Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 17 July 2021

Child Development and Pedagogy PART-F 77 Most Important Psychology Question Answers for KARTET 2021

    

ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ

ಭಾಗ-ಎಫ್


Child Development and Pedagogy PART-F 77 Most Important Psychology Question Answers for KARTET 2021



ಕರ್ನಾಟಕ ಟಿಇಟಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾ ಶಾಸ್ತ್ರಕ್ಕೆ ಸಂಬಂಧಿಸಿದ 77 ಬಹುಆಯ್ಕೆಯ ಪ್ರಶ್ನೋತ್ತರಗಳು.


Child Development and Pedagogy PART-F 77 Most Important Psychology Question Answers for KARTET 2021, 77 Most Important Psychology Question Answers for KARTET 2021, Most Important Psychology Question Answers, Psychology MCQs for KARTET 2021,  Most Likely Psychology Multiple Choice Question Answers for KARTET 2021, MCQ's for Child Development and Psychology, Child Development and Pedagogy Important Question Answers for KARTET 2021,

ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2021) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ಪ್ರಶ್ನೋತ್ತರಗಳು


💥💥💥💥💥💥💥💥💥💥💥


151.ನಿಗದಿಪಡಿಸಿದ ಸಮಯದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಗಳನ್ನು ವೇಗವಾಗಿ ಹುಟ್ಟಿಸುವ ಸಾಮಥ್ರ್ಯವೇ

ಎ) ನವ್ಯತೆ                         

        ಬಿ) ನಿರರ್ಗಳತೆ

ಸಿ) ಮೌಲಿಕತೆ                         

        ಡಿ) ವಿಸ್ತøತಗೊಳಿಸುವಿಕೆ

ಸರಿಯಾದ ಉತ್ತರ:  ಬಿ) ನಿರರ್ಗಳತೆ


152. ಕಂಠಪಾಠ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿನ ಮೊದಲ ಹಂತ ಯಾವುದು

ಎ) ಪುನ:ಸ್ಮರಣೆ                 

        ಬಿ) ಕಲಿಯುವಿಕೆ

ಸಿ) ಧಾರಣೆ                         

        ಡಿ) ಗುರ್ತಿಸುವಿಕೆ

ಸರಿಯಾದ ಉತ್ತರ:  ಬಿ) ಕಲಿಯುವಿಕೆ


153.ಇವುಗಳಲ್ಲಿ ಯಾವುದು ಕಲಿಕೆಗೆ ಸಂಬಂಧಿಸಿದಂತೆ ಸರಿ ಇದೆ

        ಎ) ಕಲಿಕೆಯು ಮೂಲಭೂತವಾಗಿ ಒಂದು ಮಾನಸಿಕ ಪ್ರಕ್ರಿಯೆ

        ಬಿ) ಮಕ್ಕಳಿಂದಾಗುವ ದೋಷಗಳು ಯಾವುದೇ ಕಲಿಕೆ ಆಗಿಲ್ಲ ಎಂದು ಸೂಚಿಸುತ್ತದೆ

        ಸಿ) ಧನಾತ್ಮಕ ಮನೋಭಾವ ಹಾಗೂ ತೃಪ್ತಿದಾಯಕ ವಾತಾವರಣವು ಕಲಿಕಾಕಾರರಲ್ಲಿ ಪರಿಣಾಮಕಾರಿ ಕಲಿಕೆಯನ್ನು ಉಂಟುಮಾಡುತ್ತದೆ

        ಡಿ) ಕಲಿಕೆಯು ಭಾವನಾತ್ಮಕ ಕಾರಕಗಳ ಪ್ರಭಾವಕ್ಕೆ ಒಳಪಡುವುದಿಲ್ಲ

ಸರಿಯಾದ ಉತ್ತರ: ಸಿ) ಧನಾತ್ಮಕ ಮನೋಭಾವ ಹಾಗೂ ತೃಪ್ತಿದಾಯಕ ವಾತಾವರಣವು ಕಲಿಕಾಕಾರರಲ್ಲಿ ಪರಿಣಾಮಕಾರಿ ಕಲಿಕೆಯನ್ನು ಉಂಟುಮಾಡುತ್ತದೆ


154.ಇವುಗಳನ್ನು ಯಾವುದು ಆತಂರಿಕ ಅಭಿಪ್ರೇರಣೆಯನ್ನು ಹೊಂದಿರುವ ಮಕ್ಕಳ ಗುಣಲಕ್ಷಣವಲ್ಲ 

        ಎ) ಅವರು ಸವಾಲುಗಳನ್ನು ಇಷ್ಟ ಪಡುತ್ತಾರೆ

        ಬಿ) ಕಾರ್ಯಗಳಲ್ಲಿ ತೊಡಗಿರುವಾಗ ಅವರು ಹೆಚ್ಚು ಶಕ್ತಿಯನ್ನು ಪ್ರದರ್ಶಿಸುತ್ತಾರೆ

        ಸಿ) ಅವರೂ ಯಾವಾಗಲೂ ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ 

        ಡಿ) ಇವರು ತಾವು ಮಾಡುವ ಕಾರ್ಯಗಳನ್ನು ಅಸ್ವಾದಿಸುತ್ತಾರೆ

ಸರಿಯಾದ ಉತ್ತರ: ಸಿ) ಅವರೂ ಯಾವಾಗಲೂ ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ 


155.ಕಲಿಕಾಕಾರರನ್ನು ಯಾವ ವಿಷಯದಲ್ಲಿ ಪ್ರೋತ್ಸಾಹಿಸಬಾರದು

        ಎ) ಶಿಕ್ಷಕರು ಕೇಳಬಹುದಾದ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೆನಪಿನಲ್ಲಿಡುವುದು

        ಬಿ) ತರಗತಿಯ ಒಳಗೆ/ಹೊರಗೆ ಸಾಧ್ಯವಾದಷ್ಟು ಪ್ರಶ್ನೆ ಕೇಳುವುದು

        ಸಿ) ಗುಂಪು ಕಾರ್ಯಗಳಲ್ಲ ಇತರ ಸಹಪಾಠಿಗಳೊಂದಿಗೆ ಸಕ್ರೀಯವಾಗಿ ಭಾಗವಹಿಸುವುದು

        ಡಿ) ಸಾಧ್ಯವಾದಷ್ಟು ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು

ಸರಿಯಾದ ಉತ್ತರ:   ಎ) ಶಿಕ್ಷಕರು ಕೇಳಬಹುದಾದ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೆನಪಿನಲ್ಲಿಡುವುದು


156.ಯೋಚನಾ ಪ್ರಕ್ರಿಯೆಯಲ್ಲಿ ಕನಿಷ್ಠ ಮಹತ್ವವನ್ನು ಹೊಂದಿರುವುದು

ಎ) ಸಮಸ್ಯೆ                 

        ಬಿ) ಸಾಮಾನ್ನೀಕರಣ

ಸಿ) ಸ್ಮøತಿ                         

        ಡಿ) ವಿವೇಚನೆ

ಸರಿಯಾದ ಉತ್ತರ: ಸಿ) ಸ್ಮøತಿ


157.ಶಿಕ್ಷಕರ ಪ್ರಮುಖ ಜವಾಬ್ದಾರಿ ಯಾವುದು

        ಎ) ವಿದ್ಯಾರ್ಥಿಗಳ ವಿಭಿನ್ನ ಕಲಿಕಾ ಶೈಲಿಗಳಿಗೆ ಅನುಗುಣವಾದ ಕಲಿಕಾ ಅವಕಾಶಗಳನ್ನು ನೀಡುವುದು

        ಬಿ) ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುವುದು

        ಸಿ) ಪಾಠಯೋಜನೆ ತಯಾರಿಸಿ, ಅದಕ್ಕೆ ಅನುಸಾರವಾಗಿ ಬೋಧಿಸುವುದು

        ಡಿ) ಸಾಧ್ಯವಾದಷ್ಟು ಹೆಚ್ಚು ಚಟುವಟಿಕೆಗಳನ್ನು ಸಂಘಟಿಸುವುದು

ಸರಿಯಾದ ಉತ್ತರ: ಎ) ವಿದ್ಯಾರ್ಥಿಗಳ ವಿಭಿನ್ನ ಕಲಿಕಾ ಶೈಲಿಗಳಿಗೆ ಅನುಗುಣವಾದ ಕಲಿಕಾ ಅವಕಾಶಗಳನ್ನು ನೀಡುವುದು

