ಬುದ್ಧಿಶಕ್ತಿಯ ಅರ್ಥ ಮತ್ತು ವ್ಯಾಖ್ಯಾನಗಳು : Meaning and Definitions of Intelligence
ಬುದ್ಧಿಶಕ್ತಿಯ ಅರ್ಥ
Intelligence ಎಂಬ ಪದವು ಲ್ಯಾಟಿನ್ ಭಾಷೆಯ Intelligere ಎಂಬ ಪದದಿಂದ ಬಂದಿದ್ದು, ಇದರ ಅರ್ಥ to understand, Pickout ಎಂಬ ಅರ್ಥವನ್ನು ಹೊಂದಿದೆ. ಮನೋವಿಜ್ಞಾನದಲ್ಲಿ ಅತ್ಯಂತ ಆಸಕ್ತಿ ಮತ್ತು ಉಪಯುಕ್ತ ಕ್ಷೇತ್ರ ಎಂದರೆ ಬುದ್ಧಿಶಕ್ತಿ. ಏಕೆಂದರೆ ಈ ಕ್ಷೇತ್ರದಲ್ಲಿ ಪ್ರತಿವರ್ಷ ಹಲವಾರು ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಇಂತಹ ಬುದ್ಧಿಶಕ್ತಿಯ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದದ್ದು. ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆ, ಕೆ-ಸೆಟ್, ನೆಟ್ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಶೈಕ್ಷಣಿಕ ಮನೋವಿಜ್ಞಾನದಲ್ಲಿ ಬರುವ ಬುದ್ಧಿಶಕ್ತಿಯ ಅಧ್ಯಯನ ಪ್ರತಿಯೊಬ್ಬ ಶಿಕ್ಷಕಕರಿಗೂ ಇದರ ಬಗ್ಗೆ ತಿಳಿದಿರಲೇಬೇಕು.
ಸಿಸಿರೋ ಎಂಬ ತಜ್ಞರು ಗ್ರೀಕ್ ಭಾಷೆಯಲ್ಲಿ ಎಲ್ಲಾ ಜ್ಞಾನಾತ್ಮಕ ಪ್ರಕ್ರಿಯೆಗಳನ್ನು ತಿಳಿಸಲು ಒಂದೇ ಪದದಲ್ಲಿ ಬುದ್ಧಿಶಕ್ತಿ ಎಂಬ ಪ್ರತ್ಯಯವನ್ನು ಬಳಸಿದರು. ಬುದ್ಧಿಶಕ್ತಿ ಮತ್ತು ಜ್ಞಾನ ಎಂಬ ಎರಡು ಪದಗಳು ಭಿನ್ನವಾಗಿವೆ ಬುದ್ಧಿಶಕ್ತಿಯ ಬಳಕೆಯ ಫಲವೇ ಜ್ಞಾನ ಬುದ್ಧಿವಂತರು ಜ್ಞಾನಿಗಳಲ್ಲ ಬುದ್ಧಿಶಕ್ತಿ ಜ್ಞಾನವನ್ನು ಪಡೆಯಲು ಬಳಸುವ ಸಾಮರ್ಥ್ಯವಾಗಿದೆ.
ಬುದ್ಧಿಶಕ್ತಿ ವ್ಯಕ್ತಿಯೊಬ್ಬನ ವರ್ತನೆಯ ಜ್ಞಾನಾತ್ಮಕ ಪರಿವರ್ತನೆಯ ಒಂದು ಪ್ರಮುಖ ಸಾಧನವಾಗಿದೆ. ಸಮಾಜದಲ್ಲಿ ದೊಡ್ಡಮಟ್ಟದ ಬದಲಾವಣೆಯನ್ನು ಹಿಂಸಾರಹಿತವಾಗಿ ಕ್ರಾಂತಿ ಇಲ್ಲದೆ ಚಾಣಕ್ಷತನದಿಂದ ಸಾಧಿಸಬೇಕಾದರೆ ಅಥವಾ ಸಮಸ್ಯೆಯೊಂದಕ್ಕೆ ಸೂಕ್ಷ್ಮವಾಗಿ ಪರಿಹಾರ ಕಂಡುಕೊಳ್ಳಬೇಕಾದರೆ ಇರುವ ಅತ್ಯಂತ ಉಪಯುಕ್ತ ಸಾಧನ ಎಂದರೆ ಅದು ಬುದ್ಧಿಶಕ್ತಿ. ಇಂತಹ ಬುದ್ಧಿಶಕ್ತಿಯ ವಿಕಾಸಕ್ಕೆ ಬಹುಮುಖ್ಯ ಕಾರಣ ಉತ್ತಮ ಶಿಕ್ಷಣ ಮತ್ತು ಮನೋವಿಜ್ಞಾನ.
ಬುದ್ಧಿಶಕ್ತಿ ಎನ್ನುವುದು ವ್ಯಕ್ತಿಯೊಬ್ಬನ ಬೌದ್ಧಿಕ ಸಮರ್ಥವಾಗಿದ್ದು, ಇದು ಸಮಯ ಸಂದರ್ಭಕ್ಕೆ ಅನುಸಾರವಾಗಿ ವರ್ತನೆಯ ಮೂಲಕ ಅಭಿವ್ಯಕ್ತವಾಗುವ ಅಮೂರ್ತವಾಗಿ ಚಿಂತಿಸುವ ಬಹು ಆಯಾಮ ದೃಷ್ಟಿಕೋನಗಳ ಮೂಲಕ ಚಿಂತಿಸುವ ಮಾನಸಿಕ ಸಂಕೀರ್ಣ ಕ್ರಿಯೆ ಮತ್ತು ಪರಿಕಲ್ಪನೆಯಾಗಿದೆ. ಇಂತಹ ಬುದ್ಧಿಶಕ್ತಿಯು ತಾರ್ಕಿಕ ಚಿಂತನೆ ಅಮೂರ್ತ ಕಲ್ಪನೆಯನ್ನು ಹೊಂದಿದ್ದು ತರ್ಕಬದ್ಧವಾಗಿ ಯೋಚಿಸುವ, ಮಾಹಿತಿ ಸಂಗ್ರಹಿಸುವ ಮತ್ತು ಅಮೂರ್ತವಾಗಿ ಚಿಂತಿಸುವ ಹಾಗೂ ಹೊಸ ಹೊಸ ದೃಷ್ಟಿಕೋನ ವಿನ್ಯಾಸಗಳಲ್ಲಿ ವಿಶ್ಲೇಷಿಸುವ ಶಕ್ತಿಯನ್ನು ಹೊಂದಿದೆ. ಅಲ್ಲದೆ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಮಾನಸಿಕ ಸಾಮರ್ಥ್ಯವೇ ಬುದ್ಧಿಶಕ್ತಿ.
ಒಟ್ಟಿನಲ್ಲಿ ಬುದ್ಧಿಶಕ್ತಿಯೂ ಅಮೂರ್ತ ಆಲೋಚನೆ ಅರ್ಥೈಸಿಕೊಳ್ಳುವಿಕೆ, ಸ್ವಯಂ ಜಾಗೃತಿ, ಸಂವಹನ, ಚಿಂತನೆ, ಕಲಿಕೆ, ಸಂವೇಗಾತ್ಮಕ ನಿಯಂತ್ರಣ ಮತ್ತು ಪೂರ್ವ ಜ್ಞಾನ, ಯೋಜನೆ, ಸಂವೇದನೆ, ಪೂರ್ವಾನುಭವ ಮತ್ತು ಸ್ವಯಂ ಸಮಸ್ಯೆ ಪರಿಹಾರ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.
ಬುದ್ಧಿಶಕ್ತಿ ಎಂಬ ಪದಕ್ಕೆ ಪರ್ಯಾಯವಾಗಿ ಮೇಧಾವಿ, ಜ್ಞಾನವಂತ, ಪ್ರತಿಭಾವಂತ ಎಂಬ ಪದಗಳನ್ನು ಬಳಸಲಾಗುತ್ತದೆ. ಆದರೆ ಈ ಪದದ ಅರ್ಥವನ್ನು ಸೂಕ್ಷ್ಮವಾಗಿ ನೋಡಿದಾಗ ಇದೊಂದು ಸಂಕೀರ್ಣ ಜ್ಞಾನಾತ್ಮಕ ಕಾರ್ಯವಾಗಿದ್ದು ಸೂಕ್ಷ್ಮವಾಗಿ ವ್ಯತ್ಯಾಸ ಇರುವುದು ಕಂಡುಬರುತ್ತದೆ. ಬುದ್ಧಿಶಕ್ತಿ ಮತ್ತು ಜ್ಞಾನ ಎಂಬ ಎರಡು ಪದಗಳು ಮೇಲ್ನೋಟಕ್ಕೆ ಒಂದೇ ಅರ್ಥವನ್ನು ಹೊಂದಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ ಅವು ಬೇರೆ ಬೇರೆ ಅರ್ಥವನ್ನು ಒಳಗೊಂಡಿದ್ದು ಇವುಗಳಲ್ಲಿ ಒಂದು ಇನ್ನೊಂದನ್ನು ಅವಲಂಬಿಸಿರುವುದು ಅಧ್ಯಯನಗಳಿಂದ ತಿಳಿದು ಬರುತ್ತದೆ . ಹಾಗಾಗಿ ಬುದ್ಧಿ ಎಂಬುವುದು ಜ್ಞಾನವನ್ನು ಪಡೆಯಲು ಬಳಸುವ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಯ ಉತ್ಪನ್ನವಾಗಿದೆ. ಹಾಗಾಗಿ ಹೆಚ್ಚು ಕಡಿಮೆ ಬುದ್ಧಿವಂತರೆಲ್ಲರೂ ಜ್ಞಾನಿಗಳಲ್ಲ, ಆದರೆ ಜ್ಞಾನಿಗಳೆಲ್ಲರೂ ಬಹುಪಾಲು ಬುದ್ಧಿವಂತರೆನ್ನಬಹುದು.
ಬುದ್ಧಿಶಕ್ತಿಯ ವ್ಯಾಖ್ಯಾನಗಳು
ಡೇವಿಡ್ ವೆಷ್ಲರ್ : ಉದ್ದೇಶಪೂರ್ವಕವಾಗಿ ವರ್ತಿಸಲು ತರ್ಕಬದ್ಧವಾಗಿ ಆಲೋಚಿಸಲು ಮತ್ತು ತನ್ನ ಪರಿಸರದೊಂದಿಗೆ ಪ್ರಭಾವಯುತವಾಗಿ ವ್ಯವಹರಿಸಲು ಬೇಕಾದ ವ್ಯಕ್ತಿಯ ಸಮಗ್ರವಾದ ಸಾಮರ್ಥ್ಯವೇ
ಬುದ್ಧಿಶಕ್ತಿ.
ಇ. ಎಲ್. ಥಾರ್ನ್ಡೈಕ್ : " ಭಾವನಾತ್ಮಕ ಬುದ್ಧಿಶಕ್ತಿ, ಯಾಂತ್ರಿಕ ಬುದ್ಧಿಶಕ್ತಿ ಮತ್ತು ಸಾಮಾಜಿಕ ಬುದ್ಧಿಶಕ್ತಿ ಎಂಬ ಮೂರು ಮನಸ್ಸಿನ ಮಟ್ಟದಲ್ಲಿನ ಕ್ರಿಯಾ ವಿಶೇಷತೆಯೇ ಬುದ್ಧಿಶಕ್ತಿ."
ಬುಟಿಂಗ್ ಹ್ಯಾಮ್ : " ವ್ಯಕ್ತಿಯೊಬ್ಬನಲ್ಲಿರುವ ಕಲಿಯುವ ಸಾಮರ್ಥ್ಯವೇ ಬುದ್ಧಿಶಕ್ತಿ."
ಇ. ಬಿ. ಟಿಚ್ನರ್ : "ಸಮುದಾಯದಲ್ಲಿನ ಜೀವಿಗಳು ವಾತಾವರಣಕ್ಕೆ ಹೊಂದಿಕೊಳ್ಳುವುದು ಬುದ್ಧಿಶಕ್ತಿ."
ಗಾಲ್ಟನ್ : " ಒಬ್ಬ ವ್ಯಕ್ತಿಯಲ್ಲಿರುವ ಗುರುತಿಸುವ ಮತ್ತು ಕೇಳುವ ಶಕ್ತಿಯೇ ಬುದ್ಧಿಶಕ್ತಿ."
ಟರ್ಮನ್ : "ವ್ಯಕ್ತಿಯ ಅಮೂರ್ತ ಆಲೋಚನಾ ಶಕ್ತಿಯೇ ಬುದ್ಧಿಶಕ್ತಿ."
ವಿಲಿಯಂ ಸ್ಟರ್ನ್ : " ತನ್ನ ಆಲೋಚನೆಗಳನ್ನು ಪ್ರಜ್ಞಾಪೂರ್ವಕವಾಗಿ ಬಳಸಿ ಹೊಸ ಹೊಸ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಗತ್ಯವಾದ ಮಾನಸಿಕ ಸಾಮರ್ಥ್ಯವೇ ಬುದ್ಧಿಶಕ್ತಿ."
ಸಿರಿಲ್ ಬರ್ಟ್ : "ವ್ಯಕ್ತಿ ಪಡೆದಿರುವ ಸ್ವಾಭಾವಿಕ ಜ್ಞಾನ ಸಾಮರ್ಥ್ಯವೇ ಬುದ್ಧಿಶಕ್ತಿ."
No comments:
Post a Comment
If you have any doubts please let me know