Daily Top-10 General Knowledge Question Answers in Kannada for All Competitive Exams-20
01. ರಾಜ್ಯಪಾಲರ ಕ್ಷಮಾದಾನ ಅಧಿಕಾರವನ್ನು ಯಾವ ಕಲಂನಡಿಯಲ್ಲಿ ಪ್ರತಿಪಾದಿಸಲಾಗಿದೆ?
ಎ) 72ನೇ-ಕಲಂ
ಬಿ) 161ನೇ-ಕಲಂ
ಸಿ) 148ನೇ-ಕಲಂ
ಡಿ) ರಾಜ್ಯಪಾಲರಿಗೆ ಕ್ಷಮಾದಾನ ಅಧಿಕಾರವಿರುವುದಿಲ್ಲ
ಸರಿಯಾದ ಉತ್ತರ: ಬಿ) 161ನೇ-ಕಲಂ
02. ಸಾಮಾನ್ಯವಾಗಿ, ಈ ಕೆಳಗಿನ ಯಾವ ಶಿಲೆಗಳಲ್ಲಿ ಪಳೆಯುಳಿಕೆ ಕಂಡುಬರುತ್ತವೆ?
ಎ) ಅಗ್ನಿ ಶಿಲೆಗಳು
ಬಿ) ಕಣಶಿಲೆಗಳು
ಸಿ) ರೂಪಾಂತರ ಶಿಲೆಗಳು
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಬಿ) ಕಣಶಿಲೆಗಳು
03. ವಿಜಯಪುರದ ಆದಿಲ್‌ಷಾಹಿ ಮನೆತನದ ಸೇನಾಧಿಪತಿಯಾಗಿದ್ದ ಅಫ್ಜಲ್‌ಖಾನ್‌ನ ನಿಜವಾದ ಹೆಸರೇನು?
ಎ) ಅಬ್ದುಲ್ಲಾ ಬಟಾರಿ
ಬಿ) ಮಹಮ್ಮದ್ ಖಾನ್
ಸಿ) ಷಂಷುದ್ದೀನ್
ಡಿ) ಸಬರ್ ಖಾನ್
ಸರಿಯಾದ ಉತ್ತರ : ಎ) ಅಬ್ದುಲ್ಲಾ ಬಟಾರಿ
04. ಹೊಂದಿಸಿ ಬರೆಯಿರಿ.
ಏಜೆನ್ಸಿಗಳು ಕೇಂದ್ರ ಕಾರ್ಯಸ್ಥಾನ
p) FAO 1) ವಿಯೆನ್ನಾ
q) ILO 2) ನ್ಯೂಯಾರ್ಕ್
r) UNDP 3) ಜಿನೆವಾ
s) IAEA 4) ರೋಮ್
ಎ) 4 2 1 3
ಬಿ) 3 4 1 2
ಸಿ) 3 1 2 4
ಡಿ) 4 3 2 1
ಸರಿಯಾದ ಉತ್ತರ: ಡಿ) 4 3 2 1
05. ಸೌರ ಪ್ರಕಾಶವನ್ನು ಇದರಿಂದ ಅಳೆಯಲಾಗುತ್ತದೆ
ಎ) ಸೈಕ್ರೋಮೀಟರ್
ಬಿ) ಮಳೆಮಾಪಕ
ಸಿ) ಪೈರಾನೋಮೀಟರ್
ಡಿ) ಅನಿಮೋಮೀಟರ್
ಸರಿಯಾದ ಉತ್ತರ: ಸಿ) ಪೈರಾನೋಮೀಟರ್
6. ತುರ್ತುಪರಿಸ್ಥಿತಿ ಸಮಯದಲ್ಲಿ ಮೂಲಭೂತ ಹಕ್ಕುಗಳ ಅಮಾನತು ಈ ಕೆಳಗಿನ ಯಾವ ರಾಷ್ಟ್ರದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ) ಅಮೆರಿಕ
ಬಿ) ವೇಮರ್
ಸಿ) ರಷ್ಯಾ
ಡಿ) ಫ್ರೆಂಚ್
ಸರಿಯಾದ ಉತ್ತರ: ಬಿ) ವೇಮರ್
7. ಜುಲೈ 2021 ರಲ್ಲಿ ಯಾವ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಬಾಲಕರ ಪ್ರೌಢಶಾಲೆಯು ಉಪಗ್ರಹವನ್ನು ಅಭಿವೃದ್ಧಿಪಡಿಸಿದ ಭಾರತದ ಮೊದಲ ಸರ್ಕಾರಿ ಶಾಲೆಯಾಗಿದೆ?
ಎ) ಮಹಾರಾಷ್ಟ್ರ
ಬಿ) ಕೇರಳ
ಸಿ) ಕರ್ನಾಟಕ
ಡಿ) ದೆಹಲಿ
ಸರಿಯಾದ ಉತ್ತರ: ಸಿ) ಕರ್ನಾಟಕ
8. ಪ್ರಧಾನ ಮಂತ್ರಿ ದಕ್ಷತಾ ಔರ್ ಕುಶಲ್ಲಾ ಸಂಪನ್ ಹಿತ್‌ಗ್ರಾಹಿ (PM-DAKSH) ಯೋಜನೆಯನ್ನು ಯಾವ ಸಚಿವಾಲಯವು ಅನಾವರಣಗೊಳಸಿದೆ?
ಎ) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಬಿ) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
ಸಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಡಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸರಿಯಾದ ಉತ್ತರ: ಡಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
9. ಅಂಗುರವಾಟ ದೇವಾಲಯ ಯಾವ ದೇಶದಲ್ಲಿದೆ?
ಎ) ಇಂಡೋನೇಷ್ಯಾ
ಬಿ) ಮಲೇಷ್ಯಾ
ಸಿ) ಕಾಂಬೋಡಿಯಾ
ಡಿ) ಫಿಲಿಪ್ಪಿನ್ಸ್
ಸರಿಯಾದ ಉತ್ತರ: ಸಿ) ಕಾಂಬೋಡಿಯಾ
10. ಭಾರತದ ಮೊದಲ ಸೋಲಾರ್ ವಿದ್ಯುತ್ ಬೋಟ್ 'ಆದಿತ್ಯ' ವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
ಎ) ಕೇರಳ
ಬಿ) ಕರ್ನಾಟಕ
ಸಿ) ಅಸ್ಸಾಂ
ಡಿ) ಪಂಜಾಬ್
ಸರಿಯಾದ ಉತ್ತರ: ಎ) ಕೇರಳ
11. ಸರಿಪಡಿಸಿ
ಎ. ಪ್ರಸ್ಥಭೂಮಿಯ ನದಿಗಳು ಅಲ್ಲಲ್ಲಿ ಜಲಪಾತಗಳು ಹೊಂದಿದ್ದು ವಿದ್ಯುತ್ ಉತ್ಪಾದನೆಗೆ ಸೂಕ್ತವಾಗಿಲ್ಲ
ಬಿ. ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯು ಅತೀ ಉದ್ದವಾದ ಹಾಗೂ ದೊಡ್ಡನದಿ ವ್ಯೂಹ ಹೊಂದಿದೆ
ಆಯ್ಕೆಗಳು
ಎ) ಎ ಮಾತ್ರ ಸರಿ
ಬಿ) ಬಿ ಮಾತ್ರ ಸರಿ
ಸಿ) ಎ ಮತ್ತು ಬಿ ಸರಿ
ಡಿ) ಎ ಮತ್ತು ಬಿ ತಪ್ಪು
ಸರಿಯಾದ ಉತ್ತರ: ಬಿ) ಬಿ ಮಾತ್ರ ಸರಿ
12. ಬೆಳಕಿನ ಚದುರುವಿಕೆಯ ಪರಿಣಾಮಗಳು ಯಾವುವು?
ಎ) ಆಕಾಶ ಮತ್ತು ಸಮುದ್ರ ನೀಲಿಯಾಗಿರುವಂತೆ
ಬಿ) ಮೋಡಗಳು ಬಿಳಿ ಬಣ್ಣದಲ್ಲಿರುವಂತೆ ಕಾಣುವುದು
ಸಿ) ಬಾಹ್ಯಾಕಾಶಯಾನಿಗಳಿಗೆ ಬಾಹ್ಯದಲ್ಲಿ ಆಗಸವು ಕಪ್ಪಾಗಿ ಕಾಣುವುದು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ : ಡಿ) ಮೇಲಿನ ಎಲ್ಲವೂ
Super sir
ReplyDeleteThank you for your Feedback.
Delete