ಕರ್ನಾಟಕ ಟಿಇಟಿ-2021 ವಿಶೇಷ
Important Significant aspects of Intelligence Unit Useful for TET CTET
ಬುದ್ಧಿಶಕ್ತಿ ಘಟಕದ ಮಹತ್ವದ ಅಂಶಗಳು
- ಬುದ್ಧಿಶಕ್ತಿ ‘Intelligence’ ಎಂಬ ಪದವು ಲ್ಯಾಟೀನ್ ಭಾಷೆಯ ‘Intelligere’ ಎಂಬ ಪದದಿಂದ ಬಂದಿದೆ. ‘Intelligere’ ಎಂದರೆ ‘To Understand’ ಅರ್ಥೈಸು ಎಂದರ್ಥ.
- ಬುದ್ಧಿಶಕ್ತಿ ಎನ್ನುವುದು ಜ್ಞಾನಾತ್ಮಕ ಸಾಮಾಥ್ರ್ಯ, ಮಾನಸಿಕ ಸಾಮಾಥ್ರ್ಯವಾಗಿದೆ.
- ಬುದ್ಧಿಶಕ್ತಿಯು ಮಾನಸಿಕ ಕಾರ್ಯಗಳಾದ ಗ್ರಹಣಶಕ್ತಿ, ಧಾರಣ ಸಾಮಥ್ರ್ಯ, ಕಾಲ್ಪನಿಕ ಶಕ್ತಿ, ಊಹಾ ಸಾಮಥ್ರ್ಯ, ಅಮೂರ್ತ ಕಲ್ಪನೆ, ಮಾನಸಿಕ ಸಾಮಥ್ರ್ಯ, ಹೊಸ ಹೊಸ ಆಲೋಚನೆ, ಸೂಕ್ಷ್ಮತೆ, ಚಿಕಿತ್ಸಕ ಸಾಮಥ್ರ್ಯ, ಮುಂತಾದ ಅಂಶಗಳ ಉತ್ಪನ್ನವಾಗಿದೆ.
ಬುದ್ಧಿಶಕ್ತಿಯ ವ್ಯಾಖ್ಯೆಗಳು
- ಟರ್ಮನ್: ‘ವ್ಯಕ್ತಿಯ ಅಮೂರ್ತ ಆಲೋಚನಾ ಸಾಮಥ್ರ್ಯ.’
- ಡೇವಿಡ್ ವೆಷ್ಲರ್: ಉದ್ದೇಶಪೂರ್ವಕವಾಗಿ ವರ್ತಿಸಲು, ತರ್ಕಬದ್ಧವಾಗಿ ಆಲೋಚಿಸಲು, ಮತ್ತು ತನ್ನ ಪರಿಸರದೊಂದಿಗೆ ಪ್ರಭಾವಯುತವಾಗಿ ವ್ಯವಹರಿಸಲು ಬೇಕಾದ ವ್ಯಕ್ತಿಯ ಸಮಗ್ರ ಸಾಮಥ್ರ್ಯವೇ ಬುದ್ಧಿಶಕ್ತಿ.
- ಬುಟಿಂಗ್ ಹ್ಯಾಮ್: ‘ವ್ಯಕ್ತಿಯೊಬ್ಬನಿಗೆ ತನ್ನಲ್ಲಿರುವ ಕಲಿಯುವ ಸಾಮಥ್ರ್ಯವೇ ಬುದ್ಧಿಶಕ್ತಿ.’
- ಸಿರಿಲ್ ಬರ್ಟ್: ‘ವ್ಯಕ್ತಿ ಪಡೆದಿರುವ ಸ್ವಾಭಾವಿಕ ಜ್ಞಾನ ಸಾಮಥ್ರ್ಯವೇ ಬುದ್ಧಿಶಕ್ತಿ.’
💥💥💥💥💥💥
ಬುದ್ಧಿಶಕ್ತಿ ಎಂದರೆ
- ಇದೊಂದು ಅಮೂರ್ತ ಚಿಂತನೆಯಾಗಿದೆ.
- ಹೊಸ ಸನ್ನಿವೇಶಕ್ಕೆ ಹೊಂದಿಕೊಂಡು ವರ್ತನೆಯಲ್ಲಿ ಬದಲಾವಣೆ ಹೊಂದುವ ಪ್ರತಿಕ್ರಿಯೆಯಾಗಿದೆ.
- ಉದ್ದೇಶ ಪೂರ್ವಕವಾದ ವರ್ತನೆ ತೋರುವುದು.
- ಇದೊಂದು ಕ್ಲಿಷ್ಟ ಮತ್ತು ಮಾನಸಿಕ ಸಂಕೀರ್ಣ ಕ್ರಿಯೆಯಾಗಿದೆ.
- ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿದೆ.
- ಮೂರ್ತ ಮತ್ತು ಅಮೂರ್ತ ವಿಚಾರಗಳನ್ನು ಸಮಾಜದಲ್ಲಿ ವ್ಯವಹರಿಸುವ ಕ್ರಿಯೆಯಾಗಿದೆ.
- ಸಂವೇದನಾತ್ಮಕ ಪ್ರತಿರೋಧಗಳನ್ನು ಎದುರಿಸುವ ಸಾಮಥ್ರ್ಯ ಹೊಂದಿದೆ.
- ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯಾಗಿದೆ.
- ಇದೊಂದು ಮಾನಸಿಕ ಅಂಶಗಳ ಸಂಘಟನಾತ್ಮಕ ಕ್ರಿಯೆಯಾಗಿದೆ.
- ಹಿಂದಿನ ಜ್ಞಾನವನ್ನು ಉಳಿಸಿಕೊಳ್ಳುವ ಮತ್ತು ಪುನಸ್ಮರಣೆಗೆ ತಂದುಕೊಳ್ಳುವ ಸಾಮಥ್ರ್ಯ ಹೊಂದಿದೆ.
💥💥💥💥💥💥
ಬುದ್ಧಿಶಕ್ತಿಯ ಪ್ರಮುಖ ವಾದಗಳು
1. ಬೀನೆ ರವರ ಏಕಾಂಶವಾದದ ಸಿದ್ಧಾಂತ:Binet's Single Factor Theory
ಬುದ್ಧಿಶಕ್ತಿಯ ಏಕಾಂಶವಾದ ಸಿದ್ಧಾಂತದ ಪ್ರತಿಪಾದಕ ಆಲ್ಫ್ರೆಡ್ ಬೀನೆ. ಇವರ ಪ್ರಕಾರ ಬುದ್ಧಿಶಕ್ತಿಯು ತಾರ್ಕಿಕ ಚಿಂತನೆ, ಸೃಜನಾತ್ಮಕ ಹೊಂದಾಣಿಕೆ, ಮೌಲ್ಯ ಬದಲಾವಣೆ, ತರ್ಕಬದ್ಧ ಆಲೋಚನೆ, ನೆನಪು, ಮನೋಭಾವನೆ, ಹೀಗೆ ಹಲವಾರು ಅಂಶಗಳಲ್ಲಿ ಯಾವುದಾರು ಒಂದನ್ನು ಹೊಂದಿದ್ದರೆ, ಅದನ್ನು ಬಳಸಿಕೊಂಡು ತಾನು ಮಾಡುವ ಕಾರ್ಯದಲ್ಲಿ ಯಶಸ್ಸು ಪಡೆಯುತ್ತಾನೆ. ಇದನ್ನೇ ಏಕಾಂಶವಾದ ಸಿದ್ಧಾಂತ ಎನ್ನಲಾಗುತ್ತದೆ.
2. ಚಾಲ್ರ್ಸ್ ಸ್ಪಿಯರ್‍ಮನ್ ಅವರ ದ್ವಿ ಅಂಶವಾದ ಸಿದ್ಧಾಂತ: Charles Spearman’s Two Factors Theory
ಇಂಗ್ಲೀಷ್ ಮನೋವಿಜ್ಞಾನಿಯಾದ ಚಾಲ್ರ್ಸ್ ಸ್ಪಿಯರ್‍ಮನ್ ರವರು ದ್ವಿ-ಅಂಶವಾದವನ್ನು ಪ್ರತಿಪಾದಿಸಿದ್ದಾರೆ. ಬುದ್ಧಿಶಕ್ತಿ ಸಿದ್ಧಾಂತಗಳಲ್ಲೇ ಅತ್ಯಂತ ಹಳೆಯ ಸಿದ್ಧಾಂತವಾದ ದ್ವಿ-ಅಂಶವಾದವನ್ನು 1904 ರಲ್ಲಿ ಬುದ್ಧಿಶಕ್ತಿಗೆ ಕಾರಣವಾಗಿರುವ ಘಟಕಾಂಶಗಳ ಲಕ್ಷಣಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ಪ್ರತಿಪಾದಿಸಿದ್ದಾರೆ. ಇವರ ಪ್ರಕಾರ ಬುದ್ಧಿಶಕ್ತಿಯು ಪ್ರಮುಖವಾಗಿ ಎರಡು ಅಂಶಗಳನ್ನು ಒಳಗೊಂಡಿದೆ. ಒಂದು-ಸಾಮಾನ್ಯ ಅಂಶ (General Factor) ಎರಡು-ವಿಶೇಷ ಅಂಶ (Specific Factor). ಉ ಯು ಹುಟ್ಟಿದ ಎಲ್ಲ ವ್ಯಕ್ತಿಗಳಲ್ಲಿಯೂ ಸಾಮಾನ್ಯವಾಗಿ ಕಂಡುಬಂದರೆ S ಅಂಶವು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಕಂಡುಬರುತ್ತದೆ. ಹೀಗಾಗಿ ಯಾವ ವ್ಯಕ್ತಿಯಲ್ಲಿ S ಅಂಶ ಇರುತ್ತದೆಯೋ ಅವರು ನಿರ್ದಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ.
💥💥💥💥💥💥
3. ಜೆ. ಪಿ. ಗಿಲ್‍ಫೋರ್ಡ್ ಅವರ ಮೂರು ಆಯಾಮವಾದದ ಸಿದ್ಧಾಂತ: J. P. Guilford’s Three-Dimensional Theory:
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆ. ಪಿ. ಗಿಲ್‍ಫೋರ್ಡ್ ಮತ್ತು ಸಹಚರರು 1961 ರಲ್ಲಿ ಪ್ರತಿಪಾದಿಸಿದ ಸಿದ್ಧಾಂತ ಇದಾಗಿದ್ದು, ಇವರು ಪ್ರತಿಭಾವಂತರ ಮಾನಸಿಕ ಕ್ರಿಯೆಯ ರಚನಾತ್ಮಕ ಮಾದರಿಯನ್ನು ರೂಪಿಸಿದ್ದಾರೆ. ಗಿಲ್‍ಫೋರ್ಡ್ ರವರು ಸ್ಪಿಯರ್‍ಮನ್ ರವರ ಸಿದ್ಧಾಂತನ್ನು ನಿರಾಕರಿಸಿ, ಬುದ್ಧಿಶಕ್ತಿಯು ರಚನಾತ್ಮಕ ಅಂಶಗಳ ಸಂಕೀರ್ಣ ನಿರ್ವಹಣೆಯಾಗಿದೆ ಎಂದು ವಾದಿಸಿದ್ದಾರೆ. ಅಲ್ಲದೇ ಬುದ್ಧಿಶಕ್ತಿಯ ರಚನಾತ್ಮಕ ಅಂಶಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಇವರ ಪ್ರಕಾರ ಬುದ್ಧಿಶಕ್ತಿಯು ಕ್ರಿಯೆ, ವಸ್ತು ಮತ್ತು ಉತ್ಪನ್ನ ಎಂಬ ಮೂರು ಬೌದ್ಧಿಕ ಸಾಮಥ್ರ್ಯದ ಆಯಾಮಗಳನ್ನು ಒಳಗೊಂಡಿದೆ ಎಂದು ವಾದಿಸಿದ್ದಾರೆ. ಈ ವಾದವನ್ನು ಆಧರಿಸಿ, ‘ಬೌದ್ಧಿಕ ಸಂರಚನೆಯ ಸೈದ್ಧಾಂತಿಕ’ ಮಾದರಿಯನ್ನು ರಚಿಸಿದ್ದಾರೆ. ಗಿಲ್‍ಫೋರ್ಡ್ ರವರು ಪ್ರತಿಯೊಂದು ಬೌದ್ಧಿಕ ಸಾಮಥ್ರ್ಯಗಳಲ್ಲಿ ಮತ್ತೆ ನಿರ್ದಿಷ್ಟ ಅಂಶಗಳನ್ನು ಗುರುತಿಸಿದ್ದಾರೆ. ಇವರ ಪ್ರಕಾರ ಬುದ್ಧಿಶಕ್ತಿಯು ಒಟ್ಟು (4*5*6=120) 120 ಬೌದ್ಧಿಕ ಸಾಮಥ್ರ್ಯಗಳನ್ನು ಒಳಗೊಂಡಿದೆ. ನಂತರ ಗಿಲ್‍ಫೋರ್ಡ್ ರವರು ಅಂತಿಮವಾಗಿ (5*6*5=150) 150 ಬುದ್ಧಿಶಕ್ತಿಯ ಕಾರಕಗಳನ್ನು ಗುರುತಿಸಿದ್ದಾರೆ.
4. ಇ. ಎಲ್. ಥಾರ್ನ್‍ಡೈಕ್ ರವರ ಬಹುಕಾರಕ ವಾದದ ಸಿದ್ಧಾಂತ: (Thorndike’s Multifactor Theory)
ಥಾರ್ನ್‍ಡೈಕ್ ರವರು ರವರ ಬುದ್ಧಿಶಕ್ತಿ ಸಿದ್ಧಾಂತವು ಬಹುಕಾರಕವಾದ ಎಂದೇ ಪ್ರಖ್ಯಾತವಾಗಿದೆ. ಸ್ವಿಯರ್‍ಮನ್ ಅವರ ಸಾರ್ವತ್ರಿಕವಾದವನ್ನು ತಿರಸ್ಕರಿಸಿ, ಪ್ರಚೋದನೆ-ಅನುಕ್ರಿಯೆ ಬಂಧವಾದ ಹಿನ್ನೆಲೆಯಲ್ಲಿ ಪ್ರತಿಪಾದಿಸಿದ್ದಾರೆ. ಇವರ ಪ್ರಕಾರ ಬುದ್ಧಿಶಕ್ತಿಯು ಅನೇಕ ಚಿಕ್ಕ ಚಿಕ್ಕ ಮೂಲಾಂಶಗಳಿಂದ ಕೂಡಿದ್ದು, ಪ್ರತಿಯೊಂದು ಮೂಲಾಂಶವು ಒಂದು ನಿರ್ದಿಷ್ಟ ಸಾಮಥ್ರ್ಯಕ್ಕೆ ಸಂಬಂಧಿಸಿರುತ್ತದೆ. ಇಂತಹ ಸಾಮಾಥ್ರ್ಯಗಳು ಒಂದಕ್ಕೊಂದು ಪೂರಕವಾಗಿ ಒಗ್ಗೂಡುತ್ತವೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬುದ್ಧಿವಂತನೆಂದು ಕರೆಸಿಕೊಳ್ಳಲು ಮಾನಸಿಕ ಕಾರ್ಯಗಳಲ್ಲಿ ಉಂಟಾಗುವ ಪ್ರಚೋದನೆ ಮತ್ತು ಅನುಕ್ರಿಯೆ (ಪ್ರತಿಕ್ರಿಯೆ) ಗಳೇ ಕಾರಣ ಎಂದು ಥಾರ್ನ್‍ಡೈಕ್ ಹೇಳುತ್ತಾರೆ.
💥💥💥💥💥💥
ಥಾರ್ನ್‍ಡೈಕ್ ಗುರುತಿಸಿದ ಬುದ್ಧಿಶಕ್ತಿಯ ವಿಶೇಷ ಗುಣಲಕ್ಷಣಗಳು:
1) ಮಟ್ಟ: ಸಮಸ್ಯೆಯ ಕಠಿಣತೆಯ ಮಟ್ಟ
2) ವ್ಯಾಪ್ತಿ: ಕಠಿಣತೆಯ ಮಟ್ಟದ ಮೇಲೆ ಪ್ರಭಾವ ಬೀರುವ ಅಂಶಗಳು
3) ವಿಸ್ತೀರ್ಣ: ಒಟ್ಟು ಸಂದರ್ಭಗಳು
4) ವೇಗ: ಪರೀಕ್ಷೆಯ ಹೇಳಿಕೆಗೆ ಉತ್ತರಿಸುವ ವೇಗ
ಥಾರ್ನ್‍ಡೈಕ್ ರವರು ತಿಳಿಸಿದ ಬುದ್ಧಿಶಕ್ತಿಯ ವಿಧಗಳು
1) ಮೂರ್ತ ಅಥವಾ ಯಾಂತ್ರಿಕ ಬುದ್ಧಿಶಕ್ತಿ
2) ಭಾವನಾತ್ಮಕ ಅಥವಾ ಅಮೂರ್ತ ಬುದ್ಧಿಶಕ್ತಿ
3) ಸಾಮಾಜಿಕ ಬುದ್ಧಿಶಕ್ತಿ
5. ರಾಬರ್ಟ್ ಸ್ಟರ್ನ್‍ಬರ್ಗ್ ಅವರ ಟ್ರೈಆರ್ಕಿಕ್ (ತ್ರಿಮುಖ) ಸಿದ್ಧಾಂತ: (Robert Sternberg Triarchic Theory of Intelligence)
ತ್ರಿಮುಖ ಸಿದ್ಧಾಂತವನ್ನು 1994 ರಲ್ಲಿ ರಾಬರ್ಟ್ ಸ್ಟರ್ನ್‍ಬರ್ಗ್ ರವರು ಅಭಿವೃದ್ಧಿ ಪಡಿಸಿದ್ದಾರೆ. ಇವರ ಪ್ರಕಾರ ಬುದ್ಧಿಶಕ್ತಿ ಎನ್ನುವುದು ಮೂರು ವಿಧದ ಬೌದ್ಧಿಕ ಸಾಮಥ್ರ್ಯವನ್ನು ಹೊಂದಿದೆ.
