ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಗಳು ಯಾವವು ಗೊತ್ತೇ? ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರುವ ಡಿಪ್ಲೊಮಾ, ಐಟಿಐ ಓದಿರುವ ಪ್ರತಿಯೊಬ್ಬ ಅಭ್ಯರ್ಥಿಗಳೂ ಇದನ್ನು ತಿಳಿದುಕೊಳ್ಳಲೇಬೇಕು
ಆದರೆ ಅರ್ಜಿ ಸಲ್ಲಿಸಬಯಸುವ ಕೆಲವು ಅಭ್ಯರ್ಥಿಗಳಿಗೆ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ನಿಗದಿ ಪಡಿಸಿದ ವಿದ್ಯಾರ್ಹತೆಯ ಕುರಿತು ಹಲವಾರು ಗೊಂದಲಗಳಿರುವುದನ್ನು Edutube Kannada ತಂಡ ಗಮನಿಸಿದೆ. ಅದಕ್ಕೆಂದೇ ಈ ಲೇಖನವನ್ನು ನಮ್ಮ ತಂಡ ಬಹು ಶ್ರಮವಹಿಸಿ, ರಚಿಸಿ ನಿಮ್ಮ ಮುಂದಿಡುತ್ತಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಗತ್ಯ ಇರುವ 3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ನಿಮಗೆಲ್ಲ ತಿಳಿದಿರುವ ಸಂಗತಿಯೇ. ಹಾಗೂ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಾಸ್ ಮಾಡಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪಶ್ಚಿಮ ರೈಲ್ವೆಯಲ್ಲಿವೆ ಭರ್ಜರಿ 3591 ಅಪ್ರೆಂಟಿಸ್ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ : WESTERN RAILWAY RECRUITMENT 2021 : 3591 APPRENTICE VACANCIES : APPLY NOW
ಕರ್ನಾಟಕ ರಾಜ್ಯ ಪದವಿ ಪೂರ್ವ ಇಲಾಖೆ ನಡೆಸುವ ಪಿಯುಸಿ ಪರೀಕ್ಷೆಯನ್ನು ಪಾಸು ಮಾಡಿದ ಎಲ್ಲ ಅಭ್ಯರ್ಥಿಗಳೂ ಈ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಯಾವುದೇ ಸಂಶಯಗಳಿಲ್ಲದೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಆದರೆ ಹತ್ತನೆಯ ತರಗತಿಯ ನಂತರ ಡಿಪ್ಲೊಮ, ಐಟಿಐ, ಇತರೆ ಕೋರ್ಸ್ ಓದಿದವರೂ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ ಎಂದು ಸಂಶಯ ಇರುತ್ತದೆ.
ನಿಮಗೆ ಗೊತ್ತೇ :
ಈ ಹಿಂದಿನ ಕೆಲವು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗಳಲ್ಲಿ ಡಿಪ್ಲೊಮಾ, ಐಟಿಐ ಇನ್ನಿತರೆ ಕೋರ್ಸುಗಳನ್ನು ಪಾಸು ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ನೇಮಕಾತಿ ಹೊಂದಿ, ಪೊಲೀಸ್ ತರಬೇತಿಯನ್ನೂ ಪೂರ್ಣಗೊಳಿಸಿ, ಕೆಲಸಕ್ಕೆ ಸೇರಿದ ನಂತರ ಅವರನ್ನು ಡಿಪ್ಲೊಮಾ, ಐಟಿಐ ತತ್ಸಮಾನ ವಿದ್ಯಾರ್ಹತೆಯಲ್ಲ ಎಂಬ ಕಾರಣದಿಂದಾಗಿ ಕೆಲಸದಿಂದಲೇ ತೆಗೆದು ಹಾಕಿದ ಸಾಕಷ್ಟು ನಿದರ್ಶನಗಳು ನಮ್ಮಲ್ಲಿವೆ.
ಆದ್ದರಿಂದ ಈ ಬಾರಿಯೂ ಕೂಡ ಆ ತಪ್ಪನ್ನು ಡಿಪ್ಲೊಮಾ, ಐಟಿಐ, ಪಾಸು ಮಾಡಿದ ಅಭ್ಯರ್ಥಿಗಳು ತೊಂದರೆಗೆ ಸಿಲಿಲುಕಬಾರದು ಎಂಬ ಉದ್ದೇಶ ಎಜ್ಯುಟ್ಯೂಬ್ ಕನ್ನಡ ತಂಡದ್ದು.
ನಾಳೆಯಿಂದ 3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭ : 3533 CIVIL POLICE CONSTABLE APPLICATION STARTED CLICK HERE TO APPLY NOW
ಹಾಗಾದರೆ ಪಿಯುಸಿಗೆ ಸರಿ ಸಮಾನವಾದ/ತತ್ಸಮಾನವಾದ ವಿದ್ಯಾರ್ಹತೆಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ..!! ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿಯುಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು ಈ ಕೆಳಗಿನಂತಿವೆ :-
⏩ ಸಿಬಿಎಸ್ಇ ಮತ್ತು ಐಎಸ್‌ಸಿ ಮಂಡಳಿಯು ನಡೆಸುವ 12ನೇ ತರಗತಿ ಪರೀಕ್ಷೆ ಪಾಸ್ ಆಗಿರಬೇಕು.
⏩ ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ 12ನೇ ತರಗತಿ ಪಾಸ್ ಮಾಡಿರಬೇಕು.
⏩ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್ / ಹೆಚ್‌ಎಸ್‌ಸಿ ಪಾಸ್ ಮಾಡಿರಬೇಕು.
ಹಾಗೂ
⏩ ಮೂರು ವರ್ಷಗಳ ಡಿಪ್ಲೊಮ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮ (ಜೆಓಸಿ/ಜೆಓಡಿ/ಜೆಎಲ್‌ಡಿಸಿ) ಗಳನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳು ಎನ್‌ಐಒಎಸ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ನವರು ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರ ಶಿಕ್ಷಣ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿಗೆ ಸಮಾನವಾದ ಅಥವಾ ತತ್ಸಮಾನವಾದ ವಿದ್ಯಾರ್ಹತೆ ಹೊಂದಿದಂತೆ. ಅಂಥವರು ಮಾತ್ರ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಈ ಮೇಲಿನ ಮಾಹಿತಿಗಳನ್ನು ಪಿಯುಸಿಯೇತರ ಅಭ್ಯರ್ಥಿಗಳು ಅಂದರೆ ಡಿಪ್ಲೊಮ, ಐಟಿಐ, ಇತರೆ ವೃತ್ತಿಪರ ಕೋರ್ಸ್‌ಗಳನ್ನು ಓದಿದವರು ಓದಿ, ಸರಿಯಾಗಿ ಅರ್ಥ ಮಾಡಿಕೊಂಡು, ಅರ್ಹತೆ ಇದ್ದಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ ಮುಂದೆ ಯಾವುದೇ ಸಮಸ್ಯೆಗಳು ಎದುರಾಗಲಾರವು.
NIOS : National Institute of Open Schooling
ನವರು ಪ್ರತಿ ವರ್ಷವೂ ಎರಡು ಬಾರಿ NIOS ಪ್ರಮಾಣ ಪತ್ರ ನೀಡುವ ಪರೀಕ್ಷೆಗಳನ್ನು ನಡೆಸುತ್ತದೆ. ಇದುವರೆಗೂ ಯಾರು NIOS ಪ್ರಮಾಣಪತ್ರ ಪಡೆದಿಲ್ಲವೋ ಅವರು ತಮ್ಮ ವಯೋಮಿತಿ ಮೀರುವುದರೊಳಗಾಗಿ ಅರ್ಜಿ ಸಲ್ಲಿಸಿ, ಮೊದಲು NIOS ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಿಯುಸಿ ಗೆ ತತ್ಸಮಾನ ವಿದ್ಯಾರ್ಹತೆ ಬಯಸುವ ಎಲ್ಲ ಪರೀಕ್ಷೆಗಳನ್ನೂ ಸುಲಭವಾಗಿ ಎದುರಿಸಬಹುದು.
NIOS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..!!!
https://nios.ac.in/admission.aspx
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!
No comments:
Post a Comment
If you have any doubts please let me know