ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
General Knowledge (GK) Question Answers in Kannada For All Competitive Exams:
ಸರಿಯಾದ ಉತ್ತರ: C.ಕೇರಳ
ವಿವರಣೆ
ದೇಶದ ಮೊದಲ ಪಕ್ಷಿಗಳ ಅವಾಸ ಸ್ಥಾನವನ್ನು ಗುರುತಿಸುವ ಅಟ್ಲಾಸ್ ಪುಸ್ತಕವನ್ನು ಕೇರಳ ರಾಜ್ಯವು ಹೊರತಂದಿದೆ.
ಕೇರಳ ಬರ್ಡ್ ಅಟ್ಲಾಸ್ ಪುಸ್ತಕವು 361 ಪ್ರಭೇದಗಳ 3 ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಹೊಂದಿದ್ದು ,ಇದರಲ್ಲಿ 94 ಅತಿ ವಿರಳ ಪ್ರಭೇದಗಳು,103 ವಿರಳ ಪ್ರಭೇದಗಳು,110 ಸಾಮಾನ್ಯ ಪ್ರಭೇದಗಳು,44 ಅತಿ ಸಾಮಾನ್ಯ ಪ್ರಭೇದಗಳು ಹಾಗೂ 10 ಅತಿ ಹೆಚ್ಚು ಪಕ್ಷಿಗಳನ್ನು ಹೊಂದಿರುವ ಪ್ರಭೇದಗಳನ್ನು ಹೊಂದಿದೆ.
ಇದು ಏಷ್ಯಾದ ದೊಡ್ಡ ಬರ್ಡ್ ಅಟ್ಲಾಸ್ ಆಗುವ ಸಂಭವ ಹೊಂದಿದ್ದು ,ಪಕ್ಷಿ ಪ್ರಭೇದಗಳು ಚಳಿಗಾಲಕ್ಕಿಂತ ಬೇಸಿಗೆ ಕಾಲದಲ್ಲೇ ಹೆಚ್ಚು ಪತ್ತೆಯಾಗಿದೆ.
ಸರಿಯಾದ ಉತ್ತರ: ಕರ್ನಾಟಕ
ವಿವರಣೆ:
🍁"ತಮಿಳುನಾಡು" -ಅತಿ ಹೆಚ್ಚು "ಪವನ ಶಕ್ತಿ" ಉತ್ಪಾದಿಸುವ ರಾಜ್ಯ
🍁"ಕರ್ನಾಟಕ" -ರೈತರ ಆತ್ಮಹತ್ಯ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯ
🍁"ಒಡಿಶಾ" -"ಗಾಹಿರ್ಮಾತಾ ಬೀಚ್"(Gahirmatha Beach)ಕಂಡುಬರುತ್ತದೆ
🍁"ಮಹಾರಾಷ್ಟ್ರ" - ವಧವನ್ ಬಂದರು(Vadhavan Port)ಕಂಡುಬರುತ್ತದೆ (ಭಾರತದ ಅತಿದೊಡ್ಡ ಕಂಟೈನರ್ ಬಂದರು)
ಸರಿಯಾದ ಉತ್ತರ: A. ಮಹಾತ್ಮ ಗಾಂಧೀಜಿ
ವಿವರಣೆ:
- 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು- “ಮಹಾತ್ಮ ಗಾಂಧೀಜಿ”
- ಮಹಾತ್ಮ ಗಾಂಧೀಜಿ ರವರು ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು 1 ಬಾರಿ ಮಾತ್ರ ವಹಿಸಿದ್ದರು.
- 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನವನ್ನು “ಯೂನಿಟಿ ಕಾಂಗ್ರೆಸ್ ಅಧಿವೇಶನ ಎಂದು ಕರೆಯುತ್ತಾರೆ.
- ಇದು 39 ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ
- ಅಧಿವೇಶನದ ವೇದಿಕೆಯ ಸ್ಥಳ - ವಿಜಯನಗರ,
- ಸ್ವಾಗತ ಗೀತೆಯನ್ನು ಹಾಡಿದವರು - ಗಂಗೂಬಾಯಿ ಹಾನಗಲ್.
- ಸ್ವಾಗತ ಸಮಿತಿಯ ಅಧ್ಯಕ್ಷರು ಗಂಗಾಧರ್ ರಾವ್ ದೇಶಪಾಂಡೆ.
ಸರಿಯಾದ ಉತ್ತರ: C. ದೇವನೂರು ಮಹಾದೇವ
ವಿವರಣೆ
• ಇತ್ತೀಚೆಗೆ ದೇವನೂರು ಮಹಾದೇವ ರವರ “ಕುಸುಮ ಬಾಲೆ” ಕಾದಂಬರಿಯು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದವರು- ಸುಸಾನ್ ಡೇನಿಯಲ್ (2019)
• “ಊರುಕೇರಿ” ಎಂಬುದು ಸಿದ್ದಲಿಂಗಯ್ಯ ರವರ ಆತ್ಮಕಥೆ.
• ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಕರೆಯುತ್ತಾರೆ.
• ಮಾಸ್ತಿಯವರ ಕಾದಂಬರಿ - ಚಿಕ್ಕವೀರ ರಾಜೇಂದ್ರ ಯು.ಆರ್.ಅನಂತಮೂರ್ತಿ ಕಾದಂಬರಿ ಸಂಸ್ಕಾರ, ಭಾರತೀಪುರ, ಅವಸ್ಥೆ.
• ಪಿ.ಲಂಕೇಶ ರವರ ಕಾದಂಬರಿ- ಮುಸ್ಸಂಜೆಯ ಕಥಾ ಪ್ರಸಂಗ ಮತ್ತು ಬಿರುಕು
ಸರಿಯಾದ ಉತ್ತರ: C. 1985
ವಿವರಣೆ
🪴 ಮೊದಲ ವಿಶ್ವ ಕನ್ನಡ ಸಮ್ಮೇಳನ
- ಸ್ಥಳ :- ಮೈಸೂರು (1985)
- ಅಧ್ಯಕ್ಷತೆ :-ಸಾಹಿತಿ ಶಿವರಾಮ ಕಾರಂತರು
- ಸಮ್ಮೇಳನ ಉದ್ಘಾಟನೆ :- ರಾಷ್ಟ್ರಕವಿ ಕುವೆಂಪು
🪴 ಎರಡನೆ ವಿಶ್ವ ಕನ್ನಡ ಸಮ್ಮೇಳನ
- ಸ್ಥಳ :- ಬೆಳಗಾವಿ ( 2011 )
- ಅಧ್ಯಕ್ಷತೆ :- ಬಿ ಎಸ್ ಯಡಿಯೂರಪ್ಪ
- ಸಮಾರೋಪ ಸಮಾರಂಭದ ಅಧ್ಯಕ್ಷತೆ:- - ನಾಡೋಜ ದೇ ಜವರೇಗೌಡರು
- ಸಮ್ಮೇಳನ ಉದ್ಘಾಟನೆ :- ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ
• ಕರ್ನಾಟಕದಲ್ಲಿ ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಮೈಸೂರು
• ಕರ್ನಾಟಕದಲ್ಲಿ ಎರಡನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ವರ್ಷ - 2011
• ಕರ್ನಾಟಕದಲ್ಲಿ ಎರಡನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಬೆಳಗಾವಿ.
• ಕರ್ನಾಟಕದಲ್ಲಿ ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಿರುವ ಜಿಲ್ಲೆ ದಾವಣಗೆರೆ
• ಕರ್ನಾಟಕದ ಮ್ಯಾಂಚೆಸ್ಟರ್- ದಾವಣಗೆರೆ
🪴 ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
(ದಾವಣಗೆರೆ ಅಲ್ಲ )
ಸರಿಯಾದ ಉತ್ತರ: B. ಉಪ್ಪಿನ ಸತ್ಯಾಗ್ರಹ
ವಿವರಣೆ
🍁"ದಂಡಿ ಸತ್ಯಾಗ್ರಹ" ನಡೆದ ವರ್ಷ- 1930,ಮಾರ್ಚ್ 12
🍁 ಸಬರಮತಿ ಆಶ್ರಮದಿಂದ ದಂಡಿಯವರೆಗೆ ಸತ್ಯಾಗ್ರಹ ಹೂಡಿದರು.
🍁 ಕಾನೂನುಭಂಗ ಚಳುವಳಿಯನ್ನು ಮಹಾತ್ಮ ಗಾಂಧೀಜಿಯವರು ದಂಡಿಯಿಂದ ಆರಂಭಿಸಿದರು .
• ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಒಟ್ಟು ಸದಸ್ಯರ ಸಂಖ್ಯೆ- 78.
• ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಏಕೈಕ ಕನ್ನಡಿಗರು- “ಮೈಲಾರ ಮಹಾದೇವಪ್ಪ”.
• ಮೈಲಾರ ಮಹಾದೇವಪ್ಪ ಹಾವೇರಿ ಜಿಲ್ಲೆಯವರು.
• ದಂಡಿ ಸತ್ಯಾಗ್ರಹದ ಪ್ರಮುಖ ಉದ್ದೇಶ :
1) ಪೂರ್ಣ ಸ್ವರಾಜ್ಯ
2) ಉಪ್ಪಿನ ಮೇಲಿನ ತೆರಿಗೆಯನ್ನು ರದ್ದುಗೊಳಿಸುವುದು.
