18-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು
ಮೇ 18. ಇಂದು ವಿಶ್ವ ಏಡ್ಸ್ ಲಸಿಕೆ ದಿನ
- ಹೆಚ್ಐವಿ ವ್ಯಾಕ್ಸಿನ್ ಜಾಗೃತಿ ದಿನ ಎಂದು ಕರೆಯಲ್ಪಡುವ ವಿಶ್ವ ಏಡ್ಸ್ ಲಸಿಕೆ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ.
- ಎಚ್ಐವಿ ಸೋಂಕು ಮತ್ತು ಏಡ್ಸ್ ರೋಗವನ್ನು ತಡೆಗಟ್ಟಲು ಲಸಿಕೆಯ ಸಂಶೋಧನೆಯ ತುರ್ತು ಅಗತ್ಯವನ್ನು ಪ್ರಚಾರ ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ಹಿನ್ನೆಲೆ ಏನು :
ವಿಶ್ವ ಏಡ್ಸ್ ಲಸಿಕೆ ದಿನದ ಪರಿಕಲ್ಪನೆಯು ಮೋರ್ಗನ್ ಸ್ಟೇಟ್ ಯೂನಿವರ್ಸಿಟಿಯ ಆಗಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಮಾಡಿದ ಮೇ 18, 1997 ಪ್ರಾರಂಭದ ಭಾಷಣದಲ್ಲಿ ಇದೆ. ಏಡ್ಸ ಲಸಿಕೆ ಅಭಿವೃದ್ಧಿಪಡಿಸುವುದು ಮಾತ್ರ ಏಡ್ಸ್ ರೋಗವನ್ನು ತಡೆಗಟ್ಟುವ ಮತ್ತು ಏಡ್ಸ್ ಹೆಚ್ಚಳವಾಗುವ ಅಪಾಯವನ್ನು ಸೀಮಿತಗೊಳಿಸುತ್ತದೆ ಮತ್ತು ಕೊನೆಗೊಳಿಸುತ್ತದೆ ಎಂದು ಬಿಲ್ ಕ್ಲಿಂಟನ್ ಭಾಷಣದಲ್ಲಿ ಹೇಳಿದರು. 1998 ರ ಮೇ 18 ರಂದು ಮೊದಲ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ.
HIV ಎಂದರೇನು :
ಎಚ್ಐವಿ ಎನ್ನುವುದು ಒಂದು ವೈರಸ್. HIV ಎನ್ನುವ ವೈರಸ್ ಮಾನವ ದೇಹದ ರೊಇಗ ನಿರೋಧಕ ಅಂದರೆ ಪ್ರತಿರೋಧಕ ವ್ಯವಸ್ಥೆಯನ್ನು ದ್ವಂಸ ಮಾಡಿಬಿಡುತ್ತದೆ. ಎಚ್ಐವಿ ಎಂದರೆ ಹ್ಯೂಮನ್ ಇಮ್ಯುನೋಡಿಫಿಸಿಯನ್ಸಿ ವೈರಸ್ ಎಂದರ್ಥ. ಹೆಸರೇ ಹೇಳುವಂತೆ ಈ ವೈರಸ್ ಕೇವಲ ಮನುಷ್ಯರ ಮೇಲೆ ಮಾತ್ರ ಪರಿಣಾಮವನ್ನು ಬೀರುತ್ತದೆ.
- HIV ಪೂರ್ಣ ರೂಪ : Human Immunodeficiency Virus
- AIDS ಪೂರ್ಣ ರೂಪ : Acquired Immunodeficiency Syndrome
- ವಿಶ್ವದ ಮೊದಲ ಏಡ್ಸ್ ಪತ್ತೆಯಾದ ದೇಶ : ಕಾಂಗೋ
- ಭಾರತದಲ್ಲಿ ಮೊದಲು ಏಡ್ಸ್ ಪತ್ತೆಯಾದದ್ದು : 1986 ರಲ್ಲಿ ಚೆನ್ನೈ ನಲ್ಲಿ
2020 ನೇ ಸಾಲಿನ ವಿಶ್ವ ಸುಂದರಿಯಾಗಿ ಆಂಡ್ರಿಯಾ ಮೆಜಾ
- 2020 ನೇ ಸಾಲಿನ 69 ನೇ ವಿಶ್ವಸುಂದರಿ ಕಾರ್ಯಕ್ರಮಕ್ಕೆ ಸೋಮವಾರ ತೆರೆಬಿದ್ದಿದೆ.
- ಮೆಕ್ಸಿಕೊದ ಆಂಡ್ರಿಯಾ ಮೆಜಾ 69 ನೇ ಮಿಸ್ ಯೂನಿವರ್ಸ್ ಪಟ್ಟ ಪಡೆದಿದ್ದಾರೆ.
- ಈ ಸ್ಪರ್ಧೆ ಮೇ 16, 2021 ರಂದು ನಡೆಯಿತು.
2020 ನೇ ಸಾಲಿನ ವಿಶ್ವ ಸುಂದರಿ ರನ್ನರ್ ಅಪ್ ಪಟ್ಟಿ ಇಲ್ಲಿದೆ
1) ಬ್ರೆಜಿಲ್ನ ಜೂಲಿಯಾ ಗಾಮಾ ಮೊದಲ ರನ್ನರ್ ಅಪ್
2) ಪೆರುವಿನ ಜೆನಿಕ್ ಮಸಿಟಾ ಎರಡನೆಯ ರನ್ನರ್ ಅಪ್.
3) ಡೊಮಿನಿಕನ್ ರಿಪಬ್ಲಿಕ್ ನ ಕಿಂಬರ್ಲಿ ಪರೆಝ್ ಮೂರನೇ ರನ್ನರ್ ಅಪ್.
4) ಭಾರತದ ಆ್ಯಡ್ಲೆನ್ ಕ್ಯಾಸ್ಟೆಲಿನೋ ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.
ಉಡುಪಿ ಮೂಲದ ಆ್ಯಡ್ಲೆನ್ ಕ್ಯಾಸ್ಟೆಲಿನೋ ನಾಲ್ಕನೇ ರನ್ನರ್ ಅಪ್ :
ಮಾಡೆಲಿಂಗ್ ಕ್ಷೇತ್ರದಲ್ಲಿ ಕರ್ನಾಟಕದ ಸ್ಪರ್ಧಿಗಳೂ ಕೂಡ ಮಿಂಚಿದ್ದಾರೆ. ಈಗಾಗಲೇ ಹಲವಾರು ಕನ್ನಡತಿಯರು ಹೊರದೇಶಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸಿದ್ದಾರೆ ಉದಾಹರಣೆಗೆ ಐಶ್ವರ್ಯ ರೈ ಶ್ರೀನಿಧಿ ಶೆಟ್ಟಿ ಹೀಗೆ ಅನೇಕರು ವಿಶ್ವಸುಂದರಿ ಸ್ಪರ್ಧೆಗೆ ಸ್ಪರ್ಧಿಸಿ, ಭಾರತದ ಹಿರಿಮೆಯನ್ನು ಎತ್ತರಿಸಿದವರಿದ್ದಾರೆ.
2020 ರ 69 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕರ್ನಾಟಕದ ಅದರಲ್ಲೂ ಉಡುಪಿಮೂಲದ ಸುಂದರಿಯೊಬ್ಬರು ಭಾಗವಹಿಸಿ ನಾಲ್ಕನೆಯ ಸ್ಥಾನ ಪಡೆದಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವ ವಿಷಯ. 2020 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಾಲ್ಕನೆಯ ಸ್ಥಾನ ಪಡೆದ ಭಾರತದ ಸ್ಪರ್ಧಿ ಉಡುಪಿ ಮೂಲದ ಆ್ಯಡ್ಲೆನ್ ಕ್ಯಾಸ್ಟೆಲಿನೋ. ಇವರು ಹುಟ್ಟಿದ್ದು ಕುವೈತ್ ನಲ್ಲಿ. ಬೆಳೆದಿದ್ದು ಮುಂಬೈನಲ್ಲಾದರೂ ಇವರ ಪೋಷಕರು ಮೂಲತಃ ಉಡುಪಿಯ ಉದ್ಯಾವರ. ಇದ್ಯ ಆ್ಯಡ್ಲೆನ್ ಕುಟುಂಬ ಮುಂಬೈನಲ್ಲಿ ನೆಲೆಸಿದೆ.
ವಿಶ್ವದ ನಾನಾ ದೇಶಗಳಿಂದ ಸುಮಾರು 74 ಕ್ಕೂ ಅಧಿಕ ರೂಪದರ್ಶಿಯರು ಭಾಗವಹಿಸಿದ ಈ ಸಲದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ, ಆ್ಯಡ್ಲೆನ್ ನಾಲ್ಕನೇ ಸ್ಥಾನ ಪಡೆದಿದ್ದು ಭಾರತಕ್ಕೆ ಸಂತಸದ ವಿಚಾರ ಎಂದೇ ಹೇಳಬಹುದು.
ಆ್ಯಂಡ್ರಿಯಾ ಮೆಝಾ ಕುರಿತು :
- ಆ್ಯಂಡ್ರಿಯಾ ಮೆಕ್ಸಿಕೋ ಮೂಲದ ರೂಪದರ್ಶಿ.
- 26 ವಯಸ್ಸಿನ ಆ್ಯಂಡ್ರಿಯಾ 2020 ನೇ ಸಾಲಿನ ವಿಶ್ವ ಸುಂದರಿ ಪಟ್ಟ ಪಡೆದಿದ್ದಾರೆ.
- ವಿಶ್ವ ಸುಂದರಿ ಪಟ್ಟ ಪಡೆದ 3 ನೇ ಮೆಕ್ಸಿಕನ್ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದು, ಆ್ಯಂಡ್ರಿಯಾ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.
- ಇದು 69 ನೇ ವಿಶ್ವ ಸುಂದರಿ ಸ್ಪರ್ಧೆ.
- 2019 ನೇ ಸಾಲಿನ ವಿಶ್ವ ಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು ವಿಶ್ವ ಸುಂದರಿ ಕಿರೀಟವನ್ನು ಆ್ಯಂಡ್ರಿಯಾ ವರಿಗೆ ತೊಡಿಸಿದರು.
- 2019 ನೇ ಸಾಲಿನ ವಿಶ್ವ ಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು ವಿಶ್ವ ಸುಂದರಿ ಪಟ್ಟ ಪಡೆದ ಮೊದಲ ಕಪ್ಪು ಮಹಿಳೆ ಎಂಬ ಕೀರ್ತಿಗೆ ಭಾಜರಾಗಿದ್ದರು.
ನಿಮಗೆ ನೆನಪಿರಲಿ :
ಕೋವಿಡ್ ಹಿನ್ನೆಲೆಯಲ್ಲಿ 2020 ನೇ ಸಾಲಿನ ಸ್ಪರ್ಧೆಯನ್ನು 2021ರ ಮೇ ಗೆ ಮುಂದೂಡಲಾಗಿತ್ತು.ನಿಮಗೆ ಗೊತ್ತೇ :-
ವಿಶ್ವ ಸುಂದರಿ ಸ್ಪರ್ಧೆಯನ್ನು ನಡೆಸುವವರು ಯಾರು:-
- ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಅಮೇರಿಕ ಮೂಲದ ಮಿಸ್ ಯೂನಿವರ್ಸ್ ಸಂಸ್ಥೆ ಪ್ರತಿ ವರ್ಷ ನಡೆಸುತ್ತದೆ.
- ಮಿಸ್ ಯೂನಿವರ್ಸ್ ಸಂಸ್ಥೆ ಸ್ಥಾಪನೆಯಾಗಿದ್ದು : 1952 ರಲ್ಲಿ
- ಪ್ರಧಾನ ಕಚೇರಿ : ಅಮೇರಿಕದ ನ್ಯೂಯಾರ್ಕ್.
- ಇದು ಮಿಸ್ ವರ್ಲ್ಡ್, ಮಿಸ್ ಇಂಟರ್ನ್ಯಾಷನಲ್ ಹಾಗೂ ಮಿಸ್ ಅರ್ಥ್ ಸೇರಿದಂತೆ ವಿಶ್ವದ ಬಹುದೊಡ್ಡ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ.
ವಿಶ್ವ ಸುಂದರಿ ಸ್ಪರ್ಧೆಯ ಕುರಿತಾಗಿ ಎಲ್ಲರೂ ತಿಳಿದಿರಲೇ ಬೇಕಾದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುವ ಅಂಶಗಳು ಇವು :
- ವಿಶ್ವದ ಮೊದಲ ವಿಶ್ವ ಸುಂದರಿ : ಫಿನ್ಲೆಂಡ್‌ನ ಅರ್ಮಿ ಹೆಲೆನಾ ಕೂಸೆಲಾ (1952)
- ವಿಶ್ವ ಸುಂದರಿ ಪಟ್ಟ ಪಡೆದ ಮೊದಲ ಭಾರತೀಯ ಮಹಿಳೆ : ಸುಶ್ಮಿತಾ ಸೇನ್ (1994)
ಮತ್ತೊಮ್ಮೆ ಮಾಲಿ ದೇಶದ ಪ್ರಧಾನಿಯಾಗಿ ಮಾಕ್ಟರ್ ಒವಾನೆ
- ಇತ್ತೀಚೆಗೆ ಅಂದರೆ 14 ಮೇ 2021 ರಂದು ಮಾಲಿ ದೇಶದ ಪ್ರಧಾನಿ ಹುದ್ದೆಗೆ ಮಾಕ್ಟರ್ ಒವಾನೆ ರಾಜಿನಾಮೆ ಸಲ್ಲಿಸಿದ್ದರು.
- ಈಗ ಮಾಲಿ ದೇಶದ ಅಧ್ಯಕ್ಷರಾದ ಬಾಹ್ ಎನ್ಡಾವ್ ಮತ್ತೊಮ್ಮೆ ಮಾಲಿಯ ಪ್ರಧಾನಿಯನ್ನಾಗಿ ಮಾಕ್ಟರ್ ಒವಾನೆ ಅವರನ್ನೇ ಮರು ನೇಮಕ ಮಾಡಿದ್ದಾರೆ.
- ಇದರಿಂದಾಗಿ ಮಾಕ್ಟರ್ ಒವಾನೆ ಹೊಸ ಕ್ಯಾಬಿನೆಟ್ ರಚಿಸುವ ಉಸ್ತುವಾರಿ ಹೊಂದಿದ್ದಾರೆ.