💢💢💢💢💢💢💢💢💢💢💢💢💢💢💢

158.ಜಲ ಶುದ್ದೀಕರಣ ಪಾಠವನ್ನು ವಿವರಿಸಲು ಅತ್ಯಂತ ಸೂಕ್ತ ವಿಧಾನ ಯಾವುದು

        ಎ) ಪಠ್ಯಪುಸ್ತಕದಲ್ಲಿ ಓದುಕೊಳ್ಳುವುದು

        ಬಿ) ಚಿತ್ರಪಟದೊಂದಿಗೆ ಪ್ರಕ್ರಿಯೆಯನ್ನು ವಿವರಿಸುವುದು

        ಸಿ) ವಿದ್ಯಾರ್ಥಿಗಳನ್ನು ಜಲ ಶುದ್ದೀಕರಣ ಕೇಂದ್ರಕ್ಕೆ ಕರೆದೊಯ್ಯುವುದು

        ಡಿ) ಜಲಶುದ್ದೀಕರಣದ ಮಾದರಿಯನ್ನು ತಯ್ಯಾರಿಸಲು ವಿದ್ಯಾರ್ಥಿಗಳಿಗೆ ಸೂಚಿಸುವುದು

ಸರಿಯಾದ ಉತ್ತರ: ಸಿ) ವಿದ್ಯಾರ್ಥಿಗಳನ್ನು ಜಲ ಶುದ್ದೀಕರಣ ಕೇಂದ್ರಕ್ಕೆ ಕರೆದೊಯ್ಯುವುದು


159. ಒಂದು ಕಾರ್ಯ ಮಾಡುತ್ತಿರುವಾಗ ಮಗುವಿಗೆ ಬೇಸರ ಉಂಟಾದರೆ ಇದರ ಅರ್ಥ ಏನು

        ಎ) ಮಗುವು ಕಲಿಯಲು ಸಮರ್ಥವಾಗಿರಲಿಕ್ಕಿಲ್ಲ

        ಬಿ) ಮಗುವಿಗೆ ಶಿಸ್ತು ನೀಡುವ ಅಗತ್ಯವಿದೆ

        ಸಿ) ಮಗುವು ಜಾಣವಾಗಿರಲಿಕ್ಕಿಲ್ಲ

        ಡಿ) ಕಾರ್ಯವು ಪ್ರಾಯಶ: ಯಾಂತ್ರಿಕ ಪುನರಾವರ್ತನೆ ಆಗಿರಬಹುದು

ಸರಿಯಾದ ಉತ್ತರ: ಡಿ) ಕಾರ್ಯವು ಪ್ರಾಯಶ: ಯಾಂತ್ರಿಕ ಪುನರಾವರ್ತನೆ ಆಗಿರಬಹುದು


160. ಭೋದನಾ ಕಲಿಕಾ ಪ್ರಕ್ರಿಯೆಯಲ್ಲಿ ವ್ಯಕ್ತಿಗತ ಅವಧಾನದಪ್ರಾಮುಖ್ಯತೆ ಏನು

        ಎ) ಮಕ್ಕಳ ವಿಕಾಸದ ಗತಿ ಬೇರೆ ಬೇರೆ ಆಗಿದ್ದು, ಅವರುವಿಭಿನ್ನ ವಿಧಾನಗಳಿಂದ ಕಲಿಯುವರು

        ಬಿ) ಕಲಿಕಾಕಾರರು ಗುಂಪುಗಳಲ್ಲಿ ಚೆನ್ನಾಗಿ ಕಲಿಯುವರು

        ಸಿ) ಶಿಕ್ಷಕರ ತರಬೇತಿಗಳಲ್ಲಿ ಹೀಗೆ ಸೂಚಿಸುತ್ತಾರೆ

        ಡಿ) ಪ್ರತಿಯೊಬ್ಬ ಕಲಿಕಾಕಾರರಲ್ಲಿ ಶಿಸ್ತು ಮೂಡಿಸಲು ಶಿಕ್ಷಕರಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ

ಸರಿಯಾದ ಉತ್ತರ: ಎ) ಮಕ್ಕಳ ವಿಕಾಸದ ಗತಿ ಬೇರೆ ಬೇರೆ ಆಗಿದ್ದು, ಅವರುವಿಭಿನ್ನ ವಿಧಾನಗಳಿಂದ ಕಲಿಯುವರು


161.ಇವುಗಳಲ್ಲಿ ಕಲಿಯಬಹುದಾದ ಕ್ಷೇತ್ರ ಯಾವುದು

ಎ) ಆಧ್ಯಾತ್ಮಿಕ

        ಬಿ) ಔದ್ಯೋಗಿಕ

ಸಿ) ಪ್ರಾಯೋಗಿಕ

        ಡಿ) ಭಾವನಾತ್ಮಕ

ಸರಿಯಾದ ಉತ್ತರ: ಸಿ) ಪ್ರಾಯೋಗಿಕ


162. ವಿಮರ್ಶಾತ್ಮಕ ಭೋಧನಾಶಾಸ್ತ್ರವು ನಂಬಿರುವುದು

        ಎ) ಮಕ್ಕಳು ಶಾಲೆಯಿಂದ ಹೊರಗೆ ಕಲಿಯುವುದೆಲ್ಲ ಅಪ್ರಸ್ತುತ

        ಬಿ) ಕಲಿಕಾಕಾರರು ಸ್ವತಂತ್ರವಾಗಿ ತರ್ಕ ಮಾಡಬಾರದು 

        ಸಿ) ಕಲಿಕಾರಕ ಅನುಭವ & ಗ್ರಹಿಕೆಗಳು ಪ್ರಮುಖವಾಗಿದೆ

        ಡಿ) ಯಾವಾಗಲೂ ಶಿಕ್ಷಕರು ತರಗತಿ ಬೋಧನೆಯ ನೇತೃತ್ವ ವಹಿಸಬೇಕು

ಸರಿಯಾದ ಉತ್ತರ:  ಸಿ) ಕಲಿಕಾರಕ ಅನುಭವ & ಗ್ರಹಿಕೆಗಳು ಪ್ರಮುಖವಾಗಿದೆ


163.ಬೋಧನೆಯಿಂದ ಕಲಿಕೆಯೆಡೆಗೆ ಗಮನ ನಿಡುವುದು ಸಾಧ್ಯವಾಗುವುದು

        ಎ) ಉನ್ನತ ಬೋಧನಾ ವಿಧಾನ ಅನುಸರಿಸುವುದರಿಂದ

        ಬಿ) ಪರೀಕ್ಷಾ ಫಲಿತಾಂಶವನ್ನು ಕೇಂದ್ರಿಕರಿಸುವುದರಿಂದ 

        ಸಿ) ಯಾಂತ್ರಿಕ ಕಲಿಕೆಯನ್ನು ಪ್ರೋತ್ಸಾಹಿಸುವುದರಿಂದ 

        ಡಿ) ಶಿಶು ಕೇಂದ್ರಿತ ಬೋಧನಾ ವಿಧಾನ ಅನುಸರಿಸುವುದರಿಂದ

ಸರಿಯಾದ ಉತ್ತರ: ಡಿ) ಶಿಶು ಕೇಂದ್ರಿತ ಬೋಧನಾ ವಿಧಾನ ಅನುಸರಿಸುವುದರಿಂದ


164.ಪ್ರಗತಿಶೀಲ ಶಿಕ್ಷಣದ ಗುಣಲಕ್ಷಣ ಯಾವುದು

        ಎ) ನಿಗದಿಪಡಿಸಿದ ಪಠ್ಯಪುಸ್ತಕ ಮಾತ್ರ ಆಧರಿಸಿದ ಬೋಧನೆ

        ಬಿ) ನಮ್ಮ ವೇಳಾಪತ್ರಿಕೆ ಹಾಗೂ ಸ್ಥಳ ಹೊಂದಾಣಿಕೆ 

        ಸಿ) ಪರೀಕ್ಷೆಯಲ್ಲಿ ಹೆಚ್ಚಿನ ಅಂಶಗಳಿಗೆ ಗಮನ ನೀಡುವುದು 

        ಡಿ) ಪದೇ ಪದೇ ಕಿರು ಪರೀಕ್ಷೆ & ಪರೀಕ್ಷೆ ನಡೆಸುವುದು

ಸರಿಯಾದ ಉತ್ತರ: ಬಿ) ನಮ್ಮ ವೇಳಾಪತ್ರಿಕೆ ಹಾಗೂ ಸ್ಥಳ ಹೊಂದಾಣಿಕೆ 

💢💢💢💢💢💢💢💢💢💢💢💢💢💢💢

165.ಅಭಿಪ್ರೇರಣೆಯ ಸಿದ್ಧಾಂತಗಳ ಪ್ರಕಾರ ಶಿಕ್ಷಕರ ಕಲಿಕೆಯನ್ನು ಹೇಗೆ ಸಂವರ್ಧಿಸುವರು

        ಎ) ಆದರ್ಶ ಏಕರೂಪ ಅಪೇಕ್ಷೆ ನಿಗದಿಪಡಿಸುವುದು

        ಬಿ) ವಿದ್ಯಾರ್ಥಿಗಳಿಂದ ವಾಸ್ತವಿಕ ಅಪೇಕ್ಷ ಇಟ್ಟುಕೊಳ್ಳುವುದು

        ಸಿ) ವಿದ್ಯಾರ್ಥಿಗಳಿಂದ ಯಾವುದು ಅಪೇಕ್ಷೆ ಇಟ್ಟುಕೊಳ್ಳಬಾರದು

        ಡಿ) ವಿದ್ಯಾರ್ಥಿಗಳಿಂದ ಗರಿಷ್ಟ ಅಪೇಕ್ಷೆ ಇಟ್ಟುಕೊಳ್ಳುವುದು

ಸರಿಯಾದ ಉತ್ತರ: ಬಿ) ವಿದ್ಯಾರ್ಥಿಗಳಿಂದ ವಾಸ್ತವಿಕ ಅಪೇಕ್ಷ ಇಟ್ಟುಕೊಳ್ಳುವುದು


166.ವಿಜ್ಞಾನ ಕಲಾ ಪ್ರದರ್ಶನಗಳು ಸಂಗೀತ ನೃತ್ಯ ಪ್ರದರ್ಶನೆಗೆ ಹಾಗೂ ಶಾಲಾ ನಿಯತಕಾಲಿಕೆಗಳನ್ನು ಹೊರತರಲು ಕಾರಣವೇನು

        ಎ) ಕಲಿಕಾಕಾರರಿಗೆ ಸೃಜನಾತ್ಮಕ ಮಾರ್ಗ ನೀಡುವುದು 

        ಬಿ) ಪಾಲಕರನ್ನು ತೃಪ್ತಿಕರಿಸುವುದು 

        ಸಿ) ಶಾಲೆಯ ಹೆಸರನ್ನು ಉತ್ತಮವಾಗಿಸುವುದು

        ಡಿ) ವಿವಿಧ ವೃತ್ತಿಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು 

ಸರಿಯಾದ ಉತ್ತರ: ಎ) ಕಲಿಕಾಕಾರರಿಗೆ ಸೃಜನಾತ್ಮಕ ಮಾರ್ಗ ನೀಡುವುದು 


167.ಕಲಿಕಾ ಪ್ರಕ್ರಿಯೆಯಲ್ಲಿ ಅಭಿಪ್ರೇರಣೆಯು

        ಎ) ಕಲಿಕಾರರ ಸ್ಮರಣೆಯನ್ನು ಹೆಚ್ಚಿಸುವುದು

        ಬಿ) ಆರಂಭಿಕ ಕಲಿಕಾಕಾರರಲ್ಲಿ ಕಲಿಕೆಯನ್ನು ಕುರಿತು ಆಸಕ್ತಿ ಮೂಡಿಸುವುದು

        ಸಿ) ಕಲಿಕಾಕಾರರು ಏಕಮುಖವಾಗಿ ಚಿಂತಿಸುವಂತೆ ಮಾಡುತ್ತದೆ

        ಡಿ) ನವೀನ ಕಲಿಕೆಯನ್ನು ಮೊದಲಿನ ಕಲಿಕೆಯಿಂದ ವಿಭೇದೀಕರಿಸುತ್ತದೆ.

ಸರಿಯಾದ ಉತ್ತರ: ಬಿ) ಆರಂಭಿಕ ಕಲಿಕಾಕಾರರಲ್ಲಿ ಕಲಿಕೆಯನ್ನು ಕುರಿತು ಆಸಕ್ತಿ ಮೂಡಿಸುವುದು


168.ಇವುಗಳಲ್ಲಿ ಯಾವುದು ಕಲಿಕೆಯನ್ನು ಹೆಚ್ಚು ಅಭಿಪ್ರೇರೆಪಿಸುವುದು

        ಎ) ಬಾಹ್ಯಕಾರಕ

        ಬಿ) ಗುರಿತಲುಪಸಲು ವೈಯಕ್ತಿಕ ತೃಪ್ತಿ

        ಸಿ) ಅತ್ಯಂತ ಸರಳ/ಕಠಿಣ ಗುರಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ

        ಡಿ) ವಿಫಲತೆಯಿಂದ ತಪ್ಪಿಸಿಕೊಳ್ಳುವ ಪ್ರೇರಣೆ

ಸರಿಯಾದ ಉತ್ತರ:  ಎ) ಬಾಹ್ಯಕಾರಕ


169. ಕಲಿಕಾಕಾರರಲ್ಲಿ ಸಾಮಾಜಿಕ ವಿಕಾಸವನ್ನು ಅಭಿವೃದ್ಧಿಪಡಿಸಲು ಶಿಕ್ಷಕರು ತಿಳಿದಿರಬೇಕಾದದು

        ಎ) ಕಲಿಕಾಕಾರರ ವೈಯಕ್ತಿಕ ಆಸಕ್ತಿ

        ಬಿ) ಕಲಿಕಾಕಾರರ ಕಾರ್ಯಕ್ಷಮತೆ

        ಸಿ) ಕಲಿಕಾರರ ಎಲ್ಲಾ ವಿಷಯ

        ಡಿ) ಕಲಿಕಾಕಾರರ ದೈಹಿಕ ವಿಕಾಸ

ಸರಿಯಾದ ಉತ್ತರ: ಸಿ) ಕಲಿಕಾರರ ಎಲ್ಲಾ ವಿಷಯ


170. ಇವುಗಳಲ್ಲಿ ಯಾವುದು ಸಮಸ್ಯಾ ಪರಿಹಾರ ವಿಧಾನದ ಪ್ರಮುಖ ಗುಣಲಕ್ಷಣವಾಗಿದೆ

        ಎ) ಸಮಸ್ಯೆ ಮೂಲ ಸ್ವಂತದ್ದಾಗಿರುವುದು

        ಬಿ) ಸಮಸ್ಯಾ ಹೇಳಿಕೆಯಲ್ಲಿ ಅಂತರ್ಗತವಾಗಿ ಒಂದು ಸುಳಿವನ್ನು ಕೊಡುವುದು

        ಸಿ) ಸಮಸ್ಯೆ ಒಂದೇ ತತ್ವ/ಪಾಠವನ್ನು ಆಧರಿಸಿರುತ್ತದೆ

        ಡಿ) ಸಾಮಾನ್ಯ ಸರಿ ಉತ್ತರವನ್ನು ಪಡೆಯಲು ಒಂದು ಮಾರ್ಗವಿರುತ್ತದೆ.

ಸರಿಯಾದ ಉತ್ತರ: ಬಿ) ಸಮಸ್ಯಾ ಹೇಳಿಕೆಯಲ್ಲಿ ಅಂತರ್ಗತವಾಗಿ ಒಂದು ಸುಳಿವನ್ನು ಕೊಡುವುದು

💢💢💢💢💢💢💢💢💢💢💢💢💢💢💢

171.ದೃಶ್ಯಬಿಂಬ ಪರಿಕಲ್ಪನೆಗಳು, ಸಂಕೇತ, ಚಿಹ್ನೆ, ಭಾಷೆ, ಸ್ನಾಯು ಚಟುವಟಿಕೆಗಳು ಹಾಗೂ ಮೆದುಳಿನ ಕಾರ್ಯಗಳನ್ನು ಒಳಗೊಂಡಿರುವುದು

        ಎ) ಹೊಂದಾಣಿಕೆ ಪ್ರಕ್ರಿಯೆ          

        ಬಿ) ಸಮಸ್ಯಾ ಪರಿಹಾರ

        ಸಿ) ಯೋಜನಾ ಪ್ರಕ್ರಿಯೆ                     

        ಡಿ) ಚಲನಾ ಕ್ರಿಯಾ ವಿಕಾಸ

ಸರಿಯಾದ ಉತ್ತರ: ಎ) ಹೊಂದಾಣಿಕೆ ಪ್ರಕ್ರಿಯೆ


172. ಬೋಧನೆ ಎಂದರೆ

        ಎ) ಶಿಕ್ಷಕರಿಂದ ಕಲಿಕಾಕರರಿಗೆ ಜ್ಞಾನದ ವರ್ಗಾವಣೆ

        ಬಿ) ಕಲಿಕೆಗೆ ಸೌಲಭ್ಯ ಒದಗಿಸುವುದು

        ಸಿ) ಸೂಚನೆಯನ್ನು ನೀಡುವುದು

        ಡಿ) ಕಲಿಕೆಯನ್ನು ನಿರ್ದೇಶಿಸುವುದು

ಸರಿಯಾದ ಉತ್ತರ: ಬಿ) ಕಲಿಕೆಗೆ ಸೌಲಭ್ಯ ಒದಗಿಸುವುದು


173. ಭೋಧನೆಯ ಪರಿಣಾಮಕೊರತೆ ಹೆಚ್ಚಬೇಕೆಂದರೆ

        ಎ) ತರಗತಿಯಲ್ಲಿ ನೇರ ಬೋಧನೆಯನ್ನು ಬಳಸಬೇಕು

        ಬಿ) ಶಿಸ್ತು ಕೇಂದ್ರಿತ ಬೋಧನೆ ಹಾಗೂ ಪರಸ್ಪರಾನುವರ್ತಿತ ವಿಧಾನಗಳನ್ನು ಬಳಸುವುದು

        ಸಿ) ನೇರ ಬೋಧನೆ & ಶಿಕ್ಷಕರಿಂದ ನಿರ್ದೇಶಿತ ವಿಧಾನಗಳೆರಡನ್ನು ಬಳಸುವುದು

        ಡಿ) ತರಗತಿಯಲ್ಲಿ ಶಿಕ್ಷಕರಿಂದ ನಿರ್ದೇಶಿತ ವಿಧಾನಗಳನ್ನು ಬಳಸುವುದು.

ಸರಿಯಾದ ಉತ್ತರ: ಬಿ) ಶಿಸ್ತು ಕೇಂದ್ರಿತ ಬೋಧನೆ ಹಾಗೂ ಪರಸ್ಪರಾನುವರ್ತಿತ ವಿಧಾನಗಳನ್ನು ಬಳಸುವುದು


174. ಬೋಧನಾ, ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳುಹೊಂದಿರುವ ಗುಣಲಕ್ಷಣಗಳು 

        ಎ) ಕಲಿಕೆಯಲ್ಲಿ ಚಟುವಟಿಕೆದಿಂದಿರುವುದು

        ಬಿ) ವಿದ್ಯಾರ್ಥಿಗಳು ಕಲಿಕಾ ಸಾಮಥ್ರ್ಯ ಹೊಂದಿರುವುದು 

        ಸಿ) ಹೊಸ ಅನುಭವಗಳಿಗೆ ಸಂಬಂಧಿಸಿದಂತೆ ಸ್ವ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಮಾಡಿಕೊಳ್ಳುವುದು

        ಡಿ) ಈ ಮೇಲಿನ ಎಲ್ಲವೂ

ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ


175.ಬೋಧನಾ ಮಟ್ಟವು ಯಾವುದಾಗಿರಬೇಕು

        ಎ) ಪ್ರತಿಫಲನಾತ್ಮಕ

        ಬಿ) ಪರಸ್ಪರಾನುಸುವರ್ತಿತ

ಸಿ) ಪ್ರಕ್ಷೇಪಣಾತ್ಮಕ

        ಡಿ) ಸಂಕಲಾನಾತ್ಮಕ

ಸರಿಯಾದ ಉತ್ತರ: ಬಿ) ಪರಸ್ಪರಾನುಸುವರ್ತಿತ


176.ಶಿಕ್ಷಕರು ರೂಢಿಮಾಡಿಕೊಳ್ಳಬೇಕಾದ ಬೋಧನಾ ಪದ್ಧತಿಯು

        ಎ) ಉಪನ್ಯಾಸ ವಿಧಾನ

        ಬಿ) ಪರಸ್ಪಾರಾನುವರ್ತಿತ ವಿಧಾನ

        ಸಿ) ವಿವರಣಾ ವಿಧಾನ

        ಡಿ) ಈ ಮೇಲಿನ ಯಾವುದು ಅಲ್ಲ

ಸರಿಯಾದ ಉತ್ತರ: ಬಿ) ಪರಸ್ಪಾರಾನುವರ್ತಿತ ವಿಧಾನ

💢💢💢💢💢💢💢💢💢💢💢💢💢💢💢

177.ಮಕ್ಕಳಲ್ಲಿ ಸಾಧನಾ ಅಭಿಪ್ರೇರಣೆಯನ್ನು ಸಶಕ್ತಗೊಳಿಸಲು ಸಾಧ್ಯವಾಗುವುದು

        ಎ) ಅವರಿಗೆ ನೈತಿಕ ಕತೆಗಳನ್ನು ಹೇಳುವುದು

        ಬಿ) ಅವರಿಗೆ ನಿರ್ವಹಣೆಯ ಜವಾಬ್ದಾರಿ ಕೊಡುವುದು

        ಸಿ) ಅವರ ಕಾರ್ಯದಕ್ಷತೆ ಹೇಗಿದ್ದರು ಅವರನ್ನು ಹೊಗಳುವುದು

        ಡಿ) ಉತ್ತಮ ನೌಕರಿ ಪಡೆಯಲು ಉತ್ತಮ ಅಂಕಗಳು ಮಾತ್ರ ಮುಖ್ಯವೆಂದು ಅವರಿಗೆ ಹೇಳುವುದು

ಸರಿಯಾದ ಉತ್ತರ: ಡಿ) ಉತ್ತಮ ನೌಕರಿ ಪಡೆಯಲು ಉತ್ತಮ ಅಂಕಗಳು ಮಾತ್ರ ಮುಖ್ಯವೆಂದು ಅವರಿಗೆ ಹೇಳುವುದು


178.ಸಾಧನಾ ಅಭಿಪ್ರೇರಣೆಯನ್ನು ಕುರಿತು ಈ ಮುಂದಿನ ಯಾವ ಹೇಳಿಕೆ ಸರಿಯಾಗಿದೆ

        ಎ) ಬದುಕಲು ಸಾಧನಾ ಅಭಿಪ್ರೇರಣೆಯ ಅವಶ್ಯಕ

        ಬಿ) ಒಂದು ವೇಳೆ ವೈಯಕ್ತಿಕ ಸಾಮಥ್ರ್ಯಗಳ ವೃತ್ತಿಗೆ ಪ್ರಾಮುಖ್ಯತೆ ಕೊಟ್ಟರೆ, ಬೆಳವಣಿಗೆಯು ಅಭಿಪ್ರೇರಣೆಯೇ ಸಾಧನ ಅಭಿಪ್ರೇರಣಯಾಗಿ ವರ್ಗಿಕರಿಸಲಾಗುವುದು

        ಸಿ) ಗುಂಪುಗಳಲ್ಲಿರುವ ಜನರ ಮಧ್ಯೆ ಸ್ಪರ್ಧೆಗಳು ಕುರಿತು ಒತ್ತಡವಿದ್ದಾಗ, ಸಾಧನ, ಅಭಿಪ್ರೇರಣಾ ಸಾಮಾಜಿಕ ಅಭಿಪ್ರೇರಣೆ ಎಂದು ಪರಿಗಣಿಸಲಾಗುವುದು

        ಡಿ) ಮೇಲಿನ ಎಲ್ಲವೂ

ಸರಿಯಾದ ಉತ್ತರ: ಬಿ) ಒಂದು ವೇಳೆ ವೈಯಕ್ತಿಕ ಸಾಮಥ್ರ್ಯಗಳ ವೃತ್ತಿಗೆ ಪ್ರಾಮುಖ್ಯತೆ ಕೊಟ್ಟರೆ, ಬೆಳವಣಿಗೆಯು ಅಭಿಪ್ರೇರಣೆಯೇ ಸಾಧನ ಅಭಿಪ್ರೇರಣಯಾಗಿ ವರ್ಗಿಕರಿಸಲಾಗುವುದು


179.ಬೋಧನೆ ಕುರಿತಾದ ಯಾವ ಹೇಳಿಕೆ ಸರಿಯಿಲ್ಲ

        ಎ) ಬೋಧನೆಯು ಪರಿವರ್ತನೆಯಾಗುವಂತದ್ದು

        ಬಿ) ಬೋಧನೆಯು ಔಪಚಾರಿಕ & ಅನೌಪಚಾರಿಕವಾಗಿರುತ್ತದೆ 

        ಸಿ) ಬೋಧನೆಯು ಉಪದೇಶವಾಗಿದೆ

        ಡಿ) ಬೋಧನೆಯು ಕಲೆಯು ಹೌದು & ವಿಜ್ಞಾನವು ಹೌದು

ಸರಿಯಾದ ಉತ್ತರ: ಸಿ) ಬೋಧನೆಯು ಉಪದೇಶವಾಗಿದೆ


180.ತರಗತಿಯಲ್ಲಿ ಎಲ್ಲ ಕಾರ್ಯಗಳನ್ನು ಸ್ವಯಂ ನಿರ್ವಹಿಸಿ ಆನಂದವಾಗಿರುವ ಸ್ವಕಲಿಕಾಕಾರ ಯಾರು

        ಎ) ಪಾಲ್ಗೊಳ್ಳುವ ಕಲಿಕಾಕಾರ

        ಬಿ) ಜೋಡಿ ಕಲಿಕಾಕಾರ

        ಸಿ) ವೈಯಕ್ತಿಕ ಕಲಿಕಾಕಾರ

        ಡಿ) ಸ್ಪರ್ಧಾತ್ಮಕ ಕಲಿಕಾಕಾರ

ಸರಿಯಾದ ಉತ್ತರ:  ಡಿ) ಸ್ಪರ್ಧಾತ್ಮಕ ಕಲಿಕಾಕಾರ


181.ಆಧುನಿಕ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರವು

        ಎ) ಮಕ್ಕಳಿಗೆ ಎಲ್ಲವನ್ನು ಕಲಿಸುವುದು

        ಬಿ) ಕಲಿಕೆಯ ಉತ್ತಮ ಸಹಾಯಕರಾಗಿರುವುದು 

        ಸಿ) ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುವುದು

        ಡಿ) ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ & ಭಾಷೆ ಕಲಿಸುವುದು

ಸರಿಯಾದ ಉತ್ತರ: ಬಿ) ಕಲಿಕೆಯ ಉತ್ತಮ ಸಹಾಯಕರಾಗಿರುವುದು 


182. ವಿದ್ಯಾರ್ಥಿಗಳ ಕಲಿಕೆಯಲ್ಲಿರುವ ನ್ಯೂನ್ಯತೆಗಳ ಸಿದ್ದಾಂತಿಕ ಪರೀಕ್ಷೆಯು ಯಾವುದನ್ನು ಹಿಂಬಾಲಿಸಬೇಕು

        ಎ) ಎಲ್ಲಾ ಪಾಠಗಳ ವ್ಯವಸ್ಥಿತ ಪುನರಾವಲೋಕನ

        ಬಿ) ಸಮಗ್ರ ರೂಪಿ & ಅಭ್ಯಾಸ 

        ಸಿ) ಸೂಕ್ತ ಪರಿಹಾರ ಕ್ರಮಗಳು

        ಡಿ) ಫಲಿತಾಂಶವನ್ನು ಕಲಿಕಾಕಾರರು & ಪಾಲಕರಿಗೆ ಕಳುಹಿಸುವುದು

ಸರಿಯಾದ ಉತ್ತರ: ಸಿ) ಸೂಕ್ತ ಪರಿಹಾರ ಕ್ರಮಗಳು

💢💢💢💢💢💢💢💢💢💢💢💢💢💢💢

183. ಕಲಿಕಾರರ ದೋಷಗಳು ಸಾಮಾನ್ಯವಾಗಿ ಏನನ್ನು ಪ್ರತಿಪಾದಿಸುತ್ತದೆ

        ಎ) ಅವರು ಹೇಗೆ ಕಲಿಯುತ್ತಾರೆ ಎಂಬುದನ್ನು

        ಬಿ) ಕಲಿಕೆಯಲ್ಲಿನ ಅನುಪಸ್ಥಿತಿ

        ಸಿ) ಯಾಂತ್ರಿಕ ರೂಢಿಯ ಅಗತ್ಯತೆ

        ಡಿ) ಕಲಿಕಾಕಾರರ ಸಮಾಜೊ ಆರ್ಥಿಕ ಸ್ಥಿತಿಗತಿ

ಸರಿಯಾದ ಉತ್ತರ: ಎ) ಅವರು ಹೇಗೆ ಕಲಿಯುತ್ತಾರೆ ಎಂಬುದನ್ನು


184. ಕಲಿಕಾಕಾರರ ಸೃಜನಶೀಲತೆಯನ್ನು ಹೆಚ್ಚಿಸಲು.............

        ಎ) ಪ್ರತಿಯೊಬ್ಬ ಕಲಿಕಾಕಾರರಲ್ಲಿರುವ ಸೂಕ್ತ ಪ್ರತಿಭೆಗಳನ್ನು ಪೋಷಿಸಿ, ಪ್ರಶ್ನಿಸಲು ಅವಕಾಶ ನೀಡುವುದು

        ಬಿ) ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಪ್ರಾಯೋಗಿಕ ಮೌಲ್ಯಗಳನ್ನು ಬೋಧಿಸುವುದು

        ಸಿ) ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು

        ಡಿ) ಶಾಲಾ ಜೀವನದ ಆರಂಭದಿಂದಲೇ ಸಾಧನಾ ಗುರಿಗಳನ್ನು ಪುಷ್ಟೀಕರಿಸುವುದು

ಸರಿಯಾದ ಉತ್ತರ: ಎ) ಪ್ರತಿಯೊಬ್ಬ ಕಲಿಕಾಕಾರರಲ್ಲಿರುವ ಸೂಕ್ತ ಪ್ರತಿಭೆಗಳನ್ನು ಪೋಷಿಸಿ, ಪ್ರಶ್ನಿಸಲು ಅವಕಾಶ ನೀಡುವುದು


185. ನಿಮ್ಮ ಅಭಿಪ್ರಾಯದಲ್ಲಿ ವಿದ್ಯಾರ್ಥಿಯು ಕಲಿಕಾ ಪ್ರಕ್ರಿಯೆಯಲ್ಲಿ ಮಾಡುವ ತಪ್ಪುಗಳಿಗೆ ಸಂಬಂಧಿಸಿದಂತೆ ಈ ಮುಂದಿನ ಯಾವ ಹೇಳಿಕೆ ಸರಿಯಾಗಿದೆ

        ಎ) ತಪ್ಪುಗಳು ಕಲಿಕಾ ಪ್ರಕ್ರಿಯೆಯ ಭಾಗವಾಗಿದೆ

        ಬಿ) ವಿದ್ಯಾರ್ಥಿಗಳ ಯಾವಾಗಲೂ ತಪ್ಪು ಮಾಡಬಾರದು 

        ಸಿ) ವಿದ್ಯಾರ್ಥಿಯು ಅಜಾಗರೂಕತೆಯಿಂದಾಗಿ ತಪ್ಪುಗಳು 

        ಡಿ) ಕೆಲವು ಸಲ ವಿದ್ಯಾರ್ಥಿಯು ತಪ್ಪು ಮಾಡುವರು

ಸರಿಯಾದ ಉತ್ತರ: ಡಿ) ಕೆಲವು ಸಲ ವಿದ್ಯಾರ್ಥಿಯು ತಪ್ಪು ಮಾಡುವರು


186. ಅರ್ಥಪೂರ್ಣ ಕಲಿಕೆಯಲ್ಲಿ ಮಕ್ಕಳು ಬಹಳಷ್ಟು ಪ್ರಕ್ರಿಯೆಗಳನ್ನು ಬಳಸುವರು ಈ ಪ್ರಕ್ರಿಯೆಗಳಿಗೆ ಸಂಬಂಧಿಸದೇ ಇರುವುದು

        ಎ) ವಿಸ್ತರಿಸುವಿಕೆ     

        ಬಿ) ಸಂಘಟಿಸುವಿಕೆ

        ಸಿ) ದ್ರಶ್ಶಬಿಂಬ       

        ಡಿ) ರೂಢಿ

ಸರಿಯಾದ ಉತ್ತರ: ಡಿ) ರೂಢಿ


187. ತನ್ನ ಸಹಪಾಠಿಯ ಕಠಿಣ ಪರಿಶ್ರಮದ ಫಲ ಒಳ್ಳೆಯದಾಗಿರುವುದು ಎಂದು ತೀರ್ಮಾನಿಸಿ, ಮಕ್ಕಳು ಕಠಿಣ ಪರಿಶ್ರಮ ಪಡಲು ಆರಂಭಿಸುವ ಪ್ರಕ್ರಿಯೆಗೆ ಕರೆಯುವರು ............

        ಎ) ಪರೋಕ್ಷ ಪುನರ್ಬಲ

        ಬಿ) ದ್ವಿತೀಯ ಪುನರ್ಬಲನ 

        ಸಿ) ಆಂತರಿಕ ಪುನರ್ಬಲನ 

        ಡಿ) ಧನಾತ್ಮಕ ಪುನರ್ಬಲನ

ಸರಿಯಾದ ಉತ್ತರ:  ಬಿ) ದ್ವಿತೀಯ ಪುನರ್ಬಲನ 

💢💢💢💢💢💢💢💢💢💢💢💢💢💢💢

188. ಇಲ್ಲಿರುವ ಯಾವ ಪರಿಕಲ್ಪನೆ ಕಲಿಕೆಯು ಒಂದು ಸಾಮಾಜಿಕಚಟುವಟಿಕೆ ಎಂಬುವುದಕ್ಕೆ ಸಂಬಂಧಿಸಿಲ್ಲ ?

        ಎ) ಬೌದ್ಧಿಕ ಉಮೇದುವಾರಿಕೆ ಕಲಿಕೆ

        ಬಿ) ಮಧ್ಯಂತರಿಸಿದ ಕಲಿಕೆ

        ಸಿ) ಸಹಕಾರ ಕಲಿಕೆ

        ಡಿ) ಅನ್ವೇಷಣಾ ಕಲಿಕೆ

ಸರಿಯಾದ ಉತ್ತರ: ಬಿ) ಮಧ್ಯಂತರಿಸಿದ ಕಲಿಕೆ


189. ನಾವು ಒಂದೇ ವಸ್ತುವಿನ ಮೇಲೆ ನಿರಂತರವಾಗಿ............ ಸೆಕೆಂಡುಗಳಿಗಿಂತ ಹೆಚು ್ಚ ಅವಧಾನವನ್ನು ಕೇಂದ್ರೀಕರಿಸಲು

        ಎ) 6

        ಬಿ) 7

ಸಿ) 9

        ಡಿ) 10

ಸರಿಯಾದ ಉತ್ತರ:  ಡಿ) 10


190. ಸೈಕಲ್ ಸವಾರಿ ಗೊತ್ತಿರುವ ಓರ್ವ ವ್ಯಕ್ತಿ, ಸ್ಕೂಟರ್‍ಸವಾರಿ ಕಲಿತ ತಕ್ಷಣದಲ್ಲಿ ರಸ್ತೆಯ ಒಂದು ಬದಿಗೆ ಮಾತ್ರ ಕೊಡುವರು. ಇದು................... ಕಲಿಕೆಯ ವರ್ಗಾವಣೆ

        ಎ) ದsನಾತ್ಮಕ 

        ಬಿ) ಋಣಾv್ಮÀಕ 

        ಸಿ) ಶೂನ್ಯ 

        ಡಿ) ಭಾಗಶ:

ಸರಿಯಾದ ಉತ್ತರ:  ಡಿ) ಭಾಗಶ:


191.ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಪರಿಕಲ್ಪನಾ ರಚನೆಯ ಮಾದರಿಯು

ಎ) ಮೂರ್ತ

        ಬಿ) ತಾರ್ಕಿಕ

ಸಿ) ಅಮೂರ್ತ

        ಡಿ) ಸಂಕೀರ್ಣ

ಸರಿಯಾದ ಉತ್ತರ: ಡಿ) ಸಂಕೀರ್ಣ


192.ನೀವು ತರಗತಿಯ ಅವಧಾನವನ್ನು ಪಡೆಯಲು ಮಾಡಬೇಕಾದುದು

        ಎ) ಜೋರಾಗಿ ಮಾತನಾಡುವುದು

        ಬಿ) ಕಪ್ಪು ಹಲಗೆಯ ಮೇಲೆ ಬರೆಯುವುದು

        ಸಿ) ಚಿತ್ರಗಳನ್ನು ಬಿಡಿಸುವುದು

        ಡಿ) ಪ್ರಚೋದನೆಗಳಲ್ಲಿ ಬದಲಾವಣೆ ತರುವುದು

ಸರಿಯಾದ ಉತ್ತರ: ಡಿ) ಪ್ರಚೋದನೆಗಳಲ್ಲಿ ಬದಲಾವಣೆ ತರುವುದು


193.ವ್ಯಕ್ತಿಯ ಗುರಿಯು ಆಧರಿಸಬೇಕಾಗಿರುವುದು

ಎ) ಪ್ರಯತ್ನ

        ಬಿ) ಯಶಸ್ಸು

ಸಿ) ವಿಫಲತೆ

        ಡಿ) ನೈತಿಕತೆ

ಸರಿಯಾದ ಉತ್ತರ: ಎ) ಪ್ರಯತ್ನ


194.ಪರಿಣಾಮಕಾರಿ ಕಲಿಕೆ ಆಗಲು ಮಗುವು...............

        ಎ) ಕಲಿಯಲು ಸಿದ್ಧವಿರಬೇಕು

        ಬಿ) ಕಲಿತ ವಿಷಯವನ್ನು ಪುನರಾವರ್ತಿಸಬೇಕು 

        ಸಿ) ಸಂತೃಪ್ತಿ ಹೊಂದಬೇಕು 

        ಡಿ) ಈ ಮೇಲಿನ ಎಲ್ಲವೂ

ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ


195.ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಹೊಂದಿರುವ ಗುಣಲಕ್ಷಣಗಳು 

        ಎ) ಕಲಿಕೆಯಲ್ಲಿ ಚಟುವಟಿಕೆಯಿಂದಿರುವುದು

        ಬಿ) ವಿದ್ಯಾರ್ಥಿಗಳು ಕಲಿಕಾ ಸಾಮಥ್ರ್ಯ ಹೊಂದಿರುವುದು 

        ಸಿ) ಹೊಸ ಅನುಭವಗಳಿಗೆ ಸಂಬಂಧಿಸಿದಂತೆ ಸ್ವಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಮಾಡಿಕೊಳ್ಳುವುದು

        ಡಿ) ಈ ಮೇಲಿನ ಎಲ್ಲವೂ

ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ


196.ಶಿಕ್ಷಕರು ರೂಢಿ ಮಾಡಿಕೊಳ್ಳಬೇಕಾದ ಬೋಧನಾ ಪದ್ಧತಿಯು............

        ಎ) ಉಪನ್ಯಾಸ ವಿಧಾನ

        ಬಿ) ಪರಸ್ಪರಾನುವರ್ತಿತ ವಿಧಾನ

        ಸಿ) ವಿವರಣಾ ವಿಧಾನ

        ಡಿ) ಈ ಮೇಲಿನ ಯಾವುದು ಅಲ್ಲ

ಸರಿಯಾದ ಉತ್ತರ: ಬಿ) ಪರಸ್ಪರಾನುವರ್ತಿತ ವಿಧಾನ

💢💢💢💢💢💢💢💢💢💢💢💢💢💢💢

197.ಮಕ್ಕಳಲ್ಲಿ ಕಲಿಕೆ ಆಗುವುದು

        ಎ) ಜ್ಞಾನವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದರಿಂದ    

        ಬಿ) ಪಠ್ಯಪುಸ್ತಕ ಓದುವುದರಿಂದ 

        ಸಿ) ಶಿಕ್ಷಕರಿಂದಾಗುವ ಜ್ಞಾನ ವರ್ಗಾವಣೆಯಿಂದ 

        ಡಿ) ಚಟುವಟಿಕೆ ಮಾಡುವುದರಿಂದ

ಸರಿಯಾದ ಉತ್ತರ: ಡಿ) ಚಟುವಟಿಕೆ ಮಾಡುವುದರಿಂದ


198.ಒಂದು ಮಗುವು ಹೆಚ್ಚು ಕಲಿಯಬೇಕೆಂದರೆ,

        ಎ) ಪಠ್ಯಪುಸ್ತಕದ ಮೂಲಕ ಬೋಧಿಸಬೇಕು

        ಬಿ) ಗಣಕಯಂತ್ರದ ಮೂಲಕ ಬೋಧಿಸಬೇಕು 

        ಸಿ) ಉಪನ್ಯಾಸ ಪದ್ಧತಿಯ ಮೂಲಕ ಬೋಧಿಸಬೇಕು

        ಡಿ) ಚಟುವಟಿಕೆ ಪದ್ಧತಿಯ ಮೂಲಕ ಬೋಧಿಸಬೇಕು 

ಸರಿಯಾದ ಉತ್ತರ: ಡಿ) ಚಟುವಟಿಕೆ ಪದ್ಧತಿಯ ಮೂಲಕ ಬೋಧಿಸಬೇಕು 


199.ವಿದ್ಯಾರ್ಥಿಗಳು ವಿಭಿನ್ನ ವಿಧಾನಗಳನ್ನು ಕಲಿಯುವುದು 

        ಎ) ಶಿಕ್ಷಕರ ಉಪನ್ಯಾಸದಿಂದ

        ಬಿ) ಪ್ರಯೋಗ, ಚರ್ಚೆ, ಪ್ರಶ್ನಿಸುವುದು, ಚಟುವಟಿಕೆಗಳನ್ನು ಮಾಡುವುದು ಮತ್ತು ಪ್ರತಿಕ್ರಿಯೆಗಳಿಂದ 

        ಸಿ) ಶಿಕ್ಷಕರಿಂದ ನಿರ್ದೇಶಿತ ಮತ್ತು ನಿಯಂತ್ರಿತ ಪಠ್ಯಪುಸ್ತಕ ಆಧಾರಿತ ಬೋಧನೆಯಿಂದ

        ಡಿ) ಈ ಮೇಲಿನ ಯಾವುದು ಅಲ್ಲ

ಸರಿಯಾದ ಉತ್ತರ: ಬಿ) ಪ್ರಯೋಗ, ಚರ್ಚೆ, ಪ್ರಶ್ನಿಸುವುದು, ಚಟುವಟಿಕೆಗಳನ್ನು ಮಾಡುವುದು ಮತ್ತು ಪ್ರತಿಕ್ರಿಯೆಗಳಿಂದ 


200.6-11 ವರ್ಷ ವಯೋಮಿತಿಯ ಮಕ್ಕಳ ಗುಂಪಿನ ಗುಣಲಕ್ಷಣಗಳು...............

        ಎ) ಸಹಜ ಮತ್ತು ಸಕ್ರೀಯ ಕಲಿಕಾರರು

        ಬಿ) ಕಲಿಕೆಗಾಗಿ ಶಿಕ್ಷಕರನ್ನು ಅವಲಂಬಿಸಿರುತ್ತಾರೆ 

        ಸಿ) ಶಿಕ್ಷಕರಿಂದ ಜ್ಞಾನವನ್ನು ಪಡೆಯುತ್ತಾರೆ. 

        ಡಿ) ಕಲಿಕೆಯಲ್ಲಿ ಆಸಕ್ತರಿರುವುದಿಲ್ಲ

ಸರಿಯಾದ ಉತ್ತರ:  ಎ) ಸಹಜ ಮತ್ತು ಸಕ್ರೀಯ ಕಲಿಕಾರರು


201.ಪ್ರಾಥಮಿಕ ವಿಭಾಗ ಮಕ್ಕಳಿಗೆ ಬೋಧಿಸಲು ಸೂಕ್ತ ವಿಧಾನ .............................

        ಎ) ಪ್ರಯತ್ನ ಪ್ರಮಾದ ವಿಧಾನ

        ಬಿ) ಅನುಕರಣೆಯ ವಿಧಾನ 

        ಸಿ) ಉಪನ್ಯಾಸ ವಿಧಾನ 

        ಡಿ) ಆಟದ ವಿಧಾನ 

ಸರಿಯಾದ ಉತ್ತರ: ಡಿ) ಆಟದ ವಿಧಾನ 


202.ಕಲಿಕಾಕಾರರನ್ನು ಯಾವ ವಿಷಯದಲ್ಲಿ ಪ್ರೋತ್ಸಾಹಿಸಬಾರದು ?

        ಎ) ತರಗತಿಯ ಒಳಗೆ/ಹೊರಗೆ ಸಾಧ್ಯವಾದಷ್ಟು ಪ್ರಶ್ನೆ ಕೇಳುವುದು

        ಬಿ) ಗುಂಪು ಕಾರ್ಯಗಳಲ್ಲಿ ಇತರ ಸಹಪಾಠಿಗಳೊಂದಿಗೆ ಸಕ್ರೀಯವಾಗಿ ಭಾಗವಹಿಸುವುದು

        ಸಿ) ಸಾಧ್ಯವಾದಷ್ಟು ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು

        ಡಿ) ಶಿಕ್ಷಕರು ಕೇಳಬಹುದಾದ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೆನಪಿನಲ್ಲಿಡುವುದು

ಸರಿಯಾದ ಉತ್ತರ: ಡಿ) ಶಿಕ್ಷಕರು ಕೇಳಬಹುದಾದ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೆನಪಿನಲ್ಲಿಡುವುದು

💢💢💢💢💢💢💢💢💢💢💢💢💢💢💢

203.ಮೊದಲು ಕಲಿತ ವಿಷಯಗಳ ಬಗ್ಗೆ ಪುನರಾವಲೋಕನ ಮಾಡಲು ಮತ್ತು ಪುನ:ಸ್ಕರಿಸಲು ಕಲಿಕಾಕಾರರಿಗೆ ಸಹಾಯ ಮಾಡಬೇಕು, ಏಕೆಂದರೆ

        ಎ) ಇದು ತರಗತಿಯ ಬೋಧನೆಗೆ ಸೂಕ್ತ ಆರಂಭ ಒದಗಿಸುವುದು

        ಬಿ) ಹೊಸ ಮಾಹಿತಿಯನ್ನು ಹಳೆಯ ಜ್ಞಾನದೊಂದಿಗೆ ಸಹಸಂಬಂಧೀಕರಿಸುವುದು ಕಲಿಕೆಯನ್ನು ಹೆಚ್ಚಿಸುತ್ತದೆ

        ಸಿ) ಇದು ಹಳೆ ಪಾಠಗಳನ್ನು ಉಜರಳನೆ ಮಾಡುವ ಪರಿಣಾಮಕಾರಿ ವಿಧಾನವಾಗಿದೆ

        ಡಿ) ಇದು ಕಲಿಕಾಕಾರರ ಸ್ಮøತಿಯನ್ನು ಹೆಚ್ಚಿಸಿ, ಕಲಿಕೆಯನ್ನು ವೃದ್ಧಿಸುತ್ತದೆ.

ಸರಿಯಾದ ಉತ್ತರ: ಬಿ) ಹೊಸ ಮಾಹಿತಿಯನ್ನು ಹಳೆಯ ಜ್ಞಾನದೊಂದಿಗೆ ಸಹಸಂಬಂಧೀಕರಿಸುವುದು ಕಲಿಕೆಯನ್ನು ಹೆಚ್ಚಿಸುತ್ತದೆ


204.ಸಂಪೂರ್ಣವಾಗಿ ಅವಲೋಕನ ಮಾಡಬಹುದಾದ ವರ್ತನೆಯನ್ನು ಮಾತ್ರ ಆಧರಿಸಿದ ಕಲಿಕಾ ಸಿದ್ಧಾಂತ ಯಾವುದಕ್ಕೆ ಸಂಬಂಧಿಸಿದೆ ?

        ಎ) ಬೌದ್ಧಿಕತೆ 

        ಬಿ) ವಿಕಾಸ 

        ಸಿ) ವರ್ತನಾವಾದ 

        ಡಿ) ಸಂರಚನಾವಾದ

ಸರಿಯಾದ ಉತ್ತರ: ಸಿ) ವರ್ತನಾವಾದ 


205.ಇವುಗಳಲ್ಲಿ ಯಾವುದನ್ನು ಕಲಿಕೆಯ ಗುಣಲಕ್ಷಣ ಎಂದು ಪರಿಗಣಿಸಲಾಗುವುದಿಲ್ಲ ?

        ಎ) ಕಲಿಕೆಯ ವರ್ತನೆಯನ್ನು ಮಾರ್ಪಡಿಸುವ ಪ್ರಕ್ರಿಯೆ

        ಬಿ) ಕಲಿಕೆಯು ಅನುಭವಗಳಿಂದ ಉಂಟಾಗುವುದು

        ಸಿ) ವರ್ತನೆಯ ಅಧ್ಯಯನವೇ ಕಲಿಕೆ

        ಡಿ) ಕಲಿಯದೇ ಇರುವುದೂ ಕಲಿಕೆಯ ಒಂದು ಭಾಗ

ಸರಿಯಾದ ಉತ್ತರ:  ಸಿ) ವರ್ತನೆಯ ಅಧ್ಯಯನವೇ ಕಲಿಕೆ


206.ಕಲಿಕಾಕಾರರ ಸ್ವ ನಿಯಮಗಳು ಸಂಬಂಧಿಸಿರುವುದು

        ಎ) ತಮ್ಮ ಕಲಿಕೆಯನ್ನು ತಾವೇ ಅಭಿಪ್ರೇರಿಸುವ ಸಾಮಥ್ರ್ಯ

        ಬಿ) ವಿದ್ಯಾರ್ಥಿ ವರ್ತನೆಗಳಿಗೆ ನಿಯಮಗಳನ್ನು ರೂಪಿಸುವುದು

        ಸಿ) ವಿದ್ಯಾರ್ಥಿ ಪ್ರತಿನಿಧಿಗಳಿಂದ ರೂಪಿತವಾದ ನಿಯಮಗಳು 

        ಡಿ) ಸ್ವಯಂ ಶಿಸ್ತು ಮತ್ತು ನಿಯಂತ್ರಣ

ಸರಿಯಾದ ಉತ್ತರ: ಸಿ) ವಿದ್ಯಾರ್ಥಿ ಪ್ರತಿನಿಧಿಗಳಿಂದ ರೂಪಿತವಾದ ನಿಯಮಗಳು 

💢💢💢💢💢💢💢💢💢💢💢💢💢💢💢

207.ಇವುಗಳಲ್ಲಿ ಯಾವ ಹೇಳಿಕೆಯು ಗ್ರಹಿಕೆಗಾಗಿ ಬೋಧನೆ ಎಂಬ ವಿಚಾರವನ್ನು ಪ್ರದರ್ಶಿಸುವುದಿಲ್ಲ ?

        ಎ) ವಿದ್ಯಾರ್ಥಿಗಳಿಗೆ ಒಂದು ಪರಿಕಲ್ಪನೆಯನ್ನು ಸ್ವಂತ ಪದಗಳಲ್ಲಿ ವಿವರಿಸಲು ತಿಳಿಸುವುದು

        ಬಿ) ಕಾನೂನು ಹೇಗೆ ಕಾರ್ಯನಿರ್ವಹಿಸುವುದು ಎಂಬ ದೃಷ್ಟಾಂತಕ್ಕೆ ಉದಾಹರಣೆ ಕೊಡುವುದನ್ನು

ವಿದ್ಯಾರ್ಥಿಗಳಿಗೆ ಕಲಿಸುವುದು

        ಸಿ) ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗುರುತಿಸಿ, ಸಮನ್ವಯತೆಗಳನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ

ಸಹಾಯ ಮಾಡುವುದು

        ಡಿ) ಸಂಘಟಿತವಲ್ಲದ ಘಟನೆ ಮತ್ತು ವಿಧಾನಗಳನ್ನು ನೆನಪಿನಲ್ಲಿಡಲು ವಿದ್ಯಾರ್ಥಿಗಳನ್ನು ಶಕ್ತಿಗೊಳಿಸುವುದು

ಸರಿಯಾದ ಉತ್ತರ: ಡಿ) ಸಂಘಟಿತವಲ್ಲದ ಘಟನೆ ಮತ್ತು ವಿಧಾನಗಳನ್ನು ನೆನಪಿನಲ್ಲಿಡಲು ವಿದ್ಯಾರ್ಥಿಗಳನ್ನು ಶಕ್ತಿಗೊಳಿಸುವುದು


208.ಇವುಗಳಲ್ಲಿ ಯಾವುದು ಕಲಿಕೆಗೆ ಸಂಬಂಧಿಸಿದಂತೆ ಸರಿ ಇದೆ ?

        ಎ) ಮಕ್ಕಳಿಂದಾಗುವ ದೋಷಗಳು ಯಾವುದೇ ಕಲಿಕೆ ಆಗಿಲ್ಲ ಎಂದು ಸೂಚಿಸುತ್ತವೆ.

        ಬಿ) ಧನಾತ್ಮಕ ಮನೋಭಾವ ಹಾಗೂ ತೃಪ್ತಿದಾಯಕ ವಾತಾವರಣವು ಕಲಿಕಾಕಾರರಲ್ಲಿ ಪರಿಣಾಮಕಾರಿ ಕಲಿಕೆಯನ್ನು ಉಂಟುಮಾಡುತ್ತದೆ.

        ಸಿ) ಕಲಿಕೆಯು ಭಾವನಾತ್ಮಕ ಕಾರಕಗಳ ಪ್ರಭಾವಕ್ಕೆ ಒಳಪಡುವುದಿಲ್ಲ.

        ಡಿ) ಕಲಿಕೆಯು ಮೂಲಭೂತವಾಗಿ ಒಂದು ಮಾನಸಿಕ ಪ್ರಕ್ರಿಯೆ

ಸರಿಯಾದ ಉತ್ತರ: ಬಿ) ಧನಾತ್ಮಕ ಮನೋಭಾವ ಹಾಗೂ ತೃಪ್ತಿದಾಯಕ ವಾತಾವರಣವು ಕಲಿಕಾಕಾರರಲ್ಲಿ ಪರಿಣಾಮಕಾರಿ ಕಲಿಕೆಯನ್ನು ಉಂಟುಮಾಡುತ್ತದೆ.


209.ಇವುಗಳಲ್ಲಿ ಯಾವುದು ಯಾವ ಕಲಿಕಾಕಾರರಲ್ಲಿ ಕಂಡುಬರುವ ವಾಚನ ತೊಂದರೆಯ ಚಿಹ್ನೆಯಲ್ಲ ?             ಎ) ಅಕ್ಷರ ಮತ್ತು ಪದ ಗುರುತಿಸುವಿಕೆ ತೊಂದರೆ

        ಬಿ) ಓದುವ ವೇಗ ಮತ್ತು ನಿರಂತರತೆಯ ತೊಂದರೆ 

        ಸಿ) ಪದ ಮತ್ತು ಯೋಚನೆಗಳನ್ನು ಅರ್ಥೈಸುವ ತೊಂದರೆ 

        ಡಿ) ಕಾಗುಣಿತ ಏಕರೂಪತೆ

ಸರಿಯಾದ ಉತ್ತರ: ಬಿ) ಓದುವ ವೇಗ ಮತ್ತು ನಿರಂತರತೆಯ ತೊಂದರೆ 


210.ವಿದ್ಯಾರ್ಥಿ ಕೇಂದ್ರಿತ ಕಲಿಕೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರಿಂದ ಯಾವ ಉಪಯೋಗ ಅಗುವುದಿಲ್ಲ

        ಎ) ವಿದ್ಯಾರ್ಥಿಗಳಲ್ಲಿ ಅಭಿಪ್ರೇರಣೆಯನ್ನು ಬಲಪಡಿಸುವುದು

        ಬಿ) ಸಮವಯಸ್ಕರ ಸಂವಹನ ಸುಧಾರಿಸುವುದು 

        ಸಿ) ವಿದ್ಯಾರ್ಥಿ ಶಿಕ್ಷಕರ ಸಂಬಂಧ ಏರ್ಪಡಿಸುವುದು

        ಡಿ) ಅನ್ವೇಷಣಾ ಕಲಿಕೆಯನ್ನು ನಿಧಾನಗೊಳಿಸುವುದು

ಸರಿಯಾದ ಉತ್ತರ: ಡಿ) ಅನ್ವೇಷಣಾ ಕಲಿಕೆಯನ್ನು ನಿಧಾನಗೊಳಿಸುವುದು


211.ನಿರಂತರ ಸೂಕ್ತ ವಿಧಾನಗಳಿಂದ ವರ್ತನೆಯನ್ನು ರೂಪಗೊಳಿಸುವ ಹಾಗೂ ಅಪೇಕ್ಷಿತ ವರ್ತನೆಗೆ ಹೆಚ್ಚು ಹತ್ತಿರ ಪ್ರತಿಕ್ರಿಯೆಗಳಿಗೆ ಪುನರ್ಬಲ ನೀಡುವ ಸಿದ್ಧಾಂತ ಯಾವುದು

        ಎ) ಸಾಂಪ್ರದಾಯಿಕ ಅನುಬಂಧನ

        ಬಿ) ಸಾಧನದ ಅನುಬಂಧನ 

        ಸಿ) ಕ್ರಿಯಾಜನ್ಯ ಅನುಬಂಧನ 

        ಡಿ) ಸಾಮಾಜಿಕ ಕಲಿಕೆ

ಸರಿಯಾದ ಉತ್ತರ: ಸಿ) ಕ್ರಿಯಾಜನ್ಯ ಅನುಬಂಧನ 


212. ದೃಶ್ಯ ವರದಿಗಳ ಮೂಲಕ ಕಲಿಕಾಕಾರರನ್ನು ದೂರನಿಯಂತ್ರಣ ಸ್ಥಳಗಳಿಗೆ ಸಾಗಿಸುವ ಮಾಧ್ಯಮಕ್ಕೆ ಒಂದು ಉದಾಹರಣೆ

        ಎ) ಶೈಕ್ಷಣಿಕ ದೂರದರ್ಶನ

        ಬಿ) ಶೈಕ್ಷಣಿಕ ಪ್ರಸಾರ

        ಸಿ) ಮೇಲತಲೆ ಪ್ರಕ್ಷೇಪಕ (ಔಊP) 

        ಡಿ) ದೂರವಾಣಿ

ಸರಿಯಾದ ಉತ್ತರ: ಎ) ಶೈಕ್ಷಣಿಕ ದೂರದರ್ಶನ

💢💢💢💢💢💢💢💢💢💢💢💢💢💢💢

213. ಕೌಶಲ್ಯ ಕಲಿಕೆಯ ಮೊದಲ ಹಂತ

        ಎ) ನಿಷ್ಕøಷ್ಟತೆ

        ಬಿ) ಹಸ್ತ ಪ್ರಯೋಗ 

        ಸಿ) ಸಮನ್ವಯತೆ 

        ಡಿ) ಅನುಕರಣೆ 

ಸರಿಯಾದ ಉತ್ತರ: ಡಿ) ಅನುಕರಣೆ 


214.ಇವುಗಳಲ್ಲಿ ಯಾವುದು ಪುನರ್ಬಲನದ ಉದಾಹರಣೆಯಾಗಿವೆ 

        ಎ) ಇಲ್ಲ ಲತಾ, 45 ಉತ್ತರವಲ್ಲ

        ಬಿ) ಕಮಲಾ ನೀನು ಕೀರ್ತಿಗೆ ಉತ್ತರಿಸಲು ಸಹಾಯ ಮಾಡಬಹುದೇ

        ಸಿ) ಓ ಇಲ್ಲ ಪ್ರತಿಸಲದಂತೆ ನೀನು ತಪ್ಪು 

        ಡಿ) ಸುನಿತಿ ನೀನು ಸರಿಯಾಗಿ ಹೇಳಿದೆ 

ಸರಿಯಾದ ಉತ್ತರ: ಡಿ) ಸುನಿತಿ ನೀನು ಸರಿಯಾಗಿ ಹೇಳಿದೆ 


215 .ಮಕ್ಕಳಲ್ಲಿ ಸ್ವ ಅಧ್ಯಯನದ ರೂಢಿಯನ್ನು ಅಭಿವೃದ್ಧಿಪಡಿಸುವುದು ಸಾಧ್ಯವಾಗುವುದು

        ಎ) ಮಹಾನ್ ವ್ಯಕ್ತಿಗಳ ಉದಾಹರಣೆ ಕೊಡುವುದು

        ಬಿ) ಸ್ವ ಅಧ್ಯಯನದ ಕುರಿತು ಉಪನ್ಯಾಸ್ ನೀಡುವುದು

        ಸಿ) ನಮ್ಮ ಸ್ವಂತ ಉದಾಹರಣೆಯನ್ನು ಕೊಡುವುದು

        ಡಿ) ಹೊಸ ಸಾಹಿತ್ಯ ಲಭ್ಯವಾಗುವಂತೆ ಮಾಡುವುದು

ಸರಿಯಾದ ಉತ್ತರ: ಡಿ) ಹೊಸ ಸಾಹಿತ್ಯ ಲಭ್ಯವಾಗುವಂತೆ ಮಾಡುವುದು


216.ಪರಿಣಾಮಕಾರಿ ಕಲಿಕೆ ಆಗಲು ಮಗುವು...........

        ಎ) ಕಲಿಯಲು ಸಿದ್ಧವಿರಬೇಕು

        ಬಿ) ಕಲಿತ ವಿಷಯವನ್ನು ಪುನರಾವರ್ತಿಸಬೇಕು 

        ಸಿ) ಸಂತೃಪ್ತಿ ಹೊಂದಬೇಕು 

        ಡಿ) ಈ ಮೇಲಿನ ಎಲ್ಲವೂ

ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ


217. ಬೋಧನೆಯ ಪರಿಣಾಮಕಾರತೆ ಹೆಚ್ಚಬೇಕೆಂದರೆ...

        ಎ) ತರಗತಿಯಲ್ಲಿ ನೇರ ಬೋಧನೆಯನ್ನು ಬಳಸಬೇಕು

        ಬಿ) ತರಗತಿಯಲ್ಲಿ ಶಿಕ್ಷಕರಿಂದ ನಿರ್ದೇಶಿತ ವಿಧಾನಗಳನ್ನು ಬಳಸುವುದು

        ಸಿ) ನೇರ ಬೋಧನೆ ಮತ್ತು ಶಿಕ್ಷಕರಿಂದ ನಿರ್ದೇಶಿತ ವಿಧಾನಗಳನ್ನು ಬಳಸುವುದು

        ಡಿ) ಶಿಸ್ತು ಕೇಂದ್ರಿತ ಬೋಧನೆ ಹಾಗೂ ಪರಸ್ಪರಾನುವರ್ತಿತ ವಿಧಾನಗಳನ್ನು ಬಳಸುವುದು

ಸರಿಯಾದ ಉತ್ತರ:  ಡಿ) ಶಿಸ್ತು ಕೇಂದ್ರಿತ ಬೋಧನೆ ಹಾಗೂ ಪರಸ್ಪರಾನುವರ್ತಿತ ವಿಧಾನಗಳನ್ನು ಬಳಸುವುದು


218.ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಹೊಂದಿರುವ ಗುಣಲಕ್ಷಣಗಳು 

        ಎ) ಕಲಿಕೆಯಲ್ಲಿ ಚಟುವಟಿಕೆಯಿಂದಿರುವುದು

        ಬಿ) ವಿದ್ಯಾರ್ಥಿಗಳು ಕಲಿಕಾ ಸಾಮಥ್ರ್ಯ ಹೊಂದಿರುವುದು 

        ಸಿ) ಹೊಸ ಅನುಭವಗಳಿಗೆ ಸಂಬಂಧಿಸಿದಮತೆ ಸ್ವ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಮಾಡಿಕೊಳ್ಳುವುದು

        ಡಿ) ಈ ಮೇಲಿನ ಎಲ್ಲವೂ

ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ

💢💢💢💢💢💢💢💢💢💢💢💢💢💢💢

219.ಮಂದ ಕಲಿಕೆಯ ವಿದ್ಯಾರ್ಥಿಯ ಅಗತ್ಯತೆ.........

