ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡ ವಿಷಯದ ಪ್ರಮುಖ ಪ್ರಶ್ನೋತ್ತರಗಳು Kannada Top-30 Question Answers for All Competitive Exams-01
೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
ಉತ್ತರ: ಮಂಜೇಶ್ವರ ಗೋವಿಂದ ಪೈ
೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?
ಉತ್ತರ: ಬಾಬಾಬುಡನ್
೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು?
ಉತ್ತರ: ಜೆ.ಎಚ್.ಪಟೇಲ್
೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?
ಉತ್ತರ: ಎಸ್.ಎಮ್.ಕೃಷ್ಣ
೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು?
ಉತ್ತರ: ಈಸೂರು (ಶಿವಮೊಗ್ಗ ಜಿಲ್ಲೆ)
೬. ಸಾವಿರ ಹಾಡುಗಳ ಸರದಾರ ಯಾರು?
ಉತ್ತರ: ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)
೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಹರ್ಡೆಕರ್ ಮಂಜಪ್ಪ
೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು?
ಉತ್ತರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್
೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
ಉತ್ತರ: ಗಿರೀಶ್ ಕಾರ್ನಾಡ್
೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?
ಉತ್ತರ: ಕನ್ನಡದ ಸಂಸಾರ ನೌಕೆ (೧೯೩೬)
🏵🏵🏵🏵🏵
೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?
ಉತ್ತರ: ಮಂಗಳೂರು ಸಮಾಚಾರ
೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?
ಉತ್ತರ: ದಕ್ಷಿಣ ಕನ್ನಡ
೧೩. 'ತಿರುಕ' ಇದು ಯಾರ ಕಾವ್ಯನಾಮ?
ಉತ್ತರ: ಡಾ. ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ
೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?
ಉತ್ತರ: ಹೆಚ್.ಡಿ.ದೇವೆಗೌಡ
೧೫. ಕನ್ನಡದ ಮೊದಲ ಕೃತಿ ಯಾವುದು?
ಉತ್ತರ: ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)
೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?
ಉತ್ತರ: ವಿ. ಎಸ್. ರಮಾದೇವಿ
೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
ಉತ್ತರ: ಕೆ.ಎಸ್.ನಾಗರತ್ನಂ
೧೮. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
ಉತ್ತರ: ಕೋ.ಚನ್ನಬಸಪ್ಪ (ಬಿಜಾಪುರ)
೧೯.ಕನ್ನಡದ ಮೊದಲ ಕವಯತ್ರಿ ಯಾರು?
ಉತ್ತರ: ಅಕ್ಕಮಹದೇವಿ
೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು?
ಉತ್ತರ: ವಡ್ಡಾರಾಧನೆ
🏵🏵🏵🏵🏵
೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?
ಉತ್ತರ: ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)
೨೨. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?
ಉತ್ತರ: ಅಮರ ಶಿಲ್ಪಿ ಜಕಣಾಚಾರಿ
೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ?
ಉತ್ತರ: ಸಿದ್ದಯ್ಯ ಪುರಾಣಿಕ್
೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?
ಉತ್ತರ: ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)
೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ರಾಣಿ ಚೆನ್ನಭೈರಾದೇವಿ
೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?
ಉತ್ತರ: ರಣಧೀರ ಕಂಠೀರವ
೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?
ಉತ್ತರ: ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸಿಟ್ಯೂಟ್
೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ: ಡಾ|| ಕುವೆಂಪು
೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?
ಉತ್ತರ: ಸಂತ ಶಿಶುನಾಳ ಷರೀಪರು
೩೦. ಕನ್ನಡದ ಮೊದಲ ಶಾಸನ ಯಾವುದು?
ಉತ್ತರ: ಹಲ್ಮಿಡಿ ಶಾಸನ
No comments:
Post a Comment
If you have any doubts please let me know