15-09-2021 Daily Current Affairs and Current Affairs Question Answers in Kannada for All Competitive Exams
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ವಿಜ್ಞಾನದ ಟಾಪ್-10 ಪ್ರಶ್ನೋತ್ತರಗಳು"
💥💥💥💥
ಗಡಿಕಾವಲಿಗೆ ರೆಕ್-ಎಂಕೆ-2' ರೋಬಾಟ್ : ಇಸ್ರೇಲ್
ಸರ್ಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡ ಸ್ಪೀಸ್ ಅಭಿವೃದ್ಧಿ ಪಡಿಸಿರುವ ನಾಲ್ಕು ಚಕ್ರಗಳ ಮೇಲೆ ಸಾಗುವ “ರೆಕ್-ಎಂಕೆ-2' ರೋಬಾಟ್‌ನ್ನು ಇಸ್ರೇಲ್ ಗಡಿಯಲ್ಲಿ ಕಾವಲು ನಡೆಸಲು ನಿಯೋಜಿಸಿದೆ. ಈ ರೋಬಾಟ್ ಗಡಿಯಲ್ಲಿ ನುಸುಳು ಕೋರರನ್ನು ಪತ್ತೆ ಹಚ್ಚಿ ಅದರ ಮೇಲೆ ಗುಂಡುಹಾರಿಸುವ ದಕ್ಷತೆ ಹೊಂದಿದೆ. ಈ ರೋಬಾಟ್ ಇಲೆಕ್ಟ್ರಾನಿಕ್ ಟ್ಯಾಬ್ಲೆಟ್ ಮೂಲಕ ಕಾರ್ಯಾಚರಿಸುತ್ತಿದ್ದು, ಅದರಲ್ಲಿ ಎರಡು ಮಷಿನ್‌ಗನ್, ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಅಳವಡಿಸಬಹುದಾಗಿದೆ. ಭೂಸೇನೆಗೆ ಬೇಹುಗಾರಿಕೆ ಮಾಹಿತಿ ಸಂಗ್ರಹ, ಗಾಯಾಳು ಸೈನಿಕರನ್ನು ಸಾಗಿಸುವುದು, ಮತ್ತು ರಣರಂಗಕ್ಕೆ ಪರಿಕರ ಸಾಗಾಟ ಮೊದಲಾದ ಕೆಲಸಗಳನ್ನು ನಿಭಾಯಿಸುತ್ತದೆ. ಹಾಗೂ ರೋಬಾಟ್, ಸಮೀಪದ ಟಾರ್ಗೇಟ್‌ಗಳ ಮೇಲೆ ದಾಳಿಯನ್ನು ಮಾಡಬಲ್ಲದು.
ತೇಲುವ ಸೌರ ಘಟಕ - ತುಮಕೂರು
ರಾಜ್ಯದಲ್ಲೇ ಮೊದಲ “ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ತುಮಕೂರಿ ನಲ್ಲಿರುವ ಬುಗಡ ನಹಳ್ಳಿ ಜಲ ಸಂಗ್ರಹಗಾರ 60 ಎಕರೆ ಪ್ರದೇಶ ದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಯಡಿಯಲ್ಲಿ ನಿರ್ಮಿಸಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ 20 ಮೆಗಾ ವ್ಯಾಟ್ ಸೌರವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪಾಲಿಕೆ ಒಡೆತನದ ಬುಗಡನಹಳ್ಳಿ ಜಲಸಂಗ್ರಹಾಗಾರದ ಮೇಲೆ ಫೋಟೋವೊಲ್ಟಾಯಿಕ್ ಫಲಕಗಳನ್ನು ಅಳವಡಿಸಲಾಗುತ್ತದೆ.
ಯೋಜನೆಯ ಮುಖ್ಯಾಂಶಗಳು
* 20 ಮೆಗಾವ್ಯಾಟ್ ಸಾಮರ್ಥ್ಯ
* 60 ಎಕರೆ ಪ್ರದೇಶದಲ್ಲಿ ಸೌರ ಫಲಕಗಳ ಅಳವಡಿಕೆ
* ಜಲಸಂಗ್ರಹಣಾಗಾರದ ನೀರು ಆವಿಯಾಗುವುದನ್ನು ತಗ್ಗಿಸಬಹುದು.