- 2020 ರ ಆಗಸ್ಟ್‌ನಲ್ಲಿ ಮಾಲಿಯಲ್ಲಿನ ಮಿಲಿಟರಿ ದಂಗೆಯು ಶಮನವಾದ ನಂತರ ಅಂದಿನ ಮಾಲಿಯ ಅಧ್ಯಕ್ಷ ಇಬ್ರಾಹಿಂ ಬಾಬಾಕರ್ ಕೀಟಾ ಅವರು ಪದಚ್ಯುತಗೊಂಡ ನಂತರ ಮಾಕ್ಟೆರ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಮಾಕ್ಟರ್ ಒವಾನೆ ಕುರಿತು ಹೆಚ್ಚಿನ ಮಾಹಿತಿ
- ಇವರು 1995 ರಿಂದ 2002 ರ ವರೆಗೆ ವಿಶ್ವಸಂಸ್ಥೆಯಲ್ಲಿ ಮಾಲಿ ದೇಶದ ಖಾಯಂ ಪ್ರತಿನಿಧಿಯಾಗಿದ್ದರು.
- ಅಲ್ಲದೇ ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯ (ECOWAS) Economic Community of West African States) ದ ರಾಜತಾಂತ್ರಿಕ ಸಲಹೆಗಾಗರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಮಾಲಿ ದೇಶದ ಕುರಿತಾದ ಹೆಚ್ಚಿನ ಮಾಹಿತಿ
- ಅಧ್ಯಕ್ಷ : ಬಹ ಎನ್ಡಾವ್
- ಪ್ರಧಾನ ಮಂತ್ರಿ : ಮಾಕ್ಟೆರ್ ಒವಾನೆ
- ರಾಜಧಾನಿ : ಬಮಾಕೊ
- ಕರೆನ್ಸಿ : ಪಶ್ಚಿಮ ಆಫ್ರಿಕಾದ ಸಿಎಫ್ಎ ಫ್ರಾಂಕ್
ಇಟಲಿಯನ್ ಓಪನ್ ಕಿರೀಟ ವಿಜೇತ : ರಾಫೆಲ್ ನಡಾಲ್
- ಮಣ್ಣಿನ ಅಂಕಣದ ರಾಜ (ಕಿಂಗ್ ಆಫ್ ಕ್ಲೇ) ಖ್ಯಾತಿಯ ರಾಫೆಲ್ ನಡಾಲ್ 10 ನೇಬಾರಿ ಇಟಾಲಿಯನ್ ಓಪನ್ ಚಾಂಪಿಯನ್ ಎನಿಸಿಕೊಂಡಿದ್ದಾರೆ.
- ಮೇ 16 ರಂದು ರೋಮ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ನ ಬಲಿಷ್ಠ ರಾಫೆಲ್ ನಡಾಲ್ ಅವರು ಸರ್ಬಿಯಾದ ಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಸುಮಾರು 2 ಗಂಟೆ 49 ನಿಮಿಷಗಳ ಕಾದಾಟದ ಬಳಿಕ 7-5, 1-6, 6-3 ಅಂಕಗಳ ಅಂತರದಿಂದ ಸೋಲಿಸಿದರು.
- ನಡಾಲ್ 10 ನೇ ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡರು.
- ಟೆನಿಸ್ ವೃತ್ತಿಜೀವನದಲ್ಲಿ ಇದು ನಡಾಲ್ ಮತ್ತು ಜೊಕೊವಿಕ್ ನಡುವಿನ 57 ನೇ ಪಂದ್ಯವಾಗಿತ್ತು.
- 2021 ರಲ್ಲಿ ನಡೆದ ಈ ಪಂದ್ಯ 78 ನೇ ಆವೃತ್ತಿಯದು.
- ಇನ್ನು ಮಹಿಳಾ ವಿಭಾಗದಲ್ಲಿ ಪೋಲೆಂಡಿನ ಇಗಾ ಸ್ವಿಯೆಟೆಕ್ ಅವರು ಝೆಕ್ ರಿಪಬ್ಲಿಕ್ ನ ಕ್ಯಾರೊಲಿನಾ ಲಿಸ್ಕೋವಾ ಅವರನ್ನು ಸೋಲಿಸಿ ಇಟಾಲಿಯನ್ ಮಹಿಳಾ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಂಡರು.
- ಇಟಾಲಿಯನ್ ಓಪನ್ 2021 ರ ಪಂದ್ಯವನ್ನು ರೋಮ್ ಮಾಸ್ಟರ್ಸ್ ಅಥವಾ ಇಂಟರ್ನ್ಯಾಷನಲ್ ಬಿಎನ್ಎಲ್ ಡಿ ಇಟಾಲಿಯಾ ಎಂದೂ ಕರೆಯುತ್ತಾರೆ.
- ಈ ಪಂದ್ಯವು ರೋಮ್ ನ ಫೋರೊ ಇಟ್ಯಾಲಿಕೋ ಸ್ಥಳದಲ್ಲಿ ಮೇ 8 ರಿಂದ ಮೇ 16, 2021 ರ ವರೆಗೆ ನಡೆದವು.
- ನಡಾಲ್ ಅವರು ಇಟಾಲಿಯನ್ ಓಪನ್ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಮೊದಲು ಪಡೆದಿದ್ದು : 2005 ರಲ್ಲಿ.
ಇಟಾಲಿಯನ್ ಓಪನ್ 2021 ರಲ್ಲಿನ ವಿಜೇತರ ಪಟ್ಟಿ ಇಲ್ಲಿದೆ
1) ಪುರುಷರ ಸಿಂಗಲ್ಸ್ : ಸ್ಪೇನ್ ನ ರಾಫೆಲ್ ನಡಾಲ್ (ಸರ್ಬಿಯಾದ ನೊವಾಕ್ ಜೊಕೊವಿಕ್ ಸೋಲು)
2) ಮಹಿಳೆಯರ ಸಿಂಗಲ್ಸ್ : ಪೋಲೆಂಡಿನ ಇಗಾ ಸ್ವಿಯೆಟೆಕ್ (ಜೆಕ್ ಗಣರಾಜ್ಯದ ಕ್ಯಾರೋಲಿನಾ ಲಿಸ್ಕೊವಾ ಸೋಲು)
3) ಪುರುಷರ ಡಬಲ್ಸ್ : ಕ್ರೊಯೇಷಿಯಾದ ನಿಕೊಲಾ ಮೆಕ್ಟಿಕ್ & ಮೇಟ್ ಪ್ಯಾವಿಕ್ (ಅಮೇರಿಕದ ರಾಜೀವ್ ರಾಮ್ & ಇಂಗ್ಲೆಂಡಿನ ಜೋ ಸಾಲಿಸ್ಬರಿ ಸೋಲು)
4) ಮಹಿಳೆಯರ ಡಬಲ್ಸ್ : ಕೆನಡಾದ ಶರೋನ್ ಫಿಚ್ಮನ್ & ಮೆಕ್ಸಿಕೊದ ಗಿಯುಲಿಯಾನಾ ಓಲ್ಮೋಸ್ (ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲೆಡೆನೋವಿಕ್ ಮತ್ತು ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೋಸೋವಾ ಸೋಲು)
ಇಂಗ್ಲೆಂಡಿನ ಹ್ಯಾರಿ ಗರ್ನಿ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ
- ಇಂಗ್ಲೆಂಡ್ ನ ವೇಗದ ಬೌಲರ್ ಎಂದೇ ಖ್ಯಾತನಾಗಿದ್ದ ಹ್ಯಾರಿ ಫ್ರೆಡರಿಕ್ ಗರ್ನಿ ತಮ್ಮ 34ನೇ ವಯಸ್ಸಿನಲ್ಲಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
- 10 ಏಕದಿನ & ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ.
- 10 ಏಕದಿನ ಪಂದ್ಯಗಳಲ್ಲಿ 11 ವಿಕೆಟ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.
ಖ್ಯಾತ ಗಣಿತಜ್ಞ ಪ್ರೊ. ಎಂ. ಎಸ್. ನರಸಿಂಹನ್ ನಿಧನ
- ಪದ್ಮ ಭೂಷಣ ಪ್ರೊ. ಮುದುಂಬೈ ಶೇಶಾಚಲು ನರಸಿಂಹನ್ ಅವರು ಇತ್ತೀಚೆಗೆ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.
- ಬ್ರಿಟಿಷ್ ಭಾರತದ ಮದ್ರಾಸು ಪ್ರಾಂತ್ಯದ ಥಂದರೈನಲ್ಲಿ (ಈಗ ತಮಿಳುನಾಡಿನಲ್ಲಿದೆ) ದಿನಾಂಕ 07 ಜೂನ್ 1932 ರಂದು ಜನಿಸಿದ್ದರು.
- ಕಿಂಗ್ ಫೈಸಲ್ ಅಂತಾರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಎಂಬ ಹಿರಿಮೆ ನರಸಿಂಹನ್ ಅವರದ್ದಾಗಿತ್ತು.
ಎಮ್. ಎಸ್. ನರಸಿಂಹನ್ ಕುರಿತಾದ ಹೆಚ್ಚಿನ ಮಾಹಿತಿ
- ಜನನ : 07 ಜೂನ್ 1932
- ಸ್ಥಳ : ಮದ್ರಾಸ್ ಪ್ರಾಂತ್ಯದ ಥಂದರೈ
- ವೃತ್ತಿ : ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆ.
- ಇಟಲಿಯ ಟ್ರೈಸ್ಟೆಯಲ್ಲಿರುವ ಅಂತಾರಾಷ್ಟ್ರೀಯ ಸೈದ್ಧಾಂತಿಕ ಭೌತಶಾಸ್ತ್ರ ಕೇಂದ್ರದಲ್ಲಿ ಗಣಿತ ಸಂಶೋಧನಾ ಸಮೂಹದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಎಮ್. ಎಸ್. ನರಸಿಂಹನ್ ರವರಿಗೆ ಸಂದ ಪ್ರಶಸ್ತಿಗಳು
1) ಭಟ್ನಾಗರ್ ಪ್ರಶಸ್ತಿ (ಗಣಿತ ವಿಜ್ಞಾನ) - 19754) ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ - 1990
5) ಫ್ರಾನ್ಸ್ ಅಧ್ಯಕ್ಷರಿಂದ "ಚೆವಲಿಯರ್ ಡೆ ಎಲ್ ಆರ್ಡ್ರೆ ಡು ಮೆರಿಟೆ" ಪ್ರಶಸ್ತಿ
6) ಸಿ. ವಿ. ರಾಮಾನುಜನ್ ಜನ್ಮ ಶತಮಾನೋತ್ಸವ ನೆನಪಿಗಾಗಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ಪ್ರಶಸ್ತಿ - 1994
7) ಕಿಂಗ್ ಫೈಸಲ್ ಇಂಟರ್ನ್ಯಾಷನಲ್ ಪ್ರಶಸ್ತಿ - 2006
"International Invincible Gold Medal 2021" ಪ್ರಶಸ್ತಿ ಪಡೆದ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್
- ಸಾಮಾಜಿಕ ಮತ್ತು ಶ್ರೇಷ್ಟ ಸಾರದವಜನಿಕ ಬದುಕು ಮತ್ತು ತಮ್ಮ ಅಸಾಧಾರಣ ಬದ್ಧತೆ, ಮಾನೀಯತೆ ಕುರಿತ ಬರಹಗಳ ಮೂಲಕ ಗುರುತಿಸಲ್ಪಟ್ಟ ಮತ್ತು ಮಾನವ ಜನಾಂಗಕ್ಕೆ ಸಲ್ಲಿಸಿದ ವಿಶಿಷ್ಟ ಹಾಗೂ ಅತ್ಯುತ್ತಮ ಸೇವೆಗಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಮಹರ್ಷಿ ಸಂಸ್ಥೆಯು "International Invincible Gold Medal 2021 ಪ್ರಶಸ್ತಿ" ನೀಡಿ ಗೌರವಿಸಿದೆ.
- ಜುಲೈ 24, 2021 ರಂದು ನಡೆಯುವ ಗುರು ಪೂರ್ಣಿಮಾ ಸಮಯದಲ್ಲಿ ಪ್ರಶಸ್ತಿಯನ್ನು ಪೋಖ್ರಿಯಾಲ್ ಅವರಿಗೆ ನೀಡಲಾಗುತ್ತದೆ.
- ಮಹರ್ಷಿ ಸಂಘಟನೆಯ ಅಧ್ಯಕ್ಷರಾದ ಡಾ. ಟೋನಿ ನಾಡರ್ ಅವರ ನೇತೃತ್ವದಲ ಸಮಿತಿಯು ಪೋಖ್ರಿಯಾಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
- ಪೋಖ್ರಿಯಾಲ್ ಅವರು ಉತ್ತಾರಖಂಡದ ಹರದ್ವಾರ ಲೋಕಸಭಾಕ್ಷೇತ್ರದಿಂದ ಆಯ್ಕೆಯಾದ ಲೋಕ ಸಭಾ ಸದಸ್ಯರು.
- ಭಾರತ ಸರ್ಕಾರ ರಚಿಸಿದ ಅತ್ಯಂತ ನೂತನ, ಸೃಜನಶೀಲ, ವೈಜ್ಞಾನಿಕ ಹಾಗೂ ಅಂತರ್ಗತ ರೂಪದ "ಹೊಸ ಶಿಕ್ಷಣ ನೀತಿ" ಯನ್ನು ಪೋಖ್ರಿಯಾಲ್ ಪರಿಚಯಸಿದ್ದಾರೆ.
ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವ ದರ್ಜೆಯ ಚಳಿಗಾಲದ ಕ್ರೀಡಾ ಅಕಾಡೆಮಿಯನ್ನು ಸ್ಥಾಪನೆ
- ಜಮ್ಮು ಮತ್ತು ಕಾಶ್ಮೀರದಲ್ಲಿ 'ಖೇಲೋ ಇಂಡಿಯಾ' ಮಿಷನ್ ಅಡಿಯಲ್ಲಿ ರಾಜ್ಯಸಭೆಯು ಗುಲ್ಮಾರ್ಗ್ನಲ್ಲಿ ವಿಶ್ವಮಟ್ಟದ ಚಳಿಗಾಲದ ಕ್ರೀಡಾ ಅಕಾಡೆಮಿ ಮತ್ತು 100 ಸಣ್ಣ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ.
- ಶ್ರೀನಗರ ಮತ್ತು ಜಮ್ಮುವಿನಲ್ಲಿ ಎರಡು 'ಖೇಲೋ ಇಂಡಿಯಾ' ಶ್ರೇಷ್ಠತೆಯ ಕೇಂದ್ರಗಳನ್ನು ವಿವಿಧ ವಿಭಾಗಗಳೊಂದಿಗೆ ಸ್ಥಾಪಿಸಲಾಗುವುದು.
ಜಮ್ಮು ಮತ್ತು ಕಾಶ್ಮೀರದ ಕುರಿತು
- ರಾಜಧಾನಿ: ಶ್ರೀನಗರ (ಬೇಸಿಗೆ), ಜಮ್ಮು (ಚಳಿಗಾಲ)
- ಲೆಫ್ಟಿನೆಂಟ್ ಗವರ್ನರ್: ಮನೋಜ್ ಸಿನ್ಹಾ
- ರಾಷ್ಟ್ರೀಯ ಉದ್ಯಾನಗಳು: ಹೆಮಿಸ್ ರಾಷ್ಟ್ರೀಯ ಉದ್ಯಾನ, ನಗರ ಅರಣ್ಯ (ಸಲೀಮ್ ಅಲಿ) ರಾಷ್ಟ್ರೀಯ ಉದ್ಯಾನ, ಡಚಿಗಮ್ ರಾಷ್ಟ್ರೀಯ ಉದ್ಯಾನ, ಕಿಶ್ತ್ವಾರ್ ರಾಷ್ಟ್ರೀಯ ಉದ್ಯಾನ
- ವನ್ಯಜೀವಿ ಅಭಯಾರಣ್ಯಗಳು: ಚಾಂಗ್ಥಾಂಗ್ ಶೀತ ಮರುಭೂಮಿ ವನ್ಯಜೀವಿ ಅಭಯಾರಣ್ಯ, ಗುಲ್ಮಾರ್ಗ್ ವನ್ಯಜೀವಿ ಅಭಯಾರಣ್ಯ, ಜಸ್ರೋಟಾ ವನ್ಯಜೀವಿ ಅಭಯಾರಣ್ಯ, ಬಾಲ್ಟಾಲ್-ತಾಜ್ವಾಸ್ ವನ್ಯಜೀವಿ ಅಭಯಾರಣ್ಯ, ಕರಕೋರಂ (ನುಬ್ರಾ ಶ್ಯೋಕ್) ವನ್ಯಜೀವಿ ಅಭಯಾರಣ್ಯ
- ಸರೋವರಗಳು: ಮನ್ಸಾರ್ ಸರೋವರ, ನಾಗಿನ್ ಸರೋವರ, ವುಲರ್ ಸರೋವರ, ಸುರಿನ್ಸರ್ ಸರೋವರ, ದಾಲ್ ಸರೋವರ
ಭಾರತದ ಕರಕುಶಲ ಮತ್ತು ಕೈಮಗ್ಗ ರಫ್ತು ನಿಗಮ ಲಿಮಿಟೆಡ್ ಅನ್ನು ಮುಚ್ಚಲು ಕೇಂದ್ರ ಸಚಿವ ಸಂಪುಟ ಅನುಮೋದನೆ
- ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು, ನಷ್ಟದಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಗಳು ಮತ್ತು ಕೈಮಗ್ಗ ರಫ್ತು ನಿಗಮ ಆಫ್ ಇಂಡಿಯಾ ಲಿಮಿಟೆಡ್ (ಎಚ್‌ಹೆಚ್‌ಇಸಿ) ನ್ನು ಮುಚ್ಚಲು ಅನುಮೋದನೆ ನೀಡಿದೆ . ನಿಗಮವು 2015-16 ರ ಆರ್ಥಿಕ ವರ್ಷದಿಂದ ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿದೆ ಮತ್ತು ಅದರ ನಿರ್ವಹಣಾ ವೆಚ್ಚವನ್ನೂ ಸಹ ಪೂರೈಸಲು ಸಾಕಷ್ಟು ಆದಾಯವನ್ನು ಗಳಿಸುತ್ತಿಲ್ಲ ಆದ್ದರಿಂದ ಈ ನಿರ್ಣಯಕ್ಕೆ ಬರಲಾಗಿದೆ.
- ಪ್ರಸ್ತುತ ಕೇಂದ್ರ ಜವಳಿ ಸಚಿವ ಸ್ಮೃತಿ ಇರಾನಿ .
ಇಂದು ಮೇ 17, ವಿಶ್ವ ದೂರಸಂವಹನ ದಿನ
- ಟೆಲಿಕಮ್ಯುನಿಕೇಶನ್ ಅಂದರೆ ದೂರಸಂವಹನ ನಮ್ಮ ನಿತ್ಯ ಜೀವನದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ಹೊಂದಿದೆ.
- ವಿಶ್ವ ದೂರಸಂವಹನ ದಿನದ ಆಚರಣೆಯ ಪ್ರಮುಖ ಉದ್ದೇಶವೆಂದರೆ ಸಂವಹನದ ಪ್ರಾಮುಖ್ಯತೆಯ ಬಗ್ಗೆ ವಿಶೇಷವಾಗಿ ಪ್ರಚುರಪಡಿಸುವುದು ಮತ್ತು ವಿಶ್ವದಾದ್ಯಂತ ಮಾಹಿತಿಗಳು ಹೇಗೆ ವಿನಿಮಯವಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸುವುದು ಆಗಿದೆ.
- ಇಂಟರ್ನ್ಯಾಷನಲ್ ಟೆಲಿಗ್ರಾಫ್ ಯೂನಿಯನ್ (ಐಟಿಯು) ಸಂಸ್ಥೆಯು ವಿಶ್ವ ದೂರಸಂವಹನ ದಿನ ದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ.
- ಇಂಟರ್ನ್ಯಾಷನಲ್ ಟೆಲಿಗ್ರಾಫ್ ಯೂನಿಯನ್ ಸಂಸ್ಥೆಯನ್ನು 1865 ರಲ್ಲಿಯೇ ರಚಿಸಲಾಗಿತ್ತು.
- 1876 ರಲ್ಲಿ ದೂರವಾಣಿಯನ್ನು ಆವಿಷ್ಕಾರ ಮಾಡಲಾಯಿತು.
- 1957 ರಲ್ಲಿ ಮೊದಲ ಉಪಗ್ರಹವನ್ನು ಪ್ರಾರಂಭಿಸಲಾಯಿತು.
ದೂರವಾಣಿಯ ಕುರಿತು :
- ಸಂಶೋಧಕ : ಗ್ರಹಾಂ ಬೆಲ್
- ಗ್ರಹಾಂಬೆಲ್ ಸ್ಕಾಟ್ಲೆಂಡ್ ನ ವಿಜ್ಞಾನಿ.
- 10 ಮಾರ್ಚ್ 1876 ರಂದು ದೂರವಾಣಿ ಸಂಶೋಧಿಸಿದರು.
ಇಂದು ಮೇ 17 ಆದಿ ಶಂಕರಾಚಾರ್ಯರ ಜಯಂತಿ
- ಅದ್ವೈತ ಸಿದ್ಧಾಂತವನ್ನು ಮರು ವ್ಯಾಖ್ಯಾನಿಸಿದ ಆದಿ ಗುರುವಾದ ಶಂಕರಾಚಾರ್ಯರ ಜಯಂತಿ ಇಂದು.
- ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು.
- ಆದಿಶಂಕರರು ಭಗವದ್ಗೀತೆ ಉಪನಿಷತ್ ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯ ಎಂದು ಖ್ಯಾತರಾಗಿದ್ದಾರೆ.
- ಜನನ - 788
- ಸ್ಥಳ : ಕೇರಳದ ಕಾಲಡಿ
- ತಂದೆ : ಶಿವಗುರು
- ತಾಯಿ : ಆರ್ಯಾಂಬ
- ಗುರುಗಳು : ಗೋವಿಂದಭಗವತ್ಪಾದ
ಭಾರತದ ನಾಲ್ಕು ದಿಕ್ಕಗಳಲ್ಲಿಯೂ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು :
ಶಂಕರರ ಅದ್ವೈತ ಸಿದ್ಧಾಂತಗಳು :
ಅದ್ವೈತ ತತ್ವ :
ಟ್ವಿಟ್ಟರ್ ನ ಬ್ಲ್ಯೂ ಪೇಯ್ಡ್ ವರ್ಷನ್
- ಟ್ವಿಟರ್ ಜಾಗತಿಕವಾಗಿ ಗುರುತಿಸಿಕೊಂಡ ಸಾಮಾಜಿಕ ಜಾಲತಾಣ ಮಾಧ್ಯಮವೆಂದೇ ಹೇಳಬಹುದು.
- ಚಂದಾದರಿಕೆ ಮಾದರಿಯ ಟ್ವಿಟರ್ ಅನ್ನು ಜಗತ್ತಿಗೆ ಪರಿಚಯಿಸಲು ಟ್ವಿಟರ್ ಸಿದ್ಧತೆ ನಡೆಸಿದೆ.
- ಟ್ವಿಟರ್ ಬಳಕದಾರರು ತಿಂಗಳಿಗೆ 220 ರೂ (2.99) ಡಾಲರ್) ಚಂದಾದಾರಿಕೆ ನೀಡುವ ಮೂಲಕ ಟ್ವಿಟರ್ ನ ಬ್ಲ್ಯೂ ವರ್ಷನ್ ಬಳಸಬಹುದೆಂದು ತಿಳಿಸಿದೆ.
- ಆ್ಯಪ್ ಸಂಶೋಧಕ ಜಾನೆ ಮನ್ ಚುನ್ ವಾಂಗ್ ಈ ಹೊಸ ಸೇವೆಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
- ಈ ಹೊಸ ಪೇಯ್ಡ್ ವರ್ಷನ್ ನಲ್ಲಿ ಟ್ವೀಟ್ ಗಳಿಗೆ ಅನ್ ಡು ಸೆಂಡ್, ಟೈಮರ್ ಹಾಗೂ ಟ್ವೀಟ್ ಗಳನ್ನು ಸಂಗ್ರಹಿಸುವ ಬುಕ್ ಮಾರ್ಕ್ ಗಳು ಸೇರಿದಂತೆ ಹಲವು ಪೀಚರ್ ಗಳನ್ನು ಸೇರಿಸಲಾಗಿದೆ.
DRDO ಅಭಿವೃದ್ಧಿಪಡಿಸಿದ 2-DG ಕೊರೋನಾ ಲಸಿಕೆ ಇಂದಿನಿಂದ ಲಭ್ಯ
ಎಷ್ಟು ಡೋಸ್ ಮತ್ತು ಹೇಗೆ ನೀಡಲಾಗುತ್ತದೆ :
ಹೇಗೆ ಕೆಲಸ ನಿರ್ವಹಿಸುತ್ತದೆ :
ಮೇ 16. ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನ
- ರಾಷ್ಟ್ರೀಯತೆ ಲಿಂಗ ಭಾಷೆ ಅಥವಾ ಧರ್ಮವನ್ನು ಲೆಕ್ಕಿಸದೆ ಸಾಮರಸ್ಯದ ಜೀವನದಲ್ಲಿ ಶಾಂತಿಯನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
- 2017ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಧಿಕೃತವಾಗಿ ಈ ದಿನವನ್ನು 2018 ರಿಂದ ಆಚರಿಸಲಾಗುತ್ತದೆ.
- ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನದ ಆಚರಣೆ ಎಲ್ಲ ಜನಾಂಗ ಧರ್ಮ ಹಾಗೂ ಪ್ರಾಂತೀಯ ಜನರು ಶಾಂತಿಯನ್ನು ಬಯಸುವುದನ್ನು ಪ್ರತಿನಿಧಿಸುತ್ತದೆ.
ಮೇ. 16 ರಾಷ್ಟ್ರೀಯ ಡೆಂಗಿ ಜಾಗೃತಿ ದಿನ
- ಭಾರತವು ಸದ್ಯ ಕೋವಿಡ್ ನಿಂದ ತತ್ತರಿಸಿದೆ. ದೇಶದ ವೈದ್ಯ ಸಮೂಹ ಮತ್ತು ನಾಗರಿಕರೆಲ್ಲರೂ ಕೊರೋನ ರೋಗದ ಬಗ್ಗೆಯೇ ಚಿಂತಿಸುವುದನ್ನು ಕಾಣುತ್ತಿದ್ದೇವೆ.
- ಕೋವಿಡ್ ಬರುವುದಕ್ಕೂ ಮೊದಲು ಹಾಗೂ ಇನ್ನೂ ದೇಶದಲ್ಲಿ ಉಳಿದಿರುವ ಕೆಲವು ಮಾರಕ ಕಾಯಿಲೆಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
- ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲ ಕಡೆಯೂ ಡೆಂಗಿ ಜ್ವರದ ಹಾವಳಿ ಸಾಮಾನ್ಯವಾಗಿಯೇ ಇರುತ್ತದೆ.
- ಡೆಂಗು ಜ್ವರದ ಸಾಮಾನ್ಯ ಲಕ್ಷಣಗಳು : ತಲೆನೋವು, ಮೈಕೈ ನೋವು, ಸುಸ್ತು ಸಾಮಾನ್ಯವಾಗಿ ಕಂಡು ಬರುತ್ತವೆ.
- ಡೆಂಗಿ ಎಂಬ ವೈರಸ್ ಸೋಂಕಿನಿಂದ ಬರುವ ಈ ಜ್ವರವು 'ಏಡಿಸ್' ಎಂಬ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ.
- ಡೆಂಗಿ ಜ್ವರಕ್ಕೂ ಲಾಇಕೆ ಲಭ್ಯವಿಲ್ಲದ ಕಾರಣ, ಈ ರೋಗವನ್ನು ತಡೆಯಲು ಪ್ರಯತ್ನಿಸಬೇಕು ಹಾಗೂ ಏಡಿಸ್ ಸೊಳ್ಳೆಯ ಸಂಖ್ಯೆಯನ್ನು ಕಡಿಮೆಗೊಳಿಸಬೇಕು.
- ಪ್ರತಿ ವರ್ಷ ಮೇ. 16 ರಂದು ಕೇಂದ್ರ ಆರೋಗ್ಯ ಮಂತ್ರಾಲಯ, ಭಾರತ ಸರ್ಕಾರ ಇದರ ಆದೇಶದಂತೆ ಭಾರತದಾದ್ಯಂತ 'ರಾಷ್ಟ್ರೀಯ ಡೆಂಗಿ ಜಾಗೃತಿ ದಿನ' ಎಂದು ಆಚರಿಸಿ, ಡೆಂಗಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
- ಡೆಂಗಿ ಜ್ವರಕ್ಕೆ ಸ್ವಯಂ ಮದ್ದು ಮಾಡದೇ, ವೈದ್ಯರ ಸಲಹೆಯಂತೆ ಔಷಧೋಪಚಾರ ತೆಗೆದುಕೊಳ್ಳಬೇಕು.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
ಸೊಳ್ಳೆಗಳಿಂದ ಬರುವ ಪ್ರಮುಖ ರೋಗಗಳು :-
1) ಏಷ್ಯಾದ ಟೈಗರ್ ಸೊಳ್ಳೆ : ಏಡಿಸ್ ಅಲ್ಬೋಪಿಕ್ಟಸ್ (Aedes albopictus) ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಜಿಕಾ ವೈರಸ್ (Zika virus) ಬರುತ್ತದೆ.
