12 December 2021 Daily Top-10 General Knowledge Question Answers in Kannada for All Competitive Exams
01. ಒಂದು ವಸ್ತುವಿಗೆ ಯಾವುದೇ ದಿಕ್ಕಿನ ಆರಂಭಿಕ ವೆಲಾಸಿಟಿಯನ್ನು ಕೊಟ್ಟು ಅನಂತರ ಗುರುತ್ವ ಕ್ರಿಯೆಯ ಅನ್ವಯ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಿದರೆ, ಅದನ್ನು ಏನೆಂದು ಕರೆಯುತ್ತಾರೆ ?
ಎ) ರೇಂಜ್
ಬಿ) ಎತ್ತರ
ಸಿ) ಪ್ರೊಜೆಕ್ಷೆಲ್
ಡಿ) ಚಲನೆ
ಸರಿಯಾದ ಉತ್ತರ: ಸಿ) ಪ್ರೊಜೆಕ್ಷೆಲ್
2. ಒಂದು ಗೊತ್ತಾದ ವಸ್ತು ಅಥವಾ ದೃಶ್ಯದ ಸಂಪೂರ್ಣ 3ಡಿ ಛಾಯಾ ಚಿತ್ರವನ್ನು ತೆಗೆಯಲು ನೆರವಾಗುವ ತಂತ್ರ ಯಾವುದು ?
ಎ) ಹಾಲೊಗ್ರಾಫಿ
ಬಿ) ಫೋಟೋಗ್ರಾಫಿ
ಸಿ) ವಿದ್ಯುತ್ ಕಾಂತೀಯ ಪ್ರೇರಣೆ
ಡಿ) ವಿದ್ಯುತ್ ಕಾಂತೀ ರೋಹಿತ
ಸರಿಯಾದ ಉತ್ತರ: ಎ) ಹಾಲೊಗ್ರಾಫಿ
03. ಯಾವ ಹಕ್ಕಿ ಹಾರುವುದಿಲ್ಲ ?
ಎ) ಆಸ್ಟ್ರಿಚ್
ಬಿ) ಕೋಳಿಮರಿ
ಸಿ) ಪಾರಿವಾಳ
ಡಿ) ಗುಬ್ಬಚ್ಚಿ
ಸರಿಯಾದ ಉತ್ತರ: ಎ) ಆಸ್ಟ್ರಿಚ್
4. ಉಪ್ಪಿನ ರಾಸಾಯನಿಕ ಹೆಸರು.
ಎ) ಪೊಟ್ಯಾಶಿಯಂ ಕ್ಲೋರೈಡ್
ಬಿ) ಸೋಡಿಯಂ ಕ್ಲೋರೈಡ್
ಸಿ) ಕ್ಯಾಲ್ಸಿಯಂ ಕ್ಲೋರೈಡ್
ಡಿ) ಸೋಡಿಯಂ ಬೊಮೈಡ್
ಸರಿಯಾದ ಉತ್ತರ: ಬಿ) ಸೋಡಿಯಂ ಕ್ಲೋರೈಡ್
5. ಈ ಕೆಳಕಂಡ ಯಾವ ಸೋಂಕು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ ?
ಎ) ಕಾಲರಾ
ಬಿ) ಇನ್‌ಫ್ಲುಯೆನ್ಸಾ
ಸಿ) ಹೆಪಟೈಟಿಸ್
ಡಿ) ಅಮೀಬಿಯಸಿಸ್
ಸರಿಯಾದ ಉತ್ತರ: ಬಿ) ಇನ್‌ಫ್ಲುಯೆನ್ಸಾ
6. ಅಪಹರಣ ಪ್ರಕರಣದಲ್ಲಿ ಅಪಹರಿಸಲ್ಪಟ್ಟ ವ್ಯಕ್ತಿಯು ತನ್ನನ್ನು ಅಪಹರಿಸಿದವರನ್ನೇ ಭಾವನಾತ್ಮಕವಾಗಿ ಪ್ರೀತಿಸ ತೊಡಗುತ್ತಾನೆ ಮತ್ತು ಅವರನ್ನು ಬಿಟ್ಟು ಬರಲು ಒಪ್ಪುವುದಿಲ್ಲ ಇಂತಹ ವ್ಯಕ್ತಿಯನ್ನು ಸಾಮಾನ್ಯವಾಗಿ ಏನೆಂದು ಕರೆಯುತ್ತಾರೆ?