ಸರಿಯಾದ ಉತ್ತರ: C. ಡಾ||ಬಿ.ಆರ್ ಅಂಬೇಡ್ಕರ್& ಗಾಂಧೀಜಿ
ವಿವರಣೆ
• ಪೂನಾ ಒಪ್ಪಂದವು ನಡೆದ ವರ್ಷ- “1932”.
• ಪೂನಾ ಒಪ್ಪಂದ ನಡೆದ ಸ್ಥಳ- “ಯರವಾಡ ಜೈಲು”
• ಯರವಾಡ ಜೈಲು ಇರುವುದು- ಪುಣೆಯಲ್ಲಿ.
• ಪೂನಾ ಒಪ್ಪಂದದಿಂದ ಮಹಾತ್ಮ ಗಾಂಧೀಜಿರವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
• ಪೂನಾ ಒಪ್ಪಂದದ ಮಧ್ಯಸ್ಥಿಕೆ ವಹಿಸಿದವರು ಪಂಡಿತ್ ಮದನ್ ಮೋಹನ್ ಮಾಳವೀಯ
ಸರಿಯಾದ ಉತ್ತರ: C. ಹಂಪಿ
ವಿವರಣೆ
• ವಿಜಯನಗರ ಸಾಮ್ರಾಜ್ಯದ ರಾಜಧಾನಿ - ಹಂಪಿ
• ಹಂಪಿ ತುಂಗಭದ್ರಾ ನದಿ ದಂಡೆಯ ಮೇಲಿದೆ.
• ಹಂಪಿ ವಿಜಯನಗರ ಜಿಲ್ಲೆಯಲ್ಲಿದೆ.
• ಹಂಪಿಯ ಮೊದಲ ಹೆಸರು “ಕಿಷ್ಕಿಂದೆ”.
• ಹಂಪಿ ವಿಶ್ವಪರಂಪರೆ ಪಟ್ಟಿಗೆ ಸೇರಿದ್ದು 1986ರಲ್ಲಿ
• ಹಂಪಿಯಲ್ಲಿ ಪ್ರಸಿದ್ಧ ವಿರೂಪಾಕ್ಷ ದೇವಾಲಯವಿದೆ
ಸರಿಯಾದ ಉತ್ತರ: B. ಬಸವಕಲ್ಯಾಣ
ವಿವರಣೆ
🍀 ಬಹುಮನಿ ಸುಲ್ತಾನರ ಮೊದಲ ರಾಜಧಾನಿ “ಕಲಬುರಗಿ ”
🍀 1857ರ ಸಿಪಾಯಿ ದಂಗೆಯ ಕಾಲದಲ್ಲಿ ಸುರಪುರ ದಂಗೆಯ ನಾಯಕತ್ವ ವಹಿಸಿದವರು - "ರಾಜ ವೆಂಕಟಪ್ಪ ನಾಯಕ"
🍀 ಶಾತವಾಹನರ ರಾಜಧಾನಿ-"ಪೈಠಾಣ"
🍀 ರಾಷ್ಟ್ರಕೂಟರ ರಾಜಧಾನಿ-"ಮಾನ್ಯಖೇಟ"
• ಬಸವಕಲ್ಯಾಣ ನಗರವು ಬೀದರ್ ಜಿಲ್ಲೆಯಲ್ಲಿದೆ.
• ಕದಂಬರ ರಾಜಧಾನಿ- “ಬನವಾಸಿ”.(ಉತ್ತರ ಕನ್ನಡ)
• ಗಂಗರ ಮೊದಲ ರಾಜಧಾನಿ - “ಕೋಲಾರ”.
ಸರಿಯಾದ ಉತ್ತರ: B. ಆರು ಬಾರಿ
ವಿವರಣೆ:-
ಪಂಡಿತ್ ಜವಾಹರ್ ಲಾಲ್ ನೆಹರೂರವರು ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಗಳು.
1) 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನ.
2) 1936ರ ಲಕ್ಕೂ ಕಾಂಗ್ರೆಸ್ ಅಧಿವೇಶನ.
3) 1937ರ ಪೈಜಾಪುರ್ ಕಾಂಗ್ರೆಸ್ ಅಧಿವೇಶನ.
4) 1951-52 ದೆಹಲಿ ಕಾಂಗ್ರೆಸ್ ಅಧಿವೇಶನ.
5) 1953ರ ಹೈದರಾಬಾದ್ ಕಾಂಗ್ರೆಸ್ ಅಧಿವೇಶನ
6) 1954ರ ಕಲ್ಯಾಣಿ ಕಾಂಗ್ರೆಸ್ ಅಧಿವೇಶನ.
> ಮೂರು ಬಾರಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿದವರು ದಾದಾಬಾಯಿ ನವರೋಜಿ.