ಹತ್ತನೆಯ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಪ್ರಶ್ನೋತ್ತರಗಳು
10 ನೇ ತರಗತಿ ವಿಷಯ: ಸಮಾಜ ವಿಜ್ಞಾನ ಇತಿಹಾಸ
Karnataka SSlC Social Science Chapter Wise Question Answers,
ಅಧ್ಯಾಯ 1. ಭಾರತಕ್ಕೆ ಯುರೋಪಿಯನ್ನರ ಆಗಮನ
1. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು ಯಾರು?
ಉ: ವಾಸ್ಕೋ- ಡ- ಗಾಮ
2. ಕ್ರಿ.ಶ. 1453 ರಲ್ಲಿ ಆಟೋಮನ್ ಟರ್ಕರು ಯಾವ ನಗರವನ್ನು ವಶಪಡಿಸಿಕೊಂಡರು?
ಉ: ಕಾನ್ಸಾಟಾಂಟಿನೋಪಲ್ ನಗರ
3. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಯಾವುದು?
ಉ: ಪಾಂಡಿಚೇರಿ
4. ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಯಾರು?
ಉ: 2ನೆ ಷಾ ಅಲಂ
5. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು?
ಉ: ರಾಬರ್ಟ್ ಕ್ಲೈವ್
6. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?
ಉ: ಕಾನ್ಸಾಟಾಂಟಿನೋಪಲ್
7. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?
ಉ: ಅರಬ್ಬರು.
8. ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರು ಏನು?
ಉ: ಬೈಜಾಂಟೀನ್
9. ಜಹಾಂಗೀರನ ಆಸ್ಥಾನಕ್ಕೆ ಬಂದ ಬಿಟ್ರಿಷರ ರಾಯಭಾರಿ ಯಾರು?
ಉ: ಸರ್ ಥಾಮಸ್ ರೋ
10. ಫ್ರಾನ್ಸಿಸ್ಕೋ ಆಲ್ಮೇಡ್ ಭಾರತದಲ್ಲಿ ನೌಕಾ ಶಕ್ತಿಯನ್ನು ಬಲಪಡಿಸಲು ಜಾರಿಗೆ ತಂದ ನೀತಿ ಯಾವುದು?
ಉ: ನೀಲಿ ನೀರಿನ ನೀತಿ
11. ಮೊದಲ ಕರ್ನಾಟಿಕ್ ಯುದ್ದ ಮುಕ್ತಾಯವಾದ ಒಪ್ಪಂದ ಯಾವುದು?
ಉ: ಎಕ್ಸ್-ಲಾ-ಚಾಪೆಲ್
12. ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದಾಗಿತ್ತು?
ಉ: ಕಾನ್ಸಾಟಾಂಟಿನೋಪಲ್
13. ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?
ಉ: ಇಟಲಿಯ ವರ್ತಕರು.
14. ವಾಸ್ಕೋಡಿಗಾಮನು ಯಾವ ದೇಶದ ನಾವಿಕ?
ಉ: ಪೋರ್ಚುಗಲ್
15. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಮೊಟ್ಟಮೊದಲ ಯುರೋಪಿಯನ್ನರು ಯಾರು?
ಉ: ಪೋರ್ಚುಗೀಸರು
16. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು?
ಉ: ಪೋರ್ಚುಗೀಸರು
17. ಭಾರತಕ್ಕೆ ಬಂದ ಪೋರ್ಚುಗೀಸರು ಮೊಟ್ಟಮೊದಲ ವೈಸರಾಯ್ ಯಾರು?
ಉ: ಪ್ರಾನ್ಸಿಸ್ಕೋ-ಡಿ-ಆಲ್ಮೇಡ್
18. ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ ಯಾವುದು?
19. ಉ: ಗೋವಾ
20. ವಾಲಿಕೊಂಡಪುರಂನ ಮತ್ತೊಂದು ಹೆಸರು ಯಾವುದು?
ಉ: ಪಾಂಡಿಚೇರಿ
21. ಫ್ರೆಂಚರ ಗವರ‍್ನರ್ ಯಾರು?
ಉ: ಡೂಪ್ಲೆ
2 ಅಂಕದ ಪ್ರಶ್ನೆ ಉತ್ತರಗಳು
1. ಯುರೋಪಿನಲ್ಲಿ ಬೇಡಿಕೆ ಇದ್ದ ಸಂಬಾರ ಪದಾರ್ಥಗಳು ಯಾವವು?
ಉ: ಮೆಣಸು, ಜೀರಿಗೆ, ಶುಂಠಿ, ದಾಲ್ಚಿನ್ನಿ, ಏಲಕ್ಕಿ.
2. ಅಟೋಮನ್ ಟರ್ಕರು ಕಾನ್ಸಾಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಉಂಟಾದ ಪರಿಣಾಮವೇನು?
ಉ: ಇದರಿಂದ ಪೂರ್ವ ಪಶ್ಚಿಮ ರಾಷ್ಟ್ರಗಳ ವ್ಯಾಪಾರ ಸಂಬಂಧವು ನಿಂತು ಹೋಗಿ, ಹೊಸ ಜಲಮಾರ್ಗ ಕಂಡುಹಿಡಿಯಲು ಪ್ರೇರಕವಾಯಿತು.
3. ನೀಲಿ ನೀರಿನ ನೀತಿ ಎಂದರೇನು?
ಉ: ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿಯನ್ನು ನೀಲಿ ನೀರಿನ ನೀತಿ ಎನ್ನುವರು.
4. ಭಾರತದಲ್ಲಿ ಇಂಗ್ಲೀಷರ ಪ್ರೆಸಿಡೆನ್ಸಿ ಕೇಂದ್ರಗಳು ಯಾವವು? ಉ: ಮದ್ರಾಸ್, ಬಾಂಬೆ, ಕಲ್ಕತ್ತ.
5. ದ್ವಿ ಪ್ರಭುತ್ವ ಎಂದರೇನು? ಇದನ್ನು ಜಾರಿಗೆ ತಂದವರು ಯಾರು?
ಈ ಪದ್ದತಿಯಂತೆ ಬ್ರಿಟೀಷರು ಕಂದಾಯ ವಸೂಲು ಮಾಡುವ ಹಕ್ಕನ್ನು ಹೊಂದಿದ್ದರು.
ರಾಜನು ದೈನಂದಿನ ವ್ಯವಹಾರ ಮತ್ತು ನ್ಯಾಯ ತೀರ್ಮಾನ ಮಾಡುವ ಹಕ್ಕನ್ನು ಹೊಂದಿದ್ದನು. ಇದನ್ನು ಜಾರಿಗೆ ತಂದವರು ರಾಬರ್ಟ್ ಕ್ಲೈವ್.
6. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪಿನ ನಡುವಡ ವ್ಯಾಪಾರ ಹೇಗೆ ನಡೆಯುತ್ತಿತ್ತು? ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು.
ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನ್‌ಸ್ಟಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು. ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಿಗೆ ಮಾರುತ್ತಿದ್ದರು.
3 ಅಂಕದ ಪ್ರಶ್ನೆ ಮತ್ತು ಉತ್ತರಗಳು
2.ಬಕ್ಸಾರ್ ಕದನ ಯಾರು ಯಾರ ನಡುವೆ ನಡೆಯಿತು? ಇದಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.
ಬಕ್ಸಾರ್ ಕದನವು 1864 ರಲ್ಲಿ ಸಂಯುಕ್ತ ಪಡೆಯಾದ ಬಂಗಾಳದ ಮೀರ್ ಖಾಸಿಂ, ಮೊಘಲರ ಎರಡನೇ ಷಾ ಅಲಂ ಮತ್ತು ಔದ್ನ ಷೂಜ-ಉದ್-ದೌಲ ಹಾಗೂ ಬ್ರಿಟೀಷರ ನಡುವೆ ನಡೆಯಿತು.
ಕಾರಣ- ಮೀರ್ ಖಾಸಿಂ ಸ್ವತಂತ್ರ ರಾಜನೆಂದು ಭಾವಿಸಿದನು. ದಸ್ತಕಗಳ ದುರುಪಯೋಗ ತಡೆಯಲು ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು.
ಇದರಿಂದ ಬಿಟ್ರಿಷರು ಮತ್ತು ಭಾರತೀಯರ ನಡುವೆ ಸ್ಪರ್ಧೆ ಏರ್ಪಟ್ಟಿತು.
ಮೀರ್ ಖಾಸಿಂನು ಬಿಟ್ರಿಷರನ್ನು ಎದುರಿಸಲು ಸಂಯುಕ್ತ ಸೇನಾಪಡೆಯನ್ನು ಕಟ್ಟಿದನು.
ಪರಿಣಾಮಗಳು- ಬಿಟ್ರಿಷರು ಸಂಯುಕ್ತ ಪಡೆಯನ್ನು ಸೋಲಿಸಿದರು.
ಮೀರ್‌ಜಾಫರ್ ನನ್ನು ಮತ್ತೆ ನವಾಬನನ್ನಾಗಿ ಮಾಡಿದರು.
ಮೀರ್‌ಜಾಫರ್ ನು ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಬ್ರಿಟೀಷರಿಗೆ ನೀಡಿದನು.
2 ನೇ ಷಾ ಅಲಂ 26 ಲಕ್ಷ ರೂಪಾಯಿ ಹಾಗೂ ಬಂಗಾಳದ ಮೇಲಿನ ತನ್ನ ಹಕ್ಕನ್ನು ಬಿಟ್ಟು ಕೊಟ್ಟನು.
ಔದ್ನ ನವಾಬನು ಯುದ್ದ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಯನ್ನು ಕೊಡಬೇಕಾಯಿತು. ಮೀರ್ ಜಾಪರ್‌ನ ಮರಣದ ನಂತರ ಅವನ ಮಗನಿಗೆ ವಿಶಾರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪೆನಿಯು ನಿರ್ವಹಿಸತೊಡಗಿತು.
No comments:
Post a Comment
If you have any doubts please let me know