ಸರಿಯಾದ ಉತ್ತರ: ಬಿ) ಲೋಥಾಲ್
ವಿವರಣೆ:
⏭ ಲೋಥಾಲ್ ಗುಜರಾತ್‌ನ ಅಹ್ಮದಾಬಾದ್‌ನ ನೈರುತ್ಯಕ್ಕೆ 80 ಕಿ.ಮೀ ದೂರದಲ್ಲಿ 'ಬೋಗಾವೋ ನದಿ' ಹತ್ತಿರ ಇದೆ.
⏭ ಎಸ್.ಆರ್.ರಾವ್‌ರವರು 1959 ರಿಂದ 1962 ರವರೆಗೂ ಇಲ್ಲಿ ಸಂಶೋಧನೆ ಕೈಗೊಂಡಿದ್ದರು.
⏭ ಇದೊಂದು ಹೆಸರಾಂತ 'ಬಂದರು' ಆಗಿತ್ತು.
⏭ ಇದು ಗುಜರಾತಿನ ಕ್ಯಾಂಬೆ ತೀರದಲ್ಲಿದೆ. ಇಲ್ಲಿ ಅಗ್ನಿಕುಂಡಗಳು, ಸ್ತ್ರೀ ಪುರುಷರ ಜೋಡಿ ಸಮಾಧಿಗಳು ದೊರಕಿವೆ.
⏭ ಗುಜರಾತಿ ಭಾಷೆಯಲ್ಲಿ ಲೋಥಾಲ್ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ ಎಂದರ್ಥ.
⏭ ಸಿಂಧಿ ಭಾಷೆಯಲ್ಲಿ ಮೊಹೆಂಜೋದಾರೋ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ.
⏭ ಇಲ್ಲಿ ಜಾಣ ನರಿಯ ಚಿತ್ರ ಕಂಡುಬಂದಿದೆ
⏭ ಇಲ್ಲಿ ಜೋಡಿ ಶವದ ಪೆಟ್ಟಿಗೆ ಕಂಡುಬಂದಿದೆ
ಸರಿಯಾದ ಉತ್ತರ: ಡಿ) ಮೌರ್ಯರು
ವಿವರಣೆ : ಮೌರ್ಯರ ಕಾಲದಲ್ಲಿ ಧರ್ಮಸ್ಥಾನೀಯ ಮತ್ತು ಕಂಠಸ್ಥಾನೀಯ ಎಂಬ ಎರಡು ಬಗೆಯ ನ್ಯಾಯಾಲಯಗಳು ಇದ್ದವು. ಧರ್ಮಸ್ಥಾನೀಯ ನ್ಯಾಯಲಯಗಳು ಸಿವಿಲ್ ನ್ಯಾಯಾಲಯಗಳಾಗಿದ್ದವು ಹಾಗೂ ಕಂಠಸ್ಥಾನೀಯ ನ್ಯಾಯಲಯಗಳು ಕ್ರಿಮಿನಲ್ ನ್ಯಾಯಾಲಯಗಳಾಗಿದ್ದವು.
ಸರಿಯಾದ ಉತ್ತರ: ಎ) ಹೊಯ್ಸಳರು, ಕಾಕತೀಯರು, ಸೇವುಣರು
ವಿವರಣೆ: ಕಲ್ಯಾಣಿ ಚಾಲುಕ್ಯರು ಕ್ರಿ. ಶ. 973 ರಿಂದ 1189 ರ ಕಾಲಾವಧಿಯಲ್ಲಿ ಅಧಿಕಾರದಲ್ಲಿದ್ದು, 2 ನೇ ತೈಲಪ (ತ್ರೈಲೋಕಮಲ್ಲ) ಈ ಅರಸು ಮನೆತನದ ಸ್ಥಾಪಕ. ಇವನು ಬದಾಮಿ ಚಾಲುಕ್ಯರ 4 ನೇ ವಿಕ್ರಮಾದಿತ್ಯನ ಮಗ. ಇವರ ರಾಜ ಲಾಂಛನ ಬಲ ಮುಖ ವರಾಹ. ಇವರು ಮಾನ್ಯಖೇಟ ಮತ್ತು ಕಲ್ಯಾಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. 1 ನೇ ಸೋಮೇಶ್ವರ & 6 ನೇ ವಿಕ್ರಮಾದಿತ್ಯ ಈ ಮನೆತನದ ಪ್ರಸಿದ್ಧ ಅರಸ. 4 ನೇ ಸೋಮೇಶ್ವರ ಈ ಮನೆತನದ ಕೊನೆಯ ಅರಸ. ಕಲ್ಯಾಣ ಚಾಣುಕ್ಯರ ಅರಸ ಸತ್ಯಾಶ್ರಯ ಇರಿವಬೆಡಂಗ (ಅಕಲಂಕ ಚರಿತ) ನ ಆಶ್ರಯದಲ್ಲಿ ಕನ್ನಡದ ಪ್ರಸಿದ್ಧ ಕವಿ ರನ್ನ ಇದ್ದನು. ರನ್ನ ಗದಾಯುದ್ಧ (ಸಾಹಸಭೀಮ ವಿಜಯ), ಅಜಿತನಾಥ ಪುರಾಣ, ಪರಶುರಾಮ ಚರಿತೆ, ರನ್ನಕಂದ ಕೃತಿಗಳನ್ನು ರಚಿಸಿದ್ದನು.
ಸರಿಯಾದ ಉತ್ತರ: ಸಿ) ಜುನಾಗಡ ಶಾಸನ
ವಿವರಣೆ: ಚಂದ್ರಗುಪ್ತ ಮೌರ್ಯ ಹಾಗೂ ಅಶೋಕ ಇವರಿಬ್ಬರ ಹೆಸರುಗಳನ್ನು ಜುನಾಗಢ ಶಾಸನದಲ್ಲಿ ಪ್ರಸ್ತಾಪಿಸಲಾಗಿದೆ ಜುನಾಗಢ ಶಾಸನವನ್ನು ರುದ್ರದಾಮನ್ ರಚಿಸಿದನು.
ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹ ಎಂದು ಕರೆಯಲಾಗುತ್ತದೆ.
ಅಶೋಕನ ಶಾಸನವನ್ನು ಮೊಟ್ಟ ಮೊದಲ ಬಾರಿಗೆ ಅಧ್ಯಯನ ಮಾಡಿದವರು ಜೇಮ್ಸ್ ಪ್ರಿನ್ಸೆಪ್. (1837 ರಲ್ಲಿ ದೆಹಲಿಯ ತೋಂಪ್ರಾ ಶಾಸನವನ್ನು ಮೊದಲಿಗೆ ಓದಿದರು)
ಅಶೋಕನ ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ 13ನೇ ಬಂಡೆಗಲ್ಲು ಶಾಸನ.
ಕರ್ನಾಟಕದ ರಾಯಚೂರಿನ ಮಸ್ಕಿಯಲ್ಲಿ ದೊರೆತಿರುವ ಮಸ್ಕಿ ಶಾಸನದಲ್ಲಿ ಅಶೋಕನ ಹೆಸರಿದೆ, ಇದೇ ಶಾಸನದಲ್ಲಿ ಅಶೋಕನನ್ನು ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು ಬಣ್ಣಿಸಲಾಗಿದೆ.
ಮಸ್ಕಿ ಶಾಸನವನ್ನು ಸಂಶೋಧಿಸಿದವರು ಸಿ. ಬ್ರಿಡೆನ್.
ಕರ್ನಾಟಕದ ಮೊದಲ ಶಾಸನ ವಾದ ಬ್ರಹ್ಮಗಿರಿ ಶಾಸನ (ಚಿತ್ರದುರ್ಗ ಜಿಲ್ಲೆ) ವು ಅಶೋಕನ ಎಲ್ಲಾ ಶಾಸನಗಳನ್ನು ಕೆತ್ತಿದ ವ್ಯಕ್ತಿ ಚಪಡ ಎಂದು ತಿಳಿಸುತ್ತದೆ.
ಸರಿಯಾದ ಉತ್ತರ: ಡಿ) 2ನೇ ಪುಲಕೇಶಿ
ವಿವರಣೆ: ಇಮ್ಮಡಿ ಪುಲಕೇಶಿ ಅಥವಾ 2 ನೇ ಪುಲಕೇಶಿ ಬಾದಾಮಿ ಚಾಲುಕ್ಯರ ಪ್ರಮುಖ ಅರಸ. ಈತನ ಮೂಲ ಹೆಸರು ಎರೆಯು. ದಕ್ಷಿಣಾಪಥೇಶ್ವರ ಎಂದೇ ಪ್ರಖ್ಯಾತನಾಗಿದ್ದ ಇಮ್ಮಡಿ ಪುಲಕೇಶಿಯು 634 ರಲ್ಲಿ ಉತ್ತರಾಪಥೇಶ್ವರ ಎಂದು ಪ್ರಖ್ಯಾತನಾಗಿದ್ದ ವರ್ಧನರ ಅರಸ ಹರ್ಷವರ್ಧನನ್ನು ನರ್ಮದಾ ನದಿ ಕಾಳಗದಲ್ಲಿ ಸೋಲಿಸಿ, ಪರಮೇಶ್ವರ ಎಂಬ ಬಿರುದು ಪಡೆದನು. ನರ್ಮದಾ ನದಿ ಕಾಳಗದಲ್ಲಿ ಇಮ್ಮಡಿ ಪುಲಕೇಶಿ ವಿಜಯ ಸಾಧಿಸಿದನು ಎಂದು ತಿಳಿಸುವ ಶಾಸನ ಐಹೊಳೆ ಶಾಸನ. ಐಹೊಳೆ ಶಾಸನವನ್ನು ರವಿಕೀರ್ತಿ ಹೊರಡಿಸಿದನು. ಐಹೊಳೆ ಶಾಸನವು ಮೇಗುತಿ ದೇವಾಲಯದ ಪೂರ್ವ ದಿಕ್ಕಿನಲ್ಲಿದೆ 16 ಸಾಲುಗಳ ಈ ಶಾಸನದಲ್ಲಿ ಕಾಳಿದಾಸನ ಹೆಸರಿನ ಉಲ್ಲೇಖವಿದೆ. 641 ನಲ್ಲಿ ಈತನ ಆಸ್ಥಾನಕ್ಕೆ ಚೀನಾದ ಯಾತ್ರಿಕ ಹ್ಯೂಯನ್ ತ್ಸಾಂಗ್ ಭೇಟಿ ನೀಡಿದ್ದನು.
ಸರಿಯಾದ ಉತ್ತರ: ಎ) ಜಾನ್ ಕೆಪ್ಲರ್
ಸರಿಯಾದ ಉತ್ತರ: ಸಿ) 1 & 2 ಸರಿಯಾಗಿವೆ
ಸರಿಯಾದ ಉತ್ತರ: ಎ) 2 1 4 3
ಸರಿಯಾದ ಉತ್ತರ: ಡಿ) 1 ಮತ್ತು 2 ಸರಿ
ಸರಿಯಾದ ಉತ್ತರ: ಸಿ) ಆಮ್ಲಜನಕ, ಸಿಲಿಕಾನ್, ಅಲ್ಯೂಮಿನಿಯಂ & ಕಬ್ಬಿಣ
No comments:
Post a Comment
If you have any doubts please let me know