1) ಪ್ರಾಯೋಗಿಕ ಬುದ್ಧಿಶಕ್ತಿ:
2) ಘಟಕ ಬುದ್ಧಿಶಕ್ತಿ:
3) ಸಂದರ್ಭೋಚಿತ ಬುದ್ಧಿಶಕ್ತಿ:
6. ಲೂಹಿಸ್ ಎಲ್. ಥಸ್ರ್ಟನ್ ಅವರ ಸಮೂಹ ಕಾರಕವಾದ : (Louis L. Thurston Group Factor Theory)
ಇವರ ಪ್ರಕಾರ ಬುದ್ಧಿಶಕ್ತಿಯು ಒಂದು ಮಾನಸಿಕ ಸಾಮಥ್ರ್ಯವಾಗಿದ್ದು, ಮೂಲಭೂತ ಸಾಮಾನ್ಯ ಪ್ರಾಥಮಿಕ ಅಂಶಗಳನ್ನು ಒಳಗೊಂಡ ಸಮೂಹದ ಮಾನಸಿಕ ಕ್ರಿಯೆಯಾಗಿದೆ. ಹೀಗಾಗಿ ಥಸ್ರ್ಟನ್ ರವರ ಪ್ರಕಾರ ಬುದ್ಧಿಶಕ್ತಿಯು ಒಂದು ಸಮೂಹ ಕಾರ್ಯವಾಗಿದ್ದು, ಅನೇಕ ರೀತಿಯ ಮಾನಸಿಕ ಚಟುವಟಿಕೆಗಳಿಂದಾಗಿದೆ. ಬುದ್ಧಿಶಕ್ತಿಯ ಕಾರ್ಯನಿರ್ವಹಣೆಯಲ್ಲಿ ಅನೇಕ ಪ್ರಾಥಮಿಕ ಅಂಶಗಳ ಸಮೂಹವೇ ಕಾರಣ ಎನ್ನುತ್ತಾರೆ. ಇಂತಹ ಅಂಶಗಳನ್ನು ಪ್ರಾಥಮಿಕ ಮಾನಸಿಕ ಸಾಮಥ್ರ್ಯಗಳು (Primary Mental Ability) ಎನ್ನುತ್ತಾರೆ.
1) ಶಾಬ್ದಿಕ ಗ್ರಹಿಕೆ.
2) ಪ್ರತ್ಯಕ್ಷಾನುಭವ
3) ಸಾಂಖ್ಯಿಕ ಸಾಮಥ್ರ್ಯ
4) ತಾರ್ಕಿಕ/ಶಾಬ್ದಿಕ ಸಂಬಂಧ ಸಾಮಥ್ರ್ಯ
5) ಪದಗಳ ನಿರರ್ಗಳತೆ
6) ಸ್ಮøತಿ
7) ಅನುಗಮನ ಸಾಮಥ್ರ್ಯ
8) ನಿಗಮನ ಸಾಮಥ್ರ್ಯ
9) ಸಮಸ್ಯಾ ಪರಿಹಾರ ಸಾಮಥ್ರ್ಯ
💥💥💥💥💥💥
7. ಬರ್ಟ್ ರವರ ಹೈರಾರ್ಕಿ (ಕ್ರಮಾನುಗತ) ಸಿದ್ಧಾಂತ : (Burt Hierarchical Theory)
ಬರ್ಟ್‍ರವರು ಬುದ್ಧಿಶಕ್ತಿಯ ವಿವಿಧ ಮಾನಸಿಕ ಸಾಮಥ್ರ್ಯಗಳನ್ನು ಕ್ರಮಾನುಗತ ವಾಗಿ ಹಲವಾರು ವಿಧದಲ್ಲಿ ಗುರುತಿಸಿದ್ದಾರೆ. ಇವರ ಪ್ರಕಾರ ಬುದ್ಧಿಶಕ್ತಿಯ ಕ್ರಮಾನುಗತ ಮಾದರಿಯಲ್ಲಿ ಕೆಳ ಹಂತದಲ್ಲಿರುವ ಮಾನಸಿಕ ಸಾಮಥ್ರ್ಯವೆಂದರೆ ಸಂವೇದನೆ ಸರಳ ಚಲನಾ ಹಂತ.
- ಸಂವೇದನಾ ಸರಳ ಚಲನಾ ಹಂತ
- ಗ್ರಹಿಕೆ ಮತ್ತು ಸಂಘಟನೆ ಚಾಲನೆ ಹಂತ
- ಸ್ಮøತಿ ಮತ್ತು ಬಳಕೆ
- ಸಂಜ್ಞಾನಾತ್ಮಕ ಮತ್ತು ಸೌಂದರ್ಯೋಪಾಸನೆಯ ಅಂಶಗಳು
8. ಹಾವರ್ಡ್ ಗಾರ್ಡನರ್ ಅವರ ಬಹುಬುದ್ಧಿಶಕ್ತಿಯ ಸಿದ್ಧಾಂತ: (Howard Gardner’s Theory of Multiple Intelligence)
1983 ರಲ್ಲಿ ಹಾವರ್ಡ್ ಗಾರ್ಡನರ್ ಅವರು ಏಳು ವಿಧದ ಬುದ್ಧಿಶಕ್ತಿಯನ್ನು ಕೌಶಲ್ಯ ಮತ್ತು ಸಾಮಥ್ರ್ಯಗಳ ಆಧಾರದ ಮೇಲೆ ಗುರುತಿಸಿದ್ದಾರೆ.
1) ಶಾಬ್ದಿಕ ಬುದ್ಧಿಶಕ್ತಿ (Verbal Linguistic Intelligence)
2) ತಾರ್ಕಿಕ-ಗಣಿತ ಬುದ್ಧಿಶಕ್ತಿ (Logical Mathematical Intelligence)
3) ದೃಷ್ಟಿ ವೈಶಾಲ್ಯ ಬುದ್ಧಿಶಕ್ತಿ (Visual Spatial Intelligence)
4) ಸಂಗೀತ ಬುದ್ಧಿಶಕ್ತಿ (Musical Intelligence)
5) ಗತಿ ಪ್ರಜ್ಞೆಯ ಬುದ್ಧಿಶಕ್ತಿ (Bodily Kinesthetic Intelligence)
6) ಅಂತರ್ ವ್ಯಕ್ತಿಯ ಬುದ್ಧಿಶಕ್ತಿ (Intrapersonal Intelligence)
7) ವ್ಯಕ್ತಿಗಳ ನಡುವಿನ ಬುದ್ಧಿಶಕ್ತಿ (Interpersonal Intelligence)
8) ನಿಸರ್ಗವಾದ ಬುದ್ಧಿಶಕ್ತಿ (Naturalistic Intelligence)
9) ಅಸ್ಥಿತ್ವವಾದ ಬುದ್ಧಿಶಕ್ತಿ (Existential Intelligence)
💥💥💥💥💥💥
ಒಟ್ಟಿನಲ್ಲಿ ಬುದ್ಧಿಶಕ್ತಿಯ ಸಿದ್ಧಾಂತಗಳು ಮತ್ತು ವಿಧಗಳನ್ನು ಗಮನಿಸಿದಾಗ ಒಂದೇ ಒಮ್ಮತದ ಅಭಿಪ್ರಾಯ ಇಲ್ಲದಿರುವುದು ಕಂಡುಬರುತ್ತದೆ. ಏಕೆಂದರೆ ಬುದ್ಧಿಶಕ್ತಿಯು ಅಮೂರ್ತವಾಗಿದ್ದು, ಇದನ್ನು ಮೂರ್ತವಾಗಿ ನೋಡಲು ಸಾಧ್ಯವಾಗದಿರುವುದು ಒಂದು ಕಾರಣವಾಗಿದೆ. ಹಾಗಾಗಿ ಬುದ್ಧಿಶಕ್ತಿಯು ಒಂದು ಮಾನಸಿಕ ಸಾಮಥ್ರ್ಯ ಎಂದು ಎಲ್ಲರೂ ಬಹುಪಾಲು ಒಪ್ಪಿದರೂ ಅದರ ಕಾರ್ಯನಿರ್ವಹಣೆಯ ಆಧಾರದ ಮೇಲೆ ಮನೋವಿಜ್ಞಾನಿಗಳು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಭಿನ್ನವಾಗಿ ಅರ್ಥೈಸಿರುವುದು ಮೇಲಿನ ವಾದಗಳಿಂದ ನಿರೂಪಿಸಿರುವುದು ತಿಳಿಯುತ್ತದೆ.
No comments:
Post a Comment
If you have any doubts please let me know