Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 5 February 2022

ಅಮೇರಿಕನ್ ಭೂಗೋಳಶಾಸ್ತ್ರದ ಪಿತಾಮಹ ವಿಲಿಯಂ ಮೊರಿಸ್ ಡೇವಿಸ್ ಅವರ ಸಂಪೂರ್ಣ ಜೀವನಚರಿತ್ರೆ

ಅಮೇರಿಕನ್ ಭೂಗೋಳಶಾಸ್ತ್ರಜ್ಞ ವಿಲಿಯಂ ಮೊರಿಸ್  ಡೇವಿಸ್ ಅವರ ಸಂಪೂರ್ಣ ಜೀವನಚರಿತ್ರೆ

ಅಮೇರಿಕನ್ ಭೂಗೋಳಶಾಸ್ತ್ರಜ್ಞ ವಿಲಿಯಂ ಮೋರಿಸ್ ಡೇವಿಸ್ ಅವರ ಸಂಪೂರ್ಣ ಜೀವನಚರಿತ್ರೆ William Moris Davis Father of American Geography




ಅಮೇರಿಕನ್ ಭೂಗೋಳಶಾಸ್ತ್ರದ ಪಿತಾಮಹ: ವಿಲಿಯಂ ಮೊರಿಸ್  ಡೇವಿಸ್ ಅವರ ಆರಂಭಿಕ ಜೀವನ 


ವಿಲಿಯಂ ಮೊರಿಸ್  ಡೇವಿಸ್ ಒಬ್ಬ ಪ್ರಖ್ಯಾತ ಅಮೇರಿಕನ್ ಭೂಗೋಳಶಾಸ್ತ್ರಜ್ಞ, ಭೂವಿಜ್ಞಾನಿ, ಜಿಯೋಮಾರ್ಫೋಲೊಜಿಸ್ಟ್ ಮತ್ತು ಪವನವಿಜ್ಞಾನಿಯಾಗಿದ್ದರು. ಇವರನ್ನು ಸಾಮಾನ್ಯವಾಗಿ ಅಮೇರಿಕದ ಭೂಗೋಳಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಇಂದು ಫೆಬ್ರುವರಿ 5 ಅವರ ಪುಣ್ಯಸ್ಮರಣ ದಿನ.



ಅಮೇರಿಕನ್ ಭೂಗೋಳಶಾಸ್ತ್ರದ ಪಿತಾಮಹ ವಿಲಿಯಂ ಮೊರಿಸ್  ಡೇವಿಸ್ ಅವರ ಜನನ 


ಅಮೇರಿಕನ್ಭೂಭೂಗೋಳಶಾಸ್ತ್ರದ ಪಿತಾಮಹ ವಿಲಿಯಂ ಮೊರಿಸ್  ಡೇವಿಸ್ ಅವರು ದಿನಾಂಕ 12 ಫೆಬ್ರವರಿ 1985 ರಂದು ಎಡ್ವರ್ಡ್ ಎಮ್. ಡೇವಿಸ್ ಮತ್ತು ಮಾರಿಯಾ ಮೋಟ್ ಡೇವಿಸ್ ಅವರ ಮಗನಾಗಿ ಅಮೇರಿಕದ ಫಿಲಡೆಲ್ಪಿಯಾದಲ್ಲಿ ಜನಿಸಿದರು. ಡೇವಿಸ್‌ರವರು ಹಾರ್ವರ್ಡ್ ನ ಲಾರೆನ್ಸ್ ವೈಜ್ಞಾನಿಕಾ ಸಂಶೋಧನೆ ಕೇಂದ್ರದಲ್ಲಿ ಭೂಗೋಳಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ಕೊಲೊರೆಡೋ ಪ್ರದೇಶದಲ್ಲಿ ಹಾರ್ವರ್ಡ್ ಪ್ರಾಯೋಜಕತ್ವದಲ್ಲಿ ನಡೆಸಲಾದ ಭೌಗೋಳಿಕ ಪರಿಶೋಧನೆಯ ತಂಡವನ್ನು ಸೇರಿದರು. ಅವರು 1869 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು ಮತ್ತು ನಂತರದ ವರ್ಷದಲ್ಲಿ ಮೈನಿಂಗ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.



ಪವನಶಾಸ್ತ್ರಜ್ಞರಾಗಿ ವಿಲಿಯಂ ಮೊರಿಸ್  ಡೇವಿಸ್ ಕಾರ್ಯ ನಿರ್ವಹಣೆ:


ಪವನಶಾಸ್ತ್ರಜ್ಞನಾಗಿ ಕಾವ್ಯ ನಿರ್ವಹಣೆ ಡೇವಿಸ್ ಆರಂಭದಲ್ಲಿ ಕೊರ್ಡೋಬಾ, ಅರ್ಜೆಂಟೈನಾದಲ್ಲಿ ಮೂರು ವರ್ಷಗಳ ಕಾಲ ಪವನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದರು ಮತ್ತು ನಥಾನಿಯೆಲ್ ಶಲೇರಿಗೆ ಸಹಾಯಕರಾಗಿ ಕೆಲಸ ಮಾಡಿದ ನಂತರ 1879 ರಲ್ಲಿ ಅವರು ಹಾರ್ವರ್ಡ್ ನಲ್ಲಿ ಭೂವಿಜ್ಞಾನದಲ್ಲಿ ಬೋಧಕರಾದರು. 1890 ರಲ್ಲಿ ಮೊದಲ ಪೂರ್ಣ ಪ್ರಾಧ್ಯಾಪಕರಾಗಿ ನೇಮಕಗೊಂಡ ಅವರು ಜೀವನದುದ್ದಕ್ಕೂ ಅಧ್ಯಯನ ಮತ್ತು ಶಿಕ್ಷಣ ನೀಡುವುದರಲ್ಲಿ ತೊಡಗಿಕೊಂಡಿದ್ದರು.


ವಿಲಿಯಂ ಮೊರಿಸ್  ಡೇವಿಸ್ ಅವರ ಸವಕಳಿಯ ಚಕ್ರ ಸಿದ್ಧಾಂತ (Cycle of erosion)

ವಿಲಿಯಂ ಮೋರಿಸ್ ಡೇವಿಸ್ ಅವರ ಸವಕಳಿಯ ಚಕ್ರ ಸಿದ್ಧಾಂತ (Cycle of erosion)


ಡೇವಿಸ್‌ರವರು ಪ್ರಕೃತಿಯ ತೀಕ್ಷ್ಣ ವೀಕ್ಷಕ, ಭಿನ್ನವಾದ ಅವಲೋಕನ ಮತ್ತು ವಿಚಾರಗಳ ಅದ್ಭುತ ಸಂಯೋಜಕರಾಗಿದ್ದರು. ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಡೇವಿಸ್‌ರವರೇ ನಡೆಸಿದ ಕ್ಷೇತ್ರ ಅವಲೋಕನ ಮತ್ತು ಅಧ್ಯಯನಗಳಿಂದ ತಮ್ಮ ಪ್ರಭಾವಿ ವೈಜ್ಞಾನಿಕ ಕೊಡುಗೆಗಳಲ್ಲಿ ಒಂದಾದ ಭೌಗೋಳಿಕ ಚಕ್ರ ವನ್ನು ರೂಪಿಸಿದರು.


1889 ರಲ್ಲಿ ಈ ಸಿದ್ದಾಂತವನ್ನು ಮೊದಲ ಬಾರಿಗೆ ಪೆನ್ಸಿಲ್ವೇನಿಯಾದ ದಿ ರಿವರ್ಸ್ ಆಂಡ್ ವ್ಯಾಲೀಸ್ ಎಂಬ ಲೇಖನದಲ್ಲಿ ಪ್ರಕಟಿಸಲಾಯಿತು.


ಈ ಸಿದ್ದಾಂತದ ರಚನೆಗೆ ಎರಾಸ್ಮಸ್, ಚಾರ್ಲ್ಸ್ ಡಾರ್ವಿನ್ ಮತ್ತು ಜೀನ್- ಬ್ಯಾಪ್ಟಿಸ್ಟ್ ಲಾರ್ಮಾರ್ಕ್ ರ ಪ್ರಭಾವ ಡೇವಿಸ್‌ರವರ ಮೇಲಾಗಿದೆ. ಡೇವಿಸ್ ರವರ ಸವಕಳಿಯ ಚಕ್ರ ಸಿದ್ದಾಂತವು ನದಿಗಳ ವಿಕಾಸದಲ್ಲಿ ಮೂರು ಮುಖ್ಯ ಹಂತಗಳಿವೆ ಎಂದು ಸೂಚಿಸುತ್ತದೆ. ಪ್ರತಿಯೊಂದು ಹಂತವು ವಿಶಿಷ್ಟವಾದ ಭೂಪ್ರದೇಶಗಳು ಮತ್ತು ಇತರ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ನದಿಯ ಮೇಲಿನ, ಮಧ್ಯಮ, ಮತ್ತು ಕೆಳಗಿನ ಹರಿವುನ ಉದ್ದಕ್ಕೂ ಸಂಭವಿಸಬಹುದು.





ಭೂರೂಪಶಾಸ್ತ್ರದ ಬೆಳವಣಿಗೆಗೆ ಸವಕಳಿಯ ಚಕ್ರ ಸಿದ್ದಾಂತವು ನಿರ್ಣಾಯಕ ಆರಂಭಿಕ ಕೊಡುಗೆಯಾಗಿತ್ತು. ಅವರು 1904 ರಲ್ಲಿ ಅಸೋಸಿಯೇಷನ್ ಆಫ್ ಅಮೆರಿಕನ್ ಭೂಗೋಳಶಾಸ್ತ್ರಜ್ಞರ ಸಂಸ್ಥಾಪಕರಾಗಿದ್ದರು ಮತ್ತು ಅದರ ಆರಂಭಿಕ ವರ್ಷಗಳಲ್ಲಿ ನ್ಯಾಶನಲ್ ಜಿಯಾಗ್ರಫಿಕ್ ಸೊಸೈಟಿಯೊಂದಿಗೆ ಭಾಗಿಯಾಗಿದ್ದರು. ಈ ನಿಯತಕಾಲಿಕೆಗೆ ಹಲವಾರು ಲೇಖನಗಳನ್ನು ಬರೆದರು. 1911 ರಲ್ಲಿ ಡೇವಿಸ್‌ ಹಾರ್ವರ್ಡ್ ನಿಂದ ನಿವೃತ್ತರಾದರು. ಅವರು 1911 ರಲ್ಲಿ ಜಿಯಲಾಜಿಕಲ್ ಸೊಸೈಟಿ ಆಫ್ ಅಮೇರಿಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರಿಗೆ 1919 ರಲ್ಲಿ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯ ಪೋಷಕ ಚಿನ್ನದ ಪದಕವನ್ನು ನೀಡಲಾಯಿತು.


ವಿಲಿಯಂ ಮೊರಿಸ್  ಡೇವಿಸ್ ನಿಧನ:


ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ಅವರು ತಮ್ಮ 84 ನೆಯ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಮುಂಚೆ 1934 ಫೆಬ್ರುವರಿ 5 ರಂದು ನಿಧನರಾದರು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads