Daily Top-10 General Knowledge Question Answers in Kannada for All Competitive Exams-25
01. "ಬಾಸುಮತಿ ಅಕ್ಕಿ"ಯ ರಪ್ತಿನಲ್ಲಿ ಭಾರತ ಪ್ರಪಂಚದಲ್ಲೇ ಎಷ್ಟನೇ ಸ್ಥಾನದಲ್ಲಿದೆ?
ಎ) 2ನೇ ಸ್ಥಾನ
ಬಿ) 1ನೇ ಸ್ಥಾನ
ಸಿ) 4ನೇ ಸ್ಥಾನ
ಡಿ) 3ನೇ ಸ್ಥಾನ
ಸರಿಯಾದ ಉತ್ತರ: ಬಿ) 1ನೇ ಸ್ಥಾನ
2. ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆ ಇರುವ ರಾಜ್ಯ
ಎ) ಕರ್ನಾಟಕ
ಬಿ) ಒಡಿಶಾ
ಸಿ) ಮಹಾರಾಷ್ಟ್ರ
ಡಿ) ಕೇರಳ
ಸರಿಯಾದ ಉತ್ತರ: ಡಿ) ಕೇರಳ
3. 1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು
ಎ) ಡೇವಿಡ್ ರಿಕಾರ್ಡೊ
ಬಿ) ಅಮರ್ತ್ಯಸೇನ್
ಸಿ) ಮಹಬೂಬ್ ಉಲ್‌ಹಕ್
ಡಿ) ರ್ಯಾಗ್ನರ್ ಫ್ರಿಶ್
ಸರಿಯಾದ ಉತ್ತರ: ಸಿ) ಮಹಬೂಬ್ ಉಲ್‌ಹಕ್
4. ಈ ಕೆಳಗಿನ ಯಾವುದರ ಅಭಿವೃದ್ಧಿಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ರಚಿಸಲಾಯಿತು?
ಎ) ಪಶು ಆಹಾರ
ಬಿ) ಹಸುಗಳ ದೇಶೀಯ ತಳಿ
ಸಿ) ಕುರಿ ಅಭಿವೃದ್ಧಿ
ಡಿ) ಕುಕ್ಕುಟ (ಕೋಳಿ)ದ ದೇಶೀಯ ತಳಿ
ಸರಿಯಾದ ಉತ್ತರ: ಬಿ) ಹಸುಗಳ ದೇಶೀಯ ತಳಿ
5. ಹಕ್ಕು ಸ್ವಾಮ್ಯದ ಗೌರವಧನಕ್ಕಾಗಿ ಅಮೆರಿಕದ (USA)ದಲ್ಲಿನ ಸ್ಯಾಮ್ಸಂಗ್ ಕಂಪನಿ ಈ ಕೆಳಗಿನ ಯಾವ ಕಂಪನಿ ವಿರುದ್ಧ ದಾವೆ ಹೂಡಿತ್ತು?
ಎ) ನೋಕಿಯಾ
ಬಿ) ಆಪಲ್
ಸಿ) ಎಲ್ ಜಿ
ಡಿ) ಮೈಕ್ರೋಸಾಫ್ಟ್
ಸರಿಯಾದ ಉತ್ತರ: ಡಿ) ಮೈಕ್ರೋಸಾಫ್ಟ್
6. ಎರಡನೆಯ ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥರು ಯಾರು?
ಎ) ಮಲ್ಲಿಕಾರ್ಜುನ ಖರ್ಗೆ
ಬಿ) ಚಿದಾನಂದ ಗೌಡ
ಸಿ) ವೀರಪ್ಪ ಮೊಯ್ಲಿ
ಡಿ) ನಂಜುಂಡಪ್ಪ
ಸರಿಯಾದ ಉತ್ತರ: ಸಿ) ವೀರಪ್ಪ ಮೊಯ್ಲಿ
7. ಕರ್ನಾಟಕದಲ್ಲಿನ ಬಡತನದ ರೇಖೆಗಿಂತ ಮೇಲ್ಪಟ್ಟ (APL) ಕುಟುಂಬಗಳವರಿಗೆ ಈ ಕೆಳಗಿನ ಯಾವ ಕಾರ್ಯಕ್ರಮವು ಆರೋಗ್ಯ ರಕ್ಷಣೆಯನ್ನು ನೀಡುತ್ತದೆ?
ಎ) ಯಶಸ್ವಿನಿ ಯೋಜನೆ
ಬಿ) ರಾಜೀವ್ ಆರೋಗ್ಯ ಭಾಗ್ಯ ಯೋಜನೆ
ಸಿ) ಗ್ರಾಮೀಣ ಆರೋಗ್ಯ ಮಿಷನ್
ಡಿ) ಸ್ವಸ್ಥ ಆರೋಗ್ಯ ಯೋಜನೆ
ಸರಿಯಾದ ಉತ್ತರ: ಬಿ) ರಾಜೀವ್ ಆರೋಗ್ಯ ಭಾಗ್ಯ ಯೋಜನೆ
8. ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮಲವತ್ ಪೂರ್ಣ ಎಂಬ ಅತಿ ಕಿರಿಯ ಮಹಿಳೆಯು ಈ ಕೆಳಗಿನ ಯಾವ ರಾಜ್ಯದವರಾಗಿದ್ದಾರೆ?
ಎ) ಕರ್ನಾಟಕ
ಬಿ) ಮಧ್ಯ ಪ್ರದೇಶ
ಸಿ) ಬಿಹಾರ
ಡಿ) ಆಂಧ್ರ ಪ್ರದೇಶ
ಸರಿಯಾದ ಉತ್ತರ: ಡಿ) ಆಂಧ್ರ ಪ್ರದೇಶ
9. ಈ ಕೆಳಗಿನ ಒಂದು ಸ್ಥಳದಲ್ಲಿ ಸೂರ್ಯ ದೇವಾಲಯವಿಲ್ಲ. ಅದನ್ನು ಗುರುತಿಸಿ
ಎ) ಕೊನಾರ್ಕ್
ಬಿ) ಮಾರ್ತಾಂಡ್
ಸಿ) ಮೊಢೆರಾ
ಡಿ) ಸಿರ್‌ಪುರ್
ಸರಿಯಾದ ಉತ್ತರ: ಡಿ) ಸಿರ್‌ಪುರ್
10. 2011 ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಜನಸಂಖ್ಯೆಯ ಅತಿ ಹೆಚ್ಚಿನ ಸಾಂದ್ರತೆಯಿರುವ ಜಿಲ್ಲೆ ಯಾವುದು?
ಎ) ಹಾಸನ
ಬಿ) ಗುಲ್ಬರ್ಗಾ
ಸಿ) ಕೊಡಗು
ಡಿ) ಬೆಂಗಳೂರು
ಸರಿಯಾದ ಉತ್ತರ: ಡಿ) ಬೆಂಗಳೂರು
11. ಕಾಂಗ್ರೆಸ್ ಪಕ್ಷವು ಅಧಿವೇಶನದಲ್ಲಿ ವಿಭಜನೆಗೊಂಡಿತು.
ಎ) ಪೂನಾ
ಬಿ) ಸೂರತ್
ಸಿ) ನಾಗುರ
ಡಿ) ಕಲ್ಕತ್ತಾ
ಸರಿಯಾದ ಉತ್ತರ: ಬಿ) ಸೂರತ್
12. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎ) ಡಚ್ ಈಸ್ಟ್ ಇಂಡಿಯಾ ಕಂಪನಿ-1602
ಬಿ) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ-1664
ಸಿ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ-1606
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ : ಸಿ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ-1606
No comments:
Post a Comment
If you have any doubts please let me know