ಭೂಗೋಳಶಾಸ್ತ್ರದ ಪರಿಚಯ Introduction to Geography in Kannada For All Competitive Exams
ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭೂಗೋಳಶಾಸ್ತ್ರದ ಜ್ಞಾನ ಅತಿ ಅವಶ್ಯವಾಗಿರುವಂಥದ್ದು. ಭೂಗೋಳ ಶಾಸ್ತ್ರದ ಪರಿಚಯ ಇಲ್ಲದಿರುವುದು ನಮ್ಮ ಯಶಸ್ಸಿಗೆ ಮುಳ್ಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಸ್ಪರ್ಧಾರ್ಥಿಗಳೂ ಕೂಡ ಭೂಗೋಳಶಾಸ್ತ್ರದ ಕುರಿತಾದ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವ ಅಗತ್ಯವಿರುತ್ತದೆ..!! ಆದ್ದರಿಂದ Edutube Kannada ಜಾಲತಾಣವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭೂಗೋಳಶಾಸ್ತ್ರದ ಕುರಿತಾದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ನಿಮಗೆ ನೀಡುತ್ತಿದೆ..!!
ಭೂಗೋಳ ಶಾಸ್ತ್ರ ಎಂದರೇನು?
🎯 ಭೂಗೋಳ ಶಾಸ್ತ್ರ (Geography): ಮಾನವನ ವಾಸ ಸ್ಥಾನವಾದ ಭೂ ಮೇಲ್ವಲಯ, ಅದರ ಭಿನ್ನತೆ ಹಾಗೂ ಅವುಗಳ ಪರಸ್ಪರ ಸಂಬಂಧ ಕುರಿತ ಅಧ್ಯಯನ.
ಪ್ರಾಕೃತಿಕ ಭೂಗೋಳಶಾಸ್ತ್ರ ಎಂದರೇನು?
🎯 ಪ್ರಾಕೃತಿಕ ಭೂಗೋಳಶಾಸ್ತ್ರ (Physical Geography):
ಮಾನವನ ಪರಿಸರದ ಬಗ್ಗೆ ಸಾಮಾನ್ಯ ಪರಿಜ್ಞಾನ ಮೂಡಿಸುವಂತಹ ಪೃಥ್ವಿಯ ವಿವಿಧಾಂಶಗಳನ್ನು ಕುರಿತ ವಿವರಣಾತ್ಮಕ ಅಧ್ಯಯನ.
🎯 ಪ್ರಾಕೃತಿಕ ಭೂಗೋಳಶಾಸ್ತ್ರದ ಅಧ್ಯಯನ ಕ್ಷೇತ್ರಗಳು:
ಶಿಲಾಗೋಳ, ಜಲಗೋಳ, ವಾಯುಗೋಳ ಮತ್ತು ಜೀವಗೋಳ (Lithosphere, Hydrosphere, Atmosphere and Biosphere) ಗಳು.
ಶಿಲಾಗೋಳ ಎಂದರೇನು?
🎯 ಶಿಲಾಗೋಳ: ಶಿಲಾಪ್ರಧಾನವೂ ಹಾಗೂ ಗಟ್ಟಿಯಾದ ಭೂಮಿಯ ಮೇಲ್ಪಿಪ್ಪಿಗೆ ಶಿಲಾಗೋಳವೆನ್ನುವರು.
ಜಲಗೋಳ ಎಂದರೇನು?
🎯 ಜಲಗೋಳ: ಭೂಮೇಲ್ವೆಯಲ್ಲಿ ಶೇ.71 ಭಾಗ ಜಲಾವೃತವಾದುದು. ಹೀಗಾಗಿ ಭೂಖಂಡಗಳನ್ನು ಎಲ್ಲೆಡೆಯೂ ಆವರಿಸಿರುವ ಉದಕ ಸಾಮ್ರಾಜ್ಯವನ್ನು (Water realm) ಜಲಗೋಳವೆನ್ನುವರು.
ವಾಯುಗೋಳ ಎಂದರೇನು?
🎯 ವಾಯುಗೋಳ: ಶಿಲಾಗೋಳ ಮತ್ತು ಜಲಗೋಳಗಳನ್ನು ಸುತ್ತುವರಿದಿರುವ ಅನಿಲಗಳ ಹೊರ ಹೊದಿಕೆ.
ಜೀವಗೋಳ ಎಂದರೇನು?
🎯 ಜೀವಗೋಳ: ಭೂಮಿಯ ಜೀವಿಗಳಿಗೆ ವಾಸ ಸ್ಥಾನವೂ, ಪೋಷಕವೂ ಆದ ಭೂಮೇಲ್ಬಾಗ ಮತ್ತು ಅದಕ್ಕೆ ಹೊಂದಿಕೊಂಡಿರುವ ವಲಯವೇ ಜೀವಗೋಳ,
🎯 ಪ್ರಾಕೃತಿಕ ಭೂಗೋಳಶಾಸ್ತ್ರದ ಶಾಖೆಗಳು ಹೀಗಿವೆ :
- ಖಗೋಳಶಾಸ್ತ್ರ (Astronomy)
- ಶಿಲಾಶಾಸ್ತ್ರ (Petr gy)
- ಗಣಿತ ಭೂಗೋಳಶಾಸ್ತ್ರ (Mathematical Geography)
- ಮಣ್ಣಿನ ಶಾಸ್ತ್ರ (Pedology)
- ಹವಾಮಾನ ಶಾಸ್ತ್ರ (Meteorology)
- ಜಲಶಾಸ್ತ್ರ (Hydrology)
- ವಾಯುಗುಣ ಶಾಸ್ತ್ರ (Climatology)
- ಜೀವ ಭೂಗೋಳಶಾಸ್ತ್ರ (Biogeography)
- ಭೂಸ್ವರೂಪ ರಚನಾಶಾಸ್ತ್ರ (Geomorphology)
ಭೂಗೋಳಶಾಸ್ತ್ರ ಎಂಬ ಪದವನ್ನು ಮೊದಲಿಗೆ ಬಳಸಿದವರು -
ಎರಾಟೊಸ್ತಾನೀಸ್ (ಕ್ರಿ.ಪೂ. 276- 194): ಮೊಟ್ಟ ಮೊದಲಿಗೆ “Geography' ಶಬ್ದವನ್ನು ಸಂಯೋಜಿಸಿದವರು.
ವಿಶ್ವ ಎಂದರೇನು?
ವಿಶ್ವ (Universe): ಎಂದರೆ ಸಕಲ ವಸ್ತುವನ್ನೂ ಒಳಗೊಂಡದ್ದು ಎಂದರ್ಥ. ನಕ್ಷತ್ರ, ಗ್ರಹ, ಉಪಗ್ರಹ, ಕುದಗ್ರಹ, ಉಲೆ, ಧೂಮಕೇತು ಮುಂತಾದ ಆಕಾಶಕಾಯಗಳೆಲ್ಲವೂ ವಿಶ್ವದಲ್ಲಿ ಸಮಾವೇಶಗೊಂಡಿವೆ. ಇದನ್ನು 'ಬ್ರಹ್ಮಾಂಡ' ಎಂತಲೂ ಕರೆಯಲಾಗಿದೆ.
ನಕ್ಷತ್ರ ಎಂದರೇನು?
ನಕ್ಷತ್ರ (Star): ತನ್ನದೇ ಆದ ಬೆಳಕಿನಿಂದ ಬೆಳಗುವ ಸ್ವಯಂ ಪ್ರಕಾಶಿತ ಆಕಾಶ ಕಾಯವೇ ನಕ್ಷತ್ರ, ಸೂರ್ಯನೂ ಒಂದು ನಕ್ಷತ್ರ. ಏಕೆಂದರೆ ಸೂರ್ಯ ತನ್ನದೇ ಆದ ಬೆಳಕಿನಿಂದ ಪ್ರಕಾಶಿಸುವ ಆಕಾಶಕಾಯವಾಗಿದೆ.
ತಾರಾಮಂಡಲ ಎಂದರೇನು?
ತಾರಾಮಂಡಲ (Galaxies): ಅಸಂಖ್ಯಾತ ನಕ್ಷತ್ರಗಳ ಸಮೂಹ. ದೃಗೋಚರಿತ ಬ್ರಹ್ಮಾಂಡದಲ್ಲಿ ಸುಮಾರು 1.3 ಟ್ರಿಲಿಯನ್ ತಾರಾಮಂಡಲಗಳಿವೆ ಎಂದು ಅಂದಾಜಿಸಲಾಗಿದೆ.
ಆಕಾಶಗಂಗೆ ಎಂದರೇನು?
ಆಕಾಶ ಗಂಗೆ ಅಥವಾ ಕ್ಷೀರಪಥ (Milkyway): ಕೆಲವೆಡೆ ನಕ್ಷತ್ರ ಸಮೂಹವು ಸಾಲಾಗಿ, ಬೆಳ್ಳಗೆ ಬೆಳಗುವ ದಾರಿಯಂತೆ ಗೋಚರಿಸುತ್ತದೆ. ಇದೇ ಕ್ಷೀರಪಥ. ಇದರಲ್ಲಿ 1,00,000 ದಶಲಕ್ಷ ನಕ್ಷತ್ರಗಳಿರಬಹುದು. ಸೂರ್ಯನು ಆ ಆಕಾಶಗಂಗೆಯ ಎಡಭಾಗದಂಚಿನಲ್ಲಿದೆ. ಆಕಾಶ ಗಂಗೆಯನ್ನು ಮೊದಲಿಗೆ (1610) ಗೆಲಿಲಿಯೊ ಕಂಡು ಹಿಡಿದನು.
ಜ್ಯೋತಿರ್ವರ್ಷ ಎಂದರೇನು?
ಜ್ಯೋತಿರ್ವರ್ಷ (Light Year): ಒಂದು ಸೆಕೆಂಡಿಗೆ 1,06,000 ಮೈಲಿ (3,00,000 ಕಿ.ಮಿ) ವೇಗದಲ್ಲಿ ಚಲಿಸುತ್ತಾ ಒಂದು ವರ್ಷದಲ್ಲಿ ಬೆಳಕು ಎಷ್ಟು ದೂರವನ್ನು ಸಂಚರಿಸುವುದೋ ಆದೇ ಜ್ಯೋತಿರ್ವರ್ಷ.
- ಒಂದು ಜ್ಯೋತಿರ್ವರ್ಷವು 9.5 ಮಿಲಿಯನ್ ಕಿ.ಮೀ.ಗೆ ಸಮ.
ಪಾರ್ಸೆಕ್ ಎಂದರೇನು?
ಪಾರ್ಸೆಕ್ (Parsec): ನಕ್ಷತ್ರಗಳ ನಡುವಣ ಅಂತರವನ್ನು ಅಳೆಯಲು ಬಳಸುವ ಮತ್ತೊಂದು ವಿಧಾನ. ಇದು ಜ್ಯೋತಿರ್ವರ್ಷಕ್ಕಿಂತ ದೊಡ್ಡ ಅಳತೆಮಾನ.
- ಅಂದರೆ 3.20 ಜೋತಿರರ್ವರ್ಷಗಳು = 1 ಪಾರ್ಸೆಕ್
ಹಬಲ್ ದೂರ ಎಂದರೇನು?
ಹಬಲ್ ದೂರ: ಹಬಲ್ ಕಾಲದಿಂದ ಬೆಳಕಿನ ವೇಗವನ್ನು ಗುಣಿಸಿದಾಗ ದೊರೆಯುವ ದೂರ.
ಖಗೋಳಮಾನ ಎಂದರೇನು?
ಖಗೋಳಮಾನ: ಆಕಾಶ ಕಾಯಗಳ ನಡುವಣ ದೂರವನ್ನು ಅದರಲ್ಲೂ ವಿಶೇಷವಾಗಿ ಸೂರ್ಯ ಮತ್ತು ಭೂಮಿಗಳ ಅಂತರ ತಿಳಿಯಲು ಅನುಸರಿಸುವ ಮಾಪನ.
- 1 ಖಗೋಳಮಾನ = 149 ಮಿಲಿಯನ್ ಕಿ.ಮೀ.ಗಳು.
- 63 ಖಗೋಳಮಾನ = 1 ಜ್ಯೋತಿರ್ವಷ್ರ.
ಜ್ಯೋತಿರ್ತಿಂಗಳು ಎಂದರೇನು?
ಜ್ಯೋತಿರ್ತಿಂಗಳು (Light Month): ಬೆಳಕು 30 ದಿನಗಳಲ್ಲಿ ಕ್ರಮಿಸಲು ತೆಗೆದುಕೊಳ್ಳವ ದೂರ.
'ಪ್ರಾಕ್ಸಿಮಾ ಸೆಂಟಾರಿ' ಏನಿದು?
ಪ್ರಾಕ್ಷಿ ಮಸೆಂಟಾರಿ (Proxima Centauri): ಸೂರ್ಯನಿಗೆ ಸಮೀಪದ ನಕ್ಷತ್ರ, ಭೂಮಿಯಿಂದ ಸರಾಸರಿ ದೂರ 4.24 ಜ್ಯೋತಿರ್ವರ್ಷಗಳು.
ಅಲ್ಲಾ ಸೆಂಟಾರಿ ಏನಿದು?
ಅಲ್ಲಾಸೆಂಟಾರಿ (Alpha Centauri): ಸೂರ್ಯನಿಗೆ ಮತ್ತೊಂದು ಸಮೀಪದ ನಕ್ಷತ್ರ, ಭೂಮಿಯಿಂದ ಇದರ ಸರಾಸರಿ ದೂರ 4.37 ಜ್ಯೋತಿರ್ವರ್ಷಗಳು.
ಸೌರವ್ಯೂಹ ಎಂದರೇನು?
ಸೌರ ವ್ಯೂಹ (Solar System): ಸೂರ್ಯನ ಆಕರ್ಷಣೆಗೆ ಒಳಪಟ್ಟು ಅದರ ಸುತ್ತ ಸುತ್ತುತ್ತಿರುವ ಗ್ರಹ, ಉಪಗ್ರಹ, ಉಲ್ಕೆ, ಧೂಮಕೇತು ಮತ್ತು ಕ್ಷುದ್ರ ಗ್ರಹಗಳ ಪರಿವಾರ.
ಗ್ರಹಗಳು ಎಂದರೇನು?
ಗ್ರಹಗಳು (Planets): ಸ್ವಯಂ ಪ್ರಕಾಶಿತವಲ್ಲದ, ಗಾತ್ರದಲ್ಲಿ ನಕ್ಷತ್ರಗಳಿಗಿಂತ ಚಿಕ್ಕದಾದ, ತನ್ನ ನಕ್ಷತ್ರದ ಸುತ್ತು ಸುತ್ತುವ ಆಕಾಶ ಕಾಯಗಳು. ಸೌರವ್ಯೂಹದಲ್ಲಿ 8 ಗ್ರಹಗಳಿವೆ. ಅವು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತವೆ.
- ಉದಾ: ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ ಮತ್ತು ಯೂರೇನಸ್
ಬಾಹ್ಯ ಗ್ರಹಗಳು: ಗುರು, ಶನಿ, ಯೂರೇನಸ್ ಮತ್ತು ನೆಷ್ಟೂನ್.
ಅಂತರ್ ಗ್ರಹಗಳು: ಬುಧ, ಶುಕ್ರ, ಭೂಮಿ ಮತ್ತು ಮಂಗಳ.
ಪ್ಲೂಟೊ ಒಂದು ಕ್ಷುದ್ರಗ್ರಹ :
ಆಗಸ್ಟ್ 24, 2006 ರಂದು ಅಂತಾರಾಷ್ಟ್ರೀಯ ಖಗೋಳವಿಜ್ಞಾನ ಸಂಘ (IAU) ದ ಮಹಾ ಅಧಿವೇಶನದಲ್ಲಿ ಪ್ಲೂಟೊವನ್ನು ಗ್ರಹವಲ್ಲ ಎಂದು ನಿರ್ಣಯಿಸಲಾಯಿತು.
ಸೂರ್ಯ :
ಸೂರ್ಯ (The Sun): ಕ್ಷೀರ ಪಥದಲ್ಲಿರುವ ಅಸಂಖ್ಯಾತ ನಕ್ಷತ್ರಗಳಲ್ಲಿ ಸೂರ್ಯನೂ ಒಂದು ನಕ್ಷತ್ರ, ನಮ್ಮ ಸೌರವ್ಯೂಹದ ಕೇಂದ್ರ ವಸ್ತು, ವಿಸೃತ ಅನಿಲಗಳ ಸಮೂಹದಿಂದಾಗಿದ್ದು, ಬೃಹತ್ತಾದ ಉರಿಯುವ ಜ್ವಾಲೆಗಳನ್ನು ಹೊರ ಹೊಮ್ಮಿಸುತ್ತದೆ. ಇದರಿಂದ ನಮಗೆ ಬೇಕಾಗುವ ಬೆಳಕು ಮತ್ತು ಚೈತನ್ಯಗಳು ದೊರೆಯುತ್ತವೆ.
ಉಲ್ಕೆಗಳು ಎಂದರೇನು?
ಉಲ್ಕೆಗಳು (Meteor): ರಾತ್ರಿ ವೇಳೆ ಆಗಸದಿಂದ ವಾಯುಗೋಳದ ಮೂಲಕ ಭೂಮಿಗೆ ಪ್ರಜ್ವಲಿಸುತ್ತಾ ಬೀಳುವ ತುಣುಕ ವಸ್ತು. ಗ್ರಹ ಅಥವಾ ಇತರ ಆಕಾಶ ಕಾಯಗಳ ಭಗ್ನಾವಶೇಷಗಳು.
No comments:
Post a Comment
If you have any doubts please let me know