Daily Top-10 General Knowledge Question Answers in Kannada for All Competitive Exams-23
01. ಸಂವಿಧಾನದ 53ನೇ ವಿಧಿಯನ್ವಯ ಭಾರತದಲ್ಲಿ ಯಾವುದೇ ಕಾರ್ಯಾಂಗೀಯ ಅಧಿಕಾರಗಳು ಯಾರ. ಅನುಮತಿಯ ಅನುಸಾರವಾಗಿ ಜರುಗುತ್ತವೆ?
ಎ) ಪ್ರಧಾನ ಮಂತ್ರಿ
ಬಿ) ಲೋಕಸಭಾ ಸ್ಪೀಕರ್
ಸಿ) ಉಪರಾಷ್ಟ್ರಪತಿ
ಡಿ) ರಾಷ್ಟ್ರಪತಿ
ಸರಿಯಾದ ಉತ್ತರ: ಡಿ) ರಾಷ್ಟ್ರಪತಿ
2. ರಾಷ್ಟ್ರಪತಿ ಚುನಾವಣೆಯಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಮತ ಮೌಲ್ಯವನ್ನು ಹೊಂದಿದೆ. ಹಾಗಾದರೆ ಉತ್ತರ ಪ್ರದೇಶ ಹೊಂದಿರುವ ಮತಮೌಲ್ಯ ಎಷ್ಟು?
ಎ) 208
ಬಿ) 210
ಸಿ) 206
ಡಿ) 204
ಸರಿಯಾದ ಉತ್ತರ: ಎ) 208
3. ಈ ಕೆಳಗಿನ ಯಾರು ಭಾರತದ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾಯಿತು?
ಎ) ವಿಪಿ ಸಿಂಗ್
ಬಿ) ಚಂದ್ರಶೇಖರ್
ಸಿ) ಪಿವಿ ನರಸಿಂಹರಾವ್
ಡಿ) ಚರಣ್ ಸಿಂಗ್
ಸರಿಯಾದ ಉತ್ತರ: ಬಿ) ಚಂದ್ರಶೇಖರ್
4. ಅತಿ ಹೆಚ್ಚು ರಾಜ್ಯಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ
ಎ) ಮಹಾರಾಷ್ಟ್ರ
ಬಿ) ಬಿಹಾರ
ಸಿ) ತಮಿಳುನಾಡು
ಡಿ) ಉತ್ತರ ಪ್ರದೇಶ
ಸರಿಯಾದ ಉತ್ತರ: ಡಿ) ಉತ್ತರ ಪ್ರದೇಶ
5. ಖಾಸಿ ಮತ್ತು ಗಾರೊ ಬುಡಕಟ್ಟಿನ ಜನರು ಯಾವ ಪ್ರದೇಶದಲ್ಲಿ ಕಂಡುಬರುತ್ತಾರೆ?
ಎ) ಅಸ್ಸಾಮ್
ಬಿ) ಮೇಘಾಲಯ
ಸಿ)ಒರಿಸ್ಸಾ
ಡಿ) ಅರುಣಾಚಲ ಪ್ರದೇಶ
ಸರಿಯಾದ ಉತ್ತರ: ಬಿ) ಮೇಘಾಲಯ
6. ಕೆಳಗಿನ I ಮತ್ತು II ಪಟ್ಟಿಗಳನ್ನು ಹೋಲಿಸಿ ಸರಿ ಹೊಂದಾಣಿಕೆಯನ್ನು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ :
ಪಟ್ಟಿ-I ಪಟ್ಟಿ-II
(ಬುಡಕಟ್ಟುಗಳು) (ರಾಜ್ಯ)
ಎ) ಸೋಲಿಗರು ಎ) ಮಧ್ಯ ಪ್ರದೇಶ
ಬಿ) ಕಮಾರ್ ಬಿ) ಜಾರ್ಖಂಡ
ಸಿ) ಮಹದೇವ್ ಕೋಲಿ ಸಿ) ಕರ್ನಾಟಕ
ಡಿ) ಸಂತಾಲರು ಡಿ) ಮಹಾರಾಷ್ಟ್ರ
ಸಂಕೇತಗಳು:
ಎ ಬಿ ಸಿ ಡಿ
1) 4 3 1 2
2) 3 1 4 2
3) 2 4 3 1
4) 1 2 4 3
ಸರಿಯಾದ ಉತ್ತರ: 2) 3 1 4 2
7. ದೆಹಲಿಯ ಯಾವ ಸುಲ್ತಾನ ಸಿಜ್ದಾ (ಸುಲ್ತಾನನ್ನು ಕಂಡ ತಕ್ಷಣ ಶಿರಸಾಷ್ಟಾಂಗ ನಮಸ್ಕಾರ) ಮತ್ತು ಪೈಬೋಸ್ (ಸುಲ್ತಾನನ ಕಾಲುಗಳಿಗೆ ಮುತ್ತು ಕೊಟ್ಟು ನಮಸ್ಕಾರ) ಸಿದ್ಧಾಂತವನ್ನು ಪರಿಚಯಿಸಿದನು?
ಎ) ಅಲ್ಲಾವುದ್ದೀನ್ ಖಿಲ್ಜಿ
ಬಿ) ಬಲ್ಬನ್
ಸಿ) ಕುತುಬ್-ಉದ್-ದಿನ್ ಐಬಕ್
ದಿ) ಇಲ್ತುಮಿಸ್
ಸರಿಯಾದ ಉತ್ತರ: ಬಿ) ಬಲ್ಬನ್
8. ವಜ್ರದ ಹೊಳಪಿಗೆ ಕಾರಣ ಇದಾಗಿದೆ?
ಎ) ವ್ಯತೀಕರಣ
ಬಿ) ಚದುರುವಿಕೆ
ಸಿ) ವಿವರ್ತನ
ಡಿ) ಒಟ್ಟು ಆಂತರಿಕ ಪ್ರತಿಫಲನ
ಸರಿಯಾದ ಉತ್ತರ: ಡಿ) ಒಟ್ಟು ಆಂತರಿಕ ಪ್ರತಿಫಲನ
9. ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?
ಎ) ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಿ ಮಂಡಿಸಬಹುದು
ಬಿ) ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಸರಳ ಬಹುಮತದಿಂದ ಅಂಗೀಕರಿಸಲು ಬರುವುದಿಲ್ಲ
ಸಿ) ಬಿಕ್ಕಟ್ಟಿನ ಸಂದರ್ಭದಲ್ಲಿ, ಜಂಟಿ ಅಧಿವೇಶನ ಕರೆಯಲು ಅವಕಾಶವಿದೆ
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ: ಸಿ) ಬಿಕ್ಕಟ್ಟಿನ ಸಂದರ್ಭದಲ್ಲಿ, ಜಂಟಿ ಅಧಿವೇಶನ ಕರೆಯಲು ಅವಕಾಶವಿದೆ
10. 1969ರಲ್ಲಿ ಭಾರತದಲ್ಲಿ ಎಷ್ಟು ಬ್ಯಾಂಕುಗಳು ರಾಷ್ಟ್ರೀಕರಣಗೊಂಡವು?
ಎ) 14
ಬಿ) 15
ಡಿ) 10
ಸಿ) 6
ಸರಿಯಾದ ಉತ್ತರ: ಎ) 14
11. ಹೊಂದಿಸಿ ಬರೆಯಿರಿ
ಎ. ಕಿಲೋಚೆಕ್ಕಿ 1. ಭಾರತ
ಬಿ. ಅಸ್ಮಾರಾ 2. ಇಥೋಪಿಯಾ
ಸಿ, ನೋಸಿಬೆ 3. ಮಡಗಾಸ್ಕರ
ಡಿ, ಉರಸ 4. ರಷ್ಯಾ
ಇ. ನಾರ್ಕೋಂಡಮ್ 5. ಕೋಲಂಬಿಯಾ
ಸಂಕೇತಗಳು
ಎ) ಎ-1, ಬಿ2, ಸಿ-3, ಡಿ-4. ಇ-5
ಬಿ) ಎ-2, ಬಿ-3, ಸಿ-1, ಡಿ-4, ಇ-5
ಸಿ) ಎ-4, ಬಿ-3, ಸಿ-2, ಡಿ-5. ಇ-1
ಡಿ) ಎ-4, ಬಿ-2, ಸಿ-3, ಡಿ-5, ಇ-1
ಸರಿಯಾದ ಉತ್ತರ: ಡಿ) ಎ-4, ಬಿ-2, ಸಿ-3, ಡಿ-5, ಇ-1
12. ವೆಲ್ಡಿಂಗ್‌ನಲ್ಲಿ ಬಳಸುವ ಅನಿಲ ಯಾವುದು?
ಎ) ಆರ್ಗನ್
ಬಿ) ಮರ್ಕ್ಯೂರಿ ವೇಪರ್
ಸಿ) ಅಸಿಟಲೀನ್
ಡಿ) ಹೀಲಿಯಂ
ಸರಿಯಾದ ಉತ್ತರ : ಸಿ) ಅಸಿಟಲೀನ್
No comments:
Post a Comment
If you have any doubts please let me know