        ಎ) ಹೆಚ್ಚಿನ ಸಹಾಯ

        ಬಿ) ವಿಶೇಷ ಸಹಾಯ 

        ಸಿ) ಯಾವುದೇ ಸಹಾಯ ಬೇಕಿಲ್ಲ 

        ಡಿ) ಸ್ವಲ್ಪ ಸಹಾಯ

ಸರಿಯಾದ ಉತ್ತರ: ಬಿ) ವಿಶೇಷ ಸಹಾಯ 


220.ನೀವು ಕೇಳಿರುವ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತಪ್ಪು ಉತ್ತರ ಕೊಟ್ಟರೆ ಏನು ಮಾಡುವಿರಿ ?

        ಎ) ಇನ್ನೊಂದು ಪ್ರಶ್ನೆಗೆ ಕೇಳುವ ಮೂಲಕ ಅಭ್ಯರ್ಥಿಯು ತನ್ನ ತಪ್ಪನ್ನು ಅರಿಯುವಂತೆ ಮಾಡುವುದು         ಬಿ) ಅಭ್ಯರ್ಥಿಯ ಉತ್ತರವನ್ನು ಏಕೆ ತಪ್ಪು ಎಂದು ಅಭ್ಯರ್ಥಿಗೆ ತಿಳಿಸುವುದು

        ಸಿ) ಇನ್ನೋರ್ವ ವಿದ್ಯಾರ್ಥಿಗೆ ಉತ್ತರಿಸಲು ಹೇಳುವುದು 

        ಡಿ) ಸರಿ ಉತ್ತರವನ್ನು ಹೇಳುವುದು

ಸರಿಯಾದ ಉತ್ತರ:  ಸಿ) ಇನ್ನೋರ್ವ ವಿದ್ಯಾರ್ಥಿಗೆ ಉತ್ತರಿಸಲು ಹೇಳುವುದು 


221.ಬೋಧನೆಯ ವ್ಯಾಖ್ಯಾನವು............

        ಎ) ಕಲಿಕೆಗೆ ಸಹಕರಿಸುವುದು

        ಬಿ) ಶಿಕ್ಷಕರಿಂದ ಜ್ಞಾನದ ವರ್ಗಾವಣೆ ಮತ್ತು ವಿದ್ಯಾರ್ಥಿಗಳಿಂದ ಅರ್ಥೈಸುವುದು 

        ಸಿ) ಪಠ್ಯಪುಸ್ತಕಗಳನ್ನು ಓದುವುದು

        ಡಿ) ಶಿಕ್ಷಕರಿಂದ ಜ್ಞಾನದ ವರ್ಗಾವಣೆ

ಸರಿಯಾದ ಉತ್ತರ: ಎ) ಕಲಿಕೆಗೆ ಸಹಕರಿಸುವುದು


222.ಸಿಹಿ ತಿಂಡಿಗಳ ಅಂಗಡಿ ಬೋರ್ಡಿನಲ್ಲಿ ತಮ್ಮ ಅಚ್ಚುಮೆಚ್ಚಿನ ಸಿಹಿತಿಂಡಿ ಹೆಸರು ನೋಡಿ ಕೆಲವರು ಜೊಲ್ಲು ಸುರಿಸುವುದು

        ಎ) ತತಕ್ಷಣ ಅನುಬಂಧನ

        ಬಿ) ಶಾಬ್ದಿಕ ಅನುಬಂಧನ

        ಸಿ) ವಿಭೇದನಾತ್ಮಕ ಅನುಬಂಧನ 

        ಡಿ) ಶಬ್ದಾರ್ಥ ಅನುಬಂಧನ

ಸರಿಯಾದ ಉತ್ತರ:  ಡಿ) ಶಬ್ದಾರ್ಥ ಅನುಬಂಧನ


223.ಇವುಗಳಲ್ಲಿ ಯಾವುದು ತರಗತಿ ಚಟುವಟಿಕೆಯ ಕಲಿಕೆಗೆ ಹೆಚ್ಚು ಅಭಿಪ್ರೇರಿಸುವುದು ?

        ಎ) ಕಲಿಕೆಯನ್ನು ಉಂಟುಮಾಡುವ ಸಾಮಥ್ರ್ಯದ ಹೆಚ್ಚಿನ ಉಪಸ್ಥಿತಿ

        ಬಿ) ವಿದ್ಯಾರ್ಥಿಯ ಸುಪ್ತ ಮನಸ್ಸಿನಲ್ಲಿನ ಆಂತರಿಕ ಸಾಮಥ್ರ್ಯ

        ಸಿ) ವಿದ್ಯಾರ್ಥಿಯ ಅತೃಪ್ತ ಅಗತ್ಯತೆಗಳು

        ಡಿ) ವಿದ್ಯಾರ್ಥಿಗಳ ಅಗತ್ಯತೆ ಕುರಿತು ಶಿಕ್ಷಕರ ಅರಿವು

ಸರಿಯಾದ ಉತ್ತರ: ಡಿ) ವಿದ್ಯಾರ್ಥಿಗಳ ಅಗತ್ಯತೆ ಕುರಿತು ಶಿಕ್ಷಕರ ಅರಿವು

💢💢💢💢💢💢💢💢💢💢💢💢💢💢💢

224.ಪೂರ್ವಜ್ಞಾನವನ್ನು ಪ್ರಸ್ತುತ ಜ್ಞಾನದೊಂದಿಗೆ ಸಹಸಂಬಂಧೀಕರಿಸಿ ರಚಿಸಿದ ನಕ್ಷೆ/ಆಲೇಖ

        ಎ) ಮಾನಸಿಕ ನಕ್ಷೆ

        ಬಿ) ಪರಸ್ಪರ ವ್ಯಾಪಕ ನಕ್ಷೆ

        ಸಿ) ಪ್ರವಹನ ನಕ್ಷೆ

        ಡಿ) ಪರಿಕಲ್ಪನಾ ನಕ್ಷೆ

ಸರಿಯಾದ ಉತ್ತರ: ಡಿ) ಪರಿಕಲ್ಪನಾ ನಕ್ಷೆ


225.ಇವುಗಳಲ್ಲಿ ಕಲಿಕಾಕಾರರನ್ನು ಅಭಿಪ್ರೇರಿಸಲು ಅತ್ಯಂತ ಪರಿಣಾಮಕಾರಿ ವಿಧಾನ ಯಾವುದು

ಎ) ಶಿಕ್ಷೆ

        ಬಿ) ಹೊಗಳಿಕೆ

ಸಿ) ವಿಮರ್ಶೆ

        ಡಿ) ಯಾವುದು ಅಲ್ಲ

ಸರಿಯಾದ ಉತ್ತರ: ಬಿ) ಹೊಗಳಿಕೆ


226.ಸಾಮಾಜೀಕರಣದ ಎರಡು ಪ್ರಾಥಮಿಕ ವಿಧಾನಗಳಲ್ಲಿ ಒಂದು ಪ್ರೀತಿ ಆಧಾರಿತ ಶಿಕ್ಷೆಯಾದರೆ ಇನ್ನೊಂದು

        ಎ) ಮಾನಸಿಕ ಶಿಕ್ಷೆ

        ಬಿ) ವಸ್ತು ಆಧಾರಿತ ಶಿಕ್ಷೆ 

        ಸಿ) ಮನೋವೈಜ್ಞಾನಿಕ ಶಿಕ್ಷೆ 

        ಡಿ) ತಾತ್ಕಾಲಿಕ ಶಿಕ್ಷೆ 

ಸರಿಯಾದ ಉತ್ತರ: ಬಿ) ವಸ್ತು ಆಧಾರಿತ ಶಿಕ್ಷೆ 


227.ಮಕ್ಕಳಲ್ಲಿ ಸಾಧನಾ ಅಭಿಪ್ರೇರಣೆಯನ್ನು ಸಶಕ್ತಗೊಳಿಸಲು ಸಾಧ್ಯವಾಗುವುದು

        ಎ) ಅವರಿಗೆ ನೈತಿಕ ಕಥೆಗಳನ್ನು ಹೇಳುವುದು

        ಬಿ) ಅವರ ಕಾರ್ಯದಕ್ಷತೆ ಹೇಗೆ ಇದ್ದರೂ ಅವರನ್ನು ಹೊಗಳುವುದು

        ಸಿ) ಅವರಿಗೆ ನಿರ್ವಹಣೆಯ ಜವಾಬ್ದಾರಿ ಕೊಡುವುದು 

        ಡಿ) ಉತ್ತಮ ನೌಕರಿ ಪಡೆಯಲು ಉತ್ತಮ ಅಂಕಗಳು ಮಾತ್ರ ಮುಖ್ಯ ಎಂದು ಅವರಿಗೆ ಹೇಳುವುದು

ಸರಿಯಾದ ಉತ್ತರ: ಸಿ) ಅವರಿಗೆ ನಿರ್ವಹಣೆಯ ಜವಾಬ್ದಾರಿ ಕೊಡುವುದು


228.ವಿದ್ಯಾರ್ಥಿಗಳು ಸಹಜವಾಗಿ ಅಭಿಪ್ರೇರಿತರಾಗುವುದು

        ಎ) ಸರಳ ಕಾರ್ಯಗಳನ್ನು ಮಾಡಲು 

        ಬಿ) ಹೊಸದನ್ನು ಶೋಧಿಸಲು 

        ಸಿ) ನಿರಂತರ ಸಂಘರ್ಷವನ್ನು ಹುಡುಕಲು 

        ಡಿ) ತಪ್ಪುಗಳನ್ನು ಮಾಡಲು


ಸರಿಯಾದ ಉತ್ತರ: ಬಿ) ಹೊಸದನ್ನು ಶೋಧಿಸಲು 

💥💥💥💥💥💥💥💥💥💥💥




💥💥💥💥💥💥💥💥💥💥💥

1 comment:

  1. Sir ji 196 questions ge and hege anata artha aagatila sir ji

    ReplyDelete

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads