Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 26 June 2021

Complete details of Indian Constitution Preamble and Directive Principles of state policy for All Competitive Exams like UPSC IAS IPS KPSC KAS FDA SDA TET CET PSI PDO Police constable

ಭಾರತದ ಸಂವಿಧಾನದ ಪ್ರಸ್ತಾವನೆ ಮತ್ತು ರಾಜ್ಯ‌ನಿರ್ದೇಶಕ ತತ್ವಗಳ ಸಂಪೂರ್ಣ ವಿವರಣೆ


Complete details of Indian Constitution Preamble and Directive Principles of state policy for All Competitive Exams like UPSC IAS IPS KPSC KAS FDA SDA TET CET PSI PDO Police constable



UPSC, KPSC, IAS, KAS, FDA, SDA, PSI, PDO, TEat, CET, ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭಾರತದ ಸಂವಿಧಾನದ ಪ್ರಸ್ತಾವನೆ ಮತ್ತು ರಾಜ್ಯ ನಿರ್ದೇಶಕ ತತ್ವಗಳ ಸಂಪೂರ್ಣ ಹಾಗೂ ಸಮಗ್ರ ವಿವರಣೆ. 


ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ಪ್ರಶ್ನೆಗಳು ಮತ್ತು ಉತ್ತರಗಳು.

Complete details of Indian Constitution Preamble and Directive Principles of state policy for All Competitive Exams like UPSC IAS IPS KPSC KAS FDA SDA TET CET PSI PDO Police constable



1) ಕಲ್ಯಾಣ ರಾಜ್ಯ ಎಂಬ ಪರಿಕಲ್ಪನೆಯು ಭಾರತ ಸಂವಿಧಾನದ ಈ ಭಾಗದಲ್ಲಿ ಕಂಡುಬರುತ್ತದೆ?

A) ಮೂಲಭೂತ ಕರ್ತವ್ಯಗಳು

B) ರಾಜ್ಯ ನಿರ್ದೇಶಕ ತತ್ವಗಳು

C) ಪ್ರಸ್ತಾವನೆ

D) ಮೂಲಭೂತ ಹಕ್ಕುಗಳು


ಸರಿಯಾದ ಉತ್ತರ  : B) ರಾಜ್ಯ ನಿರ್ದೇಶಕ ತತ್ವಗಳು


ವಿವರಣೆ :


ಕಲ್ಯಾಣ ರಾಜ್ಯ ಎಂಬ ಪರಿಕಲ್ಪನೆಯೂ ಭಾರತ ಸಂವಿಧಾನದ ಭಾಗ 4 (ಕಲಂ  36 ರಿಂದ 51) ರಾಜ್ಯ ನಿರ್ದೇಶಕ ತತ್ವಗಳಲ್ಲಿ ಕಂಡುಬರುತ್ತದೆ.


ರಾಜ್ಯ ನಿರ್ದೇಶಕ ತತ್ವಗಳ ಕುರಿತಾದ ಹೆಚ್ಚಿನ ಮಾಹಿತಿ


  • ರಾಜ್ಯ ನಿರ್ದೇಶಕ ತತ್ವಗಳನ್ನು ಐರ್ಲೆಂಡ್ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
  • ಭಾರತದ ಸಂವಿಧಾನದ 4 ನೇ ಭಾಗವು ರಾಜ್ಯ ನಿರ್ದೇಶಕ ತತ್ವಗಳನ್ನು ಒಳಗೊಂಡಿದೆ ಸಂವಿಧಾನದ 36 ರಿಂದ 51 ರವರೆಗಿನ ವಿಧಿಗಳು ರಾಜ್ಯನಿರ್ದೇಶಕ ತತ್ವಗಳಿಗೆ ಸಂಬಂಧಿಸಿವೆ.
  • ಗ್ರಾನ್ವಿಲ್ಲೆ ಆಸ್ಟಿನ್ ರವರು ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದ ಅಂತರಾತ್ಮ ಎಂದಿದ್ದಾರೆ.
  • ಗಾಂಧೀಜಿಯವರ ತತ್ವಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.


ರಾಜ ನಿರ್ದೇಶಕ ತತ್ವಗಳ ವರ್ಗೀಕರಣ

1) ಸಮಾಜವಾದಿ ತತ್ವಗಳು

2) ಗಾಂಧಿ ತತ್ವಗಳು ಹಾಗೂ

3) ಉದಾರತ್ವ ಗಳು

ಎಂದು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ.


  • ರಾಜ್ಯ ನಿರ್ದೇಶಕ ತತ್ವಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನದಿಂದ ನೀಡಲ್ಪಟ್ಟ ನಿರ್ದೇಶನಗಳ ಸ್ವರೂಪದಲ್ಲಿದೆ ಇವುಗಳು ನ್ಯಾಯರಕ್ಷಿತ ಅಲ್ಲದೇ ಇದ್ದರೂ ದೇಶದ ಆಡಳಿತಕ್ಕೆ ಮೂಲಭೂತ ನಿಯಮಗಳಾಗಿವೆ. ಅಂದರೆ ಒಂದು ವೇಳೆ ಯಾರಾದರೂ ಇವುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
  • ರಾಜ್ಯ ನಿರ್ದೇಶಕ ತತ್ವಗಳು ನೈತಿಕತೆಯಿಂದ ರೂಪಿತವಾಗಿದೆ ಸಕಾರಾತ್ಮಕವಾಗಿತ್ತು ಸರ್ಕಾರವು ಕೆಲವು ಕರ್ತವ್ಯಗಳನ್ನು ಮಾಡಬೇಕೆಂದು ಸೂಚಿಸುತ್ತದೆ.


ರಾಜ್ಯ ನಿರ್ದೇಶಕ ತತ್ವಗಳ ವಿಧಿಗಳು

  • 36 ನೇ ವಿಧಿ : ಅರ್ಥ ಅಥವಾ ಪರಿಭಾಷೆ
  • 37 ನೇ ವಿಧಿ : ಈ ನಿಯಮಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
  • 38 ನೇ ವಿಧಿ : ಜನರ ಕಲ್ಯಾಣಕ್ಕಾಗಿ ರಾಜ್ಯವು ಉತ್ತಮ ಸಾಮಾಜಿಕ ಆರ್ಥಿಕ ರಾಜಕೀಯ ನ್ಯಾಯ ದೊರಕಿಸುವ ಉದ್ದೇಶವನ್ನು ಹೊಂದಿವೆ.
  • 39 ನೇ ವಿಧಿ : ರಾಜ್ಯವು ಅನುಸರಿಸಬೇಕಾದ ಕೆಲವು ತತ್ವಗಳನ್ನು ತಿಳಿಸುತ್ತದೆ.
  • 40 ನೇ ವಿಧಿ : ಪಂಚಾಯತಿಗಳ ಸ್ಥಾಪನೆಯ ಬಗ್ಗೆ ತಿಳಿಸುತ್ತದೆ.
  • 41 ನೇ ವಿಧಿ : ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವಂತೆ ತಿಳಿಸುತ್ತದೆ.
  • 42 ನೇ ವಿಧಿ : ಕೆಲಸ ಮಾಡಲು ಉತ್ತಮ ವಾತಾವರಣ ಕಲ್ಪಿಸುವಂತೆ ತಿಳಿಸುತ್ತದೆ.
  • 43 ನೇ ವಿಧಿ : ಕೆಲಸಗಾರರಿಗೆ ಜೀವನ ನಿರ್ವಹಣೆಯ ಸೌಲಭ್ಯ ಮತ್ತು ಸಂಬಳವನ್ನು ಒದಗಿಸುವಂತೆ. 1976ರಲ್ಲಿ ಸಮಾನ ವೇತನ ಕಾಯ್ದೆ ಯನ್ನು ಮಹಿಳೆ ಮತ್ತು ಪುರುಷರ ನಡುವಿನ ವೇತನ ತಾರತಮ್ಯ ಹೋಗಲಾಡಿಸಲು ಜಾರಿಗೆ ತರಲಾಯಿತು.
  • 44 ನೇ ವಿಧಿ : ರಾಷ್ಟ್ರಾದ್ಯಂತ ಏಕರೂಪದ ನಾಗರಿಕ ಸಂಹಿತೆ ಯ ಬಗ್ಗೆ ತಿಳಿಸುತ್ತದೆ.
  • 45 ನೇ ವಿಧಿ : 6 ವರ್ಷದ ಒಳಗಿನ ಮಕ್ಕಳಿಗೆ ಪೂರ್ವಪ್ರಾಥಮಿಕ ಶಿಕ್ಷಣ ನೀಡುವುದು.
  • 46 ನೇ ವಿಧಿ : ಅನುಸೂಚಿತ ಜಾತಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ.
  • 47 ನೇ ವಿಧಿ : ಪೌಷ್ಟಿಕ ಆಹಾರ ಮತ್ತು ಉತ್ತಮ ಆರೋಗ್ಯ ಒದಗಿಸುವುದು ( ಈ ರೀತಿಯ ರಾಜ್ಯ ನಿರ್ದೇಶಕ ತತ್ವಗಳ ಆಧಾರದ ಮೇಲೆ ಕರ್ನಾಟಕ ರಾಜ್ಯಸರ್ಕಾರವು ಅನ್ನಭಾಗ್ಯ ಯೋಜನೆ ಭಾಗ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.)
  • 48 ನೇ ವಿಧಿ : ಕೃಷಿ ಮತ್ತು ಪಶುಸಂಗೋಪನೆ
  • 49 ನೇ ವಿಧಿ : ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ.
  • 50 ನೇ ವಿಧಿ : ನ್ಯಾಯಾಂಗವನ್ನು ಕಾರ್ಯಾಂಗ ದಿಂದ ಪ್ರತ್ಯೇಕಿಸುವುದು.
  • 51ನೇ ವಿಧಿ : ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ವೃದ್ಧಿಗೊಳಿಸುವುದು.


2) ಸಂವಿಧಾನದ ಈ ಭಾಗವು ಸಂವಿಧಾನದ ರಚನೆಕಾರರ ಮನಸ್ಸು ಮತ್ತು ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ.?

A) ರಾಜ್ಯ ನಿರ್ದೇಶಕ ತತ್ವಗಳು

B) ಪೌರತ್ವ

C) ಪ್ರಸ್ತಾವನೆ

D) ಮೂಲಭೂತ ಹಕ್ಕುಗಳು


ಸರಿಯಾದ ಉತ್ತರ  : C) ಪ್ರಸ್ತಾವನೆ


ವಿವರಣೆ :


ಸಂವಿಧಾನದ ಕನ್ನಡಿ, ಜಾತಕ, ಒಡವೆ, ಪೀಠಿಕೆ, ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪ್ರಸ್ತಾವನೆಯು ಸಂವಿಧಾನದ ರಚನೆಕಾರರ ಮನಸ್ಸು ಮತ್ತು ಚಿಂತನೆಗಳನ್ನು ಪ್ರತಿನಿಧಿಸುತ್ತದೆ.


ಸಂವಿಧಾನದ ಪ್ರಸ್ತಾವನೆಯ  ಕುರಿತಾದ ಹೆಚ್ಚಿನ ಮಾಹಿತಿ


  • ಭಾರತದ ಸಂವಿಧಾನಕ್ಕೆ ಪ್ರಸ್ತಾವನೆಯನ್ನು ನೀಡಿದವರು ಜವಾಹರ್ಲಾಲ್ ನೆಹರು.
  • ಭಾರತದ ಸಂವಿಧಾನಕ್ಕೆ ಪ್ರಸ್ತಾವನೆಯನ್ನು "ಧ್ಯೇಯಗಳ ನಿರ್ಣಯ" ಎಂಬ ಹೆಸರಿನಲ್ಲಿ ಜವಾಹರ್ ಲಾಲ್ ನೆಹರು ಅವರು ಡಿಸೆಂಬರ್ 13, 1946 ರಲ್ಲಿ ನೀಡಿದರು. ಜನವರಿ 22 1947 ರಲ್ಲಿ ಅಂಗೀಕರಿಸಲಾಯಿತು. ಹಾಗೂ ನವೆಂಬರ್ 26, 1949 ರಲ್ಲಿ ಅಳವಡಿಸಿಕೊಳ್ಳಲಾಯಿತು.


ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಪ್ರಮುಖ ಪದಗಳು


  • ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ, ಭಾತ್ರತ್ವ - ಫ್ರೆಂಚ್ ಕ್ರಾಂತಿ (1789-99)
  • ನ್ಯಾಯ (ರಾಜಕೀಯ, ಆರ್ಥಿಕ , ಸಾಮಾಜಿಕ) - 1917 ರ ರಷ್ಯಾದ ಕ್ರಾಂತಿ.
  • ಪ್ರಸ್ತಾವನೆಯಲ್ಲಿ ಸಮಾಜವಾದಿ ಜಾತ್ಯತೀತ ಐಕ್ಯತೆ ಎಂಬ ಪದಗಳನ್ನು 1976 ರಲ್ಲಿ 42ನೇ ಸಂವಿಧಾನಾತ್ಮಕ ತಿದ್ದುಪಡಿಯ ಮೂಲಕ ಸೇರ್ಪಡೆ ಮಾಡಲಾಗಿದೆ.

ಸಂವಿಧಾನದ ಪ್ರಸ್ತಾವನೆಗೆ ವಿವಿಧ ಹೆಸರುಗಳನ್ನು ನೀಡಿದ ತಜ್ಞರು


  • ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು ಹಿದಾಯತ್ ಉಲ್ಲಾ
  • ಪ್ರಸ್ತಾವನೆಯನ್ನು ಸಂವಿಧಾನದ ಒಡವೆ ಎಂದು ಕರೆದವರು ಠಾಕೂರ್ ಭಾರ್ಗವ್ ದಾಸ್.
  • ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಕಿರುಹೊತ್ತಿಗೆ ಎಂದವರು ಬಾರ್ಕೂರ್.
  • ಪ್ರಸ್ತಾವನೆಯನ್ನು ಸಂವಿಧಾನದ ಜಾತಕ ಎಂದು ಕರೆದವರು ಮುನ್ಷಿ ರವರು.



No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads