ಕಳಸಾ ಬಂಡೂರಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ : 02 All You Need to Know About Kalasa-Banduri Nala Project KSP Question
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಶ್ನೋತ್ತರಗಳು
ಮುಂಬರುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಪ್ರಶ್ನೋತ್ತರಗಳು, ಮುಂಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿಎಆರ್ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು...!!
ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಹೇಗಿರುತ್ತೆ?
ಪೊಲೀಸ್ ಕಾನ್ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ನೂರು ಪ್ರಶ್ನೆಗಳು ಇರುತ್ತವೆ. ಒಂದು ಸರಿ ಉತ್ತರಕ್ಕೆ ಒಂದು ಅಂಕವನ್ನು ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ 0.25 ಅಂಕವನ್ನು ಕಳೆಯಲಾಗುತ್ತದೆ. ಅಂದರೆ ನಾಲ್ಕು ತಪ್ಪು ಉತ್ತರಗಳನ್ನು ನೀಡಿದರೆ ಸರಿ ಉತ್ತರಗಳಲ್ಲಿನ ಒಂದು ಅಂಕವನ್ನು ಕಳೆಯಲಾಗುತ್ತದೆ. ಪರೀಕ್ಷೆಯು 1 ಗಂಟೆ 30 ನಿಮಿಷ ಅವಧಿಯನ್ನು ಹೊಂದಿರುತ್ತದೆ.
ಈ ಸ್ಪರ್ಧಾತ್ಮಕ ಪರೀಕ್ಷೆಯು ಒಳಗೊಂಡಿರುವ ವಿಷಯಗಳು
- ಸಾಮಾನ್ಯ ಜ್ಞಾನ
- ಭಾರತದ ಸಂವಿಧಾನ
- ಇತಿಹಾಸ (ಭಾರತ & ಕರ್ನಾಟಕ)
- ಭೂಗೋಳ (ಭಾರತ & ಕರ್ನಾಟಕ)
- ವಿಜ್ಞಾನ ಮತ್ತು ತಂತ್ರಜ್ಞಾನ
- ಭಾರತದ ಸ್ವಾತಂತ್ರ್ಯ ಸಂಗ್ರಾಮ
- ಭಾರತದ ಆಡಳಿತ
- ಕರ್ನಾಟಕ ಸರ್ಕಾರ ಮತ್ತು ರಾಜಕೀಯ
- ಅರ್ಥಶಾಸ್ತ್ರ
- ನೀತಿ ಶಿಕ್ಷಣ
- ಪ್ರಚಲಿತ ವಿದ್ಯಮಾನಗಳು
- ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಲೆಕ್ಕಗಳು
ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ಆಧರಿಸಿರುವ ಪ್ರಮುಖ ಮಾದರಿ ಪ್ರಶ್ನೆಗಳನ್ನು Edutube Kannada ತಂಡ ನಿಮ್ಮ ಮುಂದೆ ವಿವರಣೆ ಸಹಿತವಾಗಿ ನೀಡುತ್ತ ಸಾಗುತ್ತದೆ.
02. ಕಳಸಾ ಬಂಡೂರಿ ವಿವಾದ ಯಾವ ರಾಜ್ಯಗಳ ನಡುವೆ ನಡೆಯುತ್ತಿದೆ?
A) ಕರ್ನಾಟಕ ಗೋವಾ ಮತ್ತು ಕೇರಳ
B) ಕರ್ನಾಟಕ ಮಹಾರಾಷ್ಟ್ರ ಮತ್ತು ತಮಿಳುನಾಡು
C) ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ
D) ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ
ಸರಿಯಾದ ಉತ್ತರ : C) ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ
ಕಳಸಾ ಬಂಡೂರಿ ವಿವಾದದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ
- ಕಳಸಾ ಬಂಡೂರಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಮಹತ್ವದ ಹೋರಾಟವಾಗಿದೆ.
- ಮಹಾದಾಯಿ ನದಿಯನ್ನು ಗೋವಾದ ಜೀವನದಿ ಎಂದು ಕರೆಯುತ್ತಾರೆ.
- ಸುಮಾರು 77 ಕಿ. ಮೀ ಇರುವ ಈ ನದಿಯು ಕರ್ನಾಟಕದಲ್ಲಿ ಸುಮಾರು 29 ಕಿ. ಮೀ ಹರಿಯುತ್ತದೆ.
- ಮಹದಾಯಿ ನದಿ ಹುಟ್ಟುವುದು ಬೆಳಗಾವಿ ಜಿಲ್ಲೆಯಲ್ಲಿ.
- ಕಳಸಾ ಬಂಡೂರಿ ಹೋರಾಟಕ್ಕೆ ಮಹದಾಯಿ ಹೋರಾಟ ಎಂಬ ಹೆಸರೂ ಇದೆ.
- ಮಹದಾಯಿ ನದಿಯ ನೀರನ್ನು ಕಳಸ ಮತ್ತು ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆಯನ್ನು ರೂಪಿಸಲಾಗಿತ್ತು ಹೀಗಾಗಿ ಇದಕ್ಕೆ ಕಳಸ ಬಂಡೂರಿ ಎಂಬ ಹೋರಾಟ ಎಂಬ ಹೆಸರು ಇದೆ.
- ನಿಮಗಿದು ಗೊತ್ತಿರಲಿ : ಕಳಸಾ ಬಂಡೂರಿ ಎನ್ನುವುದು ಕುಡಿಯುವ ನೀರಿಗಾಗಿ ನಡೆದ ಹೋರಾಟವಾಗಿದೆ.
- 1978 ರಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಗಿತ್ತು.
- 1978 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಆರ್ ಗುಂಡೂರಾವ್ ಅವರು ಎಸ್ ಆರ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು.
- 1980 ರಲ್ಲಿ ಎಸ್. ಆರ್. ಬೊಮ್ಮಾಯಿ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಕರ್ನಾಟಕ ಸರ್ಕಾರ 1988 ರಲ್ಲಿ ಒಪ್ಪಿಕೊಂಡಿತು. ಆದರೆ ಗೋವಾ ಸರಕಾರ ಒಪ್ಪಿಕೊಳ್ಳಲಿಲ್ಲ.
- ಮಹದಾಯಿ ಯೋಜನೆಯ ವರದಿ ನೀಡಿದ ಸಮಿತಿಯಲ್ಲಿದ್ದ ಎಸ್. ಆರ್. ಬೊಮ್ಮಾಯಿ ಅವರು 1989 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾದ ಸಿಎಂ ಆಗಿದ್ದ ಪ್ರತಾಪ್ ಸಿಂಗ್ ರಾಣಾ ಜೊತೆ ನಡೆದ ಮಾತುಕತೆಯಲ್ಲಿ ಗೋವಾ ಈ ಯೋಜನೆಗೆವೊಪ್ಪಿಗೆ ನೀಡಿತು.
- 2000 ನೇ ಇಸವಿಯಲ್ಲಿ ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನೀಡಿತು.
- 2002 ರ ಏಪ್ರಿಲ್ 30 ರಂದು ಕೇಂದ್ರ ಸರಕಾರದ ಜಲಸಂಪನ್ಮೂಲ ಸಚಿವಾಲಯ ಈ ಯೋಜನೆಗೆ ಒಪ್ಪಿಗೆ ನೀಡಿತು.
- ಈ ನದಿ ಯೋಜನೆಗೆ 2002 ರ ಮೇ ನಲ್ಲಿ ಗೋವಾ ತಕರಾರು ಎತ್ತಿ, ಸದರಿ ನದಿ ವಿವಾದದ ಕುರಿತು ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಜಲ ಸಂಪನ್ಮೂಲ ಇಲಾಖೆಯನ್ನು ಪತ್ರ ಬರೆಯುವ ಮೂಲಕ ಕೇಳಿಕೊಂಡಿತು.
- 2002 ಸೆಪ್ಟೆಂಬರ್ ನಲ್ಲಿ ಕೇಂದ್ರ ಜಲ ಆಯೋಗ ಈ ಯೋಜನೆಗೆ ತಡೆ ನೀಡಿತು.
- ನಂತರ ದೆಹಲಿಯಲ್ಲಿ ಗೋವಾ - ಕರ್ನಾಟಕ ಸಚಿವರ ಸಭೆ ನಡೆಯಿತು.
- ಬೆಳಗಾವಿಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006 ರಲ್ಲಿ ಭೂಮಿ ಪೂಜೆ ಮಾಡಲಾಯಿತು.
- 2006 ರಲ್ಲಿ ಗೋವಾ ಸರಕಾರ ಈ ಯೋಜನೆಗೆ ತಡೆ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು.
- 2010 ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧಿಕರಣವನ್ನು ನೇಮಕ ಮಾಡಲಾಯಿತು.
- 2014 ರಲ್ಲಿ ನ್ಯಾಯಾಧಿಕರಣ ತಂಡ ಉತ್ತರ ಕರ್ನಾಟಕದ ಪ್ರಮುಖ ಭಾಗಗಲಕಿಗೆ ಭೇಟಿ ನೀಡಿ ಪರಿಶೀಲಿಸಿತು.
- 2015 ರ ಜೂನ್ ನಿಂದ ಕಳಸಾ ಬಂಡೂರಿ ಯೋಜನೆಯ ಜಾರಿಗಾಗಿ ಹೋರಾಟ ನಡೆಯುತ್ತಲೇ ಇದೆ.
ಮಹದಾಯಿ ನದಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ
Mandovi River Complete Details
- ಮಹಾದಾಯಿ ನದಿಯು ದಕ್ಷಿಣ ಭಾರತದ, ಪಶ್ಚಿಮಕ್ಕೆ ಹರಿಯು ನದಿಯಾಗಿದೆ.
- ದಕ್ಷಿಣ ಭಾರತದ ಪಶ್ಚಿಮಕ್ಕೆ ಹರಿಯುವ ಪ್ರಮುಖ ನದಿಗಳು :
- 1. ಲೂನಿ/ಸಾಗರಮತಿ ನದಿ
- 2. ಸಬರಮತಿ ನದಿ
- 3. ನರ್ಮದಾ ನದಿ
- 4. ಮಹಾದಾಯಿ ನದಿ
- 5. ತಪತಿ/ತಾಪಿ ನದಿ
- 6. ಕಾಳಿ ನದಿ
- 7. ಪೆರಿಯಾರ್ ನದಿ
- 8. ಶರಾವತಿ ನದಿ
- ಕರ್ನಾಟಕದ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳ 'ಭೀಮಘಡ' ದಲ್ಲಿ ಮಹದಾಯಿ ನದಿ ಉಗಮವಾಗುತ್ತದೆ.
- ಈ ನದಿಯನ್ನು ಗೋವಾದಲ್ಲಿ ಮಾಂಡೋವಿ ನದಿ (ಗೋವಾದ ಜೀವನದಿ) ಎನ್ನಲಾಗುತ್ತದೆ. ಗೋವಾದಲ್ಲಿ 77 ಕಿ. ಮೀ ಹರಿಯುತ್ತದೆ.
- ಕರ್ನಾಟಕದಲ್ಲಿ ಮಹಾದಾಯಿ ನದಿ (ಬೆಳಗಾವಿ, ಉತ್ತರ ಕನ್ನಡ) ಎನ್ನುವರು. ಇದು ಕರ್ನಾಟಕದಲ್ಲಿ 29 ಕಿ. ಮೀ ಹರಿಯುತ್ತದೆ.
- ಮಾಂಡೋವಿ ನದಿಯ ದಡದಲ್ಲಿ ಗೋವಾದ ರಾಜಧಾನಿ ಪಣಜಿಯಲ್ಲಿ ಸಲೀಂ ಅಲಿ ಪಕ್ಷಿಧಾಮ ಇದೆ.
- ಮಾಂಡೋವಿ ನದಿಯಿಂದ ದೂಧ್ ಸಾಗರ ಜಲಪಾತ ಮತ್ತು ವಜ್ರಪೋಹ ಜಲಪಾತಗಳು ನಿರ್ಮಾಣಗೊಂಡಿವೆ.
No comments:
Post a Comment
If you have any doubts please let me know