Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 24 August 2021

24 August 2021 Current Affairs || Daily Current Affairs 2021 || 24-08-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

24 August 2021 Current Affairs || Daily Current Affairs 2021 || 24-08-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು 

24 August 2021 Current Affairs || Daily Current Affairs 2021 || 24-08-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು



24 August 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ ಸಂಗ್ರಹ. ದೈನಂದಿನ ಕನ್ನಡ ಪ್ರಚಲಿತ ವಿದ್ಯಮಾನಗಳು ನಿಮಗಾಗಿ..!! ಉತ್ತರಗಳು ಕೊನೆಯಲ್ಲಿವೆ...!!! ಈಗಲೇ ನೋಟ್ಸ್ ಮಾಡಿಕೊಳ್ಳಿ...!!! 


ದಿನಾಂಕ 24-08-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಕ್ವಿಜ್ ಇಲ್ಲಿದೆ..!!!

01. ಭಾರತದ ಮೊದಲ ಸ್ಮಾರ್ಟ್ ಅವರು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
  1. ಕರ್ನಾಟಕ
  2. ಹೈದರಾಬಾದ್
  3. ದೆಹಲಿ
  4. ಉತ್ತರಪ್ರದೇಶ

ಸರಿಯಾದ ಉತ್ತರ: ದೆಹಲಿ

ವಿವರಣೆ :

ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ನಿಯಂತ್ರಣಕ್ಕಾಗಿ ಸ್ಮಾಗ್ ಟವರ್ ಗಳನ್ನು ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.

ಏನಿದು ಸ್ಮಾಗ್ ಟವರ್ :

  • ಉಸಿರಾಡಲು ಯೋಗ್ಯವಾಗುವಂತೆ ಕಲುಷಿತ ಗಾಳಿಯನ್ನು ಶುದ್ಧಗೊಳಿಸುವ ಯೋಜನೆ ಇದಾಗಿದೆ.
  • 20 ಮೀಟರ್ ಎತ್ತರವಿರುವ ಈ ಟವರ್ ಪ್ರತಿ ಸೆಕೆಂಡಿಗೆ ಸುಮಾರು 1000 ಕ್ಯೂಬಿಕ್ ಮೀಟರ್ ನಷ್ಟು ಗಾಳಿಯನ್ನು ಶುದ್ಧಗೊಳಿಸಲಿದೆ. ಅಲ್ಲದೇ ಈ ಟವರ್ ತನ್ನ 1  ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೇ.‌70 ರಷ್ಟು ಗಾಳಿಯನ್ನು ಶುದ್ಧೀಕರಿಸಲಿದೆ ಎಂದು ಅಂದಾಜಿಸಲಾಗಿದೆ.
  • ವೆಚ್ಚ : 22 ಕೋಟಿ. ರೂ.
  • ನಿರ್ಮಾಣ : ಟಾಟಾ ಪ್ರಾಜೆಕ್ಟ್ ಲಿಮಿಟೆಡ್
  • ತಾಂತ್ರಿಕ ಸಹಕಾರ : ಐಐಟಿ ಬಾಂಬೆ
  • ಯೋಜನೆಯ ಮೌಲ್ಯಮಾಪನ : ಐಐಟಿ ದೆಹಲಿ
  • ನಿರ್ವಹಣೆ : ಎನ್ ಬಿ ಸಿ ಸಿ ಇಂಡಿಯಾ ಲಿಮಿಟೆಡ್
  • ಸ್ಮಾಗ್ ಟವರ್ ನ ವಿಶೇಷತೆ : ಪ್ರಸ್ತುತ ಉದ್ಘಾಟನೆಗೊಂಡಿರುವ ಎರಡು ಟವರ್ ಗಳಲ್ಲಿ ಒಟ್ಟು 1200 ಏರ್ ಫಿಲ್ಟರ್ ಗಳಿದ್ದು ಇವುಗಳನ್ನು ಅಮೆರಿಕದ ಮಿನ್ನೆಸೊಟ ಯೂನಿವರ್ಸಿಟಿಯ ತಜ್ಞರು ಅಭಿವೃದ್ಧಿಪಡಿಸಿದ್ದಾರೆ.

02. ಗ್ರಹದ ಸ್ಥಾನಮಾನ ಕಳೆದುಕೊಂಡ ಪ್ಲುಟೋ ಗ್ರಹವನ್ನು ಯಾವ ದಿನದಂದು ಕುಬ್ಜ ಗ್ರಹ ಎಂದು ಪರಿಗಣಿಸಲಾಯಿತು.?
  1. ಆಗಸ್ಟ್‌ 24, 2005
  2. ಆಗಸ್ಟ್‌ 24, 2006
  3. ಆಗಸ್ಟ್‌ 24, 2007
  4. ಆಗಸ್ಟ್‌ 24, 2004.

ಸರಿಯಾದ ಉತ್ತರ : ಆಗಸ್ಟ್‌ 24, 2006

2006 ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ಪ್ಲುಟೋ ಗ್ರಹವನ್ನು ಗ್ರಹ ಸ್ಥಾನದಿಂದ ಕೆಳಗಿಳಿಸಿ, ಅದನ್ನು ಕುಬ್ಜಗ್ರಹ ಎಂದು ವರ್ಗೀಕರಿಸಿತು.

ಗ್ರಹದ ಸ್ಥಾನದಿಂದ ಕೈಬಿಡಲು ಕಾರಣವೇನು?

ಪ್ಲುಟೋ ಸಂಪೂರ್ಣ ಗ್ರಹವೂ ಅಲ್ಲದೇ, ನಕ್ಷತ್ರವೂ ಅಲ್ಲದೇ ಇರುವುದರಿಂದ ಇದನ್ನು ಕುಬ್ಜಗ್ರಹವೆಂದು ಪರಿಗಣಿಸಲಾಗಿದೆ‌. ಈ ಗ್ರಹದ ಗಾತ್ರ, ಗುರುತ್ವ ಬಲ ಹಾಗೂ ಇನ್ನಿತರೆ ಅಂಶಗಳನ್ನು ಪರಿಗಣಿಸಿ ಇದನ್ನು ಗ್ರಹ ವ್ಯವಸ್ಥೆಯಿಂದ ಹೊರಗಿಡಲಾಗಿದೆ.

ಗ್ರಹ ಎಂದು ಪರಿಗಣಿಸಲು ಇರಬೇಕಾದ ಮಾನದಂಡಗಳು:
1) ಸೂರ್ಯನ ಸುತ್ತ ಕಕ್ಷೆಯಲ್ಲಿ ಪರಿಭ್ರಮಿಸಬೇಕು.
2) ಕಕ್ಷಾವಲಯದ ಆಸುಪಾಸಿನ ಆಕಾಶಕಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸ್ವಯಂ ಗುರುತ್ವಾಕರ್ಷಣೆಗೆ ಸಾಕಷ್ಟು ದ್ರವ್ಯರಾಶಿಯನ್ನು ಹೊಂದಿರುತ್ತದೆ. ಇದರಿಂದಾಗಿ ಅದು ಹೈಡ್ರೋಸ್ಟಾಡಿಕ್ ಸಮತೋಲನವನ್ನು ನಿರ್ವಹಿಸಬೇಕು.
3) ತನ್ನ ಕಕ್ಷೆಯ ಸುತ್ತಲಿನ ನೆರೆಹೊರೆಯಲ್ಲಿ ಯಾವುದೇ ಇತರ ಪ್ರಬಲ ಆಕಾಶಕಾಯಗಳನ್ನು ಹೊಂದಿರಬಾರದು.

ಪ್ಲುಟೋ ಮೊದಲ ಎರಡು ಮಾನದಂಡಗಳನ್ನು ಹೊಂದಿದ್ದು ಮೂರನೇ ಮಾನದಂಡದಲ್ಲಿ ವಿಫಲವಾಗಿದ್ದರಿಂದ ಇದನ್ನು ಗ್ರಹದ ಸ್ಥಾನದಿಂದ ಕೈಬಿಡಲಾಗಿದೆ.

ಪ್ರಸ್ತುತ ಇರುವ 5 ಕುಬ್ಜ ಗ್ರಹಗಳು
  1. ಪ್ಲುಟೋ
  2. ಸೆರೆಸ್
  3. ಎರಿಸ್
  4. ಹೌಮಿಯಾ
  5. ಮೇಕ್ಮೆಕ್

03. ಪ್ರಸ್ತುತ ಭಾರತ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷರು ಯಾರು?
  1. ದೀಪಿಕಾ ಪಡುಕೋಣೆ
  2. ಪಿ. ವಿ. ಸಿಂಧು
  3. ದೀಪಾ ಮಲಿಕ್
  4. ಮೀರಾಬಾಯಿ ಚಾನು

ಸರಿಯಾದ ಉತ್ತರ : ದೀಪಾ ಮಲಿಕ್

ರಿಯೋ ಪ್ಯಾರಾಲಿಂಪಿಕ್ಸ್ ನ ಮಹಿಳೆಯರ ಶಾಟ್ ಪುಟ್ ವಿಭಾಗದಲ್ಲಿ ಬೆಳ್ಳಿಒದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಖ್ಯಾತಿ ಹೊಂದಿದ ಹರಿಯಾಣ ಮೂಲದ ದೀಪಾ ಮಲಿಕ್ ಈಗ ಭಾರತ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್ ವಿಶೇಷತೆ
  • ಆರಂಭ : ಆಗಸ್ಟ್ 24 ರಿಂದ ಸೆಪ್ಟೆಂಬರ್ 05
  • ಭಾಗವಹಿಸುತ್ತಿರುವ ದೇಶಗಳು : 163
  • ಅಥ್ಲೀಟ್ ಗಳು : 4537
  • ಕ್ರೀಡೆಗಳು : 22 ಕ್ರೀಡೆಗಳ 540 ವಿಭಾಗಗಳು
  • ಹೊಸ ಸೇರ್ಪಡೆ : ಬ್ಯಾಡ್ಮಿಂಟನ್ ಮತ್ತು ಟೇಕ್ವಾಂಡೋ
  • ಭಾರತದ ಸ್ಪರ್ಧಿಗಳು : 54 (ಪುರುಷ-40, ಮಹಿಳೆ-14)

04. ಇತ್ತೀಚೆಗೆ ಯಾವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯುತ್ತಮ ಸಿಬ್ಬಂದಿಗೆ ಸೇವೆ ನೀಡಿದ್ದಕ್ಕಾಗಿ ಏಷ್ಯಾದ ಪ್ರಶಸ್ತಿಯನ್ನು ಪಡೆದಿದೆ?
  1. ನೇತಾಜಿ ಸುಭಾಷ್ ಚಂದ್ರಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೊಲ್ಕತ್ತಾ.
  2. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
  3. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು.
  4. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿ.

ಸರಿಯಾದ ಉತ್ತರ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು.

ವಿವರಣೆ :

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯುತ್ತಮ ಸಿಬ್ಬಂದಿಗೆ ಸೇವೆ ನೀಡಿದ್ದಕ್ಕಾಗಿ ಪ್ರಶಸ್ತಿಯನ್ನು ಪಡೆದಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ (SWA) ಈ ಪ್ರಶಸ್ತಿಯನ್ನು ನೀಡುತ್ತದೆ. ಭಾರತ ಮತ್ತು ಮಧ್ಯ ಏಶಿಯಾದ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಎಂಬ ಹಿರಿಮೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಪಡೆದುಕೊಂಡಿದ್ದಾರೆ.

05. 2021 ನೇ ಸಾಲಿನ ಶಾಂಘೈ ARWU Academic ರ್ಯಾಂಕಿಂಗ್ ನ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಎಷ್ಟು ವಿವಿಗಳು ಸ್ಥಾನ ಪಡೆದಿವೆ.?
  1. 12
  2. 14
  3. 24
  4. 34

ಸರಿಯಾದ ಉತ್ತರ : 14

ವಿವರಣೆ :

2021 ನೇ ಸಾಲಿನ ಶಾಂಘೈ ARWU Academic ರ್ಯಾಂಕಿಂಗ್ ನ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ವೆಲ್ಲೂರು ತಾಂತ್ರಿಕ ಮಹಾವಿದ್ಯಾಲಯ 801-900 ರೊಳಗೆ ಸ್ಥಾನ ಪಡೆದಿದೆ.

ಜಗತ್ತಿನ 1000 ವಿವಿಗಳ ಪಟ್ಟಿಯಲ್ಲಿ ಭಾರತದ 14 ವಿವಿಗಳು ಸ್ಥಾನ ಪಡೆದಿವೆ‌.

06. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಗೆ ಚಾಲನೆ ನೀಡಿದ ದೇಶದ ಮೊದಲ ರಾಜ್ಯ ಯಾವುದು?
  1. ಆಂಧ್ರಪ್ರದೇಶ
  2. ತಮಿಳುನಾಡು
  3. ಕೇರಳ
  4. ಕರ್ನಾಟಕ

ಸರಿಯಾದ ಉತ್ತರ : ಕರ್ನಾಟಕ

07. ಇತ್ತೀಚೆಗೆ ಬಿಡುಗಡೆಯಾದ "Lets Go Time Travelling Again" ಕೃತಿಯ ಕರ್ತೃ ಯಾರು?
  1. ಸುಧಾ ಮೂರ್ತಿ
  2. ಸುಭದ್ರ ಸೇನ್ ಗುಪ್ತಾ
  3. ಆನಂದಿಬೆನ್
  4. ಅಮಿತಾವ್ ಘೋಷ್

ಸರಿಯಾದ ಉತ್ತರ : ಸುಭದ್ರ ಸೇನ್ ಗುಪ್ತ


Click Here to Attend PSI PC 2021 Mock Test For Free

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads