ಏರ್ಫೋರ್ಸ್ ಸಾಮಾನ್ಯ ಪರೀಕ್ಷೆ-2 2021 (AFCAT-2 2021) : ಜೂನ್ 01 ರಿಂದ ಅರ್ಜಿ ಸಲ್ಲಿಕೆ ಆರಂಭ
ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. ಸ್ನೇಹಿತರೆ ಭಾರತೀಯ ಸೇನೆಯಂತೆ, ಭಾರತೀಯ ವಾಯುಪಡೆಯೂ ಕೂಡ ಕೇಂದ್ರ ಸರಕಾರ ಬಹು ಮೆಚ್ಚುಗೆಯ ಉದ್ಯೋಗ. ಸೇನೆಗೆ ಸೇರಬೇಕೆಂಬ ಹಂಬಲ ಇರುವ ಪ್ರತಿಯೊಬ್ಬ ಅಭ್ಯರ್ಥಿಗಳೂ ಕೂಡ ಈ ಸದವಕಾಶವನ್ನು ಬಳಸಿಕೊಳ್ಳಬಹುದು.
ಪ್ರಮುಖ ದಿನಾಂಕಗಳು
- ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ : 01-06-2021
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್-2 ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಆಸಕ್ತರು AFCAT-2, 2021 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮೊದಲು ಈ ಮಾಹಿಯಿಗಳನ್ನು ತಿಳಿಯಿರಿ..!!
ನಿಮಗೆ ತಿಳಿದಿರಲಿ :
ಭಾರತೀಯ ವಾಯುಪಡೆಯು AFCAT ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ ನಡೆಸುತ್ತದೆ. ಸಾಮಾನ್ಯವಾಗಿ ಈ ಪತೀಕ್ಷೆಗಳು ಪ್ರತಿವರ್ಷದ ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಯುತ್ತವೆ.
AFCAT-2, 2021 ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಗಳು ಏನಿರಬೇಕು?
- AFCAT ಪರೀಕ್ಷೆ ತೆಗೆದುಕೊಳ್ಳಲು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಶೇಕಡ.50 ಅಂಕಗಳೊಂದಿಗೆ ಪಿಯುಸಿ ಪಾಸ್ ಮಾಡಿರಬೇಕು.
- ಶೇಕಡ.60 ಅಂಕಗಳೊಂದಿಗೆ ಬಿಇ ಅಥವಾ ಬಿ.ಟೆಕ್ ಉತ್ತೀರ್ಣರಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ಮೀರಿರಬಾರದು.
- ಅಭ್ಯರ್ಥಿಗಳನ್ನು ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್‌ನಲ್ಲಿ ಗಳಿಸಿದ ಅಂಕಗಳು, ಆಫೀಸರ್ ಇಂಟೆಲಿಜೆನ್ಸ್ ರೇಟಿಂಗ್ ಟೆಸ್ಟ್ ಮತ್ತು ಪಿಕ್ಚರ್ ಪರ್ಸೆಪ್ಷನ್, ಚರ್ಚೆ, ಸೈಕಾಲಜಿಕಲ್ ಟೆಸ್ಟ್, ಗ್ರೂಪ್ ಟೆಸ್ಟ್, ಸಂದರ್ಶನಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು ?
ಅಪ್ಲಿಕೇಶನ್ ಶುಲ್ಕವಾಗಿ ರೂ.250 ಪಾವತಿಸಬೇಕಾಗುತ್ತದೆ.
ಅಭ್ಯರ್ಥಿಗಳು ಆಗಾಗ ಏರ್‌ಪೋರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಲೇಟೆಸ್ಟ್ ಮಾಹಿತಿಗಳನ್ನು ಚೆಕ್ ಮಾಡುತ್ತಿರಬೇಕು.
No comments:
Post a Comment
If you have any doubts please let me know