ಕೃಷಿ ಇಲಾಖೆಯಲ್ಲಿ ನಡೆಯಲಿದೆ 9264 ಹುದ್ದೆಗಳಿಗೆ ನೇಮಕಾತಿ
ಹೌದು ಸ್ನೇಹಿತರೇ ನೀವು ಕೇಳುತ್ತಿರುವು ನಿಜವಾದ ಸುದ್ದಿ..!! ಕರ್ನಾಕ ರಾಜ್ಯ ಕೃಷಿ ಇಲಾಖೆಯು ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಿದೆ..!!
ಹೌದು ಈ ಸಂಬಂಧ ಕರ್ನಾಟಕ ರಾಜ್ಯ ಸರಕಾರವು ದಿನಾಂಕ 22-12-2020 ರಂದು ರಾಜ್ಯ ಕೃಷಿ ಇಲಾಖೆಯಲ್ಲಿನ ವಿವಿಧ ವೃಂದ ನೇಮಕಾತಿ ಕುರಿತು ಕರಡು ಅಧಿಸೂಚನೆಯನ್ನು ಪ್ರಕಟಿಸಿತ್ತು. ಹಾಗೂ ಸದರಿ ರಾಜ್ಯ ಪತ್ರವು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದರು.
ಸದರಿ ಅಂತಿಮ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಒಳಗೊಂಡ ರಾಜ್ಯಪತ್ರವನ್ನು ಮೊನ್ನೆಯಷ್ಟೇ ಪ್ರಕಟಿಸಿದೆ. ಹಾಗೂ ನೇಮಕಾತಿ ಮಾಡಲಿರುವ ಹುದ್ದೆಗಳ ವಿವರಗಳನ್ನು ಸದರಿ ರಾಜ್ಯಪತ್ರದಲ್ಲಿ ಒದಗಿಸಲಾಗಿದೆ
ಕೃಷಿ ಇಲಾಖೆಯ ಈ ಕೆಳಗಿನ ವಿವಿಧ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ. ಸ್ನೇಹಿತರೇ ಈ ಭರ್ಜರಿ 9264 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸಿದರೆ, ಕೃಷಿ ಇಲಾಖೆಯಲ್ಲಿನ ಈ ಹುದ್ದೆಗಳಲ್ಲಿನ ಒಂದು ಹುದ್ದೆ ನಿಮಗೆ ಮೀಸಲಿದ್ದಂತೆಯೇ ಸರಿ. ಸದರಿ ಹುದ್ದೆಗಳಿಗೆ ಅಗತ್ಯವಾದ ಪಠ್ಯಕ್ರಮವನ್ನು Edutube Kannada ತಂಡ ಶೀಘ್ರದಲ್ಲಿಯೇ ನಿನಗೆ ಒದಗಿಸುವ ಪ್ರಯತ್ನವನ್ನೂ ಮಾಡಲಿದೆ. ಆದ್ದರಿಂದ ಹುದ್ದೆಗಳ ಆಸಕ್ತರು ಈಗಿನಿಂದಲೇ ಅಗತ್ಯ ತಯಾರಿಯನ್ನು ಆರಂಭಿಸಿ.
ಕೃಷಿ ಇಲಾಖೆಯಲ್ಲಿ ಶೀಘ್ರದಲ್ಲೇ ಭರ್ತಿ ಮಾಡಲಿರುವ ವಿವಿಧ ಹುದ್ದೆಗಳ ವಿವರ ಹೀಗಿದೆ :-
- ಕೃಷಿ ಆಯುಕ್ತರು - 1
- ಅಪರ ನಿರ್ದೇಶಕರು / ಜಂಟಿ ನಿರ್ದೇಶಕರು (ಆಡಳಿತ) - 1
- ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು - 1
- ಕಾನೂನು ಅಧಿಕಾರಿ - 1
- ಕಾರ್ಯನಿರ್ವಾಹಕ ಅಭಿಯಂತರರು (ಸಿವಿಲ್) - 1
- ಉಪ ನಿರ್ದೇಶಕರು (ಸಾಂಖ್ಯಿಕ) - 1
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು - 2
- ಸೀನಿಯರ್ ಪ್ರೋಗ್ರಾಮರ್ - 1
- ಸಹಾಯಕ ನಿರ್ದೇಶಕರು (ಸಾಂಖ್ಯಿಕ) - 1
- ಸಹಾಯಕ ಅಭಿಯಂತರರು (ಸಿವಿಲ್) - 2
- ಸಹಾಯಕ ಸಾಂಖ್ಯಿಕ ಅಧಿಕಾರಿ - 14
- ಸಾಂಖ್ಯಿಕ ನಿರೀಕ್ಷಕರು - 2
- ಒಟ್ಟು - 28
ತಾಂತ್ರಿಕ ವೃಂದದ ಹುದ್ದೆಗಳ ವಿವರ ಹೀಗಿದೆ
- ಕೃಷಿ ನಿರ್ದೇಶಕರು - 1
- ಅಪರ ಕೃಷಿ ನಿರ್ದೇಶಕರು - 8
- ಜಂಟಿ ಕೃಷಿ ನಿರ್ದೇಶಕರು - 52
- ಉಪ ಕೃಷಿ ನಿರ್ದೇಶಕರು - 86
- ಸಹಾಯಕ ಕೃಷಿ ನಿರ್ದೇಶಕರು - 416
- ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ) - 51
- ಕೃಷಿ ಅಧಿಕಾರಿ - 1801
- ಕೃಷಿ ಅಧಿಕಾರಿ (ರೈತ ಮಹಿಳೆ) - 141
- ಸಹಾಯಕ ಕೃಷಿ ಅಧಿಕಾರಿ - 2099
- ಕೃಷಿ ಸಹಾಯಕರು - 49
- ಒಟ್ಟು ಹುದ್ದೆಗಳು - 4707
🌺 ಪಶ್ಚಿಮ ರೈಲ್ವೆಯಲ್ಲಿವೆ ಭರ್ಜರಿ 3591 ಹುದ್ದೆಗಳು ಅರ್ಜಿ ಸಲ್ಲಿಸಲು ಈಗಲೇ ಇಲ್ಲಿ ಕ್ಲಿಕ್ ಮಾಡಿ...!!
ಲಿಪಿಕ ಹುದ್ದೆಗಳ ವಿವರ ಹೀಗಿದೆ
- ಆಡಳಿತಾಧಿಕಾರಿ - 32
- ಸಹಾಯಕ ಆಡಳಿತ ಅಧಿಕಾರಿ - 44
- ಅಧೀಕ್ಷಕರು - 362
- ಪ್ರಥಮ ದರ್ಜೆ ಸಹಾಯಕರು - 565
- ದ್ವಿತೀಯ ದರ್ಜೆ ಸಹಾಯಕರು - 630
- ಒಟ್ಟು - 1633
ಪೋಷಕ ಸಿಬ್ಬಂದಿ ವೃಂದದಲ್ಲಿರುವ ಖಾಲಿ ಹುದ್ದೆಗಳ ವಿವರ
- ಮುಖ್ಯ ಕಲಾವಿದ ಮತ್ತು ಶ್ರವಣ-ದೃಶ್ಯ ತಜ್ಞ - 01
- ಗ್ರಂಥಪಾಲಕ - 1
- ನಕ್ಷೆಗಾರರು - 39
- ಮೆಕ್ಯಾನಿಕಲ್ ಫೋರ್ಮನ್ - 3
- ಹಿರಿಯ ಕಲಾವಿದ ಮತ್ತು ಛಾಯಾಗ್ರಾಹಕ - 01
- ಗ್ರಂಥಾಲಯ ಸಹಾಯಕ - 1
- ಶೀಘ್ರಲಿಪಿಗಾರರು - 80
- ಹಿರಿಯ ಬೆರಳಚ್ಚುಗಾರರು - 29
- ಹಿರಿಯ ವಾಹನ ಚಾಲಕ - 40
- ಸೀನಿಯರ್ ಕಂಪ್ಯೂಟರಿಸ್ಟ್ - 6
- ರೇಖಾಗಾರರು - 161
- ಪ್ರಾಜೆಕ್ಟ್ ಆಪರೇಟರ್ - 1
- ಕೃಷಿ ಅನುಷ್ಟಾನ ಮೇಲ್ವಿಚಾರಕರು - 47
- ಬೆರಳಚ್ಚುಗಾರರು - 344
- ಪ್ರಯೋಗಶಾಲಾ ಸಹಾಯಕರು - 96
- ವಾಹನಚಾಲಕ - 277
- ಟೆಲಿಫೋನ್ ಆಪರೇಟರ್ - 1
- ಕಂಪೋಸಿಟರ್ - 1
- ಪ್ರಿಂಟರ್ - 1
- ಬೈಂಡರ್ - 1
- ಅಟೆಂಡರ್ - 141
- ಕಾರ್ಪೆಂಟರ್ ಕಮ್ ಸ್ಮಿತ್ - 1
- ಬಾಣಸಿಗ - 65
- ಗ್ರೂಪ್ ಡಿ - 1306
- ಒಟ್ಟು - 2644
ಗ್ರಾಮ ಕಾಯಕಮಿತ್ರ ಹುದ್ದೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..!!
ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿನ ಹುದ್ದೆಗಳ ವಿವರ
- ಜಲಾನಯನ ಅಭಿವೃದ್ಧಿ ಆಯುಕ್ತರು - 1
- ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ - 1
- ಜಲಾನಯನ ಅಭಿವೃದ್ಧಿ ನಿರ್ದೇಶಕರು - 1
- ವ್ಯವಸ್ಥಾಪಕ ನಿರ್ದೇಶಕರು(ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ) - 1
- ಜಂಟಿ ನಿರ್ದೇಶಕರು(ಪಶು ವೈದ್ಯಕೀಯ ) - 1
- ಜಂಟಿ ನಿರ್ದೇಶಕರು ( ತೋಟಗಾರಿಕೆ) - 1
- ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು - 1
- ಉಪ ನಿರ್ದೇಶಕರು (ಸಾಂಖ್ಯಿಕ) - 1
- ಆಡಳಿತಾಧಿಕಾರಿ (ಕೆಎಸ್-ಕಿರಿಯ ಶ್ರೇಣಿ) - 1
- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ - 17
- ಸಹಾಯಕ ನಿರ್ದೇಶಕರು (ಪಶು ಸಂಗೋಪನೆ) - 1
- ಲೆಕ್ಕಾಧಿಕಾರಿ - 1
- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು - 17
- ಹೈಡ್ರೋಜಿಯೋಲಜಿಸ್ಟ್ - 1
- ಸಹಾಯಕ ನಿರ್ದೇಶಕರು - 1
- ವಲಯ ಅರಣ್ಯ ಅಧಿಕಾರಿ - 29
- ಸಹಾಯಕ ತೋಟಗಾರಿಕೆ ಅಧಿಕಾರಿ - 30
- ಅಸಿಸ್ಟಂಟ್ ಜಿಯೋಲಜಿಸ್ಟ್ - 2
- ಪರಿಸರ ತಜ್ಞ - 1
- ಪ್ರಾಜೆಕ್ಟ್ ಸೋಷಿಯೋಲಾಜಿಸ್ಟ್ - 1
- ಸಹಾಯಕ ಸಾಂಖ್ಯಿಕ ಅಧಿಕಾರಿ - 2
- ಪ್ರಥಮ ದರ್ಜೆ ಸಹಾಯಕ - 24
- ತೋಟಗಾರಿಕೆ ಸಹಾಯಕ - 58
- ಉಪ ವಲಯ ಅರಣ್ಯ ಅಧಿಕಾರಿ - 58
- ಒಟ್ಟು - 252
ಮೇಲಿನ ಎಲ್ಲಾ ಹುದ್ದೆಗಳ ಪೈಕಿ
ಖಾಯಂ ಹುದ್ದೆಗಳ ಸಂಖ್ಯೆ-738,
ತಾತ್ಕಾಲಿಕ ಹುದ್ದೆಗಳ ಸಂಖ್ಯೆ-8244,
ನಿಯೋಜನೆ ಆಧಾರಿತ ಹುದ್ದೆಗಳ ಸಂಖ್ಯೆ-2820,
ಒಟ್ಟು ಹುದ್ದೆಗಳ ಸಂಖ್ಯೆ 9264 ಇವೆ.
ರಾಜ್ಯ ಸರ್ಕಾರ ಪ್ರಕಟಿಸಿದ ಕೃಷಿ ಇಲಾಖೆಯ ಅಧಿಕೃತ ರಾಜ್ಯ ಪತ್ರವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೃಷಿ ಇಲಾಖೆಯ ಈ ಹುದ್ದೆಗಳನ್ನು ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತ ನಂತರ, ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಒಮ್ಮೆಗೆ ನಡೆಸುತ್ತದೆಯೋ ಅಥವಾ ಹಂತ ಹಂತವಾಗಿ ನೇಮಕ ಮಾಡಿಕೊಳ್ಳುತ್ತದೋ, ಎಂಬುದು ತಿಳಿಯಲು ಇನ್ನೂ ಸ್ವಲ್ಪ ದಿನ ಕಾಯಬೇಕಿದೆ.
ನಿಮಗೆ ಗೊತ್ತಿರಲಿ : ಮೇಲಿನ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುಂಬಡ್ತಿ, ನಿಯೋಜನೆ ಹಾಗೂ ನೇರ ನೇಮಕಾತಿ ಮೂಲಕವೂ ಭರ್ತಿ ಮಾಡಬಹುದು.
ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕೃಷಿ ಇಲಾಖೆಯಲ್ಲಿ ನಡೆಯುವ ಈ ಬೃಹತ್ ನೇಮಕಾತಿಯು ಹಲವಾರು ಬಡ ಅಭ್ಯರ್ಥಿಗಳಿಗೆ ಆಶಾಕಿರಣವಾಗಲಿದೆ. ಆದ್ದರಿಂದ ಉದ್ಯೋಗದ ಹುಡುಕಾಟದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಕೂಡ ದೃಢ, ನಿಷ್ಠೆಯಿಂದ ಅಧ್ಯಯನ ನಡೆಸಿ, ಉದ್ಯೋಗ ಪಡೆದರೆ ನಮ್ಮ ಶ್ರಮ ಸಾಧ್ಯ..
ಎಲ್ಲರಿಗೂ ಒಳ್ಳೆಯದಾಗಲಿ..!!!
No comments:
Post a Comment
If you have any doubts please let me know