ನಾಳೆ 26 ಮೇ 2021 ರಂದು ನಡೆಯುವ ಚಂದ್ರ ಗ್ರಹಣ ಕಾಲದಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು..!!
ಸ್ನೇಹಿತರೇ, ನಾಳೆ ಅಂದರೆ ಮೇ 26 ರಂದು ನಡೆಯುವ ಗ್ರಹಣ ಉಪಛಾಯಾ ಗ್ರಹಣವಾದ ಕಾರಣದಿಂದಾಗಿ ಯಾವುದೇ ಸೂತಕದ ಅವಧಿ ಇರುವುದಿಲ್ಲ. ಅಲ್ಲದೇ ಈ ಗ್ರಹಣವು ಪೂರ್ಣ ಭಾರತದಲ್ಲಿ ಗೋಚರವಾಗದೇ ಇರುವುದರಿಂದ ಈ ಚಂದ್ರಗ್ರಹಣದಿಂದ ಗರ್ಭಿಣಿ ಮಹಿಳೆಯರ ಮೇಲೆ ಯಾವುದೇ ಪರಿಣಾಮ ಉಂಟಾಗಲಾರದು.
ಆದರೂ ಕೂಡ ಸುರಕ್ಷತೆಯ ದೃಷ್ಟಿಯಿಂದ ಗರ್ಭಿಣಿಯರು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಒಳ್ಳೆಯದು ಎಂಬುದು ಹಿರಿಯರ ಅಭಿಮತ
ಹಾಗಾದರೆ ಚಂದ್ರ ಗ್ರಹಣ ಅವಧಿಯಲ್ಲಿ ಮಾಡಲೇಬಾರದ ಕೆಲಸಗಳೇನು ಗೊತ್ತೆ.!?
ಸ್ನೇಹಿತರೇ, 2021ರಲ್ಲಿ ಸಂಭವಿಸಿದ ಮೊದಲ ಚಂದ್ರಗ್ರಹಣವು ಬುಧವಾರ ಸಂಭವಿಸಲಿದೆ. ವರ್ಷದ ಮೊದಲ ಗ್ರಹಣವು ಸಂಪೂರ್ಣ ಗ್ರಹಣವಾದರೂ ಭಾರತದಲ್ಲಿ ಇದು ಉಪಛಾಯಾ ಗ್ರಹಣವಾಗಿದೆ.
ಗ್ರಹಣದ ಆರಂಭ ಯಾವಾಗ ?
ಈ ಚಂದ್ರಗ್ರಹಣವು ಮೇ 26 ಬುಧವಾರ ಮಧ್ಯಾಹ್ನ 2.17 ಕ್ಕೆ ಆರಂಭವಾಗುತ್ತದೆ.
ಗ್ರಹಣ ಕೊನೆಗೊಳ್ಳುವುದು ಯಾವಾಗ ?
ಈ ಗ್ರಹಣವು ಸಂಜೆ 7:19ಕ್ಕೆ ಕೊನೆಗೊಳ್ಳುತ್ತದೆ.
ಈ ಚಂದ್ರಗ್ರಹಣ ವಿಶೇಷತೆ :
ಸ್ನೇಹಿತರೇ, ವರ್ಷದ ಮೊದಲ ಚಂದ್ರಗ್ರಹಣವಾದ ಇದರಲ್ಲಿ ಯಾವುದೇ ಸೂತಕದ ಅವಧಿ ಇಲ್ಲ. ಪ್ರನುಖವಾಗಿ ಗ್ರಹಣಗಳು ಖಗೋಳ ಕ್ಷೇತ್ರದಲ್ಲಿ ಜರುಗುವ ವಿಜ್ಞಾನದ ಸಂಗತಿಯಾಗಿದೆ. ಅದಾಗ್ಯೂ ನಮ್ಮ ದೇಶದಲ್ಲಿ ಜ್ಯೋತಿಷ್ಯ ಹಾಗೂ ಹಸ್ತ ಸಾಮುದ್ರಿಕ ಶಾಸ್ತ್ರವನ್ನು ನಂಬುಲಾಗುತ್ತದೆ.
ಭಾರತೀಯ ಜ್ಯೋತಿಷ್ಯದ ಪ್ರಕಾರ ಚಂದ್ರನಲ್ಲಾಗುವ ಬದಲಾವಣೆಯು ಮನುಷ್ಯರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎನ್ನಲಾಗುತ್ತದೆ ಇದು ಅರ್ಧ ನೆರಳಿನ ಚಂದ್ರಗ್ರಹಣವಾದರೂ ಧಾರ್ಮಿಕ ನಂಬಿಕೆಯ ಪ್ರಕಾರ ಗ್ರಹಣವು ಗರ್ಭಿಣಿಯರ ಮೇಲೂ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ಸೇರಿದಂತೆ ಇನ್ನಿತರೆ ಎಲ್ಲ ಜನ ಏನು ಮಾಡಬೇಕು ? ಏನು ಮಾಡಬಾರದು ? ಎಂಬ ಸಂಕ್ಷಿಪ್ರ ಮಾಹಿತಿಯನ್ನು Edutube Kannada ತಂಡ ಸಂಗ್ರಹಿಸಿ ನಿಮಗಿಲ್ಲಿ ನೀಡುತ್ತಿದೆ.
ಗ್ರಹಣ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಪಾಲಿಸಬೇಕಾದ ನಿಯಮಗಳು ಹೀಗಿವೆ
- ಗ್ರಹಣ ಅವಧಿಯು ಗರ್ಭಿಣಿ ಮಹಿಳೆಯರ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಗರ್ಭಿಣಿಯರು ಮನೆಯೊಳಗೆ ಇರಬೇಕು.
- ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಚಾಕು, ಕತ್ತರಿ, ಸೂಜಿಯಂತಹ ಮೊನಚಾದ ವಸ್ತುಗಳನ್ನು ಬಳಸಬಾರದು.
- ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನನ್ನೂ ತಿನ್ನಬಾರದು, ಯಾಕೆಂದರೆ ಗ್ರಹಣದ ಸಮಯದಲ್ಲಿ ಬೀಳುವ ಹಾನಿಕಾರಕ ಕಿರಣಗಳು ಆಹಾರವನ್ನು ಹಾಳುಮಾಡುತ್ತದೆ ಎನ್ನಲಾಗುತ್ತದೆ. ಗ್ರಹಣಕ್ಕೂ ಮೊದಲು ಹಾಲಿಗೆ ತುಳಸಿಯನ್ನು ಸೇರಿಸಲಾಗುತ್ತದೆ. ಇದರಿಂದಾಗಿ ಗ್ರಹಣದ ನಂತರವೂ ಆಹಾರ ಶುದ್ಧವಾಗಿರುತ್ತದೆ.
- ಗರ್ಭಿಣಿಯರು ತುಳಸಿಯನ್ನು ಬಾಯಲ್ಲಿ ಹಾಕಿಕೊಳ್ಳಬಹುದು. ಹನುಮಾನ್ ಚಾಲೀಸ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಬಹುದು.
- ಗ್ರಹಣದ ಅವಧಿ ಮುಗಿದ ನಂತರ ಗರ್ಭಿಣಿಯರು ಶುದ್ಧ ನೀರಿನಿಂದ ಸ್ನಾನ ಮಾಡಬೇಕು.
- ಗ್ರಹಣ ಅವಧಿಯಲ್ಲಿ ಮಂತ್ರ, ಶ್ಲೋಕಗಳನ್ನು ಪಠಿಸಿದರೆ ಉತ್ತಮ. ಇದು ಗರ್ಭಿಣಿಯರ ಮೇಲೆ ಹಾಗೂ ಗರ್ಭದಲ್ಲಿರುವ ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಗ್ರಹಣದ ಸಮಯದಲ್ಲಿ ಏನು ಮಾಡಬೇಕು
- ಗ್ರಹಣದ ಸಮಯದಲ್ಲಿ ದೇವರ ನಾಮಸ್ಮರಣೆ ಮಾಡಿದರೆ ನಮ್ಮ ಪಾಪಗಳೆಲ್ಲವೂ ನಿವಾರಣೆಯಾಗುವುದು.
- ಗ್ರಹಣ ಸಮಯಲ್ಲಿ ನೀವು ಗಾಯತ್ರಿ ಮಂತ್ರವನ್ನು ಪಠಿಸಬಹುದು. ಅದಲ್ಲದೇ ಸರಳ ಮಂತ್ರಗಳಾದ '' ಓಂ ನಮೋ ನಾರಾಯಣಾ'' , ''ಶ್ರೀ ರಾಮ ಜಯಂ'', ''ಓಂ ನಮಃ ಶಿವಾಯಃ'' ಈ ಮಂತ್ರಗಳನ್ನೂ ಪಠಿಸಬಹುದು.
ಗ್ರಹಣ ಸಮಯದಲ್ಲಿ ಇವುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು
- ಗ್ರಹಣದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಾರದು
- ಮನೆಯನ್ನು ಸ್ವಚ್ಚ ಮಾಡಬಾರದು.
- ಗ್ರಹಣದ ಸೂತಕ ಕಾಲದಲ್ಲಿ ಆಹಾರ ಸೇವನೆ ಮಾಡುವುದೂ ನಿಷಿದ್ಧ.
- ಗ್ರಹಣವಾದ ನಂತರ ಮನೆಯನ್ನು ಶುದ್ಧಿ ಮಾಡಿ, ಪೂಜಾ ಕೋಣೆ ಸೇರಿದಂತೆ ದೇವರ ಫೋಟೋಗಳನ್ನು ಕೂಡಾ ಒರೆಸಿಡಬೇಕು.
- ದೀಪವನ್ನು ಹಚ್ಚಿ ಪೂಜೆ ಮಾಡಬೇಕು.
- ಹಿರಿಯರು ಹೇಳುವಂತೆ ಗ್ರಹಣವಾದ ನಂತರ ಸಮುದ್ರಸ್ನಾನ ಮಾಡಬೇಕು.
- ಸಮುದ್ರ ಪಕ್ಕ ಇಲ್ಲದವರು ನೀರಿಗೆ ಉಪ್ಪು ಹಾಕಿ ಸ್ನಾನ ಮಾಡಬೇಕು.
- ಮನೆಯನ್ನು ಒರೆಸುವಾಗಲೂ ನೀರಿಗೆ ಉಪ್ಪು ಹಾಕಿ ಒರೆಸಬೇಕು. ಇದರಿಂದ ನಕಾರಾತ್ಮಕ ಶಕ್ತಿಗಳು ಸೇರಿದಂತೆ, ಸೂಕ್ಷಾಣು ಜೀವಿಗಳೂ ಕೂಡಾ ನಾಶವಾಗುತ್ತವೆ ಎಂಬ ನಂಬಿಕೆ ಇದೆ.
ಆದ್ದರಿಂದ ಸ್ನೇಹಿತರೆ, ಈ ಗ್ರಹಣವೂ ಪೂರ್ಣ ಪ್ರಮಾಣ ಭಾರತದಲ್ಲಿ ಸಂಭವಿಸದಿದ್ದರೂ, ಗ್ರಹಣ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿದರೆ ಒಳಿತು ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಇನ್ನು ಇಂತಹ ವಿಜ್ಞಾನ ಕಾಲದಲ್ಲಿಯೂ ಗ್ರಹಣ ಅದೂ ಇದೂ ಅನ್ಕೊಂಡು ಸುಮ್ಮನೆ ಯಾಕೆತಲೆ ಹಾಳು ಮಾಡಿಕೊಳ್ಳೋದು ಎನ್ನುವುದು ಅವರವರ ಅಭಿಪ್ರಯಾಕ್ಕೆ ಬಿಟ್ಟಿದ್ದು. ಈ ಗ್ರಹಣ ಕಾಲವು ಯಾರಿಗೂ ಕೇಡನ್ನು ಉಂಟು ಮಾಡದಿರಲಿ ಎಂಬುದೇ ನಮ್ಮ ಆಶಯ. ಧನ್ಯವಾದಗಳು.
No comments:
Post a Comment
If you have any doubts please let me know