3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಾಳೆಯಿಂದ ಅರ್ಜಿ ಸಲ್ಲಿಸಿ :
ಹಾಯ್ ಸ್ನೇಹಿತರೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ 3533 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸದರಿ ನೇಮಕಾತಿಯು ಪುರುಷ & ಮಹಿಳಾ ಅಭ್ಯರ್ಥಿಗಳಿಗೆ ನಡೆಯಲಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) (ಮಿಕ್ಕಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಪಟ್ಟಂತೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣವಾದ https://recruitment.ksp.gov.in ನಲ್ಲಿ ಅಧಿಸೂಚನೆಯೂ ಪ್ರಕಟಗೊಂಡಿದೆ.
ಪೊಲೀಸ್ ಇಲಾಖೆಯು ನೇರನೇಮಕಾತಿಯ ಮೂಲಕ ಒಟ್ಟು 3533 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಿದೆ. ಆಸಕ್ತರು ಮೇ 25 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇತರೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..!!!
👇 ಹುದ್ದೆಗಳ ವಿವರಗಳು ಹೀಗಿದೆ 👇
💠 ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಪುರುಷ) (ಮಿಕ್ಕುಳಿದ ವೃಂದ) ಹುದ್ದೆಗಳು = 2393
💠 ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಮಿಕ್ಕುಳಿದ ವೃಂದ) ಹುದ್ದೆಗಳು = 799
💠 ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಪುರುಷ) (ಕಲ್ಯಾಣ ಕರ್ನಾಟಕ ಪ್ರದೇಶದ ಶೇ.80 ಸ್ಥಳೀಯ ವೃಂದದ ಹುದ್ದೆ) ಹುದ್ದೆಗಳು = 266
💠 ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ) (ಮಹಿಳಾ) (ಕಲ್ಯಾಣ ಕರ್ನಾಟಕ ಪ್ರದೇಶದ ಶೇ.80 ಸ್ಥಳೀಯ ವೃಂದದ ಹುದ್ದೆ) ಹುದ್ದೆಗಳು = 75
🔯 ಒಟ್ಟು ಹುದ್ದೆಗಳ ಸಂಖ್ಯೆ 3533
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು
ವಯೋಮಿತಿ :
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಅಲ್ಲಿಸಬಯಸುವ ಅಭ್ಯರ್ಥಿಗಳು, ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು.
ಮುಂದುವರೆದು :-
1⃣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ,
2⃣ ಇತರೆ ಅಭ್ಯರ್ಥಿಗಳಿಗೆ 25 ವರ್ಷ ಗರಿಷ್ಠ ವಯೋಮಿತಿ,
3⃣ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ನೆನಪಿರಲಿ : ಪಿಎಸ್ಐ ಹುದ್ದೆಗೆ ಈಗಾಗಲೇ ವಯೋಮಿತಿ ಹೆಚ್ಚಳ ಮಾಡಲಾಗಿದೆ. ಆದರೆ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಯಾವುದೇ ವಯೋಮಿತಿ ಹೆಚ್ಚಳ ಮಾಡಿರುವುದಿಲ್ಲ.
ವಿದ್ಯಾರ್ಹತೆ ಏನಿರಬೇಕು :
ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು.
ನೆನಪಿರಲಿ : ಹತ್ತನೇ ತರಗತಿಯ ನಂತರ ಪಡೆದಿರುವ ಡಿಪ್ಲೊಮಾ ಶಿಕ್ಷಣವು ಪಿಯುಸಿ ಪರೀಕ್ಷೆಗೆ ತತ್ಸಮಾನ ವಿದ್ಯಾರ್ಹತೆ ಅಲ್ಲ. ಹೀಗೆ ತತ್ಸಮಾನ ವಿದ್ಯಾರ್ಹತೆಯೆಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿ, ನೌಕರಿ ಪಡೆದು, ಪೊಲೀಸ್ ತರಬೇತಿಯನ್ನೂ ಕೂಡ ಪೂರ್ಣಗೊಳಿಸಿ, ಅನಂತರ ಅನೇಕ ಅಭ್ಯರ್ಥಿಗಳು ನೌಕರಿಯಿಂದ ಹೊರಬಂದಿದ್ದಾರೆ. NIOS ದಿಂದ ಪಿಯುಸಿ ತತ್ಸಮಾನ ಪ್ರಮಾಣಪತ್ರ ಪಡೆದ ಡಿಪ್ಲೊಮಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಯಾವುದಕ್ಕೂ ಹೆಚ್ಚಿನ ವಿದ್ಯಾರ್ಹತೆಯ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸತಕ್ಕದ್ದು.
ವೇತನ ಶ್ರೇಣಿ ಎಷ್ಟಿರಲಿದೆ :
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮಾಸಿಕ ರೂ.23500-47650 ಶ್ರೇಣಿಯ ವೇತನವನ್ನು ಹಾಗೂ ಇನ್ನಿತರೇ ಭತ್ಯೆಗಳನ್ನು ಪಡೆಯಲಿದ್ದಾರೆ.
🔮 ಪ್ರಮುಖ ದಿನಾಂಕಗಳು ಹೀಗಿವೆ 🔮
⏩ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 25-05-2021
⏩ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-06-2021
⏩ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 28-06-2021
ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ವೆಬ್‌ಸೈಟ್ https://recruitment.ksp.gov.in ನಲ್ಲಿ ಪ್ರಕಟಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : http://rec21.ksp-online.in/
No comments:
Post a Comment
If you have any doubts please let me know