ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ) ದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು
ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚಳಕ್ಕೆ ಸ್ಟಿರಾಯ್ಡ್ ನ ತಪ್ಪು ಬಳಕೆ ಕಾರಣ - ಏಮ್ಸ್ ಮುಖ್ಯಸ್ಥ
ಸ್ನೇಹಿತರೇ, ಇಡೀ ಜಗತ್ತೇ ಈಗ ಕೋವಿಡ್ ನಿಂದ ಜರ್ಜರಿತವಾಗಿದೆ. ಕೋವಿಡ್ ಗೆ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಜೊತೆಗೆ ಈ "ಬ್ಲ್ಯಾಕ್ ಫಂಗಸ್" ಎಂಬ ಹೊಸದೊಂದು ಅಪರೂಪದ ಸೋಂಕು ಹರಡುತ್ತಿರುವುದನ್ನು ಗಮನಿಸಬಹುದು.
ಹಿಂದೆ ಕೇವಲ ಸಕ್ಕರೆ ಖಾಯಿಲೆ ಇರುವವರಲ್ಲಿ ಮಾತ್ರ ಕಂಡು ಬರುತ್ತಿದ್ದ "ಬ್ಲ್ಯಾಕ್ ಫಂಗಸ್" ಎಂಬ ಅಪರೂಪದ ಸೋಂಕು, ಇದೀಗ ಅತೀ ಹೆಚ್ಚಾಗಲು ಕಾರಣ ಕೊತೋನಾ ಸೋಂಕಿತರಿಗೆ ಚಿಕಿತ್ಸೆ ಅವಧಿಯಲ್ಲಿ ತಪ್ಪಾಗಿ ನೀಡುವ ಸ್ಟಿರಾಯ್ಡ್ ಮುಖ್ಯ ಕಾರಣ ಎಂದು ದಿಲ್ಲಿಯ ಏಮ್ಸ್ ಮುಖ್ಯಾ್ಥರಾದ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ದೇಶದಲದಲಿ 500 ಕ್ಕೂ ಅಧಿಕ ಜನ ಈ ಅಪರೂಪದ ಸೋಂಕು "ಬ್ಲ್ಯಾಕ್ ಫಂಗಸ್" (ಮ್ಯುಕರ್ ಮೈಕೋಸಿಸ್) ನಿಂದ ಬಳಲುತ್ತಿದ್ದಾರೆ.
ಕೇವಲ ದಿಲ್ಲಿಗೆ ಸೀಮಿತವಾಗಿದ್ದ ಈ ಮಹಾಮಾರಿ ಈಗ ಮಹಾರಾಷ್ಟ್ರ, ಗುಜರಾತ್, ಜರಿಯಾಣ ಸೇರಿದಂತೆ ಹಲವು ರಾಜ್ಯಗಳಿಗೆ ಹಬ್ಬುತ್ತಿದ್ದು, ಈ ರೋಗದ ಪ್ರಕರಣಗಳು ಇತ್ತೀಚೆಗಡ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿವೆ.
2003 ರಲ್ಲಿ ಅಲ್ಲಲ್ಲಿ ಕಂಡುಬರುತಿದ್ದ ಈ ಫಂಗಸ್ ಪ್ರಮುಖವಾಗಿ ಮಣ್ಣು ಅಥವಾ ಕೆಲವು ಪದಾರ್ಥಗಳಲ್ಲಿ ಆಶ್ರಯ ಪಡೆದಿರುತ್ತದೆ. ಕೊರೋನಾದಿಂದ ಪ್ರಾಥಮಿಕ ಸೋಂಕು ಉಂಟಾಗಿ, ದ್ವಿತೀಯ ಸೋಂಕಾಗಿ ಈ ಫಂಗಸ್ ಬಂತೆಂದರೆ ದೃಷ್ಟಿದೋಷ ಸೇರಿದಂತೆ ಸಾವು ಕೂಡ ಬರುವ ಸಾಧ್ಯತೆ ಇದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಅವಾಂತರ ಸೃಷ್ಟಿಸಿರುವ ಈ ಬ್ಲ್ಯಾಕ್ ಫಂಗಸ್ ಗೆ ಕಲಬುರಗಿಯ ಪೊಲೀಸ್ ಪೇದೆಯೊಬ್ಬರು ಬಲಿಯಾಗಿದ್ದು, ಪೊಲೀಸ್ ಇಲಾಖೆಯ ಕಲಬುರಗಿಯ ಅಶೋಕನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲಿಕಾರ್ಜುನ ಬೆಳಗುಂಪಿ ಫಂಗಸ್ ಗೆ ಮೊದಲ ಬಲಿಯಾಗಿದ್ದಾರೆ. ಇವರು ಇತ್ತೀಚೆಗೆಷ್ಟೇ ಕೊರೋನಾದಿಂದ ಗುಣಮುಖರಾಗಿಬಂದಿದ್ದರು.
ಏನಿದು ಬ್ಲ್ಯಾಕ್ ಫಂಗಸ್ :-
ಬ್ಲ್ಯಾಕ್ ಪೊಂಗಸ್ ಎಂಬುದು ಗಂಭೀರ ಹಾಗೂ ಅಪರೂಪದ ಸೋಂಕಾಗಿದ್ದು, ಒದ್ದೆಯಾದ ಮೇಲ್ಮೈ ಮೇಲೆ ಕಂಡುಬರುತ್ತದೆ. ಕಪ್ಪು ಬಣ್ಣದಲ್ಲಿರುವ ಇದನ್ನು ಮುಟ್ಟಿದರೆ ಇದು ದೇಹವನ್ನು ಪ್ರವೇಶಿಸಿ, ಸಾವಾನ್ನೂ ಉಂಟು ಮಾಡಬಹುದು.
ಬ್ಲ್ಯಾಕ್ ಫಂಗಸ್ ಯಾರಿಗೆ ಬರುತ್ತದೆ?
1) ಕೊರೋನಾದಿಂದ ಗುಣಮುಖರಾದ ಮಧುಮೇಹಿಗಳು, ಕಿಡ್ನಿ & ಹೃದಯ, ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅಂಗಾಗಂಗ ಕಸಿ ಮಾಡಿಸಿಕೊಂಡಿರುವ ಹಾಗೂ ಸ್ಟಿರಾಯ್ಡ್ ಸೇವನೆ ಮಾಡುವವರಿಗೆ ಇದು ಹೆಚ್ಚಾಗಿ ಬರುವ ಸಾಧ್ಯತೆ ಇದೆ.
2) ಮಧುಮೇಹಿಗಳಲ್ಲಿ ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಂಡಿರುವುದರಿಂದ ಅವರಿಗೆ ಈ ಖಾಯಿಲೆ ಬರುವ ಸಾಧ್ಯತೆ ಹೆಚ್ಚು.
3) ಕೊರೋನಾ ವೈರಸ್ ಕೂಡ ದೇಹದ ಪ್ರತಿರೋಧಕ ಶಕ್ತಿಯನ್ನು ಕುಗ್ಗಿಸುವುದರಿಂದ, ಕೋವಿಡ್ ನಿಂದ ಗುಣಮುಖರಾದವರಿಗೂ ಈ ಫಂಗಸ್ ಕಾಡುವ ಸಾಧ್ಯತೆ ಹೆಚ್ಚು.
ಬ್ಲ್ಯಾಕ್ ಫಂಗಸ್ ನ ಲಕ್ಷಣಗಳು
1) ದೃಷ್ಟಿ ಮಂದವಾಗುವುದು
2) ದಚಡ ಮತ್ತು ಮುಖದ ಭಾಗಗಳಲ್ಲಿ ಊತ
3) ಮಾನಸಿಕ ಗೊಂದಲ
4) ಮೂಗಿನ ಸೇತುವೆ ಬಳಿ ಕಪ್ಪು ಬಣ್ಣ
5) ಚರ್ಮದಲ್ಲಿ ಸಮಸ್ಯೆಗಳು
6) ಕಣ್ಣು ಕೆಂಪಗಾಗಬಹುದು
7) ನಿರಂತರವಾದ ತಲೆನೋವು
8) ಜ್ವರ
9) ಕಣ್ಣಿನ ಕೆಳಭಾಗದಲ್ಲಿ ನೋವು
10) ಮೂಗಿನ ಹೊಳ್ಳೆಯಲ್ಲಿ ಗಾಯಗಳು ಅಥವಾ ಬಾಯಿಯ ಮೇಲ್ಭಾಗದಲ್ಲಿ ಗಾಯಗಳು
11) ಮೂಗು ಅಥವಾ ಸೈನಸ್ ಕಟ್ಟುವಿಕೆ
12) ಕಣ್ಣಿನ ದೃಷ್ಟಿ ಅರ್ಧದಷ್ಟು ಕಳೆದುಕೊಳ್ಳುವುದು
ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಒಂದೇ ಈ ಬ್ಲ್ಯಾಕ್ ಫಂಗಸ್ ಹರಡುವಿಕೆಯನ್ನು ತಡೆಯಲು ಇರುವ ಏಕೈಕ ಮಾರ್ಗ. ಇಲ್ಲದಿದ್ದರೆ ಆಗಸ್ಟ್ ಅಂತ್ಯದ ವೇಳೆಗೆ ಭಾರತದಲ್ಲಿ ಸುಮಾರು 10 ಲಕ್ಷ ಜನ ಈ ಮಹಾಮಾರಿಗೆ ಬಲಿಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸಂದರ್ಶನವೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ.
No comments:
Post a Comment
If you have any doubts please let me know