* 2.5 ಕೋಟಿ ರೂಪಾಯಿ ವಿದ್ಯುತ್ ಬಿಲ್ ಉಳಿತಾಯ ತುಮಕೂರು
* ತುಮಕೂರು ಜಿಲ್ಲೆಯ ಪಾವಗಡ ಎಂಬಲ್ಲಿ ಏಷ್ಯಾದ ಅತಿದೊಡ್ಡ “ಸೋಲಾರ್ ಪಾರ್ಕ್'ನ್ನು ಸ್ಥಾಪಿಸಲಾಗಿದೆ.
* ತುಮಕೂರು ಜಿಲ್ಲೆಯಲ್ಲಿ “ಮಾರ್ಕೋನ ಹಳ್ಳಿ ಅಣೆಕಟ್ಟು” ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
* ತುಮಕೂರು ಜಿಲ್ಲೆಯು ಕರ್ನಾಟಕದಲ್ಲಿಯೇ ಅತೀ ಹೆಚ್ಚು ಕೆಂಪು ಮಣ್ಣು, ಅತಿ ಹೆಚ್ಚು ರಾಗಿ ಉತ್ಪಾದಿಸುವ ಮತ್ತು ಅತಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ.
* ತುಮಕೂರು ಜಿಲ್ಲೆಯ ವಸಂತನರಸಾಪುರ ಎಂಬ ಸ್ಥಳದಲ್ಲಿ ಪ್ರಥಮ “ಫುಡ್ ಪಾರ್ಕ್'ನ್ನು 2014 ಸೆಪ್ಟೆಂಬರ್ 24 ರಂದು ಸ್ಥಾಪಿಸಲಾಗಿದೆ.
ಐಸಿಸಿ ಆಗಸ್ಟ್ ತಿಂಗಳ ಆಟಗಾರ ಜೋರೂಟ್
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಆಗಸ್ಟ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಐರ್ಲೆಂಡ್ ಆಲ್‌ರೌಂಡರ್ ಎಮಿಯರ್ ರಿಚರ್ಡಸನ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡಿನ ಜೋರೂಟ್ ಭಾರತದ ವಿರುದ್ಧ ಆಗಸ್ಟ್‌ನಲ್ಲಿ ಆಡಿದ 3 ಟೆಸ್ಟ್ ಪಂದ್ಯಗಳಿಂದ ಸತತ 3 ಶತಕ ಒಳಗೊಂಡಂತೆ 507 ರನ್ ನೀಡಿದ್ದು, ಈ ಪ್ರಶಸ್ತಿ ಆಯ್ಕೆಗೆ ಕಾರಣವಾಗಿದೆ.
Note :
ಐಸಿಸಿಯು 2021 ರ ಸಾಲಿನಿಂದ ಐಸಿಸಿ ತಿಂಗಳ ಪ್ರಶಸ್ತಿ ಕೊಡಲು ಆರಂಭಿಸಿದ್ದು, ಇದರ ಮೊದಲ ತಿಂಗಳು ಅಂದರೆ ಜನವರಿ 2021 ರ ತಿಂಗಳ ಆಟಗಾರ ಪ್ರಶಸ್ತಿ ಭಾರತದ ರಿಷಬ್ ಪಂಥ್ ಪಡೆದುಕೊಂಡಿದ್ದಾರೆ.
ಅಮೆರಿಕ ಓಪನ್ ಮಹಿಳಾ ಚಾಂಪಿಯನ್ : ಎಮಾ ರಡುಕಾನು
ನ್ಯೂಯಾರ್ಕ್‌ನಲ್ಲಿ ನಡೆದ 2021 ರ ಸಾಲಿನ ಅಮೇರಿಕನ್ ಓಪನ್‌ನಲ್ಲಿ ಮಹಿಳಾ ವಿಭಾಗದ ಫೈನಲ್ಪಂ ದ್ಯದಲ್ಲಿ ಬ್ರಿಟನ್‌ನ ಎಮಾ ರಡುಕಾನು ಕೆನಡಾದ ಲೇಲಾ ಫರ್ನಾಂಡಿಸ್ ಅವರನ್ನು 6-4, 6-3 ಅಂತರದಲ್ಲಿ ಸೋಲಿಸುವ ಮೂಲಕ ಗೆಲುವು ತಮ್ಮದಾಗಿಸಿಕೊಂಡರು. 1977 ರ ವಿಂಬಲ್ಡನ್ ಟೂರ್ನಿಯ ಚಾಂಪಿಯನ್ ಆದ ವರ್ಜಿನಿಯಾ ವೇಡ್ ಅವರ ನಂತರ ಗ್ರಾಂಡ್ ಸ್ಲಾಂ ಟೂರ್ನಿಯೊಂದರ ಪ್ರಶಸ್ತಿ ಗಳಿಸಿದ ಬ್ರಿಟನ್‌ನ ಮೊದಲ ಮಹಿಳೆ ರಡುಕಾನು. ಗ್ರಾಂಡ್ ಸ್ಲಾಂ ಟೂರ್ನಿಯೊಂದರ ಅರ್ಹತಾ ಸುತ್ತಿನಲ್ಲಿ ಆಡಿ ಪ್ರಶಸ್ತಿ ಗಳಿಸಿದ ಮೊದಲ ಟೆನಿಸ್ ಪಟು ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
* ಅಮೇರಿಕನ್ ಓಪನ್ ರನ್ನರ್ ಅಪ್ - ಲೈಲಾಫರ್ನಾಂಡಿಸ್
ಅಮೇರಿಕನ್ ಓಪನ್ ಜಯಸಿದ ಎಮಾ ರಡುಕಾನು ನಿಂದ ಸೃಷ್ಟಿಯಾದ ವಿಶೇಷತೆಗಳು
1. 2014 ರ ಬಳಿಕ ಸೆಟ್ ಸೋಲದೆ ಚಾಂಪಿಯನ್ ಆಟಗಾರ್ತಿ. (2014 ರಲ್ಲಿ ಸೆರೆನಾ ಒಂದೂ ಸೆಟ್ ಸೋತಿರಲಿಲ್ಲ)
2. ರಡುಕಾನು ಈ ಟೂರ್ನಿಯಲ್ಲಿ ಅರ್ಹತಾ ಸುತ್ತು ಸೇರಿ ಸತತ 10 ಪಂದ್ಯಗಳಲ್ಲಿ ಗೆಲವು ಸಾಧಿಸಿದ್ದಾರೆ.
3, 2004 ರ ಬಳಿಕ ಗ್ರಾಂಡ್ ಸ್ಲಾಂ ಗೆದ್ದ ಅತಿ ಕಿರಿಯ ಆಟಗಾರ್ತಿ (2004 ರಲ್ಲಿ 17 ವರ್ಷದ ಶರಪೋವಾ ವಿಂಬಲ್ಡನ್ಗೆ ದ್ದಿದ್ದರು)
2021 ರಲ್ಲಿ 4 ಗ್ರಾಂಡ್ ಸ್ಲಾಂ ಗಳ ಮಹಿಳಾ ವಿಭಾಗದ ಚಾಂಪಿಯನ್ಸ್
1. ಆಸ್ಟ್ರೇಲಿಯನ್ ಓಪನ್ - ಜಪಾನ್‌ನ ನವೋಮಿ ಓಸಾಕಾ
2. ಫ್ರೆಂಚ್ ಓಪನ್ – ಚೆಕ್ ಗಣರಾಜ್ಯದ ಬೊರ್ಬೊರಾ ಕ್ರೇಜಿಕೋವಾ.
3. ವಿಂಬಲ್ಡನ್ ಓಪನ್ - ಆಸ್ಟ್ರೇಲಿಯಾದ ಆಶ್ಲೇಬಾರ್ಟಿ
4. ಯುಎಸ್ ಓಪನ್ – ಬ್ರಿಟನ್‌ನ ಎಮ್ಮಾ ರಡುಕಾನು
Note:
* 2021 ರ ಸಾಲಿನ ಯುಎಸ್ ಓಪನ್‌ನ ಪುರುಷರ ವಿಭಾಗದಲ್ಲಿ
1. ರಷ್ಯಾದ ಆಟಗಾರ ಡ್ಯಾನಿಯಲ್ ಮೆಡ್ವಡೆವ್
2. ರನ್ನರ ಅಪ್ : ಸರ್ಬಿಯಾದ ಜೋಕೋವಿಕ್
ಪ್ರಚಲಿತ ಘಟನೆಯ ಪ್ರಶೋತ್ತರಗಳು
1. ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸುತ್ತಾರೆ?
ಎ) ಸೆಪ್ಟೆಂಬರ್ – 08
ಬಿ) ಸೆಪ್ಟೆಂಬರ್ - 10
ಸಿ) ಸೆಪ್ಟೆಂಬರ್ -11
ಡಿ) ಸೆಪ್ಟೆಂಬರ್ -12
ಸರಿಯಾದ ಉತ್ತರ : ಬಿ) ಸೆಪ್ಟೆಂಬರ್ -10
2. ಯುದ್ಧ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಮಾನ ತುರ್ತು ಭೂ ಸ್ಪರ್ಶಕ್ಕೆ ಅನುವಾಗುವಂತೆ ಈ ಕೆಳಗಿನ ಯಾವ ಸಂಸ್ಥೆ ರಸ್ತೆ ನಿರ್ಮಿಸಿದೆ?
ಎ) ಭಾರತೀಯ ಭೂಸೇನೆ
ಬಿ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಸಿ) ಗೃಹ ಇಲಾಖೆ
ಡಿ) ಯಾವುದು ಅಲ್ಲ
ಸರಿಯಾದ ಉತ್ತರ : ಬಿ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
3.ಎಕೋಟ್ರಾಫಿನ್ ಎನ್ನುವುದು ---?
ಎ) ಪುರುಷ ಶೌಚಾಲಯಗಳಲ್ಲಿ ಬಳಸುವ ಸರಳ ಯಂತ್ರ
ಬಿ) ಡಿಸೇಲ್ ಇಂಜೀನ್‌ಗಳಲ್ಲಿ ಬಳಸುವ ಸರಳ ಯಂತ್ರ
ಸಿ) ನಾರಿನ ಶುದ್ದೀಕರಣದಲ್ಲಿ ಬಳಸುವ ಸರಳ ಯಂತ್ರ
ಡಿ) ವಾಷಿಂಗ್ ಮಷಿನ್‌ನಲ್ಲಿ ಬಳಸುವ ಯಂತ್ರ
ಸರಿಯಾದ ಉತ್ತರ : ಎ) ಪುರುಷ ಶೌಚಾಲಯಗಳಲ್ಲಿ ಬಳಸುವ ಸರಳ ಯಂತ್ರ
4. ರಾಷ್ಟ್ರೀಯ ಸಾಂಸ್ಥಿಕ ಬ್ಯಾಂಕಿಂಗ್ ಚೌಕಟ್ಟು ರೂಪಿಸಿರುವ ವರದಿ ಪ್ರಕಾರ ಈ ಕೆಳಗಿನ ಯಾವ ಸಂಸ್ಥೆ ಮೊದಲನೇ ಸ್ಥಾನಗಳಿಸಿದೆ?
ಎ) ಐಐಟಿ ಖರಗಪುರ
ಬಿ) ಐಐಟಿ ದೆಹಲಿ
ಸಿ) ಐಐಟಿ ಮದ್ರಾಸ್
ಡಿ) ಐಐಟಿ ಧಾರವಾಡ
ಸರಿಯಾದ ಉತ್ತರ : ಸಿ) ಐಐಟಿ ಮದ್ರಾಸ್
5. ಇತ್ತೀಚೆಗೆ ದಾಖಲಾದ ಸರಾಸರಿ ಉಷ್ಣಾಂಶ 31.7°c ಆಗಿತ್ತು, ಇದು ಈ ಕೆಳಗಿನ ಎಷ್ಟು ವರ್ಷಗಳ ಸರಾಸರಿಗಿಂತ ಅಧಿಕವಾಗಿದೆ?
ಎ) 110 ವರ್ಷ
ಬಿ) 120 ವರ್ಷ
ಸಿ) 130 ವರ್ಷ
ಡಿ) 118 ವರ್ಷ
ಸರಿಯಾದ ಉತ್ತರ: ಬಿ) 120 ವರ್ಷ
6. ಇತ್ತೀಚೆಗೆ ಈ ಕೆಳಗಿನ ಯಾವ ಗ್ರಹದಲ್ಲಿ ನೀರಿನ ಕುರುಹು ಪತ್ತೆಯಾಗಿದೆ?
ಎ) ಬುಧ
ಬಿ) ಮಂಗಳ
ಸಿ) ಶುಕ್ರ
ಡಿ) ಗುರು
ಸರಿಯಾದ ಉತ್ತರ: ಬಿ) ಮಂಗಳ
No comments:
Post a Comment
If you have any doubts please let me know