04-11-2021 Daily Top-10 General Knowledge Question Answers in Kannada for All Competitive Exams
01. ಕೆಳಗಿನ ಯಾವ ಸನ್ನಿವೇಶಗಳಲ್ಲಿ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು?
ಎ) ರಾಜ್ಯ ಸರ್ಕಾರಗಳು ಚುನಾವಣಾ
ಸಮಯದಲ್ಲಿ ನೀಡಿದ ಆಶ್ವಾಸನೆಗಳನ್ನು ನಡೆಸುವಲ್ಲಿ ವಿಫಲರಾದಾಗ
ಬಿ) ರಾಜ್ಯ ಸರ್ಕಾರಗಳು ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸದಿದ್ದಾಗ
ಸಿ) ರಾಜ್ಯ ಸರ್ಕಾರಗಳು ಕೇಂದ್ರದ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದಾಗ
ಡಿ) ರಾಜ್ಯ ಸರ್ಕಾರಗಳು ನೈಸರ್ಗಿಕ ವಿಕೋಪಗಳ ಪರಿಸ್ಥಿತಿಗಳಲ್ಲಿ ತಮ್ಮ ಸಹಾಯ ಹಸ್ತವನ್ನು ನೀಡುವಲ್ಲಿ ವಿಫಲವಾದಾಗ
ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ
ಎ) B & C
ಬಿ) A & B
ಸಿ) C & D
ಡಿ) ಇವುಗಳಲ್ಲಿ ಎಲ್ಲವೂ
ಸರಿಯಾದ ಉತ್ತರ : ಎ) B & C
2. ಕರ್ನಾಟಕದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೋಡಲ್ (ಸಂಧಿ) ಸಂಸ್ಥೆ ಯಾವುದು?
ಎ) ಮಹಾತ್ಮಾ ಗಾಂಧಿ ಗ್ರಾಮೀಣ ವಸತಿ ನಿಗಮ
ಬಿ) ಇಂದಿರಾ ಗಾಂಧಿ ಗ್ರಾಮೀಣ ವಸತಿ ನಿಗಮ
ಸಿ) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
ಡಿ) ಕರ್ನಾಟಕ ಗೃಹ (ವಸತಿ) ಮಂಡಳಿ
ಸರಿಯಾದ ಉತ್ತರ: ಸಿ) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
03. 2014-15ನೇ ಸಾಲಿನಲ್ಲಿ ಕರ್ನಾಟಕದ ಬೆಳೆ (Cropping) ಬಿತ್ತನೆ ತೀವ್ರತೆಯು,
ಎ) ಶೇ. 90
ಬಿ) ಶೇ. 100
ಸಿ) ಶೇ. 110
ಡಿ) ಶೇ. 120
ಸರಿಯಾದ ಉತ್ತರ: ಡಿ) ಶೇ. 120
4. ನಿರ್ಮಲ್ ಗ್ರಾಮ ಪುರಸ್ಕಾರ್ ಇದಕ್ಕೆ ಸಂಬಂಧಿಸಿದೆ
ಎ) ಗ್ರಾಮೀಣ ಕುಡಿಯುವ ನೀರು
ಬಿ) ಒಟ್ಟಾರೆ ನೈರ್ಮಲ್ಯ ಚಳುವಳಿ
ಸಿ) ಜಲ ಸಂರಕ್ಷಣೆ
ಡಿ) ಸಾಮಾಜಿಕ ಅರಣ್ಯ
ಸರಿಯಾದ ಉತ್ತರ: ಬಿ) ಒಟ್ಟಾರೆ ನೈರ್ಮಲ್ಯ ಚಳುವಳಿ
5. 14ನೇ ಹಣಕಾಸು ಆಯೋಗವು ಕೇಂದ್ರದ ನಿವ್ವಳ ತೆರಿಗೆ ಹುಟ್ಟುವಳಿಯಲ್ಲಿ ರಾಜ್ಯದ ಪಾಲನ್ನು ಈ ರೀತಿ ಹೆಚ್ಚಿಸಲು ಶಿಫಾರಸ್ಸು ಮಾಡಿದೆ.
ಎ) ಶೇ. 32 ರಿಂದ ಶೇ 42
ಬಿ) ಶೇ. 32 ರಿಂದ ಶೇ 34
ಸಿ) ಶೇ. 34 ರಿಂದ ಶೇ. 42
ಡಿ) ಶೇ. 28 ರಿಂದ ಶೇ. 36
ಸರಿಯಾದ ಉತ್ತರ: ಎ) ಶೇ. 32 ರಿಂದ ಶೇ 42
6. ಈ ಕೆಳಗಿನವುಗಳಲ್ಲಿ ಯಾವುದು ಯುರೋಪನ್ನು ಏಷ್ಯಾದಿಂದ ಬೇರ್ಪಡಿಸುತ್ತದೆ?
ಎ) ಕ್ಯಾಸ್ಪಿಯನ್ ಸಮುದ್ರ ಮತ್ತು ಉರಲ್ ಮೌಂಟೇನ್
ಬಿ) ಕ್ಯಾಸ್ಪಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರ
ಸಿ) ಕ್ಯಾಸ್ಪಿಯನ್ ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ
ಡಿ) ಅಟ್ಲಾಂಟಿಕ್ ಸಾಗರ ಮತ್ತು ಮೆಡಿಟರೇನಿಯನ್ ಸಮುದ್ರ
ಸರಿಯಾದ ಉತ್ತರ: ಎ) ಕ್ಯಾಸ್ಪಿಯನ್ ಸಮುದ್ರ ಮತ್ತು ಉರಲ್ ಮೌಂಟೇನ್
7. ಈ ಕೆಳಗಿನವರಲ್ಲಿ ಯಾರನ್ನು 'ಐದು ಇಂಡೀಸ್ಗಳ ಅಧಿಪತಿ' ಎಂದು ಕರೆಯಲಾಗುತ್ತದೆ?
ಎ) ಹರ್ಷವರ್ಧನ
ಬಿ) 2ನೇ ಚಂದ್ರಗುಪ್ತ
ಸಿ) ಅಶೋಕ
ಡಿ) ಸಮುದ್ರಗುಪ್ತ
ಸರಿಯಾದ ಉತ್ತರ: ಎ) ಹರ್ಷವರ್ಧನ
8. ಅಲ್ಫ್ಸ್ ಪರ್ವತ ಶ್ರೇಣಿಯು ಯಾವ ಖಂಡದಲ್ಲಿದೆ?
ಎ) ಯುರೋಪ್
ಬಿ) ಉತ್ತರ ಅಮೆರಿಕ
ಸಿ) ದಕ್ಷಿಣ ಅಮೆರಿಕ
ಡಿ) ಆಫ್ರಿಕಾ
ಸರಿಯಾದ ಉತ್ತರ: ಎ) ಯುರೋಪ್
9. ಈ ಕೆಳಗಿನವರಲ್ಲಿ ಯಾರು ಕರಡು ಸಮಿತಿಯ ಸದಸ್ಯರಾಗಿರಲಿಲ್ಲ?
1) ಕೆ.ಎಂ. ಮುನ್ಷಿ
2) ಎನ್. ಮಾಧವರಾವ್
3) ಪಿ. ಪಟ್ಟಾಬಿ ಸೀತಾರಾಮಯ್ಯ
4) ಎನ್. ಗೋಪಾಲಸ್ವಾಮಿ ಅಯ್ಯಂಗಾರ್
ಎ) 1 ಮತ್ತು 4 ಮಾತ್ರ
ಬಿ) 2 ಮತ್ತು 3 ಮಾತ್ರ
ಸಿ) 3 ಮಾತ್ರ
ಡಿ) 4 ಮಾತ್ರ
ಸರಿಯಾದ ಉತ್ತರ: ಡಿ) 4 ಮಾತ್ರ
10. ಯಾವ ವಿಟಾಮಿನ ಕೊರತೆಯ ಕಾರಣದಿಂದ ವಿನಾಶಕಾರಿ ರಕ್ತಹೀನತೆ ರೋಗವು ಬರುತ್ತದೆ?
ಎ) ವಿಟಾಮಿನ್ - B5
ಬಿ) ವಿಟಾಮಿನ್ - B12
ಸಿ) ವಿಟಾಮಿನ್ - B6
ಡಿ) ವಿಟಾಮಿನ್ - C
ಸರಿಯಾದ ಉತ್ತರ: ಬಿ) ವಿಟಾಮಿನ್ - B12
No comments:
Post a Comment
If you have any doubts please let me know