02-11-2021 Daily Top-10 General Knowledge Question Answers in Kannada for All Competitive Exams
01. ಜೋಗ ಜಲಪಾತವು ಯಾವ ನದಿಯಿಂದ ಉಂಟಾಗಿದೆ?
ಎ) ಘಟಪ್ರಭ
ಬಿ) ಭೀಮ
ಸಿ) ಕಾವೇರಿ
ಡಿ) ಶರಾವತಿ
ಸರಿಯಾದ ಉತ್ತರ: ಡಿ) ಶರಾವತಿ
2. ಭಾರತದಲ್ಲಿ NGO ಗಳು ಸ್ವೀಕರಿಸಿದ ವಿದೇಶಿ ಅನುದಾನವನ್ನು ಯಾರಿಂದ ನಿಯಂತ್ರಿಸಲಾಗುತ್ತದೆ?
ಎ)ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ
ಬಿ) ವಿದೇಶಿ ವಿನಿಮಯ ಕೊಡುಗೆ ಕಾಯಿದೆ
ಸಿ) ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ
ಡಿ)ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ
ಸರಿಯಾದ ಉತ್ತರ: ಸಿ) ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ
03. ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯದ ಪ್ರತಿನಿಧಿಗಳಿದ್ದರು. ಹಾಗಾದರೆ ಗೋರ್ಖ ಸಮುದಾಯವನ್ನು ಪ್ರತಿನಿಧಿಸಿದ್ದವರು
ಎ) ಜಾನ್ ಮಥಾಯ್
ಬಿ) ಸೋಮನಾಥ ಲಹರಿ
ಸಿ) ಬಲದೇವ್ ಸಿಂಗ್
ಡಿ) ಹರಿಬಹದ್ದೂರ್ ಬುರಾ
ಸರಿಯಾದ ಉತ್ತರ: ಡಿ)ಹರಿಬಹದ್ದೂರ್ ಬುರಾ
4. ಭಾರತ ಸಂವಿಧಾನದ 315ನೇ ವಿಧಿಯು
ಎ)ಕೇಂದ್ರ ಚುನಾವಣಾ ಆಯೋಗವನ್ನು ಸ್ಥಾಪಿಸಲು ಅವಕಾಶ ನೀಡಿದೆ.
ಬಿ) ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗವನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿದೆ
ಸಿ) ಹಣಕಾಸು ಆಯೋಗದ ರಚನೆಗೆ ಅವಕಾಶ ಕಲ್ಪಿಸಿದೆ
ಡಿ)ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ರಚನೆಗೆ ಅವಕಾಶ ಕಲ್ಪಿಸಿದೆ
ಸರಿಯಾದ ಉತ್ತರ: ಬಿ) ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗವನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿದೆ
5. ಆಗಸ್ಟ್ 2021 ರಲ್ಲಿ ಯುಎಸ್ ರಾಜ್ಯದ ಲೂಸಿಯಾನವನ್ನು ಅಪ್ಪಳಿಸಿದ ಚಂಡಮಾರುತದ ಹೆಸರೇನು?
ಎ) ಇಡಾ ಚಂಡಮಾರುತ
ಬಿ) ಲೋಂಬಾ ಚಂಡಮಾರುತ
ಸಿ) ರೀಟಾ ಚಂಡಮಾರುತ
ಡಿ) ಕ್ರಿಸ್ಟಿನಾ ಚಂಡಮಾರುತ
ಸರಿಯಾದ ಉತ್ತರ: ಎ) ಇಡಾ ಚಂಡಮಾರುತ
6. ಆಗಸ್ಟ್ 31, 2021 ರಂದು ಸುಪ್ರೀಂಕೋರ್ಟ್‌ನ ಹೊಸ ನ್ಯಾಯಾಧೀಶರಿಗೆ ಸಂವಿಧಾನದ ವಿಧೇಯತೆಯ ಪ್ರತಿಜ್ಞೆಯನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ?
1) ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ ಒಂಬತ್ತು ನ್ಯಾಯಾಧೀಶರು ಒಂದೇ ಬಾರಿಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣವಚನ ಸ್ವೀಕರಿಸಿದ್ದು ಇದೇ ಮೊದಲು.
2) 9 ನ್ಯಾಯಾಧೀಶರ ಸೇರ್ಪಡೆಯೊಂದಿಗೆ, ಸುಪ್ರೀಂ ಕೋರ್ಟ್ ನ ಒಟ್ಟು ಬಲವು ಸಿಜೆಐ ಸೇರಿದಂತೆ 33 ಕ್ಕೆ ಹೆಚ್ಚಾಯಿತು.
3) ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ರವರು ಹೊಸ ನ್ಯಾಯಾಧೀಶರಿಗೆ ಸಂವಿಧಾನದ ವಿಧೇಯತೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಎ) 1 ಮತ್ತು 3
ಬಿ) 1 ಮತ್ತು 2
ಸಿ) 2 ಮಾತ್ರ
ಡಿ) 1, 2 ಮತ್ತು 3
ಸರಿಯಾದ ಉತ್ತರ: ಬಿ) 1 ಮತ್ತು 2
7. ವಿಶ್ವದ ಅತೀ ಎತ್ತರದವಾದ ಚಿತ್ರಮಂದಿರವನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು?
ಎ) ಹಿಮಾಚಲ ಪ್ರದೇಶ
ಬಿ) ಅರುಣಾಚಲ ಪ್ರದೇಶ
ಸಿ) ಉತ್ತರಖಂಡ
ಡಿ) ಲಡಾಖ್
ಸರಿಯಾದ ಉತ್ತರ: ಡಿ) ಲಡಾಖ್
8. ಲಕ್ಷಾಂತರ ಜೀವಗಳನ್ನು ಉಳಿಸಿದ ಲಸಿಕೆಗಳನ್ನು ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ ಫಿರ್ದೌಸಿ ಖಾದ್ರಿ, 2021 ರ ರಾಮನ್ ಮ್ಯಾಗ್ನೆಸೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಹಾಗಾದರೆ ಅವರು ಯಾವ ದೇಶಕ್ಕೆ ಸೇರಿದವರು?
ಎ) ಅಫ್ಘಾನಿಸ್ತಾನ
ಬಿ) ಯುಎಇ
ಸಿ) ಬಾಂಗ್ಲಾದೇಶ
ಡಿ) ಪಾಕಿಸ್ತಾನ
ಸರಿಯಾದ ಉತ್ತರ: ಸಿ) ಬಾಂಗ್ಲಾದೇಶ
9. ಕಮಾನ್ ಅಮನ್ ಸೇತು ಕೆಲವೊಮ್ಮೆ ಸುದ್ದಿಯಲ್ಲಿ ಕಂಡು ಬಂದಿದೆ. ಈ ಕೆಳಗಿನ ಯಾವ ಹೇಳಿಕೆಯು ಅದರ ಕುರಿತು ಸರಿಯಾಗಿ ವಿವರಿಸುತ್ತದೆ?
ಎ)ಇದು ಈಶಾನ್ಯ ರಾಜ್ಯಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಸ್ನೇಹ ಸೇತುವೆಯಾಗಿದೆ
ಬಿ) ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ನೇಹ ಸೇತುವೆಯಾಗಿದೆ.
ಸಿ) ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಜನರ ಸಂಪರ್ಕವನ್ನು ಹೆಚ್ಚಿಸುವ ಒಂದು ಹೊಸ ಉಪಕ್ರಮವಾಗಿದೆ.
ಡಿ) ಇದು ಮಾನವ ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಪಶ್ಚಿಮ ಘಟ್ಟದಲ್ಲಿ ನಿರ್ಮಿಸಲಾದ ಹೊಸ ಪರಿಸರ ಸೇತುವೆಯಾಗಿದೆ.
ಸರಿಯಾದ ಉತ್ತರ: ಬಿ) ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ನೇಹ ಸೇತುವೆಯಾಗಿದೆ.
10. ಅರ್ಥಶಾಸ್ತ್ರದ ಅಭಿವೃದ್ಧಿಯ ವ್ಯಾಖ್ಯೆಯನ್ನು ನೀಡಿದವರು ಯಾರು?
ಎ) ಸ್ಯಾಮ್ಯುಯೆಲ್ಸನ್
ಬಿ) ರಾಬಿನ್ಸನ್
ಸಿ) ರೊಸೆಸ್ಪಾನ್ ರೊಡೇನ್
ಡಿ) ಅಮರ್ತ್ಯಸೇನ್
ಸರಿಯಾದ ಉತ್ತರ: ಎ) ಸ್ಯಾಮ್ಯುಯೆಲ್ಸನ್
No comments:
Post a Comment
If you have any doubts please let me know