ಮಕ್ಕಳ ಮೇಲಿರುವ ಪಾಲಕರ ಒತ್ತಡಗಳು
ಒಂದು ದಿನ ಅಪ್ಪ-ಮಗ ಎಲ್ಲೋ ಹೋಗುತ್ತಿರುತ್ತಾರೆ. ದಾರಿಯಲ್ಲಿ ಒಂದಿಷ್ಟು ಮಕ್ಕಳು ಕೆಸರಿನಲ್ಲಿ ಏನೋ ಹುಡುಕುತ್ತಿರುವುದು ಗೊತ್ತಾಗುತ್ತದೆ. ಅಪ್ಪ ಅವರ ಹತ್ತಿರ ಹೋಗಿ ಏನಾಗುತ್ತಿದೆ ಎಂದು ಕೇಳುತ್ತಾರೆ. ಅದಕ್ಕೊಬ್ಬ ಹುಡುಗ, ಆ ಕೆಸರಿನಲ್ಲಿ ಒಂದು ಚಿನ್ನದ ಹಣ್ಣಿದೆ, ಅದನ್ನು ಕೀಳುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾನೆ. ಆ ಹಣ್ಣು ತನ್ನ ಮಗನಿಗೆ ಸಿಕ್ಕರೆ, ಅದನ್ನು ಮಾರಿ ಸಾಕಷ್ಟು ಹಣ ಸಂಪಾದಿಸಬಹುದು ಎಂದು ಯೋಚಿಸುತ್ತಾನೆ. ಮಗನಿಗೆ ಆ ಹಣ್ಣು ತರುವುದಕ್ಕೆ ಹೇಳುತ್ತಾನೆ. ಮಗನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಕೆಸರತ್ತ ನೂಕುತ್ತಾನೆ. ಕೆಸರಿಗೆ ಸಿಕ್ಕು ಅಪ್ಪನ ಕಣ್ಣೆದುರೇ ಆತ ಸಾಯುತ್ತಾನೆ.
ಅಲ್ಲೇ ರೋಧಿಸುತ್ತ ಕುಳಿತಿದ್ದಾಗ ಮಾತಾಡಿಸಲು ಬರುವ ಸಾಧು ಜತೆಗೆ ನಡೆದಿದ್ದೆಲ್ಲ ಹೇಳುತ್ತಾನೆ. ಆಗ ಸಾಧು, ಕೆಸರಲ್ಲಿ ಹಣ್ಣಿಲ್ಲ, ಅಪ್ಪ ನೋಡಿದ್ದು ಮರದ ಮೇಲಿರುವ ಹಣ್ಣಿನ ಪ್ರತಿಫಲನ ಎಂದು ಗಮನಕ್ಕೆ ತರುತ್ತಾನೆ. ಮಗನನ್ನು ಕೆಸರಿಗೆ ನೂಕುವ ಬದಲು, ಒಂದು ನಿಮಿಷ ಅವನನ್ನೇ ಕೇಳಿದ್ದರೆ, ಅವನು ನಿಜವಾದ ಚಿನ್ನದ ಹಣ್ಣನ್ನು ತರುವ ಸಾಧ್ಯತೆ ಇತ್ತು ಎನ್ನುತ್ತಾನೆ. ಆಗ ಅಪ್ಪನಿಗೆ ಜ್ಞಾನೋದಯವಾಗುತ್ತದೆ. ಇದರ ಸಾರಾಂಶ ಇಷ್ಟೇ. ತಂದೆ-ತಾಯಿ ತಮ್ಮ ಮಕ್ಕಳ ಮೇಲೆ ಅಪಾರ ಕನಸುಗಳನ್ನಿಟ್ಟುಕೊಂಡು ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮಕ್ಕಳು ಆ ಒತ್ತಡಗಳನ್ನು ತಡೆದುಕೊಳ್ಳದೆ, ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳ ಮೇಲೆ ಒತ್ತಡ ಹಾಕದೆ, ಅವರಿಗೆ ತಮ್ಮ ಕನಸಿನ ಜೀವನವನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಡಿ.
ಆತ್ಮೀಯ ಪಾಲಕರೇ, ಕಥೆಯ ಮೂಲಕ ನಾವುಗಳು ತಿಳಿದುಕೊಳ್ಳುವ ನೀತಿ ಪಾಠ ಇಷ್ಟೇ, ಮಕ್ಕಳು ಅಮೂಲ್ಯ ರತ್ನಗಳು, ಮಕ್ಕಳನ್ನು ಅವರಿಷ್ಟದಂತೆ ಬಿಟ್ಟು ಬಿಡಿ, ಒತ್ತಾಯ ಪೂರ್ವಕವಾಗಿ ಅವರಿಗೆ ಇಷ್ಟವಿಲ್ಲದ ಕ್ಷೇತ್ರದಲ್ಲಿ ಅವರನ್ನು ನೂಕು ಅವರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡದಿರಿ.
No comments:
Post a Comment
If you have any doubts please let me know