ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 15-06-2022 ರ ಪ್ರಚಲಿತ ವಿದ್ಯಮಾನಗಳು
ಲೋಕಾಯುಕ್ತರಾಗಿ ನ್ಯಾ.ಬಿ.ಎಸ್.ಪಾಟೀಲ್ ನೇಮಕ
ಲೋಕಾಯುಕ್ತರಾಗಿರುವ ಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಪ್ರಸ್ತುತ ಉಪ ನ್ಯಾಯ ರಾಜ್ಯದ ನೂತನ ಲೋಕಾಯುಕ್ತರನ್ನಾಗಿ ರಾಜ್ಯಪಾಲ “ಥಾವರ್ ಚ೦ದ್ ಗೆಲ್ಲೋಟ್” ನೇಮಕ ಮಾಡಿದ್ದಾರೆ. ಲೋಕಾಯುಕ್ತ ನೇಮಕಕ್ಕೆ ಇರುವ ಶಾಸನಬದ್ಧ ಪ್ರಕ್ರಿಯೆಯಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ರಾಜ್ಯ ವಿಧಾನಸಭೆ ಸ್ಪೀಕರ್ ವಿಧಾನಪರಿಷತ್ ಸಭಾಪತಿ ಮತ್ತು ಉಭಯ ಸದನಗಳ ಪ್ರತಿಪಕ್ಷ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಲೋಕಾಯುಕ್ತರ ಹುದ್ದೆಗೆ ನ್ಯಾ.ಬಿ.ಎಸ್.ಪಾಟೀಲ್ ಅವರ ಹೆಸರನ್ನು ಶಿಫಾರಸ್ಸು ಮಾಡಿದರು. ರಾಜ್ಯದಲ್ಲಿ ಉಪ ಲೋಕಾಯುಕ್ತರಾಗಿದ್ದವರು ಲೋಕಾಯುಕ್ತ ಹುದ್ದೆಗೆ ನೇಮಕಗೊಳ್ಳುತ್ತಿರುವುದು ಇದೇ ಮೊದಲಾಗಿದೆ.
ನ್ಯಾ.ಬಿ.ಎಸ್.ಪಾಟೀಲ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ :
- ಜನನ - 1956 ಜೂನ್ 01
- ಜನ್ಮಸ್ಥಳ - ವಿಜಯಪುರ ಜಿಲ್ಲೆಯ ಮುದ್ದೆ ಬಿಹಾಳ
- 1980 ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭ. 2004 ರ ಅಕ್ಟೋಬರ್ 21 ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ.
- 2019 ನವೆಂಬರ್ 20 ರಂದು ಉಪಲೋಕಾಯುಕ್ತರಾಗಿ ನೇಮಕ.
ಲೋಕಾಯುಕ್ತ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ :
- ವಿವಿಧ ರಾಜ್ಯಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ದುರಾಡಳಿತದ ವಿರುದ್ಧ ನಾಗರಿಕರ ದೂರುಗಳನ್ನು ಪರಿಶೀಲಿಸಲು ಲೋಕಾಯುಕ್ತರನ್ನು ನೇಮಿಸಿದೆ.
- ಲೋಕಾಯುಕ್ತ ಕಾಯ್ದೆಯನ್ನು ಒರಿಸ್ಸಾ ರಾಜ್ಯವು 1970 ರಲ್ಲಿ ಪ್ರಥಮ ಬಾರಿಗೆ ಹೊರಡಿಸಿತು.
- ಪ್ರಥಮವಾಗಿ ಲೋಕಾಯುಕ್ತರನ್ನು ನೇಮಿಸಿದ ರಾಜ್ಯ ಮಹಾರಾಷ್ಟ್ರ (1971)
- ಕರ್ನಾಟಕ ಲೋಕಾಯುಕ್ತವು ಭಾರತದ ಕರ್ನಾಟಕ ರಾಜ್ಯದ “ಒಂಬಡ್ಸ್‌ಮನ್” ಸಂಸ್ಥೆಯಾಗಿದೆ.
- 1984 ರಲ್ಲಿ ಸ್ಥಾಪಿಸಲಾಗಿದೆ.
- ಕೇಂದ್ರ ಕಚೇರಿ ಬೆಂಗಳೂರು
- ಮೊಟ್ಟಮೊದಲ ಕರ್ನಾಟಕ ಲೋಕಾಯುಕ್ತ ಎ.ಡಿ.ಕೋಶಾಲ್ (1986)
'ಅಗ್ನಿಪಥ' ಯೋಜನೆ
ಸೇನಾ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿರುವ ಕೇಂದ್ರ ಸ ರ್ಕಾರ 'ಅಗ್ನಿಪಥ' ಯೋಜನೆ ಅಡಿಯಲ್ಲಿ 4 ವರ್ಷದ ಅಲ್ಪಾವಧಿಗೆ ಯುವ ಯೋಧರ ನೇಮಕಕ್ಕೆ ನಿರ್ಧರಿಸಿದೆ. ಇಂತಹ ಯೋಧರನ್ನು “ಅಗ್ನಿವೀರರು” ಎಂದು ಸಂಬೋಧಿಸಲಾಗುತ್ತಿದ್ದು, ಮಹಿಳಾ ಯೋಧರ ಸೇರ್ಪಡೆಗೂ ಅವಕಾಶ ಕಲ್ಪಿಸಿದೆ.
ಅಗ್ನಿಪಥ ಯೋಜನೆ :
ಮುಂದಿನ ಮೂರು ತಿಂಗಳುಗಳಲ್ಲಿ 17.5 ವರ್ಷ ದಾಟಿದ ಹಾಗೂ 21 ವರ್ಷ ಮೀರದ ಯುವಕರನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುವ ಯೋಜನೆಯೇ “ಅಗ್ನಿಪಥ”. ಸೇವಾವಧಿಯಲ್ಲಿ ಸಂಬಳ, ವಿಮೆ ಸೇರಿ ಹಲವು ಸೌಲಭ್ಯಗಳಿವೆ.
ಉದ್ಧೇಶ :
ಸೈನಿಕರ ಪಿಂಚಣಿ ಉಳಿಕೆ, ಯುವಕರಲ್ಲಿ ದೇಶಭಕ್ತಿ ಮೂಡಿಸುವುದು, ಸೈನಿಕರಿಗಾಗಿ ಸೇವೆ ಸಲ್ಲಿಸುವುದು, ಸೇನೆಯ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ವಾರ್ಷಿಕ ಉದ್ಯೋಗ ಸೃಷ್ಟಿಯ ಕಾರಣದಿಂದ ಕೇಂದ್ರ ಸರ್ಕಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇತರೆ ದೇಶಗಳಲ್ಲಿ ಅಗ್ನಿಪಥ ಮಾದರಿ ಯೋಜನೆ :
ರಷ್ಯಾ :
18-27 ವರ್ಷದೊಳಗಿನ ಯುವಕರು ಮಾತ್ರ ಸೇನೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಲು ಅವಕಾಶವಿದೆ, ವಾರ್ಷಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಸ್ವೀಡನ್ :
2017 ರ ಬಳಿಕ ಯೋಜನೆ ಘೋಷಣೆ, ಇದುವರೆಗೆ 13 ಸಾವಿರ ಯುವಕರ ನೇಮಕ.
ಇಸ್ರೇಲ್ :
18 ವರ್ಷ ದಾಟಿದ ಯುವಕ/ಯುವತಿಯರು 2 ರಿಂದ 3 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ.
ಫ್ರಾನ್ಸ್ :
ಫ್ರೆಂಚ್ ಫಾರಿನ್ ಲೆಜಿಯನ್ ಎಂಬ ವಿಶೇಷ ಸೇನೆ ರಚನೆ. 140 ದೇಶದ 9 ಸಾವಿರ ಯುವಕರ ನೇಮಕ.
ವಾಯುಗುಣಮಟ್ಟದ ಜೀವಿತಾವಧಿ ಸೂಚ್ಯಂಕ
ಷಿಕಾಗೋ ವಿಶ್ವವಿದ್ಯಾಲಯದ “ಇಂಧನ ನೀತಿ ಸಂಸ್ಥೆ” ಇತ್ತೀಚೆಗೆ ವಾಯುಗುಣಮಟ್ಟದ ಜೀವಿತಾವಧಿ ಸೂಚ್ಯಂಕ ಬಿಡುಗಡೆ ಮಾಡಿದೆ.
ವಾಯುಮಾಲಿನ್ಯವು ಭಾರತೀಯರ ಪಾಲಿಗೆ ಅತ್ಯಂತ ಗಂಭೀರ ಅಪಾಯವಾಗಿದ್ದು, “ವಿಶ್ವ ಆರೋಗ್ಯ ಸಂಸ್ಥೆ” ನಿಗದಿಪಡಿಸಿರುವ ಮಾನದಂಡವನ್ನು ಪಾಲಿಸದೇ ಹೋದರೆ ಪ್ರತಿ ಭಾರತೀಯನ ಜೀವಿತಾವಧಿ 5 ವರ್ಷದಷ್ಟು ಇಳಿಕೆಯಾಗಲಿದೆ ಎಂದು ಸಂಶೋಧನಾ ವರದಿಯಲ್ಲಿ ಸ್ಪಷ್ಟಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳ ಅನ್ವಯ ನಾವು ಇರುವ ಪರಿಸರದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ ಪ್ರದೇಶದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಿ.ಎಂ.2.5 ಸೂಕ್ಷ್ಮಾಣು ಕಣ ಪ್ರಮಾಣ 5 ಮೈಕ್ರೋ ಗ್ರಾಂ ಗಿಂತ ಹೆಚ್ಚಿಗೆ ಇರಬಾರದು ಆದರೆ ಭಾರತದಲ್ಲಿ ಈ ಪ್ರಮಾಣ 56 ಮೈಕ್ರೋ ಗ್ರಾಂ ನಷ್ಟಿದೆ. ಅಂದರೆ ನಿಗದಿತ ಮಾನದಂಡಕ್ಕಿಂತ 11 ಪಟ್ಟು ಹೆಚ್ಚು, ದೆಹಲಿಯಲ್ಲಿ ಈ ಪ್ರಮಾಣ 107 ಮೈಕ್ರೋ ಗ್ರಾಂ ನಷ್ಟಿದೆ ಅಂದರೆ ಮಾನದಂಡಕ್ಕಿಂತ 21 ಪಟ್ಟು ಹೆಚ್ಚಾಗಿದೆ.
ಸೂಚನೆ :
ಭಾರತದ 130 ಕೋಟಿ ಜನರು “ವಿಶ್ವ ಆರೋಗ್ಯ ಸಂಸ್ಥೆ” ನಿಗದಿಪಡಿಸಿರುವ ಮಾಲಿನ್ಯ ಪ್ರಮಾಣಕ್ಕಿಂತ ಹೆಚ್ಚಿನ ಮಾಲಿನ್ಯ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶೇ.63 ರಷ್ಟು ಜನರು ಸ್ವತಃ ಭಾರತ ಸರ್ಕಾರ ನಿಗದಿ ಮಾಡಿರುವ 40 ಮೈಕ್ರೋ ಗ್ರಾಂ ಗಿಂತ ಹೆಚ್ಚಿನ ಪಿ.ಎಂ. ಇರುವ ಕಡೆ ವಾಸಿಸುತ್ತಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ಸರಾಸರಿ ವಾಯುಮಾಲಿನ್ಯ ಪ್ರಮಾಣ 27.4 ರಷ್ಟಿದೆ ಇದು “ವಿಶ್ವ ಆರೋಗ್ಯ ಸಂಸ್ಥೆ” ನಿಗದಿ ಪಡಿಸಿರುವ ಮಾನದಂಡಕ್ಕಿಂತ 5 ಪಟ್ಟು ಹೆಚ್ಚು ಇದರ ಪರಿಣಾಮವಾಗಿ ಸ್ಥಳೀಯ ಜನರ ಜೀವಿತಾವಧಿಯಲ್ಲಿ 2.2 ವರ್ಷದಷ್ಟು ಇಳಿಕೆಯಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ :
- WHO-World Health Organization
- ಸ್ಥಾಪನೆ – ಏಪ್ರಿಲ್ 7, 1948
- ಕೇಂದ್ರ ಕಛೇರಿ - ಸ್ವಿಕ್ಟರ್‌ಲ್ಯಾಂಡಿನ ಜಿನೇವಾ.
- ಪ್ರಸ್ತುತ ಮುಖ್ಯಸ್ಥರು – ಡಾ|| ತೇಡ್ರೋಸ್ ಅಧನಂ ಗಿಬ್ರಿಯೆಸೂಸ್.
- ವಿಶ್ವ ಆರೋಗ್ಯ ಸಂಸ್ಥೆಯ ದಿನ – ಏಪ್ರಿಲ್ 7
ವೆಂಚರ್ ಕ್ಯಾಪಿಟಲ್ ಹೂಡಿಕೆ : ಬೆಂಗಳೂರಿಗೆ ಸ್ಥಾನ
ಟೆಕ್ ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಬೆಂಗಳೂರು ನಗರ ಏಷ್ಯಾದಲ್ಲೇ ಮೊದಲ ಸ್ಥಾನ ಗಳಿಸಿಕೊಂಡಿದ್ದು, ಜಾಗತಿಕವಾಗಿ 5ನೇ ಸ್ಥಾನದಲ್ಲಿದೆ ಎಂದು ಇತ್ತೀಚಿನ ಸಂಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ. “ಡೀಲ್ ರೂಂ, ಕೋ ಫಾರ್ ಲಂಡನ್ ಆ್ಯಂಡ್ ಪಾರ್ಟ್ನರ್'ನ ವರದಿ ಅನ್ವಯ ಪ್ರಸಕ್ತ ವರ್ಷದ ಮೊದಲ 5 ತಿಂಗಳಲ್ಲಿ ಬೆಂಗಳೂರು ಮೂಲದ ಕಂಪನಿಗಳು ಈಗಾಗಲೇ 7.5 ಶತ ಕೋಟಿ ಡಾಲರ್ ವೆಂಚರ್ ಕ್ಯಾಪಿಟಲ್ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
* ಹೂಡಿಕೆ ವಿಷಯದಲ್ಲಿ ಬೆಂಗಳೂರು ಜಾಗತಿಕ ನಗರಗಳಾದ ಸಿಂಗಾಪುರ, ಪ್ಯಾರಿಸ್, ಬರ್ಲಿನ್‌ಗಳನ್ನು ಹಿಂದಿಕ್ಕಿದೆ.
* ಜಾಗತಿಕ ಸ್ಟಾರ್ಟಪ್ ಇಕೋ ಸಿಸ್ಟಮ್‌ನಲ್ಲಿ ಬೆಂಗಳೂರು ಪ್ರಗತಿ ತೋರುವ ಮೂಲಕ ಜಾಗತಿಕವಾಗಿ 22ನೇ ಸ್ಥಾನ ಪಡೆದುಕೊಂಡಿದೆ. ದೆಹಲಿ 26ನೇ ಸ್ಥಾನ ಮತ್ತು ಮುಂಬೈ 36ನೇ ಸ್ಥಾನ ಪಡೆದುಕೊಂಡಿವೆ. ಎಂದು “ಸ್ಟಾರ್ಟಪ್ ಜಿನೋಮ್” ವರದಿಯಲ್ಲಿ ತಿಳಿಸಲಾಗಿದೆ.
ಐಸಿಸಿ ಏಕದಿನ ಬ್ಯಾಂಕಿಂಗ್ ಪ್ರಕಟ
ಇತ್ತೀಚೆಗೆ ಬಿಡುಗಡೆಗೊಂಡ ಐಸಿಸಿ ಏಕದಿನ ಬ್ಯಾಂಕಿಂಗ್‌ನಲ್ಲಿ ಭಾರತ ಕ್ರಿಕೆಟ್ ತಂಡ 5ನೇ ಸ್ಥಾನಕ್ಕೆ ಕುಸಿದಿದೆ.
ಟಾಪ್ - 5 ಬ್ಯಾಂಕಿಂಗ್ : ತಂಡಗಳ ವಿಭಾಗ :
- ನ್ಯೂಜಿಲೆಂಡ್
- ಇಂಗ್ಲೆಂಡ್
- ಆಸ್ಟ್ರೇಲಿಯಾ
- ಪಾಕಿಸ್ತಾನ
- ಭಾರತ
ಬ್ಯಾಟಿಂಗ್ ವಿಭಾಗ :
- ಬಾಬರ್ ಅಜಮ್ (ಪಾಕಿಸ್ತಾನ್)
- ವಿರಾಟ್ ಕೊಹ್ಲಿ (ಭಾರತ)
- ಇಮಾಮ್ - ಉಲ್ - ಹಕ್ (ಪಾಕಿಸ್ತಾನ್)
- ರೋಹಿತ್ ಶರ್ಮಾ (ಭಾರತ)
- ಕ್ವಿಂಟಾನ್-ಡಿ-ಕಾಕ್ (ದಕ್ಷಿಣ ಆಫ್ರಿಕಾ)
ಬೌಲಿಂಗ್ ವಿಭಾಗ :
- ಟೇಂಟ್ ಬೌಲ್ಡ್ (ನ್ಯೂಜಿಲೆಂಡ್)
- ಕ್ರಿಸ್ ವೋಕ್ಸ್ (ಇಂಗ್ಲೆಂಡ್)
- ಜೋಶ್ ಹೆಜೆಲ್‌ವುಡ್ (ಆಸ್ಟ್ರೇಲಿಯಾ)
- ಮ್ಯಾಟ್ ಹೆನ್ರಿ (ಆಸ್ಟ್ರೇಲಿಯಾ)
- ಜಸ್ಟೀತ್ ಬುಮ್ರಾ (ಭಾರತ)
ಬ್ರಿಟನ್‌ನ ರಾಣಿ ವಿಶ್ವದ ಎರಡನೇ ಅತಿ ದೀರ್ಘಾವಧಿಯ ಆಡಳಿತಗಾರ್ತಿ
ಬ್ರಿಟನ್‌ನ ರಾಣಿ ಎಲಿಜಬೆತ್ II ಥಾಯ್ಲೆಂಡ್‌ನ ರಾಜನನ್ನು ಹಿಂದಿಕ್ಕಿ ಫ್ರಾನ್ಸ್‌ನ ಲೂಯಿಸ್ XIV ರ ನಂತರ ಇತಿಹಾಸದಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಆಳ್ವಿಕೆ ನಡೆಸಿದ ದೊರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಯುಕೆ 96 ವರ್ಷ ವಯಸ್ಸಿನ ಕ್ವೀನ್ ಪ್ಲಾಟಿನಂ ಜುಬಿಲಿಯನ್ನು ರಾಷ್ಟ್ರಕ್ಕೆ 70 ವರ್ಷಗಳ ಸೇವೆಯನ್ನು ಭವ್ಯವಾದ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದೆ. ಪ್ಲಾಟಿನಂಜುಬಿಲಿ ಮೈಲಿಗಲ್ಲು ಗುರುತಿಸಲು UK ಮತ್ತು ಕಾಮನ್‌ವೆಲ್ತ್‌ನಾದ್ಯಂತ ನಾಲ್ಕು ದಿನಗಳ ರಾಯಲ್ ಪರೇಡ್‌ಗಳು, ಪ್ರದರ್ಶನ ಮತ್ತು ಇತರ ಕಾರ್ಯಕ್ರಮಗಳ ನಂತರ. 1953 ರಲ್ಲಿ ಪಟ್ಟಾಭಿಷೇಕ, ರಾಣಿ ಎಲಿಜಬೆತ್ II ಸೆಪ್ಟೆಂಬರ್ 2015 ರಲ್ಲಿ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಮೀರಿಸಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿಯಾಗಿದ್ದಾರೆ. ಇದೀಗ ಅವರು 1927 ಮತ್ತು 2016 ರ ನಡುವೆ 70 ವರ್ಷ ಮತ್ತು 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್ ಕಿಂಗ್ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಿಕ್ಕಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಫ್ರಾನ್ಸ್‌ನ ಲೂಯಿಸ್ XIV 1643 ರಿಂದ 1715 ರವರೆಗೆ 72-ವರ್ಷ ಮತ್ತು 110-ದಿನಗಳ ಆಳ್ವಿಕೆಯೊಂದಿಗೆ ದೀರ್ಘಾವಧಿಯ ರಾಜನಾಗಿ ಉಳಿದಿದ್ದಾನೆ.
ಯುನೈಟೆಡ್ ಕಿಂಗ್‌ಡಮ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ :
- ರಾಜಧಾನಿ : ಲಂಡನ್
- ಪ್ರಧಾನಮಂತ್ರಿ : ಬೋರಿಸ್ ಜಾನ್ಸನ್
- ಕರೆನ್ಸಿ : ಪೌಂಡ್ ಸ್ಟಲಿರ್ಂಗ್
ಚಂದ್ರನ ಅತ್ಯಂತ ವಿವರವಾದ ನಕ್ಷೆಯನ್ನು ಬಿಡುಗಡೆ ಮಾಡಿದ ಚೀನಾ
- ಚೀನಾ ಚಂದ್ರನ ಹೊಸ ಭೂ ವೈಜ್ಞಾನಿಕ ನಕ್ಷೆಯನ್ನು ಬಿಡುಗಡೆ ಮಾಡಿದೆ. ಇದು ಇದುವರೆಗೂ ಬಿಡುಗಡೆ ಮಾಡಿದ ಎಲ್ಲಾ ನಕ್ಷೆಗಳಿಗಿಂತ ಹೆಚ್ಚು ವಿವರವಾಗಿದೆ.
- 2020 ರಲ್ಲಿ ಯುಎಸ್ ಮ್ಯಾಪ್ ಮಾಡಿದ ಚಂದ್ರನ ಮೇಯ ಸೂಕ್ಷ್ಮ ವಿವರಗಳನ್ನು ತಿಳಿಸುತ್ತದೆ. ಹೊಸ ನಕ್ಷೆಯು ಕುಳಿಗಳು ಮತ್ತು ರಚನೆಗಳ ವಿವರಗಳನ್ನು ಪಟ್ಟಿ ಮಾಡಲಾಗಿಲ್ಲ. ಮೊದಲು, ಚಂದ್ರನ ಹೆಚ್ಚಿನ ಸಂಶೋಧನೆಗೆ ಸಹಾಯ ಮಾಡುತ್ತದೆ. ಚೀನಾ ಬಿಡುಗಡೆ ಮಾಡಿದ ಚಂದ್ರನ ಪ್ರಪಂಚದ ಅತ್ಯಂತ ವಿವರವಾದ ನಕ್ಷೆಯು ವೈಜ್ಞಾನಿಕ ಸಂಶೋಧನೆ, ಪರಿಶೋಧನೆ ಮತ್ತು ಚಂದ್ರನ ಮೇಲೆ ಇಳಿಯುವ ಸ್ಥಳದ ಆಯ್ಕೆಗೆ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
- ಚೀನಾ ಬಿಡುಗಡೆ ಮಾಡಿದ ಚಂದ್ರನ ಹೊಸ ಸಮಗ್ರ ಭೂವೈಜ್ಞಾನಿಕ ನಕ್ಷೆಯು 1:2,500,000 ಪ್ರಮಾಣದಲ್ಲಿದೆ. ಇದು ಇಲ್ಲಿಯ ವರೆಗಿನ ಅತ್ಯಂತ ವಿವರವಾದ ಚಂದ್ರನ ನಕ್ಷೆಯಾಗಿದೆ.
- ಚಂದ್ರನ ನಕ್ಷೆಯು 12,341 ಪ್ರಭಾವದ ಕುಳಿಗಳು, 17 ಶಿಲಾ ಪ್ರಕಾರಗಳು, 81 ಪ್ರಭಾವದ ಬೇಸಿನ್‌ಗಳು ಮತ್ತು 14 ವಿಧದ ರಚನೆಗಳನ್ನು ಒಳಗೊಂಡಿದೆ.
- ಚಂದ್ರನ ನಕ್ಷೆಯ ಹೊಸ ಮಹತ್ವದ ವಿವರಗಳು ಚಂದ್ರನ ಭೂವಿಜ್ಞಾನ ಮತ್ತು ಅದರ ವಿಕಾಸದ ಬಗ್ಗೆ ಹೇರಳವಾದ ಮಾಹಿತಿಯನ್ನು ಒದಗಿಸಿವೆ.
- ಚಂದ್ರನ ಅತ್ಯಂತ ವಿವರವಾದ ನಕ್ಷೆಯನ್ನು ಮೇ 30, 2022 ರಂದು ಸೈನ್ಸ್ ಬುಲೆಟಿನ್ ಪ್ರಕಟಿಸಿದೆ.
ಚೀನಾ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ :
- ರಾಜಧಾನಿ : ಬೀಜಿಂಗ್,
- ಕರೆನ್ಸಿ : ರೆನ್ಮಿನ್ಬಿ
- ಅಧ್ಯಕ್ಷ : ಕ್ಸಿಜಿನ್‌ಪಿಂಗ್.
No comments:
Post a Comment
If you have any doubts please let me know