Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 21 February 2022

ಅಂತಾರಾಷ್ಟ್ರೀಯ ಮಾತೃಭಾಷಾ ದಿನ-2022 (International Mother Language Day-2022)

ಅಂತಾರಾಷ್ಟ್ರೀಯ ಮಾತೃಭಾಷಾ ದಿನ-2022 (International Mother Language Day-2022) 

ಅಂತಾರಾಷ್ಟ್ರೀಯ ಮಾತೃಭಾಷಾ ದಿನ-2022 (International Mother Language Day-2022)


ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಫೆ . 21 ನ್ನು ವಿಶ್ವ ಮಾತೃ ಭಾಷಾ ದಿನವಾಗಿ ಆಚರಿಸಲಾಗುತ್ತದೆ. 1999 ರಲ್ಲಿ ಯುನೆಸ್ಕೋ ಇದನ್ನು ಘೋಷಿಸಿತು. ಇದರ ಮುಂದುವರಿದ ಭಾಗವಾಗಿ ವಿಶ್ವಸಂಸ್ಥೆಯು 2008 ನ್ನು  "ವಿಶ್ವ ಭಾಷೆಗಳ ವರ್ಷ" ಎಂದು ಆಚರಿಸಿತು. 2000 ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃಭಾಷಾ ದಿವಸವನ್ನು ಆಚರಿಸಲಾಗುತ್ತಿದೆ. 1952 ರಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಭಾಷಾ) ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. 1952 ರ ಫೆ .21 ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ತೀವ ಸ್ವರೂಪ ಪಡೆಯಿತು. ಪೊಲೀಸ್ ಗೋಲಿಬಾರಿನಲ್ಲಿ ಕೆಲವು ವಿದ್ಯಾರ್ಥಿಗಳು ಅಸುನೀಗಿದರು . ಆ ನೆನಪಿಗಾಗಿ ವಿಶ್ವ ಮಾತೃಭಾಷಾ ದಿನ ಆಚರಣೆ ರೂಢಿಗೆ ಬಂತು.


☘ ಅಪಾಯದಲ್ಲಿವೆ ಭಾಷೆಗಳು

ಭಾರತದಲ್ಲಿ 19,500 ಕ್ಕೂ ಹೆಚ್ಚು ಆಡುಭಾಷೆಗಳಿವೆ ಇವೆಲ್ಲವನ್ನು ತಾಯ್ನುಡಿ ಎಂದು ಪರಿಗಣಿಸಬಹುದಾಗಿದೆ ಎಂದು ಇತ್ತೀಚಿನ ಜನಗಣತಿ ಆಧರಿಸಿ ರೂಪಿಸಲಾದ ವರದಿ ತಿಳಿಸಿದೆ. 2011 ರ ಜನಗಣತಿ ವರದಿ ಪ್ರಕಾರ, 19,569 ಕ್ಕೂ ಅಧಿಕ ಮಾತೃಭಾಷೆಗಳಿವೆ. ಆದರೆ ಶೇ. 96.71 ರಷ್ಟು ಜನಸಂಖ್ಯೆ 22 ಅಧಿಸೂಚಿತ ಭಾಷೆಗಳನ್ನೇ ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಒಟ್ಟಾರೆ 270 ಕ್ಕೂ ಅಧಿಕ ಗುರುತು ಸಿಗದ ತಾಯ್ನುಡಿಗಳಿದ್ದು 10 ಸಾವಿರಕ್ಕೂ ಅಧಿಕ ಮಂದಿ ಮಾತನಾಡುತ್ತಿದ್ದಾರೆ . 

ಆಸ್ಸಾಮಿ, ಬಂಗಾಲಿ, ಗುಜರಾತಿ, ಹಿಂದಿ , ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳ, ಮಣಿಪುರಿ, ಮರಾಠಿ, ನೇಪಾಲಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂಥಲಿ, ಮೈಥಿಲಿ ಹಾಗೂ ಡೊಗ್ರಿ ಭಾಷೆಗಳು ಮಾತ್ರ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡೆದ 22 ಭಾಷೆಗಳಾಗಿವೆ.

☘ ಅಂತಾರಾಷ್ಟ್ರೀಯ ಮಾತೃಭಾಷಾ ದಿನ-2021 ಈ ವರ್ಷದ ಶೀರ್ಷಿಕೆ : International Mother Language Day-2021 Theme:


 "Fostering multilingualism for inclusion in education and society"

 ಅಂದರೆ , ಸೇರ್ಪಡೆಗಾಗಿ ಶಿಕ್ಷಣ ಮತ್ತು ಸಮಾಜದಲ್ಲಿ ಬಹುಭಾಷಿಕತೆಯನ್ನು ಬೆಳೆಸುವುದು' ಇದರರ್ಥ , ಶಿಕ್ಷಣ ಮತ್ತು ನಿತ್ಯಜೀವನದಲ್ಲಿ ಮಾತೃಭಾಷೆಯ ಬಳಕೆಗೆ ಒತ್ತು ನೀಡುವುದು .


☘ ಅಂತಾರಾಷ್ಟ್ರೀಯ ಮಾತೃಭಾಷಾ ದಿನ-2022 ಈ ವರ್ಷದ ಶೀರ್ಷಿಕೆ : International Mother Language Day-2022 Theme:

 "Using technology for multilingual learning: Challenges and opportunities"

 ಅಂದರೆ, "ಬಹುಭಾಷಾ ಕಲಿಕೆಗಾಗಿ ತಂತ್ರಜ್ಞಾನವನ್ನು ಬಳಸುವಲ್ಲಿನ ಸವಾಲುಗಳು ಮತ್ತು ಅವಕಾಶಗಳು."


👉 Important Information to be Noted For All Competitive Exams
=============================================

🔷 RBI to evaluate the impact of ‘RBI Kehta Hai’ campaign in 14 languages 

🔶Government Formed a committee to protect language, culture & land of Ladakh headed by G Kishan Reddy 

🔷Assam Cabinet approves Bill to make ‘Bodo’ as Associate Official Language of the State

🔶 Film editor Shreekar Prasad has entered Limca Book of Records for editing films in 17 languages.

🔷Cabinet Approves Bill To Include Kashmiri, Dogri, Hindi As Official Languages In J&K 


🏛 All you Need to Know About :

United Nations Educational Scientific And Cultural Organisation (UNESCO)

🔹 Founded - 4 Nov 1946

🔹 HQ - Paris France

🔹 DG - Audrey Azoulay

🔹 MC -193


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads