Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday, 16 September 2021

Top-10 History Question Answers in Kannada for All Competitive Exams-01

Top-10 History Question Answers in Kannada for All Competitive Exams-01


Top-10 History Question Answers in Kannada for All Competitive Exams-01



ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಇತಿಹಾಸದ ಟಾಪ್-10 ಪ್ರಶ್ನೋತ್ತರಗಳು"

💥💥💥💥




1. ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
ಎ) ಅಲಹಬಾದ್ ಸ್ತಂಭ ಶಾಸನ - ಸಮುದ್ರಗುಪ್ತ.
ಬಿ) ಐಹೊಳೆ ಶಾಸನ - ಇಮ್ಮಡಿ ಪುಲಿಕೇಶಿ.
ಸಿ) ಮನ್ನೆ ಶಾಸನ - ಅಶೋಕನ ಕಳಿಂಗ ಯುದ್ಧ.
ಡಿ) ಉತ್ತರ ಮೊರೂರು ಶಾಸನ - ಚೋಳರ ಆಡಳಿತ ವ್ಯವಸ್ಥೆ.


ಸರಿಯಾದ ಉತ್ತರ: ಸಿ) ಮನ್ನೆ ಶಾಸನ - ಅಶೋಕನ ಕಳಿಂಗ ಯುದ್ಧ

ವಿವರಣೆ :

⏭ ಅಲಹಾಬಾದ್ ಸ್ಥಂಭಶಾಸನವು ಹರಿಸೇಣನಿಂದ ರಚನೆಯಾಯಿತು.

⏭ ಇದು ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುತ್ತದೆ.

⏭ ಐಹೊಳೆ ಶಾಸನವು ರವಿಕೀರ್ತಿಯಿಂದ ರಚನೆಯಾಗಿದೆ. ಈ ಶಾಸನ ಇಮ್ಮಡಿ ಪುಲಿಕೇಶಿಯ ಸಾಧನೆಯನ್ನು ವಿವರಿಸುತ್ತದೆ.

⏭ ಉತ್ತರ ಮೆರೂರು ಶಾಸನವು 1ನೇ ಪಾರಾಂತಕ ಚೋಳನಿಂದ ರಚನೆಯಾಗಿದೆ. ಇದು ಚೋಳರ ಗ್ರಾಮಾಡಳಿತ ವ್ಯವಸ್ಥೆಯನ್ನು ವಿವರಿಸುತ್ತದೆ.



2. ಕಾಲಾನುಕ್ರಮದಲ್ಲಿ ಜೋಡಿಸಿ.
ಎ) ಹರ್ಷಚರಿತ
ಬಿ) ಶಾಕುಂತಲಾ
ಸಿ) ಪುರಾಣಗಳು
ಡಿ) ಅರ್ಥಶಾಸ್ತ್ರ


ಸರಿಯಾದ ಉತ್ತರ: ಸಿ, ಡಿ, ಬಿ, ಎ.

ವಿವರಣೆ :

⏭ ಹರ್ಷಚರಿತದ ಕರ್ತೃ 'ಬಾಣಭಟ್ಟ, ಇವನು ಹರ್ಷವರ್ಧನನ ಆಸ್ಥಾನದ ಕವಿ. ಇವರ ಕಾಲ ಕ್ರಿ.ಶ. 7ನೇ ಶತಮಾನ.

⏭ 'ಶಾಕುಂತಲಾ' ನಾಟಕದ ಕರ್ತೃ 'ಕಾಳಿದಾಸ'. ಗುಪ್ತರ 2ನೇ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ಕವಿ. ಇವರ ಕಾಲ 5ನೇ ಶತಮಾನ.

⏭ ಪುರಾಣಗಳು ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ.  ವೇದಗಳ ಕಾಲದ ನಂತರ ರಚನೆಯಾಯಿತು.

⏭ “ಅರ್ಥಶಾಸ್ತ್ರದ' ಕರ್ತೃ ಚಾಣಕ್ಯ, ಕ್ರಿ.ಪೂ. 4ನೇ ಶತಮಾನದಲ್ಲಿ ರಚನೆಯಾಯಿತು.



3. ಕೆಳಕಂಡವರಲ್ಲಿ ಯಾರು ಪ್ರಾಚೀನ ಭಾರತದ ವೈದ್ಯ ಶಾಸ್ತ್ರಕ್ಕೆ ಸಂಬಂಧಪಟ್ಟವರಲ್ಲ.
ಎ) ಧನ್ವಂತ್ರಿ
ಬಿ) ಭಾಸ್ಕರಾಚಾರ್ಯ
ಸಿ) ಚರಕ
ಡಿ) ಸುಶ್ರುಷ


 ಸರಿಯಾದ ಉತ್ತರ: ಬಿ) ಭಾಸ್ಕರಾಚಾರ್ಯ

ವಿವರಣೆ :

⏭ ಭಾಸ್ಕರಚಾರ್ಯರು ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರ ಕ್ರಿಶ. 1114ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಜನಿಸಿದನು. ಇವನ ಕೃತಿಗಳು 'ಲೀಲಾವತಿ ಗಣಿತ', (ಮುಖ್ಯವಾಗಿ ಅಂಕಗಣಿತದ ಬಗ್ಗೆ ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). “ಬೀಜಗಣಿತ' ಮತ್ತು 'ಸಿದ್ಧಾಂತ ಶಿರೋಮಣಿ'.

⏭ ಧನ್ವಂತ್ರಿಯು ಗುಪ್ತರ ಕಾಲದ ವೈದ್ಯ ಇವರ ಕೃತಿ 'ಅಷ್ಟಯುರ್ವೆದ' ಅಥವಾ ಆಯುರ್ವೆದ 'ನಿಘಂಟು'. ಇದು ವಿವಿಧ ಗಿಡಮೂಲಿಕೆಗಳ ಔಷಧಿಗಳನ್ನು ಪರಿಚಯಿಸುತ್ತದೆ.

⏭ ಚರಕ - ಕುಷಾಣರ ಅರಸ "ಕಾನಿಷ್ಕ' ನ ಆಸ್ಥಾನದ ಕವಿ. ಇವನ ಕೃತಿ 'ಚರಕ ಸಂಹಿತೆ', ಇದು ಎಂಟುಭಾಗಗಳಿಂದ ಕೂಡಿರುವ ಅಮೂಲ್ಯವಾದ ವೈದ್ಯಶಾಸ್ತ್ರ ಗ್ರಂಥವನ್ನು ಬರೆದಿದ್ದಾನೆ. ಇದರಲ್ಲಿ 127 ಬಗೆಯ ಶಸ್ತ್ರ ಸಲಕರಣೆಗಳನ್ನು ವಿವರಿಸಿದ್ದಾರೆ.

⏭ 'ಸುಶೃತ' ಗುಪ್ತರ ಕಾಲದ ವೈದ್ಯ, ಇವನ ಕೃತಿ 'ಶುಶೃತ ಸಂಹಿತೆ'. ಇದರಲ್ಲಿ ಖನಿಜ, ಗಿಡಮೂಲಿಕೆ ಮುಂತಾದ ಔಷಧಿಗಳನ್ನು ಕುರಿತು ಮಾಹಿತಿಗಳನ್ನು ಹೊಂದಿವೆ.



4. ಹರಪ್ಪ ನಾಗರೀಕತೆಯ ಕಾಲದ ಬಂದರು ಯಾವುದಾಗಿತ್ತು?
ಎ) ಹರಪ್ಪ
ಬಿ) ಸುರ್ಕೊಡಾ
ಸಿ) ಕಾಲಿಭಂಗನ್
ಡಿ) ಲೋಥಾಲ್


ಸರಿಯಾದ ಉತ್ತರ: ಡಿ) ಲೋಥಾಲ್

ವಿವರಣೆ:

⏭ ಲೋಥಾಲ್ ಗುಜರಾತ್‌ನ ಅಹ್ಮದಾಬಾದ್‌ನ ನೈರುತ್ಯಕ್ಕೆ 80 ಕಿ.ಮೀ ದೂರದಲ್ಲಿ 'ಬೋಗಾವೋ ನದಿ' ಹತ್ತಿರ ಇದೆ.

⏭ ಎಸ್.ಆರ್.ರಾವ್‌ರವರು 1959 ರಿಂದ 1962 ರವರೆಗೂ ಇಲ್ಲಿ ಸಂಶೋಧನೆ ಕೈಗೊಂಡಿದ್ದರು.

⏭ ಇದೊಂದು ಹೆಸರಾಂತ 'ಬಂದರು' ಆಗಿತ್ತು.

⏭ ಇದು ಗುಜರಾತಿನ ಕ್ಯಾಂಬೆ ತೀರದಲ್ಲಿದೆ. ಇಲ್ಲಿ ಅಗ್ನಿಕುಂಡಗಳು, ಸ್ತ್ರೀ ಪುರುಷರ ಜೋಡಿ ಸಮಾಧಿಗಳು ದೊರಕಿವೆ.

⏭ ಗುಜರಾತಿ ಭಾಷೆಯಲ್ಲಿ ಲೋಥಾಲ್ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ ಎಂದರ್ಥ.

⏭ ಸಿಂಧಿ ಭಾಷೆಯಲ್ಲಿ ಮೊಹೆಂಜೋದಾರೋ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ.

⏭ ಇಲ್ಲಿ ಜಾಣ ನರಿಯ ಚಿತ್ರ ಕಂಡುಬಂದಿದೆ

⏭ ಇಲ್ಲಿ ಜೋಡಿ ಶವದ ಪೆಟ್ಟಿಗೆ ಕಂಡುಬಂದಿದೆ


5. ಆಯುರ್ವೇದದ ಮೂಲ ಇದರಲ್ಲಿದೆ.
ಎ. ಋಗ್ವದ
ಬಿ. ಸಾಮವೇದ
ಸಿ. ಯುಜುರ್ವೇದ
ಡಿ. ಅಥರ್ವವೇದ


ಸರಿಯಾದ ಉತ್ತರ: ಡಿ. ಅಥರ್ವವೇದ

ವಿವರಣೆ:

⏭ ಪ್ರತಿ ವೇದವೂ ಒಂದೊಂದು ಉಪವೇದವನ್ನು ಹೊಂದಿದೆ ಅವುಗಳೆಂದರೆ.

1⃣ ಆಯುರ್ವೇದ : ಔಷಧಿ ಮತ್ತು ಗಿಡಮೂಲಿಕೆಗಳ ವಿಜ್ಞಾನ. ಇದು ಋಗ್ವೇದದ ಉಪವೇದವಾಗಿದೆ.

2⃣ ಧನುರ್ವೇದ : ಇದು ಯಜುರ್ವೇದದ ಉಪವೇದವಾಗಿದೆ. ಇದು ಯುದ್ಧ ಕಲೆಯನ್ನು ತಿಳಿಸುತ್ತದೆ.

3⃣ ಗಂಧರ್ವವೇದ : ಇದು ಸಾಮವೇದದ ಉಪವೇದ. ಇದು ಸಂಗೀತ ಮತ್ತು ನೃತ್ಯ ಕಲೆಗಳನ್ನು ವಿವರಿಸುತ್ತದೆ.

4⃣ ಶಿಲ್ಪವೇದ : ಇದು ಅಥರ್ವಣವೇದದ ಉಪವೇದ. ಇದು ವಾಸ್ತುಶಿಲ್ಪ ಕಲೆಗೆ ಸಂಬಂಧಿಸಿದೆ. ಧನ್ವಂತ್ರಿ, ಅಶ್ವಿನಿಕುಮಾರ, ಚರಕರು ಇವುಗಳ ಪ್ರತಿಪಾದಕರೆಂದು ನಂಬಲಾಗಿದೆ.

⏭ ಋಗ್ವೇದ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ವೇದವಾಗಿದೆ‌.

⏭ ಋಗ್ವೇದದಲ್ಲಿ 1017 ಸ್ತೋತ್ರಗಳಿದ್ದು, 10 ಮಂಡಲಗಳಿವೆ.

⏭ ಋಗ್ವೇದದ ಶ್ಲೋಕಗಳನ್ನು ಹೋತ್ರಿ ಎಂದು ಕರೆಯಲಾಗುವ ಪುರೋಹಿತನು ಪಠಿಸುತ್ತಿದ್ದನು.



6. ಎರಡನೇ ಬೌದ್ಧ ಸಮ್ಮೇಳನವು ಯಾವ ಸ್ಥಳದಲ್ಲಿ ಜರುಗಿತು?
ಎ. ಕಾಶಿ
ಬಿ. ಪಾಟಲೀಪುತ್ರ
ಸಿ. ನಲಂದಾ
ಡಿ. ವೈಶಾಲಿ


ಸರಿಯಾದ ಉತ್ತರ: ಡಿ. ವೈಶಾಲಿ

ವಿವರಣೆ:

ಬೌದ್ಧಧರ್ಮ ಸಮ್ಮೇಳನಗಳು :

ಎ) ಒಂದನೇ ಬೌದ್ಧ ಸಮ್ಮೇಳನವು ಸುಮಾರು ಕ್ರಿ.ಪೂ 483 ರಲ್ಲಿ ರಾಜಗೃಹದಲ್ಲಿ ಜರುಗಿತು. ಇದು ಬುದ್ಧನ ಹೇಳಿಕೆಗಳನ್ನು ಸಂಗ್ರಹಿಸಿತು. ಇದರ ಅಧ್ಯಕ್ಷ-ಮಹಾಕಷ್ಯಪ, ಇದನ್ನು ನಡೆಸಿದ ಅರಸ- ಅಜಾತಶತ್ರು

ಬಿ) ಎರಡನೇ ಬೌದ್ಧ ಸಮ್ಮೇಳನವು ಕ್ರಿ.ಪೂ 383 ರಲ್ಲಿ ವೈಶಾಲಿಯಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ಸಭಾಕಮಿ ವಹಿಸಿದ್ದು ಕಾಲಾಶೋಕ ಇದನ್ನು ಏರ್ಪಡಿಸಿದ್ದನು. ಇದು ಬೌದ್ಧ ಸನ್ಯಾಸಿಗಳ ನಡುವಿನ ಭಿನ್ನಾಭಿಪ್ರಾಯ ತೊಡೆದು ಹಾಕಲು ಪ್ರಯತ್ನಿಸಿತು.

ಸಿ) ಮೂರನೇ ಬೌದ್ಧ ಸಮ್ಮೇಳನ ಕ್ರಿ.ಪೂ 250 ರಲ್ಲಿ ಪಾಟಲೀಪುತ್ರದಲ್ಲಿ ಜರುಗಿತ್ತು. ಇದರ ಅಧ್ಯಕ್ಷತೆಯನ್ನು ತಿಸ್ಸಾ ಮೊಗ್ಗಲಿಪುತ್ತ ವಹಿಸಿದ್ದರೆ, ಅಶೋಕ ಈ ಸಮ್ಮೇಳನವನ್ನು ಏರ್ಪಡಿಸಿದ್ದನು. ಈ ಸಮ್ಮೇಳನದಲ್ಲಿ ಬೌದ್ಧಧರ್ಮದ ಪವಿತ್ರಗ್ರಂಥದೊಂದಿಗೆ ಅಭಿದಮ್ಮ ಪಿಠಕವನ್ನು ರಚಿಸಲಾಯಿತು.

ಡಿ) ನಾಲ್ಕನೇ ಬೌದ್ಧ ಸಮ್ಮೇಳನವು ಕುಂಡಲವನದಲ್ಲಿ (ಕಾಶ್ಮೀರ) ಕ್ರಿ.ಶ 102 ರಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ವಸುಮಿತ್ರ ವಹಿಸಿದ್ದು, ಕನಿಷ್ಕನು ಈ ಸಮ್ಮೇಳನವನ್ನು ಆಯೋಜಿಸಿದ್ದನು. ಬೌದ್ಧ ಸನ್ಯಾಸಿಗಳ ನಡುವಿನ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಲು ಪ್ರಯತ್ನಿಸಿತು, ಆದರೆ ಬೌದ್ಧ ಧರ್ಮವೇ ಹೀನಾಯಾನ ಮತ್ತು ಮಹಾಯಾನ ಗಳೆಂಬ ಎರಡು ಪಂಗಡಗಳಾಗಿ ವಿಭಜನೆಯಾಯಿತು.




7. ಹೀನಯನ ಪಂಥವದರ ಪ್ರಾಬಲ್ಯ ಬಹಳವಾಗಿತ್ತು ಎಂದು ಹೇಳಲಾದ ಏಷಿಯಾದ ಪ್ರದೇಶ ಯಾವುದು?
ಎ. ಟಿಬೆಟ್
ಬಿ. ಚೀನಾ
ಸಿ. ಶ್ರೀಲಂಕಾ
ಡಿ. ಜಪಾನ್


ಸರಿಯಾದ ಉತ್ತರ: ಸಿ. ಶ್ರೀಲಂಕಾ

ವಿವರಣೆ:

⏭ ಕಾನಿಷ್ಕನ ಕಾಲದ ನಾಲ್ಕನೇ ಮಹಾಸಭೆಯಲ್ಲಿ ವಿಭಾಗಗೊಂಡ ಹೀನಾಯಾನ ಮತ್ತು ಮಹಾಯಾನ ಪಂಥಗಳು ಬುದ್ಧನ ತತ್ವಗಳನ್ನೇ ಆಧರಿಸಿವೆ.

⏭ ಮಹಾಯಾನ (ಶ್ರೇಷ್ಠಮಾರ್ಗ) ಹಾಗೂ ಹೀನಯಾನ (ಕನಿಷ್ಠ ಮಾರ್ಗ) ವೆಂದು ಮೊದಲ ಪಂಥದವರು ಕರೆದರು.

⏭ ಮಹಾಯಾನ ಪಂಥವು ಹೀನಯಾನ ಪಂಥಕ್ಕಿಂತ

ಬಹುಬೇಗ ಪ್ರಖ್ಯಾತ ಗೊಂಡಿತು. ಈ ಹೊಸ ಬದಲಾವಣೆಗಳಿಂದಾಗಿ ಮಹಾಯಾನ ಪಂಥವು ಭಾರತ, ಆಫ್ಘಾನಿಸ್ಥಾನ, ಮಧ್ಯ ಏಷ್ಯಾ, ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ಪ್ರಚಾರಗೊಂಡಿತು. ಹೀನಯಾನವು ಭಾರತದ ಗಡಿದೇಶಗಳಾದ ಸಿಲೋನ್ (ಶ್ರೀಲಂಕಾ), ಬರ್ಮಾ ಮತ್ತು ಸಿಯಾಂಗಳಲ್ಲಿ ಪ್ರಾಬಲ್ಯಕ್ಕೆ ಬಂದಿತು.

🔘 ವಜ್ರಾಯಾನ : ಹೀನಾಯನ ಮತ್ತು ಮಹಾಯಾನ ಎರಡೂ ಪಂಥದ ತತ್ವಗಳನ್ನು ಅನುಸರಿಸುವವರನ್ನು ವಜ್ರಾಯಾನ ಎನ್ನಲಾಗುತ್ತದೆ.

✳ ಬುದ್ಧನನ್ನು

➡ ಏಷ್ಯಾದ ಬೆಳಕು ಎಂದವರು - ಡಾ. ಕೆನ್ನೇತ್ ಸಂಡರ್ಸ್.

➡ ಏಷ್ಯಾದ ಜ್ಞಾನ ಪ್ರದೀಪ ಎಂದವರು - ಅರ್ನಾಲ್ಡ್ ಟಾಯ್ನಬಿ

➡ ಜಗತ್ತಿನ ಜ್ಞಾನ ಪ್ರದೀಪ ಎಂದವರು - ಶ್ರೀಮತಿ ರಿಷ್ ಡೇವಿಡ್ಸ್




 8. ಚಾಣಕ್ಯನ ನಿಜವಾದ ಹೆಸರು.
ಎ. ಕೌಟಿಲ್ಯ
ಬಿ. ವಿಷ್ಣುಗುಪ್ತ
ಸಿ. ವಿಶಾಖದತ್ತ
ಡಿ. ವಸುಬಂಧು


ಸರಿಯಾದ ಉತ್ತರ: ಬಿ. ವಿಷ್ಣುಗುಪ್ತ

ವಿವರಣೆ:

ಎ) ಕೌಟಿಲ್ಯ : ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣುಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ.

ಬಿ) ವಿಷ್ಣುಗುಪ್ತ : ಕೌಟಿಲ್ಯನ ಮೊದಲ ಹಾಗೂ ನಿಜವಾದ ಹೆಸರು ವಿಷ್ಣುಗುಪ್ತ ಇವನು ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ಇವನು ಸಂಸ್ಕೃತ ಭಾಷೆಯಲ್ಲಿ ಅರ್ಥಶಾಸ್ತ್ರ ಎಂಬ ಕಾನೂನು/ ರಾಜಕೀಯ ಪುಸ್ತಕವನ್ನು ರಚಿಸಿದನು.

ಸಿ) ವಿಶಾಖದತ್ತ : ಇವನು ಒಬ್ಬ ಭಾರತೀಯ ಸಂಸ್ಕೃತ ಕವಿ ಮತ್ತು ನಾಟಕಕಾರ, ಗುಪ್ತ ಆಸ್ಥಾನದ ಕವಿಯಾಗಿದ್ದನು. ಇವನ ಎರಡೂ ನಾಟಕಗಳು ಮುದ್ರಾರಾಕ್ಷಸ ಮತ್ತು ದೇವಿಚಂದ್ರಗುಪ್ತಂ

ಡಿ)ವಸುಬಂಧು : ಇವನು ಕ್ರಿ.ಶ.4 ರಿಂದ 5ನೇ ಶತಮಾನದ ನಡುವೆ ಗಾಂಧಾರದಲ್ಲಿ ಕಂಡು ಬರುವ ಒಬ್ಬ ಬೌದ್ಧ ಸನ್ಯಾಸಿ ಮತ್ತು ವಿದ್ವಾಂಸನಾಗಿದ್ದನು. ಇವನ ಕೃತಿ ಅಭಿಧರ್ಮಕೋಶ.ಳೆ ಹನಿಯು ಭೂಮಿಗೆ ಸ್ಪರ್ಶಿಸಿದಾಗ ಮಣ್ಣು ವಾಸನೆ ಬರಲು ಕಾರಣ ಸ್ಪೆಕ್ಟೋಮೈಸಿನ ಬ್ಯಾಕ್ಟಿರಿಯಾ ಚಟುವಟಿಕೆ ಕಾರಣ.




9. ಮೌರ್ಯ ಸಾಮ್ರಾಟ ಬಿಂದುಸಾರನ ಆಳ್ವಿಕೆಯ ಕಾಲದಲ್ಲಿ ಭೇಟಿ ನೀಡಿದ ಪ್ರಮುಖ ರಾಯಭಾರಿ
ಎ. ಡೈಮಾಕಸ್
ಬಿ. ಡಿಯೋನಿಸಿಸ್
ಸಿ. ಮೆಗಾಸ್ತನೀಸ್
ಡಿ. ಸೆಲ್ಯೂಕಸ್


ಸರಿಯಾದ ಉತ್ತರ: ಎ. ಡೈಮಾಕಸ್

ವಿವರಣೆ:  ಬಿಂದುಸಾರ (ಕ್ರಿ.ಪೂ 298-273) : ಚಂದ್ರಗುಪ್ತ ಮೌರ್ಯನ ಉತ್ತರಾಧಿಕಾರಿಯಾಗಿ ಅವನ ಮಗ ಬಿಂದುಸಾರನ ಸಿಂಹಾಸನ ಏರಿದನು. ಗ್ರೀಕ್ ಲೇಖಕರು ಬಿಂದುಸಾರನನ್ನು ಅಮಿತ್ರಘಾತ್ ಅಥವಾ ಅಮಿತ್ರ ಖಾಡ್ (ಶತೃನಾಶಕ) ನೆಂಬ ಗೌರವಪೂರ್ಣ ಹೆಸರಿನಿಂದ ಕರೆಯುತ್ತಿದ್ದರು. ಅವನು ಗ್ರೀಕ್ ದೇಶದ ಡೈಮಾಕಸ್ ಎಂಬ ಒಬ್ಬ ರಾಯಭಾರಿಯನ್ನು ಹೊಂದಿದ್ದು ಸೆಲ್ಯೂಕಸ್ ನಿಕೇಟರನ ಮಗನಾದ ಸಿರಿಯಾದ ದೊರೆ 1ನೇ ಆಂಟಿಯೋಕಸ್ ಸಾಟರ್‌ನೊಂದಿಗೆ ಸ್ನೇಹ ಪೂರ್ಣ ಸಂಬಂಧ ಹೊಂದಿದ್ದನು.




10. ಪುಷ್ಯಮಿತ್ರ ಶುಂಗನಿಂದ ಹತನಾದ ಕೊನೆಯ ಮೌರ್ಯ ಅರಸ ಯಾರು?
ಎ. ಜಲೌಕ
ಬಿ. ಸಂಪ್ರತಿ
ಸಿ. ಬೃಹದ್ರಥ
ಡಿ. ದಶರಥ


ಸರಿಯಾದ ಉತ್ತರ: ಸಿ. ಬೃಹದ್ರಥ

ವಿವರಣೆ:

⏭ ಮೌರ್ಯ ಸಂತತಿಯ ಕೊನೆಯ ದೊರೆಯಾದ ಬೃಹದೃಥನನ್ನು ಮೌರ್ಯ ಸೇನಾಧಿಕಾರಿಯಾಗಿದ್ದ ಪುಷ್ಯಮಿತ್ರನು ಸೈನ್ಯದ ಸಮ್ಮುಖದಲ್ಲಿಯೇ ಮೌರ್ಯ ಸಾಮ್ರಾಟನನ್ನು ಕೊಲೆಗೈದು ಶುಂಗ ಸಂತತಿಯನ್ನು ಸ್ಥಾಪಿಸಿದನು. ಈ ಅಂಶವು ಬಾಣ ಕವಿಯ ಹರ್ಷಚರಿತ ಹಾಗೂ ಟಿಬೆಟ್ಟಿನ ಇತಿಹಾಸಕಾರ ತಾರಾನಾಥನಿಂದ ತಿಳಿದುಬರುತ್ತದೆ. ಮೌರ್ಯ ರಾಜನನ್ನು ಕೊಂದರೆ ಅದನ್ನು ಸೈನ್ಯವಾಗಲಿ, ಪ್ರಜೆಗಳಾಗಲಿ ವಿರೋಧಿಸಲಿಲ್ಲವೆಂದರೆ ಮೌರ್ಯ ಸಾಮ್ರಾಟನ ಪ್ರಜಾಪೀಡನೆ ಮತ್ತು ಗ್ರೀಕ್ ದಾಳಿಗಳನ್ನು ಎದುರಿಸಿ ಮಗಧ ಸಾಮ್ರಾಜ್ಯದ ಸೈನ್ಯದ ಗೌರವವನ್ನು ಕಾಪಾಡಲು ಅವನು ಅಸಮರ್ಥನೆಂಬ ಭಾವನೆಯು ತಿಳಿದುಬರುತ್ತದೆ.

⏭ ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಜನಗಣತಿಯನ್ನು ಆರಂಭಿಸಿದವರು ರೋಮನ್ನರು. ಎರಡನೆಯವರು ಮೌರ್ಯರು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads