Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 14 May 2021

14 May 2021 Current Affairs Question Answers || Daily Current Affairs 2021 14 ಮೇ 2021 ರ ದೈನಂದಿನ ಪ್ರಚಲಿತ ವಿದ್ಯಮಾನಗಳು


 14-05-2021 Current Affairs Quiz


14 May 2021 Current Affairs Question Answers || Daily Current Affairs 2021 Download PDF Now






14 ಮೇ 2021 ರ ದೈನಂದಿನ ಪ್ರಚಲಿತ ವಿದ್ಯಮಾನಗಳು
ಕನ್ನಡ ದೈನಂದಿನ ಪ್ರಲಿತ ವಿದ್ಯಮಾನಗಳು

💎💎💎💎💎💎💎💎💎💎💎


🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Current Affairs Quiz 🌺


ಹೌದು, ಸ್ನೇಹಿತರೇ, UPSC, KPSCC, FDA, SDA, PSI, TET, CET, CTET  ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ Current Affairs ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ.


💎💎💎💎💎💎💎💎💎💎💎


The Best and Most Likely ಪ್ರಶ್ನೆಗಳನ್ನು ಕ್ವಿಜ್ ನಲ್ಲಿ ಕೇಳಲಾಗುತ್ತದೆ. ಆದ್ದರಿಂದ ಎಲ್ಲರೂ ನಿಮ್ಮ ಸ್ನೇಹಿತರಿರೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಿ...!!! ಎಲ್ಲರೂ ಭಾಗವಹಿಸಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!


ಮುಂದಿನ ದಿನಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕ್ವಿಜ್ ಗಳನ್ನು www.edutubekannada.com ನಲ್ಲಿ ನಡೆಸಲಾಗುತ್ತದೆ‌.


ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!


ಎಲ್ಲರಿಗೂ ನಮಸ್ಕಾರ..!!!

-Team : Edutube Kannada


🔥🔥🙏🔥🔥🙏🔥🔥

09-05-2021 Current Affairs Quiz | Most Likely Questions For UPSC KPSC FDA SDA PSI PDO SSC CTET 

💥💎💎💎💎💎💎💎💎💎💎💎💥   

01. ಇತ್ತೀಚೆಗೆ ನೇಪಾಳದ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?





ANSWER= A) ಕೆ. ಪಿ. ಶರ್ಮಾ ಒಲಿ
Explain:- ವಿವರಣೆ : • ನೇಪಾಳದಲ್ಲಿ ಹೊಸ ಸರ್ಕಾರವನ್ನು ರಚಿಸುವ ಸಂಬಂಧ ಬಹುಮತ ಸಾಬೀತುಪಡಿಸುವಲ್ಲಿ ವಿರೋಧ ಪಕ್ಷಗಳು ವಿಫಲವಾದ ನಂತರ ಕೆ. ಪಿ. ಶರ್ಮಾ ಒಲಿ ಅವರನ್ನೇ ಮತ್ತೊಮ್ಮೆ ನೇಪಾಳದ ಪ್ರಧಾನಿಯಾಗಿ ಗುರುವಾರ ಅಂದರೆ ದಿನಾಂಕ:13-05-2021 ರಂದು ನೇಮಕ ಮಾಡಲಾಗಿದೆ. • ಶುಕ್ರವಾರ ದಿನಾಂಕ:14-05-2021 ರಂದು ಕೆ. ಪಿ. ಶರ್ಮಾ ಒಲಿ ಅವರಿಗೆ ಶೀತಲ್ ನಿವಾಸದಲ್ಲಿ ನೇಪಾಳದ ರಾಷ್ಟ್ರಪತಿಗಳಾದ ವಿದ್ಯಾದೇವಿ ಭಂಡಾರಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. • ನಿಮಗೆ ಗೊತ್ತೆ: ಕೆ. ಪಿ. ಶರ್ಮಾ ಒಲಿ ಅವರ ಸರಕಾರ ಕಳೆದ ಸೋಮವಾರ ಅಂದರೆ ದಿನಾಂಕ:10-05-2021 ರಂದ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಾಗದೇ ಅಧಿಕಾರದಿಂದ ಪದಚ್ಯುತ ಗೊಂಡಿತ್ತು. ಈಗ ಮತ್ತೆ ಅದೇ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನೇಪಾಳದ ಕುರಿತು : ನೇಪಾಳದ ರಾಜಧಾನಿ : ಕಠ್ಮಂಡು ನೇಪಾಳದ ಕರೆನ್ಸಿ: ನೇಪಾಳಿ ರೂಪಾಯಿ ನೇಪಾಳದ ಪ್ರಧಾನಮಂತ್ರಿ : ಕೆ. ಪಿ. ಶರ್ಮಾ ಒಲಿ ನೇಪಾಳದ ರಾಷ್ಟ್ರಪತಿ : ವಿದ್ಯಾದೇವಿ ಭಂಡಾರಿ

 

02. ಕೋವಿಡ್-19 ವಿರುದ್ಧ ಹೋರಾಡಲು ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಹೆಸರೇನು?





ANSWER= C) ಸ್ಪುಟ್ನಿಕ್-ವಿ
Explain:- ವಿವರಣೆ : • ಕೋವಿಡ್-19 ವಿರುದ್ಧ ಹೋರಾಡಲು ರಷ್ಯಾ ಅಭಿವೃದ್ಧಿಪಡಿಸಿದ ಕೋವಿಡ್-19ನ ಲಸಿಕೆ ಸ್ಪುಟ್ನಿಕ್-ವಿ ಎಂಬುದಾಗಿದೆ. • ಸ್ಪುಟ್ನಿಕ್-ವಿ ಲಸಿಕೆಯನ್ನು ಮುಂದಿನ ವಾರದಿಂದ ದೇಶದ ಮಾರುಕಟ್ಟೆಗೆ ಲಭ್ಯವಾಗುವ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರಸರ್ಕಾರ ತಿಳಿಸಿದೆ. • ‘ದಿ ಲ್ಯಾನ್ಸೆಟ್’ ಎಂಬ ವೈಜ್ಞಾನಿಕ ನಿಯತಕಾಲಿಕೆ ಪತ್ರಿಕೆಯ ವರದಿಯ ಪ್ರಕಾರ ರಷ್ಯಾ ಅಭಿವೃದ್ಧಿಪಡಿಸಿರುವ ಈ “ಸ್ಪುಟ್ನಿಕ್-ವಿ” ಲಸಿಕೆಯು ಎರಡು ಡೋಸ್‍ಗಳನ್ನು ಹೊಂದಿರಲಿದ್ದು, ಸದರಿ ಡೋಸ್‍ಗಳು ಕೋವಿಡ್-19 ವಿರುದ್ಧ ಹೋರಾಟ ನಡೆಸುವಲ್ಲಿ ಶೇ. 91.6 ರಷ್ಟು ಶಕ್ತ ಮತ್ತು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ. • ಭಾರತದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಅಲಭ್ಯತೆ ಅಂದರೆ ಕೊರತೆ ಕಂಡು ಬಂದಿದ್ದರಿಂದ ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ತುರ್ತು ಸಂದರ್ಭಗಳಲ್ಲಿ ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಯನ್ನು ಬಳಸಲು ಅನುಮತಿ ನೀಡಿದೆ. • ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದಿಸುವ ಜವಾಬ್ದಾರಿಯನ್ನು ಹೈದರಾಬಾದ್ ಮೂಲದ ರೆಡ್ಡೀಸ್ ಲ್ಯಾಬೋರೇಟರೀಸ್ ಕಂಪನಿ ಹೊತ್ತುಕೊಂಡಿದೆ. ಡಿಸಿಜಿಐ ಬಗ್ಗೆ : • ಡಿಸಿಜಿಐ : ಡ್ರಗ್ಸ್ ಕಂಟ್ರೋಲರ್ ಜನರಲ್ ಆ¥sóï ಇಂಡಿಯಾ (ಭಾರತೀಯ ಔಷಧ ನಿಯಂತ್ರಣ ಮಂಡಳಿ) • ಡಿಸಿಜಿಐ ಕೇಂದ್ರಸ್ಥಾನ : ನವದೆಹಲಿ • ಪ್ರಸ್ತುತ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ : ಡಾ. ವೇಣುಗೋಪಾಲ್.ಜಿ. ಸೋಮಾನಿ • ಇದು ಭಾರತದಲ್ಲಿ ಔಷಧಗಳ ಉತ್ಪಾದನೆ, ಆಮದು, ಮಾರಾಟ, ಮತ್ತು ವಿತರಣೆಗೆ ಮಾನದಂಡಗಳನ್ನು ರೂಪಿಸುತ್ತದೆ.

 

03. ಇತ್ತೀಚೆಗೆ ಬಿಹಾರದಲ್ಲಿ ಮೇ 25 ರವರೆಗೆ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಹಾಗಾದರೆ ಬಿಹಾರದ ಪ್ರಸ್ತುತ ಮುಖ್ಯಮಂತ್ರಿ ಯಾರು?





ANSWER= C) ನಿತೀಶ್ ಕುಮಾರ್
Explain:- ವಿವರಣೆ : • ಬಿಹಾರದಲ್ಲಿ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗುತ್ತಿರುವುದರಿಂದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಲಾಕ್‍ಡೌನ್ ಅವಧಿಯನ್ನು ಮೇ 25 ರವರೆಗೆ ವಿಸ್ತಿರಿಸಿದ್ದಾರೆ. • ಈ ಮೊದಲು ಬಿಹಾರದಲ್ಲಿ ಮೇ 15 ರವರೆಗೆ ಲಾಕ್‍ಡೌನ್ ವಿಧಿಸಲಾಗಿತ್ತು. • ಬಿಹಾರದ ಕುರಿತು • ಬಿಹಾರದ ರಾಜಧಾನಿ : ಪಾಟ್ನಾ • ಬಿಹಾರದ ಮುಖ್ಯಮಂತ್ರಿ : ನಿತೀಶ್ ಕುಮಾರ್ • ಬಿಹಾರದ ರಾಜ್ಯಪಾಲ : ಫಾಗು ಚೌಹಾಣ • ಬಿಹಾರದ ರಾಜ್ಯ ಪಕ್ಷಿ : ಇಂಡಿಯನ್ ರೋಲರ್

 

04. ಇತ್ತೀಚೆಗೆ ಸುಪ್ರೀಂ ಕೋರ್ಟ್‍ನಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಎಂಬ ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರಲು ನಾನು ಒಲವು ಹೊಂದಿದ್ದೇನೆಂದು ಹೇಳಿದ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿಯವರ ಹೆಸರೇನು?





ANSWER= B) ಎನ್. ವಿ. ರಮಣ
Explain:- ವಿವರಣೆ : • ಸುಪ್ರೀಂ ಕೋರ್ಟ್‍ನಲ್ಲಿ ನಡೆಯುವ ಎಲ್ಲಾ ಕಾರ್ಯಕಲಾಪಗಳನ್ನು ಜನಸಾಮಾನ್ಯರೂ ಕೂಡ ವೀಕ್ಷಿಸುವಂತಾಗಬೇಕು ಮತ್ತು ಅವುಗಳನ್ನು ನೇರ ಪ್ರಸಾರ ಮಾಡಬೇಕು ಎಂಬ ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರಲು ನಾನು ಒಲವು ಹೊಂದಿದ್ದೇನೆ ಎಂದು ಸುಪ್ರೀಂ ಕೋರ್ಟ್‍ನ 48 ನೇ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ ಎನ್. ವಿ. ರಮಣ ರವರು ತಿಳಿಸಿದರು. • ಇವರು ದೇಶದ 48 ನೇ ಮುಖ್ಯ ನ್ಯಾಯಮೂರ್ತಿಗಳು. • ಇವರ ಅಧಿಕಾರಾವಧಿ – 24 ಏಪ್ರಿಲ್ 2021 ರಿಂದ 26 ಆಗಸ್ಟ್ 2022 • 47 ನೇ ಮುಖ್ಯ ನ್ಯಾಯಮೂರ್ತಿ : ಗೌರವಾನ್ವಿತ ಶ್ರೀ ಶರದ್ ಅರವಿಂದ ಬೋಬ್ಡೆ. • 46 ನೇ ಮುಖ್ಯ ನ್ಯಾಯಮೂರ್ತಿ : ಗೌರವಾನ್ವಿತ ಶ್ರೀ ರಂಜನ್ ಗೊಗೋಯ್. • ಭಾರತದ ಮೊದಲ ಸವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ : ಗೌರವಾನ್ವಿತ ಶ್ರೀ ಹೆ. ಜೆ. ಕಾನಿಯಾ • ಅತಿ ಹೆಚ್ಚು ಕಾಲ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಮುಖ್ಯ ನ್ಯಾಯಮೂರ್ತಿ : ಸುಪ್ರೀಂ ಕೋರ್ಟ್‍ನ 16 ನೇ ನ್ಯಾಯಮೂರ್ತಿಗಳಾಗಿದ್ದ ವೈ. ವಿ. ಚಂದ್ರಚೂಡ್ ಅವರು ಅತಿ ಹೆಚ್ಚು ದಿನಗಳ ಕಾಲ ಸೇವೆ ಸಲ್ಲಿಸಿದ ಮುಖ್ಯನ್ಯಾಯಮೂರ್ತಿಗಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಂದರೆ ಫೆಬ್ರವರಿ 1978 ರಿಂದ ಜುಲೈ 1985 ರವರೆಗೆ ಒಟ್ಟು 2696 ದಿನಗಳ ಸೇವೆ. • ಅತೀ ಕಡಿಮೆ ಅವಧಿ ಸೇವೆ ಸಲ್ಲಿಸಿದ ಮುಖ್ಯ ನ್ಯಾಯಮೂರ್ತಿಗಳು : ಸುಪ್ರೀಂ ಕೋರ್ಟ್‍ನ 22 ನೇ ನ್ಯಾಯಮೂರ್ತಿಗಳಾಗಿದ್ದ ಕಮಲ್ ನರೈನ್ ಸಿಂಗ್, ಇವರು ದಿನಾಂಕ:21 ನವೆಂಬರ್ 1991 ರಿಂದ 12 ಡಿಸೆಂಬರ್ 1991 ರ ವರೆಗೆ ಅಂದರೆ ಕೇವಲ 17 ದಿನಗಳ ಕಾಲ ಮಾತ್ರ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

 

05. ಇತ್ತೀಚೆಗೆ ಕೊರೋನಾ ವೈರಾಣುವನ್ನು ತಟಸ್ಥಗೊಳಿಸಲಬಲ್ಲ ಮತ್ತು 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಸಂಗ್ರಹಿಸಿ ಇಡಬಹುದಾದ ಲಸಿಕೆಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ?





ANSWER= C) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ)
Explain:- ವಿವರಣೆ : • ಇತ್ತೀಚೆಗೆ ಕೊರೋನಾ ವೈರಾಣುವನ್ನು ತಟಸ್ಥಗೊಳಿಸಲಬಲ್ಲ ಮತ್ತು 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಸಂಗ್ರಹಿಸಿ ಇಡಬಹುದಾದ ಲಸಿಕೆಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ) ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ. • 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಸಂಗ್ರಹಿಸಬಹುದಾದ ಗುಣ ಹೊಂದಿದ್ದರಿಂದ ಈ ಲಸಿಕೆಯು ದೇಶದಲ್ಲಿನ ಕೋವಿಡ್ ಮಹಮಾರಿಯನ್ನು ಹೊಡೆದೋಡಿಸಲು ರಾಮಬಾಣವಾಗಲಿದೆ. • ಅಲ್ಲದೇ ಸಂಸ್ಥೆಯು 10 ಎಲ್‍ಪಿಎಮ್ ಸಾಮಥ್ರ್ಯದ ಆಮ್ಲಜನಕ ಸಾಂದ್ರಕವನ್ನೂ ಅಭಿವೃದ್ದಿ ಪಡಿಸುತ್ತಿದೆ. • ಚೀನಾದ ಆಮ್ಲಜನಕ ಸಾಂದ್ರಕಗಳು ಶೇ 40-50 ರಷ್ಟು ಆಮ್ಲಜನಕ ನೀಡಿದರೆ, ಈ ಸಾಂದ್ರಕವು ಶೇ 90 ರಷ್ಟು ಆಮ್ಲಜನಕ ನೀಡುವ ಸಾಮಥ್ರ್ಯ ಹೊಂದಿದೆ. • ಭಾರತೀಯ ವಿಜ್ಞಾನ ಸಂಸ್ಥೆ : • ಕೇಂದ್ರ ಕಛೇರಿ : ಬೆಂಗಳೂರು • ಪ್ರಸ್ತುತ ನಿರ್ದೇಶಕರು : ಪ್ರೋ. ಗೋವಿಂದನ್ ರಂಗರಾಜನ್ • ಕರ್ನಾಟಕ ಪ್ರಸ್ತುತ ಆರೋಗ್ಯ ಸಚಿವ : ಡಾ. ಕೆ. ಸುಧಾಕರ್

 

06. ಇತ್ತೀಚೆಗೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಜನರಿಗೆ ನೆರವಾಗಲು ‘ಮಿಷನ್ ಜಿಂದಗಿ’ ಎಂಬ ಪರಿಹಾರ ಅಭಿಯಾನವನ್ನು ಯಾವ ಸಂಸ್ಥೆ ಆರಂಭಿಸಿದೆ?





ANSWER= D) ಆರ್ಟ್ ಆಫ್ ಲಿವಿಂಗ್
Explain:- ವಿವರಣೆ : • ಇತ್ತೀಚೆಗೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಜನರಿಗೆ ನೆರವಾಗಲು ‘ಮಿಷನ್ ಜಿಂದಗಿ’ ಎಂಬ ಪರಿಹಾರ ಅಭಿಯಾನವನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆರಂಭಿಸಿದೆ. • ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 65 ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ‘ಮಿಷನ್ ಜಿಂದಗಿ’ ಎಂಬ ಪರಿಹಾರ ಅಭಿಯಾನವನ್ನು ಘೋಷಿಸಲಾಯಿತು. • ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ವಯಂ ಸೇವಕರು ಮೇ 17 ರಿಂದ ಕೊರೋನಾ ಸೋಂಕಿರ ನೆರವಿಗಾಗಿ ಕೆಲಸ ಮಾಡಲಿದ್ದಾರೆ.

 

07. ಇತ್ತೀಚೆಗೆ ಕೋವಿಡ್ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ನಿಧನರಾದ ಇಂದೂ ಜೈನ್ ಯಾವ ಸಮೂಹ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು?





ANSWER= D) ಟೈಮ್ಸ್ ಸಮೂಹ ಮಾಧ್ಯಮ
Explain:- ವಿವರಣೆ : • ಇತ್ತೀಚೆಗೆ ಕೋವಿಡ್ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ನಿಧನರಾದ ಇಂದೂ ಜೈನ್ ಅವರು ಟೈಮ್ಸ್ ಸಮೂಹ ಮಾಧ್ಯಮ ಸಮೂಹ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. • 199 ರಲ್ಲಿ ಟೈಮ್ಸ್ ಸಮೂಹದ ಅಧ್ಯಕ್ಷೆಯಾಘಿ ಆಯ್ಕೆಯಾಗಿದ್ದರು. • 2000 ನೇ ಇಸ್ವಿಯಲ್ಲಿ ‘ದಿ ಟೈಮ್ಸ್ ಫೌಂಡೇಶನ್’ ಸ್ಥಾಪಿಸುವ ಮೂಲಕ ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. • ಚಂಡಮಾರುತ, ಭೂಕಂಪ, ಪ್ರವಾಹ, ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ ಜನಸಾಮಾನ್ಯರೊಂದಿಗೆ ನಿಂತು, ಹಲವು ಬಗೆಯ ನೆರವು ನೀಡುತ್ತಿದ್ದರು.

 

08. ಇತ್ತೀಚೆಗೆ ಲಂಡನ್‍ನ ಉಪಮೇಯರ್ ಹುದ್ದೆಗೆ ಆಯ್ಕೆಯಾದ ಭಾರತೀಯ ಯಾರು?





ANSWER= B) ರಾಜೇಶ್ ಅಗರ್‍ವಾಲ್
Explain:- ವಿವರಣೆ : • ಲಂಡನ್‍ನ ಉಪಮೇಯರ್ ಹುದ್ದೆಗೆ ಭಾರತೀಯ ಮೂಲದ ರಾಜೇಶ್ ಅಗರ್‍ವಾಲ್ ಮರು ನೇಮಕಗೊಂಡಿದ್ದಾರೆ. • ಕಳೆದ ವಾರ ನಡೆದ ಸ್ಥಳೀಯ ಚುಣಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

 

09. ಇತ್ತೀಚೆಗೆ ನಿಧನಾರದ ಕನಕಾಮೂರ್ತಿ ಓರ್ವ ಪ್ರಸಿದ್ಧ?





ANSWER= D) ಶಿಲ್ಪಿ
Explain:- ವಿವರಣೆ : • ಕರ್ನಾಟಕದ ಮಿದಲ ಮಹಿಳಾ ಶಿಲ್ಪಿ ಎಂದು ಖ್ಯಾತರಾಗಿದ್ದ ಕನಕಾಮೂರ್ತಿ ಗುರುವಾರ ಕೊರೋನಾ ಸೋಂಕಿಗೆ ತುತ್ತಾಗಿ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದರು. • ಇವರ ಗುರುಗಳು : ವಾದಿರಾಜ್ • ಲಾಲ್‍ಬಾಗ್ ಬಳಿಯಿರುವ ಕುವೆಂಪುಪ್ರತಿಮೆ, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿರುವ ರೈಟ್ ಸಹೋದರರ ಪ್ರತಿಮೆ, ಗಮಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಕೆ. ಎಂ. ಮುನ್ಶಿ ಸೇರಿದಂತೆ ಹಲವಾರು ಪ್ರಸಿದ್ಧ ಶಿಲ್ಪಗಳನ್ನು ನಿಮಿಸಿದ್ದಾರೆ. • ಬಾಣಸವಾಡಿಯಲ್ಲಿರುವ 11 ಅಡಿ ಆಂಜನೃಏಯನ ಪ್ರತಿಮೆ ಇವರ ಇನ್ನೊಂದು ಮುಖ್ಯ ಸಾಧನೆಯಾಗಿದೆ. • ಇವರಿಗೆ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿಗಳು ಲಭಿಸಿವೆ.

 

10. ಇತ್ತೀಚೆಗೆ ಬಿಸಿಸಿಐ ಯಾರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ನೇಮಿಸಿದೆ?





ANSWER= B) ರಮೇಶ್ ಪವಾರ್
Explain:- ವಿವರಣೆ : • ಇತ್ತೀಚೆಗೆ ಬಿಸಿಸಿಐ ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ನೇಮಿಸಿದೆ. • ಕಳೇದ 2 ವರ್ಷದಿಂದ ಮಹಿಳಾ ತಂಡದ ಕೋಚ್ ಅಗಿದ್ದ ಡಬ್ಲ್ಯೂವಿ ರಾಮನ್ ಅವರ ಉತ್ತರಾಧಿಕಾರಿಯಾಗಿ 42 ವರ್ಷದ ರಮೇಶ್ ಪವಾರ್ ನೇಮಕಗೊಂಡಿದ್ದಾರೆ. • ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ-ಕ್ರಿಕೆಟ್ ಅಡ್ವೈಸರಿ ಕಮೀಟಿ) ರಮೇಶ್ ಹೆಸರನ್ನು ಬಿಸಿಸಿಐ ಗೆ ಶಿಫಾರಸು ಮಾಡಿತ್ತು. • ರಮೇಶ್ ಮುಂಬೈ ಮೂಲದವರಾಗಿದ್ದು, ಭಾರತದ ಪರ 2 ಟೆಸ್ಟ್, 31 ಏಕದಿನ ಪಂದ್ಯಗಲನ್ನು ಆಡಿದ ಅನುಭವಿಯಾಗಿದ್ದಾರೆ. • 2018 ಜುಲೈ ನವೆಂಬರ್ ನಲ್ಲಿ ನಡೆದ ಮೊದಲ ಬಾರಿಗೆ ಮಹಿಳಾ ತಂಡದ ಕೋಚ್ ಆಗಿದ್ದರು. ಇವರಿಂದಾಗಿಯೇ ಭಾರತ ತಂಡ ಸತತ 14 ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿ, 2018 ರಲ್ಲಿ ಟಿ20 ವಿಶ್ವಕಪ್‍ಗೂ ಅರ್ಹತೆ ಪಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. • ಮುಂಬೈ ಪುರುಷರ ತಂಡ ಇವರ ಮಾರ್ಗದರ್ಶನದಲ್ಲಿಯೇ ವಿಜಯ್ ಹಜಾರೆ ಟ್ರೋಪಿ ಪಡೆದಿತ್ತು. • 2018 ರಲ್ಲಿ ಏಕದಿನ ತಂಡದ ನಾಯಕಿಯಾಗಿದ್ದ ಮಿಥಾಲಿ ರಾಜ್ ಜೊತೆಗಿನ ಭಿನಾಭಿಪ್ರಯಾದಿಂದಾಗಿ ಹುದ್ದೆ ಕಳೆದುಕೊಂಡಿದ್ದರು ರಮೇಶ್.

 

11. ಕೊರೋನಾ ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಯಾವ ರಾಜ್ಯ 5 ಸಾವಿರ ರೂ. ಪಿಂಚಣಿ ಘೋಷಿಸಿದೆ?





ANSWER= C) ಮಧ್ಯಪ್ರದೇಶ
Explain:- ವಿವರಣೆ : • ಕೊರೋನಾ ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮಧ್ಯಪ್ರದೇಶ ಸರ್ಕಾರ 5 ಸಾವಿರ ರೂ. ಪಿಂಚಣಿ ಘೋಷಿಸಿದೆ. • ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೊರೋನಾ ಸಾಂಕ್ರಾಮಿಕದಿಂದಾಗಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 5 ಸಾವಿರ ರೂ ಪಿಂಚಣಿ ಹಾಗೂ ಉಚಿತ ವಿದ್ಯಾಭ್ಯಾಸ ಘೋಷಿಸಿದ್ದಾರೆ. • ಸೋಂಕಿನಿಂದಾಗಿ ರಾಜ್ಯದ ಜನತೆ ತತ್ತರಿಸಿದ್ದು, ಅನೇಕರು ತಮ್ಮ ಕುಟುಂಬಗಳನ್ನು ಕಳೆದುಕೊಂಡಿದ್ದಾರೆ. • ಅಂತಹ ಕುಟುಂಬಗಳಿಗೆ ಸರ್ಕಾರವು ಉಚಿತ ಪಡಿತರವನ್ನೂ ಒದಗಿಸಲಿದೆ ಎಂದು ತಿಳಿಸಿದ್ದಾರೆ.

 

12. ಬಿಟ್‍ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿಯನ್ನು ರೂಪಿಸಿದವರು ಯಾರು?





ANSWER= A) ಸತೋಶಿ ನಕಮೊಟೊ
Explain:- ವಿವರಣೆ : • ಬಿಟ್‍ಕಾಯಿನ್ ಒಂದು ಪ್ರಮುಖ ಕ್ರಿಪ್ಟೋಕರೆನ್ಸಿ. • ಕ್ರಿಪ್ಟೋ ಕರೆನ್ಸಿ ಎನ್ನುವುದು ಬ್ಲಾಕ್ ಚೈನ್ ಟೆಕ್ನಾಲಜಿ (ಬಿಸಿಟಿ) ಯಲ್ಲಿ ಕಾರ್ಯನಿರ್ವಹಿಸುವ ಒಂದು ಡಿಜಿಟಲ್/ವರ್ಚುವಲ್ (ವಿದ್ಯನ್ಮಾನ) ಕರೆನ್ಸಿಯಾಗಿದ್ದು, ಇದು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಲಭ್ಯವಿರುವ ಹಣವಾಗಿದೆ. ಇದನ್ನು ನಕಲು ಮಾಡಲಾಗುವುದಿಲ್ಲ. • ಪ್ರಪಂಚದಾದ್ಯಂತ ಸುಮಾರು 8000 ಕ್ರಿಪ್ಟೋಕರೆನ್ಸಿಗಳಿವೆ. • ಬ್ಲಾಕ್ ಚೈನ್ ಟೆಕ್ನಾಲಜಿ (ಬಿಸಿಟಿ) ಎನ್ನುವುದು ಕ್ರಿಪ್ಟೋಕರೆನ್ಸಿಯ ಹೃದಯವಾಗಿದೆ. • ಕ್ರಿಪ್ಟೋಕರೆನ್ಸಿಯನ್ನು ಸೌದಿ ಅರೇಬಿಯಾ, ಬೊಲಿವಿಯಾ, ಐಲೆಂಡ್, ಈಕ್ವೆಡಾರ್‍ಗಳಲ್ಲಿ ನಿಷೇಧಿಸಲಾಗಿದೆ. • 2008 ರಲ್ಲಿ ಸತೊಶಿ ನಕಟೊಮೊ ಎಂಬ ಗುಪ್ತನಾಮ ಅಥವಾ ವ್ಯಕ್ತಿಗಳ ಸಮೂಹದಿಂದ ಬಿಟ್‍ಕಾಯಿನ್ ರೂಪಿಸಲ್ಪಟ್ಟಿದೆ. • ಒಂದು ಬಿಟ್‍ಕಾಯಿನ್ ನ ದರ 51541 ಡಾಲರ್ ಅಂದರೆ 38 ಲಕ್ಷ ಭಾರತೀಯ ರೂಪಾಯಿಗಳು.

 

13. ಇತ್ತೀಚೆಗೆ ಯಾವ ದೇಶದ ಬಂಡುಕೋರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದರು?





ANSWER= B) ಪ್ಯಾಲೇಸ್ಟೈನ್
Explain:- ವಿವರಣೆ : • ಇತ್ತೀಚೆಗೆ ಪ್ಯಾಲೇಸ್ಟೈನ್ ದೇಶದ ಬಂಡುಕೋರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದರು. • ಗಾಜಾ ಪಟ್ಟಿಯು ಪ್ಯಾಲೇಸ್ಟೈನ್ ಸಂಘಟನೆಯಾದ ಹಮಸ್‍ನ ನಿಯಂತ್ರಣದಲ್ಲಿದ್ದು, ಈ ಹಮಸ್ ಸಂಘಟನೆಯು ಇಸ್ರೇಲ್ ಜೊತೆಗೆ ಹಲವಾರು ಬಾರಿ ಸಂಘರ್ಷಕ್ಕಿಳಿದಿದೆ. ಅಲ್ಲದೇ ಹಮಸ್‍ಗೆ ಅಕ್ರಮ ಶಸ್ತ್ರಾಸ್ತ್ರಗಳು ಗಾಜಾದ ಗಡಿಯಿಂದಲೇ ಸರಬರಾಜಾಗುತ್ತವೆ. ಇದನ್ನು ತಡೆಯಲು ಇಸ್ರೇಲ್ ಮತ್ತು ಈಜಿಪ್ಟ್ ಗಾಜಾ ಗಡಿಯುದ್ದಕ್ಕೂ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿವೆ ಇದುವೇ ಈ ಎರಡು ರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಕಾರನ ಎನ್ನಲಾಗುತ್ತಿದೆ. • ಅಲ್ಲದೇ ಪೂರ್ವ ಜೇರುಸಲೇಂನ ಶೇಖ್ ಜರ್ರಾ ನಗರದಿಂದ ಪ್ಯಾಲೇಸ್ಟೈನಿಯನ್ನರ ಕುಟುಂಬಗಳನ್ನು ಇಸ್ರೇಲ್ ಹೊರದಬ್ಬುತ್ತಿದೆ ಎಂಬುದು ಪ್ಯಾಲೇಸ್ಟೈನ್ ನ ಆಕ್ರೋಷಕ್ಕೆ ಕಾಣವಾಗಿದೆ ಎನ್ನಲಾಗುತ್ತಿದೆ. • ಇಸ್ರೇಲ್ ನ ಪ್ರಧಾನಿ : ನೇತನ್ಯಾಹು • ಇಸ್ರೇಲ್‍ನ ಸೇನಾ ವಕ್ತಾರ : ಜೊನಾಥನ್ ಕಾನ್ರಿಕಸ್ • ಇಸ್ರೇಲ್‍ನ ರಾಜಧಾನಿ : ಜೆರುಸಲೇಂ • ಇಸ್ರೇಲ್‍ನ ಆಡಳಿತ ಭಾಷೆ : ಹೀಬ್ರೂ • ಪ್ಯಾಲೇಸ್ಟೈನ್ ಅಧ್ಯಕ್ಷ : ಮಹಮೂದ್ ಅಬ್ಬಾಸ್ • ಪ್ಯಾಲೇಸ್ಟೈನ್ ಪ್ರಧಾನಿ : ಮೊಹಮ್ಮದ್ ಶತಯೆಹ್ • ಅಮೇರಿಕ ಅಧ್ಯಕ್ಷ : ಜೋ ಬಿಡೆನ್ • ಅಮೇರಿಕದ ವಿದೇಶಾಂಗ ಕಾರ್ಯದರ್ಶಿ : ಆ್ಯಂಟನಿ ಕ್ಲಿಂಟನ್

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads