25 December 2021 Daily Top-10 General Knowledge Question Answers in Kannada for All Competitive Exams
01. ರಕ್ತ ಮತ್ತು ಕಬ್ಬಿಣ ನೀತಿಯನ್ನು ಅನುಸರಿಸಿದ ದೆಹಲಿಯ ಸುಲ್ತಾನ ಯಾರು?
ಎ) ಇಲ್ತಮಿಶ್
ಬಿ) ಬಲ್ಬನ್
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಘಿಯಾಸುದ್ದೀನ್ ತುಘಲಕ್
ಸರಿಯಾದ ಉತ್ತರ: ಬಿ) ಬಲ್ಬನ್
2. ಸೀಸರ್ ಕಫ್ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
ಎ) ಬ್ಯಾಡ್ಮಿಂಟನ್
ಬಿ) ಹಾಕಿ
ಸಿ) ಫುಟ್ಬಾಲ್
ಡಿ) ಕ್ರಿಕೆಟ್
ಸರಿಯಾದ ಉತ್ತರ: ಸಿ) ಫುಟ್ಬಾಲ್
03. ಸಾಲ್ಬಾಯ್ ಒಪ್ಪಂದ ಇವರ ನಡುವೆ ನಡೆಯಿತು?
ಎ) ಬ್ರಿಟಿಷರು ಮತ್ತು ಹೈದರಾಬಾದಿನ ನಿಜಾಮ
ಬಿ) ಬ್ರಿಟಿಷರು ಮತ್ತು ಹೈದರಾಲಿ
ಸಿ) ಬ್ರಿಟಿಷರು ಮತ್ತು ಅವಧನ ನವಾಬರು
ಡಿ) ಬ್ರಿಟಿಷರು ಮತ್ತು ಮರಾಠರು
ಸರಿಯಾದ ಉತ್ತರ: ಡಿ) ಬ್ರಿಟಿಷರು ಮತ್ತು ಮರಾಠರು
4. ಯಾವ ವರ್ಷದಲ್ಲಿ ಭಯೋತ್ಪಾದನೆ ತಡೆಗಟ್ಟುವ ಕಾಯ್ದೆಯನ್ನು ಜಾರಿ ತರಲಾಯಿತು?
ಎ) 2004
ಬಿ) 2001
ಸಿ) 2003
ಡಿ) 2002
ಸರಿಯಾದ ಉತ್ತರ: ಡಿ) 2002
5. ಕಾರ್ಪಸ್ ಲೂಟಿಯಮ್ (ಹಳದಿಕಾಯ) ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧ ಹೊಂದಿದೆ?
ಎ) ಯಕೃತ್ತು (ಲಿವರ್)
ಬಿ) ಮೆದುಳು
ಸಿ) ಮೂತ್ರಪಿಂಡ
ಡಿ) ಅಂಡಾಶಯ
ಸರಿಯಾದ ಉತ್ತರ: ಡಿ) ಅಂಡಾಶಯ
6. ಬೆಲ್ಲ ಮತ್ತು ಸಕ್ಕರೆಯನ್ನು ಈ ಪದಾರ್ಥಗಳ ಕಲಬೆರೆಕೆಗಾಗಿ ಬಳಸಲಾಗುತ್ತದೆ
ಎ) ಟೀಪುಡಿ
ಬಿ) ಜೇನುತುಪ್ಪ
ಸಿ) ಸಿಹಿ ತಿಂಡಿಗಳು
ಡಿ) ಹಾಲಿನ ಪುಡಿ
ಸರಿಯಾದ ಉತ್ತರ: ಬಿ) ಜೇನುತುಪ್ಪ
7. ಚರ್ಮದ ಹೊರಪದರವನ್ನು ಸ್ನಾಯುಗಳಿಗೆ ಸೇರಿಸುವ ಅಂಗಾಂಶ ಯಾವುದು?
ಎ) ಏರಿಯೋಲಾರ್ ಅಂಗಾಂಶ
ಬಿ) ಅಡಿಪೊಸ್ ಅಂಗಾಂಶ
ಸಿ) ನರ ಅಂಗಾಂಶ
ಡಿ) ಹೊರಧರ್ಮ ಅಂಗಾಂಶ
ಸರಿಯಾದ ಉತ್ತರ: ಎ) ಏರಿಯೋಲಾರ್ ಅಂಗಾಂಶ
8. ನೀರಿನಲ್ಲಿರುವ ಶಾಶ್ವತ ಗಡುಸುತನವನ್ನು ಪರಿಹರಿಸಲು ಬಳಸುವ ರಸಾಯನಿಕ ಯಾವುದು?
ಎ) ಜಿಯೋಲೈಟ್
ಬಿ) ಸಲ್ಫೈಡ್
ಸಿ) ನೈಟ್ರೇಟ್
ಡಿ) ಸುಣ್ಣದ ಕಲ್ಲು
ಸರಿಯಾದ ಉತ್ತರ: ಎ) ಜಿಯೋಲೈಟ್
9. ತಂದೆ-ತಾಯಿಗಳಿಂದ ಮಕ್ಕಳಿಗೆ ಗುಣಲಕ್ಷಣಗಳನ್ನು ವರ್ಗಾಯಿಸುವ ಅಂಶ ಯಾವುದು?
ಎ) ವರ್ಣತಂತು
ಬಿ) ವಂಶವಾಹಿಗಳು
ಸಿ) ವೀರ್ಯಾಣುಗಳು
ಡಿ) ಅಂಡಾಣುಗಳು
ಸರಿಯಾದ ಉತ್ತರ: ಬಿ) ವಂಶವಾಹಿಗಳು
10. ಪದಾರ್ಥಗಳ ಘರ್ಷಣಾಬಲ ಏರಿಕೆಯಲ್ಲಿರುವ ಪದಾರ್ಥಗಳು
ಎ) ಮರಳು, ಗಾಜು, ಮರ
ಬಿ) ಗಾಜು, ಮರ, ಮರಳು
ಸಿ) ಗಾಜು, ಮರಳು, ಮರ
ಡಿ) ಮರ, ಗಾಜು, ಮರಳು
ಸರಿಯಾದ ಉತ್ತರ: ಸಿ) ಗಾಜು, ಮರಳು, ಮರ