11 December 2021 Daily Top-10 General Knowledge Question Answers in Kannada for All Competitive Exams
01. ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ಅರಸರು ಯಾರು?
ಎ) ಬ್ಯಾಕ್ಷಿಯನ್ನರು
ಬಿ) ಸ್ಟೇಕಿಯನ್ನರು
ಸಿ) ಮೌರ್ಯರು
ಡಿ) ಕುಷಾಣರು
ಸರಿಯಾದ ಉತ್ತರ: ಡಿ) ಕುಷಾಣರು
2. ಬ್ರಿಟನ್ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್ ಜನರಲ್?
ಎ) ಲಾರ್ಡ್ ರಿಪ್ಪನ್
ಬಿ) ಲಾರ್ಡ್ ಡಾಲ್‌ಹೌಸಿ
ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
ಡಿ) ಲಾರ್ಡ್ ವೆಲ್ಲೆಸ್ಲಿ
ಸರಿಯಾದ ಉತ್ತರ: ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
03. ತೋಡ ಪಂಗಡವು ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ?
ಎ) ರಾಜಸ್ತಾನ
ಬಿ) ಈಶಾನ್ಯ ಭಾರತ
ಸಿ) ವಾಯುವ್ಯ ಭಾರತ
ಡಿ) ನೀಲಗಿರಿ
ಸರಿಯಾದ ಉತ್ತರ: ಡಿ) ನೀಲಗಿರಿ
4. “ಡ್ರಿಬಲ್” “ರೋಲ್ ಇನ್” “ಸ್ಕೂಪ್" ಎಂಬ ಪದಗಳು ಯಾವ ಕ್ರೀಡೆಗೆ ಸಂಬಂಧಿಸಿವೆ?
ಎ) ಫುಟ್ಬಾಲ್
ಬಿ) ಹಾಕಿ
ಸಿ) ಬ್ಯಾಡ್ಮಿಂಟನ್
ಡಿ) ಗಾಲ್ಫ್
ಸರಿಯಾದ ಉತ್ತರ: ಬಿ) ಹಾಕಿ
5. ಕೆಳಗಿನವುಗಳಲ್ಲಿ ತಪ್ಪಾದ ಜೋಡಣೆ
ಎ) ಡಿಸೆಂಬರ 10 – ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ
ಬಿ) ಆಗಸ್ಟ್ 12 - ಅಂತರಾಷ್ಟ್ರೀಯ ಯುವ ದಿನ
ಸಿ) ಸೆಪ್ಟೆಂಬರ್ 6 - ಓಝೋನ್ ದಿನ
ಡಿ) ಏಪ್ರಿಲ್ 2 - ಪೋಲೀಸ್ ಧ್ವಜ ದಿನ
ಸರಿಯಾದ ಉತ್ತರ: ಸಿ) ಸೆಪ್ಟೆಂಬರ್ 6 - ಓಝೋನ್ ದಿನ
6. ಮಂತ್ರಿಮಂಡಲವು ಸಾಮೂಹಿಕವಾಗಿ ರಾಜ್ಯ ವಿಧಾನಸಭೆಗೆ ಹೊಣೆಯಾಗಿದ್ದರೆ ವೈಯಕ್ತಿಕವಾಗಿ ಯಾರಿಗೆ ಹೊಣೆಯಾಗಿರುತ್ತಾರೆ?
ಎ) ಮುಖ್ಯಮಂತ್ರಿ
ಬಿ) ರಾಜ್ಯಪಾಲರು
ಸಿ) ಮತದಾರರಿಗೆ
ಡಿ) ವಿಧಾನಸಭೆಗೆ
ಸರಿಯಾದ ಉತ್ತರ: ಬಿ) ರಾಜ್ಯಪಾಲರು
7. ವಿಧಾನ ಪರಿಷತ್ತಿನ ಸದಸ್ಯರ ಸಂಯೋಗದ ಕುರಿತು ತಪ್ಪಾದುದ್ದನ್ನು ಗುರ್ತಿಸಿ.
ಎ) 1/3 ರಷ್ಟು - ಸ್ಥಳೀಯ ಸಂಸ್ಥೆಗಳಿಂದ
ಬಿ) 1/3 ರಷ್ಟು — ವಿಧಾನಸಭೆ ಸದಸ್ಯರಿಂದ
ಸಿ) 1/12 ರಷ್ಟು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳೆರಡರಿಂದ ಪ್ರತ್ಯೇಕವಾಗಿ
ಡಿ) 1/2 ರಷ್ಟು – ಕಲೆ, ವಿಜ್ಞಾನ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಂದ
ಸರಿಯಾದ ಉತ್ತರ: ಡಿ) 1/2 ರಷ್ಟು – ಕಲೆ, ವಿಜ್ಞಾನ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಂದ
8. ವಿಧಾನ ಪರಿಷತ್ತೊಂದು ಸಾಮಾನ್ಯ ಮಸೂದೆಯನ್ನು ಒಟ್ಟಾಗಿ ಎಷ್ಟು ಕಾಲದವರೆಗೆ ತಡೆ ಹಿಡಿಯಬಹುದು?
ಎ) 14 ದಿನಗಳು
ಬಿ) ಒಂದು ತಿಂಗಳು
ಸಿ) 4 ತಿಂಗಳು
ಡಿ) ಆರು ತಿಂಗಳು
ಸರಿಯಾದ ಉತ್ತರ: ಸಿ) 4 ತಿಂಗಳು
9. 1938ರಲ್ಲಿ ಮೈಸೂರು ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗ ಅದರ ಮೊದಲ ಅಧ್ಯಕ್ಷರು ಯಾರಾಗಿದ್ದರು ?
ಎ) ಟಿ. ಸಿದ್ಧಲಿಂಗಯ್ಯ
ಬಿ) ಸಿದ್ಧಪ್ಪ ಕಂಬಳಿ
ಸಿ) ಹನುಮಂತರಾವ್ ದೇಶಪಾಂಡೆ
ಡಿ) ಗೋವಿಂದರಾವ್ ಯಾಳಗಿ
ಸರಿಯಾದ ಉತ್ತರ: ಎ) ಟಿ. ಸಿದ್ಧಲಿಂಗಯ್ಯ
10. ಅಧೀನ ನ್ಯಾಯಾಲಯಗಳಲ್ಲಿ ಸಿವಿಲ್ ನ್ಯಾಯಾಲಯಗಳ ಸರಿಯಾದ ಇಳಿಕೆ ಕ್ರಮ?
ಎ) ಜಿಲ್ಲಾ ಸಿವಿಲ್ ನ್ಯಾಯಾಲಯ - ಸಿವಿಲ್ ನ್ಯಾಯಾಧೀಶ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ
ಬಿ) ಮುನ್ಸಿಫ್ ನ್ಯಾಯಾಲಯ - ಜಿಲ್ಲಾ ಸಿವಿಲ್ ನ್ಯಾಯಾಲಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯ
ಸಿ) ಜಿಲ್ಲಾ ಸಿವಿಲ್ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ - ಸಿವಿಲ್ ನ್ಯಾಯಾಧೀಶ ನ್ಯಾಯಾಲಯ
ಡಿ) ಜಿಲ್ಲಾ ಸಿವಿಲ್ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ ಮಾತ್ರ
ಸರಿಯಾದ ಉತ್ತರ: ಎ) ಜಿಲ್ಲಾ ಸಿವಿಲ್ ನ್ಯಾಯಾಲಯ - ಸಿವಿಲ್ ನ್ಯಾಯಾಧೀಶ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ
No comments:
Post a Comment
If you have any doubts please let me know