ಹತ್ತನೆಯ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಪ್ರಶ್ನೋತ್ತರಗಳು
10 ನೇ ತರಗತಿ ವಿಷಯ: ಸಮಾಜ ವಿಜ್ಞಾನ ಇತಿಹಾಸ
Karnataka SSlC Social Science Chapter Wise Question Answers,
SSLC Social Science Chapter wise Question Answers : 02 Chapter : Expansion of British rule
ಅಧ್ಯಾಯ 2. ಬ್ರಿಟೀಷ್ ಆಳ್ವಿಕೆಯ ವಿಸ್ತರಣೆ
1. ಸಿಖ್ಖರ ಪ್ರಖ್ಯಾತ ಅರಸ ಯಾರು?
ಉ: ರಣಜಿತ್ ಸಿಂಗ್
2. 19 ನೆ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಸಿಖ್ಖರ ಆರಂಭದ ಅರಸ ಯಾರು?
ಉ: : ರಣಜಿತ್ ಸಿಂಗ್
3. ಮೊದಲ ಆಂಗ್ಲೋ-ಮರಾಠ ಯುದ್ದ ಯಾವ ಒಪ್ಪಂದದ ಮೂಲಕ ಕೊನೆಗೊಂಡಿತು?
ಉ: ಸಾಲ್ಬಾಯ್ ಒಪ್ಪಂದ
4. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಯಾರು?
ಉ: ಲಾರ್ಡ್ ವೆಲ್ಲೆಸ್ಲಿ
5. ಸಹಾಯಕ ಸೈನ್ಯ ಪದ್ದತಿಯ ಮೊದಲ ದೇಶೀಯ ದೊರೆ ಯಾರು?
ಉ: ಹೈದರಾಬಾದಿನ ನಿಜಾಮ.
6. ಎರಡನೇ ಆಂಗ್ಲೋ-ಮರಾಠ ಯುದ್ಧಕ್ಕೆ ಮುಖ್ಯ ಕಾರಣವೇನು?
ಉ: ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವು ಕಾರಣ.
7. ಎರಡನೇ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದ ಮೂಲಕ ಕೊನೆಗೊಂಡಿತು?
ಉ: ಬೆಸ್ಸೀನ್ ಒಪ್ಪಂದ
8. 1848 ರಲ್ಲಿ ಪಂಜಾಬ್ ಸಂಘಟನೆಗಳ ನೇತೃತ್ವವನ್ನು ವಹಿಸಿದವರು ಯಾರು?
ಉ: ಚಟ್ಟಾರ್ ಸಿಂಗ್, ಅಟ್ಟಾರಿವಾ ಮತ್ತು ಮೂಲ್ರಾಜ್
9. ನಿರಂತರ ಮೈತ್ರಿ ಒಪ್ಪಂದ ಯಾರು ಯಾರ ನಡುವೆ ನಡೆಯಿತು?
ಉ: ಸಿಖ್ಖರು ಮತ್ತು ಬಿಟ್ರೀಷರ ನಡುವೆ.
ಎರಡು ಅಂಕದ ಪ್ರಶ್ನೆಗಳು ಮತ್ತು ಉತ್ತರಗಳು
1. ಮೊದಲನೇ ಆಂಗ್ಲೋ-ಮರಾಠ ಯುದ್ದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ.
- ಬಕ್ಸಾರ್ ಕದನದಲ್ಲಿ ಸೋತು ಬಿಟ್ರೀಷರ ಆಶ್ರಯದಲ್ಲಿದ್ದ ಮೊಘಲ್ ಚಕ್ರವರ್ತಿ ಎರಡನೇ ಷಾ-ಅಲಂ ನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದಲ್ಲಿ ಕುಳ್ಳಿರಿಸಿದ್ದು.
- ಬಿಟ್ರೀಷರಿಗೆ ನೀಡಿದ್ದ ಪ್ರದೇಶಗಳನ್ನು ಷಾ-ಅಲಂ ಮರಾಠರಿಗೆ ಕೊಟ್ಟಿದ್ದು.
- ಪೇಶ್ವೆಯ ಸ್ಥಾನಕ್ಕೆ ಮರಾಠರಲ್ಲಿ ಕಲಹ ಏರ್ಪಟ್ಟಿದ್ದು
2. ಬಿಟ್ರೀಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ರಣೆಗಾಗಿ ಅನುಸರಿಸಿದ ಮಾರ್ಗಗಳು ಯಾವುವು?
ಯುದ್ದಗಳು, ಸಹಾಯಕ ಸೈನ್ಯ ಪದ್ದತಿ, ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿ, ಆಡಳಿತ ಕುಸಿದು ಬಿದ್ದಿದೆ ಎಂಬ ಕಾರಣಗಳು.
ಮೂರು ಅಕದ ಪ್ರಶ್ನೆಗಳು ಮತ್ತು ಉತ್ತರಗಳು
1. ಎರಡನೇ ಆಂಗ್ಲೋ-ಮರಾಠ ಯುದ್ದವನ್ನು ವಿವರಿಸಿ.
- ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ದಕ್ಕೆ ಕಾರಣ.
- ಹೋಳ್ಕರ್ ಮನೆತನದ ಯಶವಂತ್ರಾವ್ ಒಂದುಕಡೆಯಾದರೆ, ಸಿಂಧಿಯಾ ಮನೆತನದ ದೌಲತ್ ರಾವ್ ಹಾಗೂ ಪೇಶ್ವೆ ಎರಡನೇ ಬಾಜೀರಾವ್ ಇನ್ನೊಂದು ಕಡೆಗಿದ್ದರು.
- ಹೋಳ್ಕರ್ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಯ ಸೈನ್ಯವನ್ನು ಸೋಲಿಸಿತು.
- ಪೇಶ್ವೆ ಬಿಟ್ರೀಷರ ಸಹಾಯ ಯಾಚಿಸಿದನು. ಲಾರ್ಡ್ ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು.
- ಪೇಶ್ವೆ 3 ಬೆಸ್ಸೀನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡನು.
- ಪೇಶ್ವೆ ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್, ಭೋಂಸ್ಲೆ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು.
2. ಮೂರನೇ ಆಂಗ್ಲೋ-ಮರಾಠ ಯುದ್ದದ ಪರಿಣಾಮಗಳಾವುವು?
- ಬಿಟ್ರೀಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜೀರಾಯನಿಗೆ ವಿಶ್ರಾಂತಿ ವೇತನ ನೀಡಿದನು.
- ಶಿವಾಜಿ ವಂಶಸ್ಥ ಪ್ರತಾಪ ಸಿಂಹನ್ನು ಸಣ್ಣರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಪ್ರತಿರೋಧವನ್ನುನಿಗ್ರಹಿಸಿದರು. ಬಿಟ್ರೀಷ್ ಅಧಿಕಾರದ ಕ್ರೋಢೀಕರಣದಿಂದಾಗಿ 1818 ರಿಂದ 1857 ರವರೆಗೆ ಅಖಂಡ ಭಾರತವನ್ನು ಗೆಲ್ಲುವ ಕಾರ್ಯವನ್ನು ಪೂರ್ಣಗೊಳಿಸಿದರು.
- ಪಂಜಾಬ್, ಸಿಂಧ್, ಔದ್ ಮೊದಲಾದ ಪ್ರಮುಖ ರಾಜ್ಯಗಳನ್ನಲ್ಲದೆ ಅನೇಕ ಸಣ್ಣ ಪುಟ್ಟ ರಾಜ್ಯಗಳನ್ನು ಆಕ್ರಮಿಸಿದರು.
3. ಮೊದಲನೇ ಆಂಗ್ಲೋ-ಮರಾಠ ಯುದ್ದಕ್ಕೆ ಕಾರಣಗಳನ್ನು ವಿವರಿಸಿ.
- ಮರಾಠ ಪೇಶ್ವೆ ಮಾಧವರಾಯನ ಮರಣ ಮರಾಠರಿಗೆ ತುಂಬಲಾರದ ನಷ್ಠವಾಯಿತು.
- ಪೇಶ್ವೆಯ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ, ಅವನನ್ನು ಅವನ ಚಿಕ್ಕಪ್ಪ ಕೊಲೆ ಮಾಡಿದನು. (ರಘೋಬ) ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದ ರಘೋಬನು ಬ್ರಿಟೀಷರ ಬೆಂಬಲ ಕೋರಿದನು.
- ಬಿಟ್ರೀಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು. ಮರಾಠ ಒಕ್ಕೂಟವು ಯುದ್ದ ಮುಂದುವರಿಸಲಾಗದೆ ಬ್ರಿಟೀಷರೊಂದಿಗೆ ಸಾಲ್ಬಾಯಿ ಒಪ್ಪಂದವನ್ನು ಮಾಡಿಕೊಂಡಿತು. ಎರಡನೇ ಮಾಧವರಾಯ್ ನನ್ನು ಪೇಶ್ವೆಯಾಗಿ ನೇಮಿಸಲಾಯಿತು.
No comments:
Post a Comment
If you have any doubts please let me know