Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 11 October 2021

Karnataka Guest Teachers Recruitment 2021 Total 3253 Posts

Karnataka Guest Teachers Recruitment 2021 Total 3253 Posts 

3253 ಅತಿಥಿ ಶಿಕ್ಷಕರ ನೇಮಕ

Karnataka Guest Teachers Recruitment 2021 Total 3253 Posts  www.edutubekannada.com



ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಕೊನೆಗೂ ಅನುಮೋದನೆ ನೀಡಿದೆ. ಕೋವಿಡ್ ಸೋಂಕು ಕಡಿಮೆಯಾದಂತೆ ಮೊದಲಿಗೆ ಪಿಯು ಹಾಗೂ ಪ್ರೌಢಶಾಲೆಗಳನ್ನು ತೆರೆಯಲಾಗಿತ್ತು. ಜತೆಗೆ ಮಕ್ಕಳು ಪೂರ್ಣ ಪ್ರಮಾಣದಲ್ಲಿ ತರಗತಿಗಳಿಗೆ ಹಾಜರಾಗುತ್ತಿರುವುದರಿಂದ ಶಿಕ್ಷಕರ ಅಗತ್ಯ ಹೆಚ್ಚಾಗಿತ್ತು. ಇದೀಗ ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದು ಕೊಂಚ ನಿರಾಳರಾಗುವಂತೆ ಮಾಡಿದೆ. ಪ್ರಸಕ್ತ ನೇಮಕಾತಿ ಅವಧಿಯನ್ನು ಅಕ್ಟೋಬರ್ 21 ರಿಂದ ಮುಂದಿನ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಅಥವಾ ಏಪ್ರಿಲ್ 22 ರವರೆಗೆ ಎಂದು ತಿಳಿಸಲಾಗಿದೆ.


ಮುಖ್ಯ ಶಿಕ್ಷಕರಿಗೆ ಹೊಣೆಗಾರಿಕೆ


ಆಯಾ ಶಾಲೆಗಳಲ್ಲಿ ಲಭ್ಯವಿರುವ ಅಥವಾ ಅನುಮೋದನೆ ನೀಡಲಾಗಿರುವ ಅತಿಥಿ ಶಿಕ್ಷಕರ ನೇಮಕಾತಿ ಹೊಣೆಯನ್ನು ಪ್ರೌಢಶಾಲೆ ಮುಖ್ಯಸ್ಥರಿಗೆ ವಹಿಸಲಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಅದರಲ್ಲೂ ವಿಷಯ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳುವಂತೆ ಸ್ಪಷ್ಟಪಡಿಸಲಾಗಿದೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವೃತ್ತಿ ಶಿಕ್ಷಕರನ್ನು ಇದರಿಂದ ಹೊರತುಪಡಿಸಲಾಗಿದೆ. 


ಅತಿಥಿ ಶಿಕ್ಷಕರ ನೇಮಕಾತಿಯನ್ನು ಆರ್ಥಿಕವಾಗಿ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಬಳಸಿಕೊಳ್ಳಲು ಸೂಚಿಸಲಾಗಿದೆ. ವರ್ಗಾವಣೆ/ ನೇಮಕಾತಿ ಮೂಲಕ ಈ ಹುದ್ದೆಗಳು ಭರ್ತಿಯಾದರೆ ಈ ನೇಮಕಾತಿ ರದ್ದಾಗಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.


5078 ಶಿಕ್ಷಕರಿಗೆ ಬೇಡಿಕೆ


ಸಾರ್ವಜನಿಕ ಶಿಕ್ಷಣ ಇಲಾಖೆಯು ಒಟ್ಟು 5078 ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಆರ್ಥಿಕ ಇಲಾಖೆಯು ಒಟ್ಟು 3253 ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದೆ. ಅದರಂತೆ ಬೇಡಿಕೆಯ ಶೇ. 64 ಹುದ್ದೆಗಳು ದೊರೆತಂತಾಗಿದೆ. ಹೀಗಾಗಿ ತಾಲೂಕುವಾರು ಬೇಡಿಕೆಯ ಶೇ.64 ಹುದ್ದೆಗಳನ್ನು ಮಂಜೂರು ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ, ಹೆಚ್ಚುವರಿ 1825 ಹುದ್ದೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.


ಸಂಭಾವನೆ ಕಡಿತ


ಈ ಬಾರಿ ಅತಿಥಿ ಶಿಕ್ಷಕರಿಗೆ ಸರ್ಕಾರ ಮಾಸಿಕ 8 ಸಾವಿರ ರೂ. ಗೌರವ ಸಂಭಾವನೆಯನ್ನು ನಿಗದಿ ಮಾಡಿದೆ. ಕಳೆದ ಬಾರಿ 10 ಸಾವಿರ ರೂ. ನೀಡಲಾಗುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಡಿತ ಮಾಡಲಾಗಿದೆ.


5000 ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ


ಹೌದು, ಕಳೆದು ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ಶಿಕ್ಷಕರ ನೇಮಕಾತಿ ಇನ್ನೇನು ಆರಂಭವಾಗಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. 5000 ಶಿಕ್ಷಕರ ನೇಮಕಾತಿ ಕುರಿತು ಈಗಾಗಲೇ ಆರ್ಥಿಕ ಇಲಾಖೆ ಅನುಮಯಿ ನೀಡಿದ್ದು ಶೀಘ್ರದಲ್ಲಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದವರು ತಿಳಿಸಿದರು.


ಶಿಕ್ಷಕ ಹುದ್ದೆಯ ಆಕಾಂಕ್ಷಿಗಳ ಅಳಲು :


ಸರಕಾರ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಬಿಟ್ಟು ನೇರವಾಗಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು. ಅಲ್ಲದೇ ವಯೋಮಿತಿ ಮೀರಿದ ಕೆಲವು ಅಭ್ಯರ್ಥಿಗಳು ಈ ರೀತಿಯ ಅತಿಥಿ ಶಿಕ್ಷಕರ ನೇಮಕದಿಂದಾಗಿ ಅಥವಾ ನೇಮಕ ಪ್ರಕ್ರಿಯೆಯನ್ನು ತಡವಾಗಿ ಆರಂಭಿಸುವುದರಿಂದ ಕೆಲವು ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುವ ಸಾಧ್ಯತೆಗಳಿದೆಯೆಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads