Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 11 February 2022

ಕನ್ನಡ ನೀತಿ ಕಥೆಗಳು : ವೇಶ್ಯೆ ಮತ್ತು ಸನ್ಯಾಸಿ

ವೇಶ್ಯೆ ಮತ್ತು ಸನ್ಯಾಸಿ

ಕನ್ನಡ ನೀತಿ ಕಥೆಗಳು : ವೇಶ್ಯೆ ಮತ್ತು ಸನ್ಯಾಸಿ Kannada Moral Stories Monk and Prostitute

ಒಂದಿನ ಒಬ್ಬಳು ವೇಶ್ಯೆ ಸತ್ತು ಹೋದ್ಲು ಅದೇ ದಿವಸ ಎದುರುಗಡೆ ವಾಸವಾಗಿದ್ದ ಒಬ್ಬ ಸಾಧು ಕೂಡ ಸತ್ತುಹೋದ


ಅವರನ್ನು ಕರೆದುಕೊಂಡು ಹೋಗಲು ದೂತರು ಬಂದರು ಅವರು ಇಬ್ಬರನ್ನು ಕರೆದುಕೊಂಡು ಹೋಗಿ ಸಾಧುವನ್ನು ನರಕಕ್ಕೂ ವೇಶ್ಯೆಯನ್ನು ಸ್ವರ್ಗಕ್ಕೆ ಕರೆದುಕೊಂಡು ಹೊರಟರು


ಸಾಧು ತಕ್ಷಣ ನಿಂತುಬಿಟ್ಟ, "ನೀವು ಏನು ಮಾಡುತ್ತಿರುವಿರಿ,? ನನ್ನ ಹೆಸರು ಸ್ವರ್ಗದಲ್ಲಿ ಇರಬೇಕು ವೇಶ್ಯೆಯ ಹೆಸರು ನರಕದಲ್ಲಿ ಇರಬೇಕು ನೀವು ತಪ್ಪುಕಲ್ಪನೆ ಮಾಡಿಕೊಂಡಿರುವಿರಿ ಎಲ್ಲೋ ಏನೋ ತಪ್ಪಾಗಿದೆ ನನ್ನನ್ನು ದೇವರ ಬಳಿ ಕರೆದುಕೊಂಡು ಹೋಗಿ, ನಾನು ಆ ದೇವರನ್ನು ನ್ಯಾಯ ಕೇಳುವ " 


ಆ ಸಾಧುವನ್ನು ದೇವರ ಬಳಿ ಕರೆದುಕೊಂಡು ಹೋಗಲಾಯಿತು.


ಆಗ ಸಾಧು ತನ್ನ ಅನುಮಾನವನ್ನು ವ್ಯಕ್ತಪಡಿಸಿದನು "ನಾನು ಸ್ವರ್ಗಕ್ಕೆ ಹೋಗಬೇಕು ಆದರೆ ದೂತರು ತಪ್ಪಾಗಿ ನನ್ನನ್ನು ನರಕಕ್ಕೆ ಕೊಂಡೊಯ್ಯುತ್ತಿರುವರು ನ್ಯಾಯವೇ"? ಎಂದು ಕೇಳಿದನು


ಆಗ ಭಗವಂತ ನಕ್ಕು "ನುಡಿದ ಇಲ್ಲ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಕಾರಣವಿದೆ."


"ಸಾಧುವಾಗಿ ನೀನು ಸದಾ ವೇಶ್ಯೆಯ ಮನೆ ಕಡೆಯ ಗಮನವಿತ್ತು.


ತುಂಬಾ ಚೆನ್ನಾಗಿದ್ದಾಳೆ ಆದರೆ ಅವಳು ಮಾಡುವ ಕೆಲಸ ಸರಿಯಿಲ್ಲ ಅವಳು  ಕಸುಬಿಗೆ ಹೇಗೆ ಬಂದಳು ಕೇಳಬೇಕು? ಅವಳಿಗೆ ಬುದ್ಧಿವಾದವನ್ನು ಹೇಳಬೇಕು ಹೇಗೆ ?


ಎಂಬ ಆಲೋಚನೆಯಲ್ಲಿ ನಿನ್ನ ದಿನವನ್ನು ಕಳೆಯುತ್ತಿದ್ದೆ. ಆದರೆ ಒಂದು ದಿನವೂ ಅವಳನ್ನು ಭೇಟಿಯಾಗುವ ಧೈರ್ಯಮಾಡಲಿಲ್ಲ.


ಅವಳು ಬಂದವರಿಗೆಲ್ಲ ಸಾರಾಯಿಯನ್ನು ಕುಡಿಸುತ್ತಿದ್ದಳು.


ಅದರ ವಾಸನೆ ನಿನಗೆ ಸದಾ ಮೂಗಿಗೆ ಬಡಿಯುತ್ತಿತ್ತು ನಿನಗೆ ಸಾರಾಯಿ ಕುಡಿಯುವ ಆಸೆಯಿದ್ದರೂ ಸಮಾಜದ ಭಯದಿಂದ ನೀನು ಕುಡಿಯುವ ದೇರ್ಯ ಮಾಡಲಿಲ್ಲ 


ಸದಾ ನಿನ್ನ ಮನಸ್ಸನ್ನು ಹತೋಟಿಯಲ್ಲಿ ಇಡುವ ಪ್ರಯತ್ನ ಮಾಡುತ್ತಲೇ ಇದ್ದೇ ಜನಗಳು ನಿನ್ನನ್ನು ಸ್ವಾಮೀಜಿ ಎಂದು ಪೂಜಿಸುತ್ತಿದ್ದರು 


ನೀನು ಅವರಿಗಾಗಿ ನಿನ್ನ ಆಸೆಗಳನ್ನೆಲ್ಲಾ ಅದುಮಿಟ್ಟುಕೊಂಡು ತೋರ್ಪಡಿಕೆಯ ಜೀವನ ಸಾಗಿಸುತ್ತಿದ್ದೆ .


ತಪ್ಪಾಗಿ ನಡೆದರೆ ಎಲ್ಲಿ ಜನಗಳು ನನ್ನನ್ನು ತಿರಸ್ಕರಿಸುವರೋ ಎಂಬ ಭಯ  ನಿನ್ನನ್ನು ಕಾಡುತ್ತಿತ್ತು.


ಆದರೆ ವೇಶ್ಯೆಯು ಪ್ರತಿದಿನವೂ ನೀನು ಮಾಡುವ ಪೂಜೆ ಭಜನೆ ಹಾಗೂ ನೀನು ಹಚ್ಚುವ ದೀಪವನ್ನು ನೋಡುತ್ತಿದ್ದಳು.


 "ನನಗೆ ಆಗ ಅದೃಷ್ಟ ಇಲ್ಲವೇ "ಎಂದು ಕೊರಗುತ್ತಿದ್ದಳು ಅವಳು ಅವರ ಮನೆಯಿಂದಲೇ ನೀನು ಮಾಡುವ ಪೂಜೆಯನ್ನು ಗಮನಿಸುತ್ತಿದ್ದಳು.


 ಬೆಳಗುವ ದೀಪವನ್ನು ನಮಸ್ಕರಿಸುತ್ತಿದ್ದಳು ಹಚ್ಚುವ ಧೂಪವನ್ನು ಸೇವಿಸುತ್ತಿದ್ದಳು ನೀನು ಪ್ರತಿಸಾರಿ ಭಜನೆ ಮಾಡಿದಾಗಲೂ ಕಣ್ಮುಚ್ಚಿ ಅದನ್ನು ಆರಾಧಿಸುತ್ತಿದ್ದಳು 


ದೇವರ ಗುಡಿಗೆ ಹೋಗಿ ಪೂಜೆ ಸಲ್ಲಿಸುವ ಅದೃಷ್ಟ ತನಗೆ ಇಲ್ಲವೆಂದು ಸದಾ ಕಣ್ಣೀರು ಸುರಿಸುತ್ತಿದ್ದಳು.


ಹಾಗಾಗಿ ಅವಳು ಮನದಿಂದ ಸದಾ ದೇವರನ್ನು  ಪೂಜಿಸುತ್ತಿದ್ದಳು. ಇದರಿಂದ ಇಂದು ಅವಳು ಸ್ವರ್ಗದ ದಾರಿ ಹಿಡಿದಳು. ನೀನು ನರಕದ ದಾರಿ ಹಿಡಿದೆ.


ಹೊರಗೆ ನೀನು ಹೇಗಿರುವೆ ಎಂಬುದು ಮುಖ್ಯವಲ್ಲ ಮನಸ್ಸು ಏನು ಆಲೋಚಿಸುತ್ತದೆ ಮನಸ್ಸಿನಿಂದ ನೀನು ಹೇಗೆ ಇರುವೆ ಎಂಬುದು ಮುಖ್ಯವಾಗುತ್ತದೆ


ಕೆಸರಲ್ಲಿ ಅರಳಿದ ಕಮಲ ಸದಾ ದೇವರ ಪಾದ ಸೇರುವಂತೆ. ಒಳ್ಳೆಯ ಮನಸ್ಸು ಒಳ್ಳೆಯ ಆಲೋಚನೆ ನಮ್ಮನ್ನು ದೇವರ ಬಳಿ ಕೊಂಡೊಯ್ಯುತ್ತದೆ.


ಸುರಭಿ ಲತಾ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads