2021 ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪ್ರಕಟ
- ಫ್ರೆಂಚ್ ಕಾದಂಬರಿಕಾರ ಡೇವಿಡ್ ಡಯೋಪ್ ಅವರು 2021ನೇ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದರು.
- ಫ್ರೆಂಚ್ ನ "Frere d'ame" ಕೃತಿಯ ಇಂಗ್ಲೀಷ್ ಅನುವಾದವಾದ "At Night All Blood Is Back" ಎಂಬ ಕೃತಿಗೆ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದರು.
- ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಫ್ರೆಂಚ್ ಬರಹಗಾರ ಎಂಬ ಕೀರ್ತಿಗೆ ಡೇವಿಡ್ ಪಾತ್ರರಾಗಿದ್ದಾರೆ.
- ಫ್ರೆಂಚ್ ನ "Frere d'ame" (ಫ್ರೀರೆ ಡಿ' ಅಮ್) ಕೃತಿಯನ್ನು ಅನ್ನಾ ಮೋಸ್ಚೋವಾಕಿಸ್ ಬರೆದಿದ್ದು, ಪುಸ್ಕಿನ್ ಪ್ರೆಸ್ ನ ಪ್ರಕಟನೆಯಾಗಿದೆ.
- ಬೂಕರ್ ಪ್ರಶಸ್ತಿಯನ್ನು ಬೂಕರ್ ಪ್ರಶಸ್ತಿ ಪ್ರತಿಷ್ಠಾನ ನೀಡುತ್ತದೆ.
- ಪ್ರಶಸ್ತಿಯು 50.000 ಪೌಂಡ್ ಅಂದರೆ ಸುಮಾರು 51 ಲಕ್ಷ ರೂ ನಗದು ಹೊಂದಿದ್ದು, ಇದನ್ನು ಅನುವಾದಕ ಮತ್ತು ಮೂಲ ಕೃತಿಯ ರಚನೆಕಾರರ ನಡುವೆ ಹಂಚಲಾಗುತ್ತದೆ.
- "At Night All Blood Is Back" ಕಾದಂವರಿಯು ಡೇವಿಡ್ ಅವರ ಎರಡನೆಯ ಕಾದಂಬರಿ. ಮೊದಲ ವಿಶ್ವಯುದ್ಧದಲ್ಲಿ ಸೆನೆಗಲ್ ನ ಮುತ್ತಜ್ಜನ ಅನುಭವಗಳು ಮತ್ತು ಅವರ ಮೌನದಿಂದ ಸ್ಪೂರ್ತಿಪಡೆದು ರಚಿಸಲ್ಪಟ್ಟಿದೆ.
- "At Night All Blood Is Back" ಪುಸ್ತಕವು ಈಗಾಗಲೇ ಫ್ರಾನ್ಸ್, ಸ್ವಿಸ್ ಹಾಗೂ ಇಟಲಿಯ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
- "At Night All Blood Is Back" ಪುಸ್ತಕವು ಇನ್ನೂ 13 ಭಾಷೆಗಳಿಗೆ ಅನುವಾದವಾಗಲಿದೆ.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಕುರಿತು ಹೆಚ್ಚಿನ ಮಾಹಿತಿ
- ಅಂತಾರಾಷ್ಟ್ರೀಯ ಸಾಹಿತ್ಯಿಕ ಪ್ರಶಸ್ತಿ
- ಮ್ಯಾನ್ ಬೂಕರ್ ಪ್ರಶಸ್ತಿ ಎಂದೇ ಚಿರಪರಿಚಿತವಾಗಿದ್ದ ಈ ಪ್ರಶಸ್ತಿಯನ್ನು 2005 ರಿಂದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಎಂಬ ಹೆಸರಿನಿಂದ ನೀಡಲಾಗುತ್ತಿದೆ.
- ಆರಂಭವಾಗಿದ್ದು : 1968 ರಲ್ಲಿ
- ನೀಡುವ ಸಂಸ್ಥೆ : ಬೂಕರ್ ಪ್ರತಿಷ್ಠಾನ
No comments:
Post a Comment
If you have any doubts please let me know