ಪಶುಪಾಲನಾ ಇಲಾಖೆಯಲ್ಲಿವೆ 105 ವಿವಿಧ ಹುದ್ದೆಗಳು
ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಪಶುಪಾಲನಾ ಇಲಾಖೆಯಲ್ಲಿವೆ 105 ವಿವಿಧ ಹುದ್ದೆಗಳು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬರುವ ಆಗಸ್ಟ್ 16 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಧಿಸೂಚನೆ ಸಂಖ್ಯೆ : ಆಪಸ/ಸಿಬ್ಬಂದಿ-3(2)/ವಿವ-69/2020-21 ದಿನಾಂಕ : 26-06-2020 ಅನ್ವಯ ನಿಗದಿತ ಅರ್ಜಿ ನಮೂನೆಯನ್ನು ಆನ್‌ಲೈನ್ ಮೂಲಕ ಅನುಚ್ಛೇದ 371(ಜೆ) ರಂತೆ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಹೀಗಿದೆ :
1) ಪಶುವೈದ್ಯಕೀಯ ಪರೀಕ್ಷಕರು - 32 ಹುದ್ದೆಗಳು
2) ಪಶುವೈದ್ಯಕೀಯ ಸಹಾಯಕರು ( ಗ್ರೂಪ್-ಸಿ) - 83
🌼 ಪ್ರಮುಖ ದಿನಾಂಕಗಳು 🌼
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :16-06-2021
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-08-2021
- ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 16-08-2021
ವಿದ್ಯಾರ್ಹತೆ :
1) ಪಶು ವೈದ್ಯಕೀಯ ಪರೀಕ್ಷಕರು : ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಾಣಿಶಾಸ್ತ್ರದಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿರಬೇಕು. ಅಲ್ಲದೇ ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
2) ಪಶುವೈದ್ಯಕೀಯ ಸಹಾಯಕರು : ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಅಂದರೆ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾತಿಜೆ ವಿಶ್ವವಿದ್ಯಾಲಯದಿಂದ ಅಥವಾ ಬೇರೆ ಯಾವುದಾದರೂ ವಿಶ್ವವಿದ್ಯಾಲಯದಿಂದ ನಡೆಸುವ ಪಶು ಆರೋಗ್ಯ ಡಿಪ್ಲೋಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ನೇಮಕ ಪ್ರಕ್ರಿಯೆ ಹೇಗಿರುತ್ತೆ
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹಾಗೂ ರೋಸ್ಟರ್ ವಿಧಾನವನ್ನು ಅನುಸರಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?
- ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.520.
- ಎಸ್‌ಸಿ, ಎಸ್‌ಟಿ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.270.
- ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಪಾವತಿಸಬೇಕು.
ವಯೋಮಿತಿ
- ಸಾಮಾನ್ಯ ಅಭ್ಯರ್ಥಿಗಳು - 35 ವರ್ಷಗಳು
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು - 38 ವರ್ಷಗಳು
- ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು - 40 ವರ್ಷಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಆಗಸ್ಟ್ 16, 2021 ರ ಸಂಜೆ 05-30 ರೊಳಗೆ ಅರ್ಜಿಯನ್ನು ಆನ್‌ಲೈನ್ ಮುಖಾಂತರ ಭರ್ತಿ ಮಾಡಿ ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದೇ ಅಂಚೆ ಕಛೇರಿಗಳಲ್ಲಿ ಆನ್‌ಲೈನ್ ಗೇಟ್‌ವೇ ಮುಖಾಂತರ ಪಾವತಿಸಲು ಸೂಚಿಸಲಾಗಿದೆ.
ಈ ನೇಮಕಾತಿ ಕುರಿತು ಇತರೆ ಹೆಚ್ಚಿನ ಮಾಹಿತಿಗಳು, ಅರ್ಜಿ ನಮೂನೆ ಮತ್ತು ಅಡಕಗಳ ವಿವರಗಳಿಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಹಾಗೂ ಇಲಾಖಾ ವೆಬ್‌ಸೈಟ್ www.ahvs.kar.nic.in ನಲ್ಲಿ ಪೂರ್ಣ ವಿವರವನ್ನು ಪಡೆದುಕೊಳ್ಳಬಹುದು.
ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment
If you have any doubts please let me know