೊಂದು ಸರ್ಕಾರೇತರ ಕ್ರೀಡಾ ಸಂಸ್ಥೆಯಾಗಿದೆ.


ವಿಶ್ವ ಸಂಸ್ಥೆ ಲೋಕಸೇವಾ ದಿನ : ಜೂನ್ 23



 

2002 ಡಿಸೆಂಬರ್ 20 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 23 ರಂದು ವಿಶ್ವಸಂಸ್ಥೆಯ ಲೋಕಸೇವಾ ದಿನ ಅಥವಾ ಸಾರ್ವಜನಿಕ ಸೇವಾ ದಿನವೆಂದು ಆಚರಿಸಲು ತಿಳಿಸಿತು.

ಈ ದಿನದಂದು ವಿಶ್ವಸಂಸ್ಥಾ ಸಾರ್ವಜನಿಕ ಸೇವಾ ಪ್ರಶಸ್ತಿಯನ್ನು ನೀಡಲಾಗುವುದು.

ಉದ್ದೇಶ : ಸಮುದಾಯಕ್ಕೆ ಸಾರ್ವಜನಿಕ ಸೇವೆಯ ಮೌಲ್ಯ ಮತ್ತು ಸದ್ಗುಣಗಳನ್ನು ತಿಳಿಸುವ ಉದ್ಧೇಶಗಳನ್ನು ಹೊಂದಲಾಗಿದೆ.

ಇದರಲ್ಲಿ ಆರೋಗ್ಯ ಕ್ಷೇತ್ರಗಳು, ವಿತರಣಾ ವಲಯಗಳು, ನೈರ್ಮಲ್ಯ ಕ್ಷೇತ್ರಗಳು, ಸಮಾಜ ಕಲ್ಯಾಣ, ಶಿಕ್ಷಣ, ಸಾರಿಗೆ, ಕಾನೂನು ಜಾರಿ ಮತ್ತು ಎಲ್ಲಾ ಸಾರ್ವಜನಿಕ ಸೇವಕರನ್ನು ಒಳಗೊಂಡಿರುತ್ತದೆ.


Note: 

  • ವಿಶ್ವಸಂಸ್ಥೆ - UN-United Nation
  • ಕೇಂದ್ರ ಕಚೇರಿ : ನ್ಯೂಯಾರ್ಕ್ (ಯುಎಸ್ಎ)
  • ಸ್ಥಾಪನೆ : ಅಕ್ಟೋಬರ್ 24, 1945
  • ವಿಶ್ವಸಂಸ್ಥೆಯ ಆರು ಅಧಿಕೃತ ಭಾಷೆಗಳು: ಅರೇಬಿಕ್,
  • ಚೈನೀಸ್, ಇಂಗ್ಲೀಷ್, ಫ್ರೆಂಚ್, ರಷ್ಯನ್ & ಸ್ಪ್ಯಾನಿಷ್


ಪ್ರಚಲಿತ ಘಟನೆಗಳ ಪ್ರಶೋತ್ತರಗಳು


1. ಸುದ್ಧಿಯಲ್ಲಿರುವ 'ಕಾಸೆಟಿಕ್ ಲಿಪೊಸಕ್ಷನ್' ಎಂಬುದು

ಎ) ಬೃಹತ್ ಕಟ್ಟಡ

ಬಿ) ಸೌಂಧರ್ಯ ವರ್ಧಕ ಸಾಧನ

ಸಿ) ಸೌಂಧರ್ಯ ವರ್ಧನೆಯ ಶಸ್ತ್ರ ಚಿಕಿತ್ಸೆ

ಡಿ) ಸೌಂದರ್ಯ ವರ್ಧಕದಲ್ಲಿ ಬಳಸುವ ಕಲಬೆರಕೆ ವಸ್ತು.

 

2. 2021-22ನೇ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯ ಯಾವುದು?

ಎ) ಗುಜರಾತ

ಬಿ) ಕರ್ನಾಟಕ

ಸಿ) ಮಹಾರಾಷ್ಟ್ರ

ಡಿ) ಮಧ್ಯಪ್ರದೇಶ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area