14 February 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
01. ಈ ಕೆಳಗಿನ ಯಾವ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂದು ಕರೆಯಲ್ಪಟ್ಟಿದೆ ?
ಎ ) ನಾರಾಯಣಪಪು ಅಣೆಕಟ್ಟೆ
ಬಿ ) ಘಟಪ್ರಭಾ ಅಣೆಕಟ್ಟೆ
ಸಿ ) ಕೆ.ಆರ್ . ಎಸ್ . ( ಕೃಷ್ಣರಾಜ ಸಾಗರ ) ಅಣೆಕಟ್ಟು
ಡಿ ) ಆಲಮಟ್ಟಿ ಅಣೆಕಟ್ಟು
ಸರಿಯಾದ ಉತ್ತರ: ಎ ) ನಾರಾಯಣಪಪು ಅಣೆಕಟ್ಟೆ
2. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ?
ಎ ) ಮುಳ್ಳಯ್ಯನಗಿರಿ
ಬಿ ) ಕುದುರೆಮುಖ
ಸಿ ) ಪುಷ್ಪಗಿರಿ
ಡಿ ) ಕಪ್ಪತ ಗುಡ್ಡ
ಸರಿಯಾದ ಉತ್ತರ: ಎ ) ಮುಳ್ಳಯ್ಯನಗಿರಿ
03. ಪ್ರಸಿದ್ಧವಾದ ಮಾಗೋಡು ಜಲಪಾತವು ಈ ನದಿಯಲ್ಲಿದೆ
ಎ ) ಶರಾವತಿ
ಬಿ ) ನೇತ್ರಾವತಿ
ಸಿ ) ಕಾವೇರಿ
ಡಿ ) ಬೇಡ್ತಿ
ಸರಿಯಾದ ಉತ್ತರ: ಡಿ ) ಬೇಡ್ತಿ
4. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಗುಡವಿ ಪಕ್ಷಿಧಾಮವು ಇದೆ ?
ಎ ) ಶಿವಮೊಗ್ಗ
ಬಿ ) ಮಂಡ್ಯ
ಸಿ ) ಹಾವೇರಿ
ಡಿ ) ಚಿಕ್ಕಮಗಳೂರು
ಸರಿಯಾದ ಉತ್ತರ: ಎ ) ಶಿವಮೊಗ್ಗ
5. ಸಂಸತ್‌ನಿಂದ ಒಂದು ನಿಧಿಯನ್ನು ಸ್ಥಾಪಿಸಿದ್ದು , ಅದನ್ನು ಸಭೆಯ ಅನಿರೀಕ್ಷಿತ ವೆಚ್ಚದ ಉದ್ದೇಶಕ್ಕಾಗಿ ಬಳಸಿಕೊಳ್ಳಲು ರಾಷ್ಟ್ರಪತಿಗಳ ಅಂತಿಮ ತೀರ್ಮಾನಕ್ಕಾಗಿ ಮಂಡಿಸಬೇಕಾಗಿದ್ದು ಅದು
ಎ ) ಹಣಕಾಸು ಆಯೋಗ
ಬಿ ) ಭಾರತದ ಸಂಚಿತ ನಿಧಿ
ಸಿ ) ರಾಜ್ಯದ ಸಾದಿಲ್ವಾರು ನಿಧಿ
ಡಿ ) ಭಾರತದ ಸಾದಿಲ್ವಾರು ನಿಧಿ
ಸರಿಯಾದ ಉತ್ತರ: ಡಿ ) ಭಾರತದ ಸಾದಿಲ್ವಾರು ನಿಧಿ
6. ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಇಲ್ಲಿ ಸವಿಸ್ತಾರಗೊಳಿಸಲಾಗಿದೆ .
ಎ ) ಮೂಲಭೂತ ಹಕ್ಕುಗಳು
ಬಿ ) ಮೂಲಭೂತ ಕರ್ತವ್ಯಗಳು
ಸಿ ) ರಾಜ್ಯನೀತಿ ನಿರ್ದೇಶಕ ತತ್ವಗಳು
ಡಿ ) ಇವುಗಳಲ್ಲಿ ಯಾವುದೂ ಅಲ್ಲ
ಸರಿಯಾದ ಉತ್ತರ: ಸಿ ) ರಾಜ್ಯನೀತಿ ನಿರ್ದೇಶಕ ತತ್ವಗಳು
7. ರಾಷ್ಟ್ರಪತಿಯವರು ಮರಣವಾದಲ್ಲಿ , ಅವರ ರಾಜೀನಾಮೆಯ ಅಥವಾ ಅವರ ರದ್ಧತಿಯ ಕಾರಣದಿಂದ ತೆರವಾದ ಸ್ಥಾನವನ್ನು ಭರ್ತಿಮಾಡಲು ಈ ಕೆಳಗಿನ ಯಾವ ಸಂದರ್ಭದಲ್ಲಿ ಚುನಾವಣೆಯನ್ನು ನಡೆಸಬೇಕಾಗುವುದು ?
ಎ ) ಸಾಧ್ಯವಾದಷ್ಟು ಬೇಗನೆ
ಬಿ ) ಒಂದು ವರ್ಷಕ್ಕಿಂತ ಹೆಚ್ಚಾಗದ ಅವಧಿಯಲ್ಲಿ
ಸಿ ) ಆರು ತಿಂಗಳ ಒಳಗಾಗಿ / ಅದಕ್ಕಿಂತ ಹೆಚ್ಚಾಗದ ಅವಧಿಯಲ್ಲಿ
ಡಿ ) 9 ತಿಂಗಳುಗಳಿಗಿಂತ ಹೆಚ್ಚಾಗದ ಅವಧಿಯಲ್ಲಿ
ಸರಿಯಾದ ಉತ್ತರ: ಸಿ ) ಆರು ತಿಂಗಳ ಒಳಗಾಗಿ / ಅದಕ್ಕಿಂತ ಹೆಚ್ಚಾಗದ ಅವಧಿಯಲ್ಲಿ
8. 14 ನೇ ಹಣಕಾಸು ಆಯೋಗವು ಕೇಂದ್ರದ ನಿವ್ವಳ ತೆರಿಗೆ ಹುಟ್ಟುವಳಿಯಲ್ಲಿ ರಾಜ್ಯದ ಪಾಲನ್ನು ಈ ರೀತಿ ಹೆಚ್ಚಿಸಲು ಶಿಫಾರಸ್ಸು ಮಾಡಿದೆ .
ಎ ) ಶೇ .32 ರಿಂದ ಶೇ .42
ಬಿ ) ಶೇ . 32 ರಿಂದ ಶೇ . 34
ಸಿ ) ಶೇ .34 ರಿಂದ ಶೇ .42
ಡಿ ) ಶೇ . 28 ರಿಂದ ಶೇ . 36
ಸರಿಯಾದ ಉತ್ತರ: ಎ ) ಶೇ .32 ರಿಂದ ಶೇ .42
9. ಕರ್ನಾಟಕದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ವಸತಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ನೋಡಲ್ ಸಂಸ್ಥೆ ಯಾವುದು
ಎ ) ಮಹಾತ್ಮಗಾಂಧಿ ಗ್ರಾಮೀಣ ವಸತಿ ನಿಗಮ
ಬಿ ) ಇಂದಿರಾಗಾಂಧಿ ಗ್ರಾಮೀಣ ವಸತಿ ನಿಗಮ
ಸಿ ) ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ
ಡಿ ) ಕರ್ನಾಟಕ ಗೃಹ ( ವಸತಿ ) ಮಂಡಳಿ
ಸರಿಯಾದ ಉತ್ತರ: ಸಿ ) ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ
10. 2014-15ನೇ ಸಾಲಿನಲ್ಲಿ ಕರ್ನಾಟಕದ ಬೆಳೆ ( Cropping ) ಬಿತ್ತನೆ ತೀವ್ರತೆಯು ,
ಎ ) ಶೇ . 90
ಬಿ ) ಶೇ .100
ಸಿ ) ಶೇ .110
ಡಿ ) ಶೇ .120
ಸರಿಯಾದ ಉತ್ತರ: ಡಿ ) ಶೇ .120
No comments:
Post a Comment
If you have any doubts please let me know