11-11-2021 Daily Top-10 General Knowledge Question Answers in Kannada for All Competitive Exams
01. ಕೆಳಗಿನವುಗಳಲ್ಲಿ ಯಾವುದನ್ನು 'ಸಂವಿಧಾನದ ಆತ್ಮಸಾಕ್ಷಿ' ಎಂದು ವಿವರಿಸಲಾಗಿದೆ ?
ಎ) ನಿರ್ದೇಶನ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು
ಬಿ) ಮೂಲಭೂತ ಹಕ್ಕುಗಳು & ಪ್ರಸ್ತಾವನೆ
ಸಿ) ನಿರ್ದೇಶನ ತತ್ವಗಳು & ಮೂಲಭೂತ ಹಕ್ಕುಗಳು
ಡಿ) ಮೂಲಭೂತ ಕರ್ತವ್ಯಗಳು & ಮೂಲಭೂತ ಹಕ್ಕುಗಳು
ಸರಿಯಾದ ಉತ್ತರ: ಸಿ) ನಿರ್ದೇಶನ ತತ್ವಗಳು & ಮೂಲಭೂತ ಹಕ್ಕುಗಳು
2. ನಾಲ್ಕು ಈಶಾನ್ಯ ರಾಜ್ಯಗಳಾದ ಆಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ & ಮಣಿಪುರಗಳಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಯಾರು ನಡೆಸುತ್ತಾರೆ ?
ಎ) ಡಿಲಿಮಿಟೇಶನ್ ಕಮೀಟಿ
ಬಿ) ಚುನಾವಣಾ ಆಯೋಗ
ಸಿ) ಸುಪ್ರೀಂ ಕೋರ್ಟ್
ಡಿ) ರಾಷ್ಟ್ರಪತಿ
ಸರಿಯಾದ ಉತ್ತರ: ಬಿ) ಚುನಾವಣಾ ಆಯೋಗ
03. ಕಿಹೋಟೋ ಹೊಲೊಹನ್ ಪ್ರಕರಣ (1993) ಯಾವುದಕ್ಕೆ ಸಂಬಂಧಿಸಿದೆ ?
ಎ) ರಾಜಕೀಯ ಅಪರಾಧೀಕರಣ
ಬಿ) 9ನೇ ಅನುಸೂಚಿ ಕಾನೂನುಗಳ ನ್ಯಾಯಾಂಗ ಪರಿಶೀಲನೆ
ಸಿ) ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಸಂಸದರು & ಶಾಸಕರನ್ನು ಅನರ್ಹಗೊಳಿಸುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ.
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಸಿ) ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಸಂಸದರು & ಶಾಸಕರನ್ನು ಅನರ್ಹಗೊಳಿಸುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ
4. ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಎ) ಓಪನ್ ಬ್ಯಾಲೆಟ್
ಬಿ) ಏಕಮತ ವರ್ಗಾವಣೆ
ಸಿ) ಬ್ಯಾಲೆಟ್ ಪೇಪರ್‌ನಲ್ಲಿ ನೋಟಾ (NOTA) ಇರುವುದಿಲ್ಲ
ಡಿ) ಮೇಲಿನ ಎಲ್ಲವೂ ಸರಿಯಾಗಿವೆ
5. ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕು ಅಲ್ಲ ?
ಎ) ಖಾಸಗಿತನದ ಹಕ್ಕು
ಬಿ) ಮೀಸಲಾತಿ ಹಕ್ಕು
ಸಿ) ಅಂತರ್ಜಾಲವನ್ನು ಪಡೆಯುವ ಹಕ್ಕು
ಡಿ) ತನಗೆ ಇಷ್ಟವಾದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು
ಸರಿಯಾದ ಉತ್ತರ: ಬಿ) ಮೀಸಲಾತಿ ಹಕ್ಕು
6. ಕೆಳಗಿನವುಗಳಲ್ಲಿ ಯಾವುದು ಮಾನವ ದೇಹದ ಉಷ್ಣತಾ ಸ್ಥಾಪಿ ಹೊಂದಿರುತ್ತದೆ ?
ಎ) ಪಿನಿಯಲ್
ಬಿ) ಪಿಟ್ಯೂಟರಿ
ಸಿ) ಥೈರಾಯ್
ಡಿ) ಹೈಪೋಥಲಾಮಸ್
ಸರಿಯಾದ ಉತ್ತರ: ಡಿ) ಹೈಪೋಥಲಾಮಸ್
7. ಸಸ್ಯವೊಂದರ ಈ ಅಂಗ ವಿನ್ಯಾಸಗಳಲ್ಲಿ ಯಾವುದು ವಿಸರ್ಜನೆಗೆ ಕಾರಣವಾಗಿರುತ್ತದೆ ?
ಎ) ಝೈಲಮ್
ಬಿ) ಬೇರು
ಸಿ) ಸ್ತೊಮ್ಯಾಟ
ಡಿ) ತೊಗಟೆ
ಸರಿಯಾದ ಉತ್ತರ: ಸಿ) ಸ್ತೊಮ್ಯಾಟ
8. ಕೆಳಗಿನ ಯಾವ ರೋಗಗಳು ಬ್ಯಾಕ್ಟಿರಿಯಾಗಳಿಂದ ಉಂಟಾಗುವುದಿಲ್ಲ ?
ಎ) ಕಾಲರಾ
ಬಿ) ಡಿಫೀರಿಯಾ
ಸಿ) ಡೆಂಗ್ಯೂ
ಡಿ) ಟೈಫಾರ್
ಸರಿಯಾದ ಉತ್ತರ: ಸಿ) ಡೆಂಗ್ಯೂ
9. ಸಮುದ್ರದಲ್ಲಿ ಮುಳುಗುವ ವಸ್ತುಗಳನ್ನು ಕಂಡು ಹಿಡಿಯುವ ಸಾಧನ ?
ಎ) ರೆಡಾರ್
ಬಿ) ಸೋನಾರ್
ಸಿ) ಲೇಸರ್
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಬಿ) ಸೋನಾರ್
10. ರೋಗಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
ಎ) ಪೆಥಾಲಾಜಿ
ಬಿ) ನೆಫ್ರಾಲಾಜಿ
ಸಿ) ನ್ಯೂರಾಲಾಜಿ
ಡಿ) ಆ್ಯಂಜಿಯಾಲಾಜಿ
ಸರಿಯಾದ ಉತ್ತರ: ಎ) ಪೆಥಾಲಾಜಿ
No comments:
Post a Comment
If you have any doubts please let me know