ಎ) ಸ್ಟಾಕ್ ಹೋಂ ಸಿಂಡ್ರಮ್
ಬಿ) ಕ್ರೀನ್ ಫಿಲ್ಪರ ಸಿಂಡ್ರಮ್
ಸಿ) ಪೀಟರ್ ಪ್ರಿನ್ಸಿಪಲ್
ಡಿ) ಹಾಬ್ ಸನ್ಸ್ ಚಾಯ್
ಸರಿಯಾದ ಉತ್ತರ: ಎ) ಸ್ಟಾಕ್ ಹೋಂ ಸಿಂಡ್ರಮ್
7. ಕಬ್ಬು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಎರಡು ರಾಜ್ಯಗಳೆಂದರೆ.
ಎ) ಗುಜರಾತ್ ಮತ್ತು ಹರಿಯಾಣ .
ಬಿ) ಬಿಹಾರ್ ಮತ್ತು ಪಶ್ಚಿಮ್ ಬಂಗಾಳ
ಸಿ) ಒರಿಸ್ಸಾ ಮತ್ತು ಆಂಧ್ರ ಪ್ರದೇಶ
ಡಿ) ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ
ಸರಿಯಾದ ಉತ್ತರ: ಡಿ) ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ
8. “ವೋಡಾಫೋನಿ'ನ ಬಹಳಷ್ಟು ವಾಣಿಜ್ಯ ಜಾಹಿರಾತುಗಳಲ್ಲಿ ಕಂಡುಬರುವ ನಾಯಿ ಯಾವ ತಳಿಗೆ ಸೇರಿದೆ ?
ಎ) ಡಾಲ್ಮೇಷಿಯನ್
ಬಿ) ಟೆರಿಯರ್
ಸಿ) ಪಗ್
ಡಿ) ಚಿಹುವಾಹುವಾ
ಸರಿಯಾದ ಉತ್ತರ: ಸಿ) ಪಗ್
9. ವ್ಯಕ್ತಿಯಲ್ಲಿ ಜ್ವರವನ್ನು ಇಳಿಸುವುದಕ್ಕೆ ಶಿಫಾರಸು ಮಾಡಲಾಗುವ ಔಷಧ ಗುಳಿಗೆಗಳಲ್ಲಿ ಬಳಕೆಯಾಗುವ ಮುಖ್ಯ ರಾಸಾಯನಿಕ ಘಟಕ ಯಾವುದು ?
ಎ) ಇಬುಪ್ರೊಫೇನ
ಬಿ) ಥಿಯೋಫಿಲಿನ್
ಸಿ) ಅಮಾಕ್ಸಿಸಿಲೀನ್
ಡಿ) ಪ್ಯಾರಾಸಿಟಮಾಲ್
ಸರಿಯಾದ ಉತ್ತರ: ಡಿ) ಪ್ಯಾರಾಸಿಟಮಾಲ್
10. ಕಾಫಿ ಮತ್ತು ಕೊಕೊ ಕೋಲಾಗಳಲ್ಲಿರುವ ಸಮಾನಾಂಶವೇನು ?
ಎ) ಎರಡೂ ಸಹ ಮೆದು ಪಾನೀಯಗಳು
ಬಿ) ಎರಡೂ ಸಹ ಮತ್ತು ಬರಿಸುವ ಪಾನೀಯಗಳು
ಸಿ) ಎರಡರಲ್ಲೂ ಸಕ್ಕರೆ ಇರುತ್ತದೆ
ಡಿ) ಎರಡರಲ್ಲೂ ಆಲ್ಕಲಾಯಿಡ್ ಕೆಫೀನ್ ಇರುತ್ತದೆ
ಸರಿಯಾದ ಉತ್ತರ: ಡಿ) ಎರಡರಲ್ಲೂ ಆಲ್ಕಲಾಯಿಡ್ ಕೆಫೀನ್ ಇರುತ್ತದೆ
No comments:
Post a Comment
If you have any doubts please let me know