ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಶ್ನೋತ್ತರಗಳು : 01 Karnataka State Police Exam Useful Question Answers
ಮುಂಬರುವ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಪ್ರಶ್ನೋತ್ತರಗಳು, ಮುಂಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಸಿಎಆರ್ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು, ಮುಂಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಉಪಯುಕ್ತವಾದ ಪ್ರಶ್ನೋತ್ತರಗಳು...!!
01. ಪಂಚಾಯತಿಯ ಚುನಾವಣೆಯನ್ನು ಯಾರು ನಡೆಸುತ್ತಾರೆ?
A) ರಾಜ್ಯ ಚುನಾವಣಾ ಆಯೋಗ
B) ಪಂಚಾಯತ್ ರಾಜ್ ಮಂತ್ರಿ
C) ರಾಜ್ಯ ಸರಕಾರ
D) ಸರಕಾರದ ಮುಖ್ಯ ಕಾರ್ಯದರ್ಶಿ
ಸರಿಯಾದ ಉತ್ತರ : ರಾಜ್ಯ ಚುನಾವಣಾ ಆಯೋಗ
ವಿವರಣೆ :
ರಾಜ್ಯ ಚುನಾವಣಾ ಆಯೋಗವು ಪಂಚಾಯಿತಿಯ ಚುನಾವಣೆಯನ್ನು ನಡೆಸುತ್ತದೆ.
🌺 ಪಂಚಾಯತ್ ರಾಜ್ಯ ಕುರಿತು ನೆನಪಿಡಬೇಕಾದ ಪ್ರಮುಖ ಮಾಹಿತಿಗಳು 🌺
- ಭಾರತದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ರಾಜ್ಯ ನಿರ್ದೇಶಕ ತತ್ವಗಳ ಅನುಸಾರ ಸ್ಥಾಪಿಸಲಾಗಿದೆ.
- ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಶೋಕ್ ಮೆಹ್ತಾ ಸಮಿತಿ ಯಿಂದ ಸ್ಫೂರ್ತಿ ಪಡೆದು ಸಮಗ್ರ ಪಂಚಾಯತ್ ರಾಜ್ ತಿದ್ದುಪಡಿಗೆ ಕರ್ನಾಟಕದಲ್ಲಿ ಮಂಜೂರಾಯಿತು.
- ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರು ತಾಲೂಕು ಪಂಚಾಯತಿಯ ಕ್ರೋಢೀಕರಿಸಿದ ಲೆಕ್ಕಪರಿಶೋಧನೆಯನ್ನು ನಡೆಸುತ್ತಾರೆ.
- ಭಾರತದಲ್ಲಿ ಸ್ಥಳೀಯ ಸ್ವಯಂ ಸರ್ಕಾರವನ್ನು ಪರಿಚಯಿಸಿದವರು ಲಾರ್ಡ್ ರಿಪ್ಪನ್.
- 1959 ರಲ್ಲಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ರಾಜಸ್ಥಾನದ ನಾಗೂರ್ ಲ್ಲಿ ಉದ್ಘಾಟಿಸಿದರು.
- ಪಂಚಾಯತ್ ರಾಜ್ಯ ವ್ಯವಸ್ಥೆಯು : ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಮಟ್ಟ ಎಂಬ ಮೂರು ಶ್ರೇಣಿಯ ಸ್ಥಳೀಯ ಸ್ವಯಂ ಆಡಳಿತವನ್ನು ಹೊಂದಿದೆ.
- ತಾಲೂಕು ಪಂಚಾಯಿತಿಯ ಕ್ರೋಡೀಕರಿಸಿದ ಲೆಕ್ಕಪರಿಶೋಧನಾ ವರದಿಯನ್ನು ರಾಜ್ಯದ ಎರಡೂ ಸದನಗಳ ಮುಂದೆ ಇಡಲಾಗುತ್ತದೆ.
- ಸಮುದಾಯದ ಕೆಲಸಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಬಲವಂತರಾಯ ಮೆಹ್ತಾ ಸಮಿತಿಯ ಮುಖ್ಯ ಕಾಳಜಿಯಾಗಿತ್ತು.
- 3 ಶ್ರೇಣಿಯ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ್ದು ಬಲವಂತರಾಯ್ ಮೆಹ್ತಾ ಸಮಿತಿ.
- ಭಾರತೀಯ ಸಂವಿಧಾನದ ಅನುಚ್ಛೇದ 40 ರ ಪ್ರಕಾರ ಗ್ರಾಮಪಂಚಾಯಿತಿಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ.
- 1985 ರಲ್ಕಿ ಕರ್ನಾಟಕ ಸರ್ಕಾರವು ಮಂಡಲ ಪಂಚಾಯತಿಯನ್ನು ಜಾರಿಗೆ ತಂದಿತು.
- ಭಾರತೀಯ ಸಂವಿಧಾನದ 11 ಹಾಗೂ 12 ನೇ ಅನುಸೂಚಿ ಗಳಲ್ಲಿ ಪಂಚಾಯತಿಗಳು ಮತ್ತು ಪುರಸಭೆಗಳ ಕಾರ್ಯಗಳನ್ನು ತಿಳಿಸಿದೆ.
- ಜಿಲ್ಲಾ ಯೋಜನಾ ಸಮಿತಿಯು ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಗಳ ಯೋಜನೆಯನ್ನು ರೂಪಿಸುತ್ತದೆ.
- ಸಂವಿಧಾನದ 74ನೇ ತಿದ್ದುಪಡಿ ಮುನ್ಸಿಪಲ್ ಕೌನ್ಸಿಲ್ ಗೆ ಸಂಬಂಧಿಸಿದೆ.
- 10 ಮೇ 1993 ರಂದು ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ.
- ಅಶೋಕ್ ಮೆಹ್ತಾ ಸಮಿತಿಯ 2 ಶ್ರೇಣಿಯ ವ್ಯವಸ್ಥೆಯನ್ನು ಶಿಫಾರಸು ಮಾಡಿತು.
- ಪಂಚಾಯತ್ ರಾಜ್ಯ ಪದ್ಧತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ರಾಜಸ್ಥಾನ ನಂತರ ಆಂಧ್ರಪ್ರದೇಶ.
- ಪಂಚಾಯತ್ ರಾಜ್ಯ ಸಾಂವಿಧಾನಿಕ ಸ್ಥಾನಮಾನ ಇರಬೇಕೆಂದು ಶಿಫಾರಸು ಮಾಡಿದ ಸಮಿತಿ ಎಲ್. ಎಂ. ಸಿಂಘ್ವಿ ಸಮಿತಿ.
- ಪಂಚಾಯತ್ ರಾಜ್ ವ್ಯವಸ್ಥೆಯ 3 ಶ್ರೇಣಿಗಳ
- 1) ಗ್ರಾಮ ಮಟ್ಟ - ಗ್ರಾಮ ಪಂಚಾಯತ್
- 2) ಮಧ್ಯಂತರ ಮಟ್ಟ/ತಾಲ್ಲೂಕು ಮಟ್ಟ - ತಾಲ್ಲೂಕು ಪಂಚಾಯತ್
- 3) ಜಿಲ್ಲಾ ಮಟ್ಟ - ಜಿಲ್ಲಾ ಪಂಚಾಯತ್
No comments:
Post a Comment
If you have any doubts please let me know