2) ಏಡಿಸ್ ಈಜಿಪ್ತಿ ಸೊಳ್ಳೆ : ಏಡಿಸ್ ಈಜಿಪ್ತಿ (Aedes aegypti) ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಡೆಂಘಿ ಜ್ವರ, ಚಿಕನ್ ಗುನ್ಯ, ಹಳದಿ ಜ್ವರಕ್ಕೆ ಕಾರಣವಾಗುತ್ತದೆ.
3) ಅನಾಫಿಲಿಸ್ ಸೊಳ್ಳೆ : ಈ ಸೊಳ್ಳೆಯ ಕಡಿತವು ಮಲೇರಿಯ ರೋಗವನ್ನು ಉಂಟುಮಾಡುತ್ತದೆ.
4) ಕ್ಯೂಲೆಕ್ಸ್ ಸೊಳ್ಳೆ : ಕ್ಯೂಲೆಕ್ಸ್ ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಜಪಾನೀಸ್ ಎನ್ಸೆಫಾಲಿಟಿಸ್ ಎಂಬ ರೋಗ ಬರುತ್ತದೆ.
ಮಂಗಳನ ನೆಲದ ಮೇಲೆ ಚೀನಾದ ನೌಕೆ ಝರೋಂಗ್
- ಝರೋಂಗ್ ಚೀನಾದ ಮೊದಲ ಮಂಗಳಗ್ರಹ ಶೋಧಕ ನೌಕೆಯಾಗಿದೆ.
- ಮಂಗಳ ಗ್ರಹಕ್ಕೆ ಚೀನಾ ಕಳಿಸಿರುವ ಶೋಧಕ ನೌಕೆ ಶನಿವಾರ ಮಂಗಳ ಗ್ರಹದ ಮೇಲೆ ಇಳಿಯಿತು.
- ಅಲ್ಲದೇ ಈ ನೌಕೆ ಝರೋಂಗ್ ರೋವರ್ ನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ.
- ಝರೋಂಗ್ ಎಂದರೆ ಚೀನಾದ ಅಗ್ನಿದೇವತೆ.
- ಮಂಗಳ ಗ್ರಹದ ಉಟೋಪಿಯನ್ ಪ್ಲಾನಿಟಿಯಾ ಎಂಬ ಉತ್ತರ ಭಾಗದ ಜ್ವಾಲಾಮುಖಿ ಪ್ರದೇಶದಲ್ಲಿ ರೋವರ್ ಇಳಿದಿದೆ.
- ಅಮೇರಿಕ, ರಷ್ಯಾದ ನಂತರ ಮಂಗಳ ಗ್ರಹದ ಮೇಲೆ ರೋವರ್ ಇಳಿಸಿದ ದೇಶ ಎಂಬ ಕೀರ್ತಿಗೆ ಚೀನಾ ಭಾಜನವಾಗಿದೆ.
- ಮಂಗಳ ಗ್ರಹದ ಅನ್ವೇಷಣೆಯಲ್ಲಿರುವ 3 ನೇರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.
- ಅಮೇರಿಕ ಈಗಾಗಲೇ ಮಂಗಳಗ್ರಹದಲ್ಲಿ ಪರ್ಸಿವರೆನ್ಸ್ ರೋವರ್ ನ್ನು ಕಳಿಸಿದ್ದು, ಅದು ಇನ್ನೂ ಮಂಗಳ ಗ್ರಹದಲ್ಲಿ ಚಲಿಸುತ್ತಲಿದೆ.
- ಚೀನಾದ ಝರೋಂಗ್ ರೋವರ್ 6 ಚಕ್ರಗಳನ್ನು ಹೊಂದಿದ್ದು, 240 ಕಿಲೋ ತೂಕ ಹೊಂದಿರುವ ಸೌರ ಶಕ್ತಿಚಾಲಿತ ರೋವರ್ ಆಗಿದೆ.
- ಝರೋಂಗ್ ರೋವರ್ ಮಂಗಳನ ಅಂಗಳದ ಮಾದರಿ ಸಂಗ್ರಹಿಸಿ ವಿಶ್ಲೇಷಿಸಿ ದತ್ತಾಂಶವನ್ನು ಚೀನಾಕ್ಕೆ ರವಾನಿಸಲಿದೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
ಚೀನಾದ ಕುರಿತು
- ಚೀನಾದ ರಾಜಧಾನಿ - ಬೀಜಿಂಗ್
- ಜನಸಂಖ್ಯೆ : 139.77 ಕೋಟಿ (2019 ಅಂಕಿ ಅಂಶ)
- ಅಧ್ಯಕ್ಷ - ಕ್ಸಿ ಜಿನ್ ಪಿಂಗ್
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
ಮಂಗಳ ಗ್ರಹದ ಕುರಿತು
- ಮಂಗಳ ಗ್ರಹ ಸೌರವ್ಯೂಹದ ನಾಲ್ಕನೆಯ ಗ್ರಹ ಹಾಗೂ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ.
- ಇದು ಭೂಮಿಯ ಅರ್ಧದಷ್ಟು ಗಾತ್ರವನ್ನು ಹೊಂದಿದ ಗ್ರಹವಾಗಿದೆ.
- ಮಂಗಳಗ್ರಹದ ಭ್ರಮಣ ಅವಧಿ - 24 ಗಂಟೆ 37 ನಿಮಿಷ, 23 ಸೆಕೆಂಡ್ ಗಳು
- ಮಂಗಳ ಗ್ರಹವು ಕಂದು, ಮಿಶ್ರಿತ ಕೆಂಪು ಬಣ್ಣದ್ದಾಗಿದ್ದರಿಂದ ಇದನ್ನು ಕೆಂಪುಗ್ರಹ ಎನ್ನುತ್ತಾರೆ.
ನಮ್ಮ ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹವಾಗಿರುವ ಮಂಗಳ ಗ್ರಹದ ಮೇಲೆ 3.5 ಬಿಲಿಯನ್ ವರ್ಷಗಳ ಹಿಂದೆ ಜೀವಿಗಳು ಇದ್ದವೆಂದು ತಿಳಿದುಬಂದಿದೆ. ಸೂರ್ಯನಿಂದ 227.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಇಂದು ಯಾವುದೇ ಜೀವಿಗಳಿಗೆ ಆಶ್ರಯ ನೀಡುತ್ತಿಲ್ಲ. ಆದರೆ ಈ ಗ್ರಹದ ಮೇಲೆ ಬೃಹತ್ ಮಂಜು ಗಡ್ಡೆಗಳು ಇದ್ದು ಅದನ್ನು ಕರಗಿಸುವುದರಿಂದ ಸಾಕಷ್ಟು ಪ್ರಮಾಣದ ನೀರು ಪಡೆಯಬಹುದಾಗಿದೆ. ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಸಂಪೂರ್ಣ ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತ ಇದಾಗಿದೆ. ಸೂರ್ಯನ ಸುತ್ತ ಸುತ್ತಲು 687 ದಿನಗಳನ್ನು ತೆಗೆದುಕೊಳ್ಳುವ ಈ ಗ್ರಹದ ಮೇಲೆ ಶೇಕಡ 95 ರಷ್ಟು ಇಂಗಾಲದ ಡೈ ಆಕ್ಸೈಡ್ ಹಾಗು ಶೇಕಡ 5 ರಷ್ಟು ನೈಟ್ರೋಜೆನ್ ಇದೆ. ಆಗಾಗ್ಗೆ ಬೀಸುವ ದೊಡ್ಡ ದೊಡ್ಡ ಬಿರುಗಾಳಿಯು ಈ ಗ್ರಹದ ವಾತಾವರಣದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.
: ನೆನಪಿನಲ್ಲಿಡಬೇಕಾದ ಅಂಶಗಳು :
* ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.
* ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.
* ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ್ ಮುಖ್ಯವಾಗಿದೆ.
* ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.
* ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.
* ಮಂಗಳ ಗ್ರಹವು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು 687 ದಿನಗಳನ್ನು ತೆಗೆದುಕೊಳ್ಳುತ್ತದೆ.
* ಮಂಗಳನ ಭ್ರಮಣಾ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.
* ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
ಈ ಹಿಂದಿನ ಪ್ರಮುಖ ಮಂಗಳಯಾನ ಯೋಜನೆಗಳು ಹೀಗಿವೆ
1) ಮಂಗಳಯಾನ ಕೈಗೊಂಡ ಜಗತ್ತಿನ ಮೊದಲ ರಾಷ್ಟ್ರ :- ಸೋವಿಯತ್ ರಷ್ಯಾ 1971 ರಲ್ಲಿ ಮೊಟ್ಟ ಮೊದಲು 'Mars-3' ಹೆಸರಿನ ಮಂಗಳಯಾನ ಕೈಗೊಂಡಿದೆ. ಹೀಗಾಗಿ ಮಂಗಳಯಾನ ಕೈಗೊಂಡ ಮೊದಲ ದೇಶ ಎಂಬ ಹೆಗ್ಗೆಳಿಕೆಗೆ ರಷ್ಯಾ ಪಾತ್ರವಾಗಿದೆ.
2) ಮಂಗಳಯಾನ ಕೈಗೊಂಡ ಜಗತ್ತಿನ ಎರಡನೆಯ ರಾಷ್ಟ್ರ :- ಮಂಗಳಯಾನ ಕೈಗೊಂಡ ಜಗತ್ತಿನ ಎರಡನೆಯ ರಾಷ್ಟ್ರ ಎಂಬ ಖ್ಯಾತಿ ಅಮೇರಿಕ ಹೊಂದಿದೆ. ಅಮೇರಿಕ 1976 ರಿಂದ ಇಲ್ಲಿಯವರೆಗೆ 8 ಮಂಗಳಯಾನಗಳನ್ನು ಯಶಸ್ವಿಯಾಗಿ ಪೂರೈಸಿದೆ. Mars Express Mission ಯೋಜನೆಯ ಅಡಿಯಲ್ಲಿ ಯೂರೋಪಿನ್ ಸ್ಪೇಸ್ ಏಜನ್ಸಿ ಈ ನೌಕೆಗಳನ್ನು ಮಂಗಳನ ಅಂಗಳಕ್ಕೆ ಸೇರಿಸಿತ್ತು. ಇತ್ತೀಚೆಗೆ ಅಮೇರಿಕದ ಪರ್ಸಿವರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಚಲಿಸಿದ್ದನ್ನು ಗಮನಿಸಬಹುದು.
ಭಾರತದ ಮಂಗಳಯಾನ ಯೋಜನೆ :-
ಭಾರತದ Mars Orbiter Mission (MOM) ಅಥವಾ ಮಂಗಳಯಾನ ವನ್ನು ಇಸ್ರೋ 05 ನವೆಂಬರ್ 2013 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-25 ರಾಕೆಟ್ ನ ಮೂಲಕ ಉಡಾವಣೆ ಮಾಡಿತ್ತು.
ಅಮೇರಿಕ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್ ನೇಮಕ
- ಭಾರತೀಯ ಮೂಲದ ನೀರಾ ಟಂಡನ್ ಈ ಹಿಂದೆ ಶ್ವೇತಭವನದ ಆಫೀಸ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಬಜೆಟ್ (OMB) ನ ಮುಖ್ಯಸ್ಥೆಯಾಗಿದ್ದರು.
- ಆದರೆ ಸೆನೆಟ್ ನ ವ್ಯಾಪಕ ಟೀಕೆಯಿಂದ ಕಳೆದ ಮಾರ್ಚ್ ನಲ್ಲಿ ಆ ಹುದ್ದಯಿಂದ ಕೆಳಗಿಳಿದಿದ್ದರು ನೀರಾ ಟಂಡನ್.
- ಟಂಡನ್ ಅವರು ಪ್ರಸ್ತುತ ಸಿಎಪಿಯ ಅಧ್ಯಕ್ಷೆ ಮತ್ತು ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
- ಇದೀಗ ಅವರು ಅಮೇರಿಕ ಅಧ್ಯಕ ಜೋ ಬಿಡೆನ್ ಅವರ ಹಿರಿಯ ಸಲಹೆಗಾರರಾಗಿ ಶ್ವೇತಭವನವನ್ನು ಪ್ರವೇಶಿಸುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
ನೀರಾ ಟಂಡನ್ :
- ಭಾರತೀಯ ಮೂಲದ ಅಮೆರಿಕ ನಿವಾಸಿ ದಂಪತಿಗಳ ಪುತ್ರಿ.
- ಜನನ : 10 ಸೆಪ್ಟೆಂಬರ್ 1970
- ಶಿಕ್ಷಣ : ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಯಾಲೆ ಲಾ ಶಾಲೆಯಿಂದ ಬಿಎ ಪದವಿ.
- ಪತಿ : ಬೆಂಜಮಿನ್ ಎಡ್ವರ್ಡ್
ಪಂಜಾಬ್ ನ 23 ನೇ ಜಿಲ್ಲೆಯಾಗಿ ಮಾಲೆರ್ ಕೋಟ್ಲಾ
- ಪಂಜಾಬ್ ನ ಮಾಲೆರ್ ಕೋಟ್ಲಾ ವನ್ನು 23 ನೇ ಜಿಲ್ಲೆ ಎಂದು ಪಂಜಾಬ್ ಸಿಎಂ ಘೋಷಿಸಿದ್ದಾರೆ.
- ಅಲ್ಲದೇ ಈ ಜಿಲ್ಲೆಗೆ 500 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು ಮಹಿಳಾ ಕಾಲೇಜು ಮಹಿಳಾ ಪೊಲೀಸ್ ಠಾಣೆ ನೂತನ ಬಸ್ ನಿಲ್ದಾಣವನ್ನು ಸಹ ಸಿಎಂ ಅವರು ಘೋಷಿಸಿದ್ದಾರೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ
ಪಂಜಾಬ್ ಕುರಿತು
- ಪಂಜಾಬ್ ನ ರಾಜಧಾನಿ : ಚಂಡೀಗಡ
- ರಾಜ್ಯ ವೃಕ್ಷ : ಶೀಶಾಮ್
- ರಾಜ್ಯ ಪಕ್ಷಿ : ಬಾಜ್ (ನಾರ್ಥನ್ ಗೋಶಾಕ್)
- ರಾಜ್ಯ ಪುಷ್ಪ : ಗ್ಲಾಡಿಯೋಲಸ್
- ಪಂಜಾಬ್‌ನ ಮುಖ್ಯಮಂತ್ರಿ : ಕ್ಯಾಪ್ಟೇನ್ ಅಮರಿಂದರ್ ಸಿಂಗ್
- ಪಂಜಾಬ್‌ನ ರಾಜ್ಯಪಾಲ : ವಿ. ಪಿ. ಸಿಂಗ್ ಬದ್ನೋರ್
No comments:
Post a Comment
If you have any doubts please let me know