03 December 2021 Daily Top-10 General Knowledge Question Answers in Kannada for All Competitive Exams
01. ಕೆಳಗಿನ ಮಾಹಿತಿಗಳನ್ನು ಗಮನಿಸಿರಿ.
ಎ) ಭಾರತದಲ್ಲಿ 1959ರಲ್ಲಿ ಮೊದಲಬಾರಿಗೆ ಪಂಚಾಯತಿ ರಾಜ್ ವ್ಯವಸ್ಥೆಯನ್ನು ರಾಜಸ್ಥಾನದ ನಾಗೂರ ಜಿಲ್ಲೆಯಲ್ಲಿ ಜಾರಿಗೊಳಿಸಲಾಯಿತು.
ಬಿ) 1992ರ 74ನೇ ತಿದ್ದುಪಡಿ ಕಾಯ್ದೆ ಸಂಸತ್ತಿನಿಂದ ಅನುಮೋದನೆಗೊಂಡು ರಾಷ್ಟ್ರಪತಿ ಒಪ್ಪಿಗೆ ಪಡೆದು ನಗರಸಭೆಗಳಿಗೆ ಸಂವಿಧಾನಿಕ ಅಸ್ತಿತ್ವ ತಂದುಕೊಟ್ಟುತು.
ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
ಎ) ಎ ಸರಿ, ಬಿ ತಪ್ಪು
ಬಿ) ಎ ತಪ್ಪು, ಬಿ ಸರಿ
ಸಿ) ಎ ಸರಿ, ಬಿ ಸರಿ
ಡಿ) ಎ ತಪ್ಪು, ಬಿ ತಪ್ಪು
ಸರಿಯಾದ ಉತ್ತರ: ಸಿ) ಎ ಸರಿ, ಬಿ ಸರಿ
2. ಬ್ಯಾಕ್ಟಿರಿಯಾದಿಂದ ಬರುವ ಕಾಯಿಲೆಗಳಿಗೆ ಸಂಬಂಧಿಸಿದಂತೆ ಪಟ್ಟಿ-1 ಹಾಗೂ ಪಟ್ಟಿ-2ನ್ನು ಸರಿಯಾಗಿ ಹೊಂದಿಸಿ ಬರೆಯಿರಿ.
ಪಟ್ಟಿ-1 ಪಟ್ಟಿ-2
(ರೋಗಕಾರಕ ಜೀವಿ) (ಕಾಯಿಲೆ)
ಎ) ಕಾಸ್ಸಿಡಿಯಂ ಟಿಟೆನಿ ಎ) ಕಾಲರಾ
ಬಿ) ಟ್ಯುಬರ್‌ಕ್ಯುಲಸ್ ಬಿ) ವಿಷಮಶೀತ
ಬೆಕಿಲಸ್ ಜ್ವರ
ಸಿ) ವೈಬ್ರಿಯೋ ಕಾಲರ್ ಸಿ) ಧನುರ್ವಾಯು
ಡಿ) ಸಾಲೊನೆಲ್ಲಾ ಟೈಫೆ ಡಿ) ಕ್ಷಯ
ಸಂಕೇತಗಳು
ಎ ಬಿ ಸಿ ಡಿ
ಎ) 3 4 1 2
ಬಿ) 2 1 4 3
ಸಿ) 4 3 1 2
ಡಿ) 1 4 2 3
ಸರಿಯಾದ ಉತ್ತರ: ಎ) 3 4 1 2
03. ಕೆಳಗಿನವುಗಳಲ್ಲಿ ತಪ್ಪಾದ ಆಯ್ಕೆ ಗುರುತಿಸಿರಿ.
ಎ) ಶಿವಕೋಟ್ಯಾಚಾರ್ಯ-ವಡ್ಡಾರಾಧನೆ
ಬಿ) ಪೊನ್ನ-ವಿಕ್ರಮಾರ್ಜುನ ವಿಜಯ
ಸಿ) ಅಸಗ-ವರ್ಧಮಾನ ಪುರಾಣ
ಡಿ) ಶ್ರೀವಿಜಯ-ಕವಿರಾಜ ಮಾರ್ಗ
ಸರಿಯಾದ ಉತ್ತರ: ಬಿ) ಪೊನ್ನ-ವಿಕ್ರಮಾರ್ಜುನ ವಿಜಯ
4. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಯಾರಾಗಿದ್ದಾರೆ?
ಎ) ಊರ್ಜಿತ್ ಪಟೇಲ್
ಬಿ) ಶಕ್ತಿಕಾಂತ್ ದಾಸ್
ಸಿ) ರಘುರಾಂ ರಾಜನ್
ಡಿ) ಡಿ ಸುಬ್ಬರಾವ್
ಸರಿಯಾದ ಉತ್ತರ: ಬಿ) ಶಕ್ತಿಕಾಂತ್ ದಾಸ್
5. ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಪ್ರಕಾರ ರಾಷ್ಟ್ರಪತಿಯವರಿಗೆ ನೆರವು ಮತ್ತು ಸಲಹೆ ನೀಡಲು ಪ್ರಧಾನಮಂತ್ರಿ ನೇತೃತ್ವದಲ್ಲಿ ಒಂದು ಮಂತ್ರಿ ಮಂಡಲ ಇರುತ್ತದೆ?
ಎ) 71(ಎ) ನೇ ವಿಧಿ
ಬಿ) 81(ಬಿ) ನೇ ವಿಧಿ
ಸಿ) 80ನೇ ವಿಧಿ
ಡಿ) 74 (ಎ) ನೇ ವಿಧಿ
ಸರಿಯಾದ ಉತ್ತರ: ಡಿ) 74 (ಎ) ನೇ ವಿಧಿ
6. ಈ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ?
ಎ) ಧಾರವಾಡದಿಂದ ಹುಬ್ಬಳ್ಳಿ ನಗರಗಳ ಮಧ್ಯದಲ್ಲಿ ಊಣಕಲ್ ಕೆರೆಯನ್ನು ಆಕರ್ಷಣೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ
ಬಿ) ಧಾರವಾಡದಿಂದ ಕೆಲವೇ ಮೈಲು ದೂರದಲ್ಲಿರುವ ಕುಂದಗೋಳವು ಹಿಂದೂಸ್ತಾನಿ ಸಂಗೀತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ
ಸಿ) ಹಿಂದೂಸ್ತಾನಿ ಸಂಗೀತದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಸವಾಯಿ ಗಂಧರ್ವ ಅವರು ಹುಟ್ಟಿದ ಊರು ಕುಂದಗೋಳ.
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
7. ಕೆಳಕಂಡವುಗಳಲ್ಲಿ ಹಾವೇರಿ ಜಿಲ್ಲೆಯ ವಿಶೇಷತೆ ಏನು
ತೋರಿಸುತ್ತದೆ?
ಎ) ಇಲ್ಲಿ ಸುಧಾರಿತ ಹೈಬ್ರಿಡ್ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ
ಬಿ) ಇಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ
ಸಿ) ಇಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುತ್ತಾರೆ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಎ) ಇಲ್ಲಿ ಸುಧಾರಿತ ಹೈಬ್ರಿಡ್ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ
8. ವಿಶ್ವವಿಖ್ಯಾತ ಗೋಳಗುಮ್ಮಟ ಈ ಕೆಳಕಂಡ ಯಾವ
ಜಿಲ್ಲೆಯಲ್ಲಿದೆ ಇದನ್ನು “ಪಿಸುಗುಟ್ಟುವ ಗುಮ್ಮಟ” ಎಂದು ಕರೆಯಲಾಗುತ್ತದೆ?
ಎ) ಕಲಬುರ್ಗಿ
ಬಿ) ವಿಜಯಪುರ
ಸಿ) ಬೀದರ್
ಡಿ) ರಾಯಚೂರು
ಸರಿಯಾದ ಉತ್ತರ: ಬಿ) ವಿಜಯಪುರ
9. ಈ ಕೆಳಕಂಡ ಯಾವ ಜಿಲ್ಲೆಯಲ್ಲಿರುವ ಗೋಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ ಇಲ್ಲಿ ಸಹಜ ಗಾತ್ರದಲ್ಲಿ ನೈಜ ರೀತಿಯಲ್ಲಿ ಪ್ರತಿಮೆಗಳನ್ನು ವಿಗ್ರಹಗಳನ್ನು ನಿರ್ಮಿಸಲಾಗಿದೆ?
ಎ) ಗದಗ
ಬಿ) ಹಾವೇರಿ
ಸಿ) ಧಾರವಾಡ
ಡಿ) ವಿಜಯಪುರ
ಸರಿಯಾದ ಉತ್ತರ: ಬಿ) ಹಾವೇರಿ
10. ಈ ಕೆಳಕಂಡವುಗಳಲ್ಲಿ ಯಾವುದು ತಪ್ಪಾಗಿದೆ?
ಎ) ಕಲಾವಿದರು, ಸಾಹಿತಿಗಳ ತವರೂರು ಹಾವೇರಿ ಎಂದು ಕರೆಯುವರು
ಬಿ) ಸರ್ವಜ್ಞ ಕವಿ, ಶಿಶುನಾಳ ಶರೀಫ್, ಕನಕದಾಸರು, ಹಾವೇರಿ ಜಿಲ್ಲೆಗೆ ಸೇರಿದವರು
ಸಿ) ಹಾವೇರಿಯಲ್ಲಿರುವ ಕನಕದಾಸರ ಸಂಸ್ಥೆಯು ಕಾಗಿನೆಲೆಯಲ್ಲಿದೆ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಡಿ) ಮೇಲಿನ ಯಾವುದೂ ಅಲ್ಲ
No comments:
Post a Comment
If you have any doubts please let me know