Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 17 May 2021

17 May 2021 Current Affairs || Daily Current Affairs 2021 || 17-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

 

17-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು

17 May 2021 Current Affairs || Daily Current Affairs 2021 || 17-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು



ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದಿನಾಂಕ 17 ಮೇ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣಾತ್ಮಕ ವಿವರಣೆ ಇಲ್ಲಿದೆ.






17 ಮೇ 2021 ರ ವಿಸ್ತೃತ ಹಾಗೂ ವಿಶ್ಲೇಷಣಾತ್ಮಕ ಪ್ರಚಲಿತ ವಿದ್ಯಮಾನಗಳು

ಇಂದು  ಮೇ 17, ವಿಶ್ವ ದೂರಸಂವಹನ ದಿನ

ಇಂದು  ಮೇ 17, ವಿಶ್ವ ದೂರಸಂವಹನ ದಿನ




  • ಟೆಲಿಕಮ್ಯುನಿಕೇಶನ್ ಅಂದರೆ ದೂರಸಂವಹನ ನಮ್ಮ ನಿತ್ಯ ಜೀವನದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ಹೊಂದಿದೆ.
  • ವಿಶ್ವ ದೂರಸಂವಹನ ದಿನದ ಆಚರಣೆಯ ಪ್ರಮುಖ ಉದ್ದೇಶವೆಂದರೆ ಸಂವಹನದ ಪ್ರಾಮುಖ್ಯತೆಯ ಬಗ್ಗೆ ವಿಶೇಷವಾಗಿ ಪ್ರಚುರಪಡಿಸುವುದು ಮತ್ತು ವಿಶ್ವದಾದ್ಯಂತ ಮಾಹಿತಿಗಳು ಹೇಗೆ ವಿನಿಮಯವಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸುವುದು ಆಗಿದೆ.
  • ಇಂಟರ್ನ್ಯಾಷನಲ್ ಟೆಲಿಗ್ರಾಫ್ ಯೂನಿಯನ್ (ಐಟಿಯು) ಸಂಸ್ಥೆಯು ವಿಶ್ವ ದೂರಸಂವಹನ ದಿನ ದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ.
  • ಇಂಟರ್ನ್ಯಾಷನಲ್ ಟೆಲಿಗ್ರಾಫ್ ಯೂನಿಯನ್ ಸಂಸ್ಥೆಯನ್ನು 1865 ರಲ್ಲಿಯೇ ರಚಿಸಲಾಗಿತ್ತು.
  • 1876 ರಲ್ಲಿ ದೂರವಾಣಿಯನ್ನು ಆವಿಷ್ಕಾರ ಮಾಡಲಾಯಿತು.
  • 1957 ರಲ್ಲಿ ಮೊದಲ ಉಪಗ್ರಹವನ್ನು ಪ್ರಾರಂಭಿಸಲಾಯಿತು.

ದೂರವಾಣಿಯ ಕುರಿತು :

  • ಸಂಶೋಧಕ : ಗ್ರಹಾಂ ಬೆಲ್
  • ಗ್ರಹಾಂಬೆಲ್ ಸ್ಕಾಟ್ಲೆಂಡ್ ನ ವಿಜ್ಞಾನಿ.
  • 10 ಮಾರ್ಚ್ 1876 ರಂದು ದೂರವಾಣಿ ಸಂಶೋಧಿಸಿದರು.



ಇಂದು ಮೇ 17 ಆದಿ ಶಂಕರಾಚಾರ್ಯರ ಜಯಂತಿ


ಇಂದು ಮೇ 17 ಆದಿ ಶಂಕರಾಚಾರ್ಯರ ಜಯಂತಿ



  • ಅದ್ವೈತ ಸಿದ್ಧಾಂತವನ್ನು ಮರು ವ್ಯಾಖ್ಯಾನಿಸಿದ ಆದಿ ಗುರುವಾದ ಶಂಕರಾಚಾರ್ಯರ ಜಯಂತಿ ಇಂದು.
  • ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು.
  • ಆದಿಶಂಕರರು ಭಗವದ್ಗೀತೆ ಉಪನಿಷತ್ ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯ ಎಂದು ಖ್ಯಾತರಾಗಿದ್ದಾರೆ.
  • ಜನನ - 788
  • ಸ್ಥಳ : ಕೇರಳದ ಕಾಲಡಿ
  • ತಂದೆ : ಶಿವಗುರು
  • ತಾಯಿ : ಆರ್ಯಾಂಬ
  • ಗುರುಗಳು : ಗೋವಿಂದಭಗವತ್ಪಾದ

ಭಾರತದ ನಾಲ್ಕು ದಿಕ್ಕಗಳಲ್ಲಿಯೂ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು :

1) ಉತ್ತರದ ಬದರಿಯಲ್ಲಿ ಜ್ಯೋತಿರ್ಮಠ
2) ಸಹ್ಯಾದ್ರಿ ಬೆಟ್ಟಗಳ ಪ್ರದೇಶವಾದ ದಕ್ಷಿಣದ ಶೃಂಗೇರಿಯಲ್ಲಿ ಶಾರದಾಪೀಠ.
3) ಪೂರ್ವದ ಸಮುದ್ರತೀರದ ಪುರಿ ಕ್ಷೇತ್ರದಲ್ಲಿ ಗೋವರ್ಧನ ಪೀಠ.
4) ಪಶ್ಚಿಮದ ಸಮುದ್ರತೀರದ ದ್ವಾರಕಾದಲ್ಲಿ ದ್ವಾರಕಾ ಪೀಠವನ್ನು ಪ್ರತಿಷ್ಠಾಪಿಸಿದರು.

ಶಂಕರರ ಅದ್ವೈತ ಸಿದ್ಧಾಂತಗಳು :


ಆದಿಗುರು ಶಂಕರಾಚಾರ್ಯರು ಪ್ರಕಾರ ಸೃಷ್ಟಿಯಲ್ಲಿ ಇರುವುದು ಒಂದೇ ವಸ್ತು ಅದರ ಅನುಭವವೇ ಆನಂದದ ಅನುಭವ ಎಲ್ಲರಲ್ಲೂ ಇರುವಾಗ ಎಲ್ಲವೂ ಬ್ರಹ್ಮವೇ ಆಗಿರುವಾಗ ಭೇದಭಾವಕ್ಕೆ ಅವಕಾಶವಿರದು. ನಮ್ಮ ದಿಟವಾದ ಸ್ವರೂಪವಾದ ಬ್ರಹ್ಮ ಎಂದರೆ ಆನಂದವನ್ನು ಅನುಭವಕ್ಕೆ ತಂದುಕೊಳ್ಳುವುದೇ ಮೋಕ್ಷ. ಇದಕ್ಕಾಗಿ ನಾವು ಯಾವ ಶ್ರಮವನ್ನು ಪಡಬೇಕಾದ ಅವಶ್ಯಕತೆ ಇಲ್ಲ. ನಮ್ಮಲ್ಲಿ ಇರುವ ಅಜ್ಞಾನವನ್ನು ಹೋಗಲಾಡಿಸಿ ಕೊಂಡರೆ ಸಾಕು ಶಂಕರಾಚಾರ್ಯರ ಉಪದೇಶದ ಸಾರವಾಗಿದೆ.

ಅದ್ವೈತ ತತ್ವ :


ಶಂಕರಾಚಾರ್ಯರು ಎತ್ತಿಹಿಡಿದ ತತ್ವವನ್ನು ಅದ್ವೈತ ದರ್ಶನ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ದ್ವಿ ಎಂದರೆ ಎರಡು. ಹಾಗಾಗಿ ಅ-ದೈತ ಎಂದರೆ ಎರಡಲ್ಲದ್ದು ಎಂದರ್ಥ. ಅದ್ವೈತಸಿದ್ಧಾಂತದ ಸಾರವೇ ಇದು ಆತ್ಮನಲ್ಲಿಯೇ ಪರಮಾತ್ಮನಿದ್ದಾನೆ. ಆತ್ಮನಿಗೆ ಪರಮಾತ್ಮನಿಗೂ ಬೇಧವಿಲ್ಲ. ಅಹಮ್ ಬ್ರಹ್ಮಸ್ಮಿ. ಅದ್ವೈತ ಎಂಬ ಪದವೇ ಗಮನಾರ್ಹವಾದದ್ದು ಅದು ಏಕತೆ ಎಂಬುದಕ್ಕಿಂತ ಹೆಚ್ಚಾಗಿ ಅದ್ಭುತ ಎರಡನೆಯದು ಇಲ್ಲದಿರುವಿಕೆ. ಕೇವಲ ಏಕತೆಯಲ್ಲ. ಎರಡನೆಯದು ಅನ್ನುವುದೇ ಇಲ್ಲ ಎಂಬ ಕಲ್ಪನೆಯಾಗಿದೆ‌. ಅಂದರೆ ಒಂದೇ, ಎರಡಲ್ಲ, ಹಲವೂ ಅಲ್ಲ..

ಶಂಕರಾಚಾರ್ಯರು ಕೊನೆಯ ಕಾಲದಲ್ಲಿ ಕಾಶ್ಮೀರದ ಸರ್ವಜ್ಞ ಪೀಠ ಅಲಂಕರಿಸಿದ್ದರು. ಕೇದಾರನಾಥಕ್ಕೆ ಪ್ರಯಾಣ ಮಾಡಿ ತಮ್ಮ 32 ನೇ ವಯಸ್ಸಿನಲ್ಲಿ ಕೇದಾರ ದೇವಾಲಯದ ಹತ್ತಿರವೇ ಮುಕ್ತಿಯನ್ನು ಪಡೆದರೆಂದು ಹೇಳಲಾಗುತ್ತದೆ‌.



ಟ್ವಿಟ್ಟರ್ ನ ಬ್ಲ್ಯೂ ಪೇಯ್ಡ್ ವರ್ಷನ್ 

ಟ್ವಿಟ್ಟರ್ ನ ಬ್ಲ್ಯೂ ಪೇಯ್ಡ್ ವರ್ಷನ್




  • ಟ್ವಿಟರ್ ಜಾಗತಿಕವಾಗಿ ಗುರುತಿಸಿಕೊಂಡ ಸಾಮಾಜಿಕ ಜಾಲತಾಣ ಮಾಧ್ಯಮವೆಂದೇ ಹೇಳಬಹುದು‌.
  • ಚಂದಾದರಿಕೆ ಮಾದರಿಯ ಟ್ವಿಟರ್ ಅನ್ನು ಜಗತ್ತಿಗೆ ಪರಿಚಯಿಸಲು ಟ್ವಿಟರ್ ಸಿದ್ಧತೆ ನಡೆಸಿದೆ.
  • ಟ್ವಿಟರ್ ಬಳಕದಾರರು ತಿಂಗಳಿಗೆ 220 ರೂ (2.99) ಡಾಲರ್) ಚಂದಾದಾರಿಕೆ ನೀಡುವ ಮೂಲಕ ಟ್ವಿಟರ್ ನ ಬ್ಲ್ಯೂ ವರ್ಷನ್ ಬಳಸಬಹುದೆಂದು ತಿಳಿಸಿದೆ.
  • ಆ್ಯಪ್ ಸಂಶೋಧಕ ಜಾನೆ ಮನ್ ಚುನ್ ವಾಂಗ್ ಈ ಹೊಸ ಸೇವೆಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
  • ಈ ಹೊಸ ಪೇಯ್ಡ್ ವರ್ಷನ್ ನಲ್ಲಿ ಟ್ವೀಟ್ ಗಳಿಗೆ ಅನ್ ಡು ಸೆಂಡ್, ಟೈಮರ್ ಹಾಗೂ ಟ್ವೀಟ್ ಗಳನ್ನು ಸಂಗ್ರಹಿಸುವ ಬುಕ್ ಮಾರ್ಕ್ ಗಳು ಸೇರಿದಂತೆ ಹಲವು ಪೀಚರ್ ಗಳನ್ನು ಸೇರಿಸಲಾಗಿದೆ‌.


DRDO ಅಭಿವೃದ್ಧಿಪಡಿಸಿದ 2-DG ಕೊರೋನಾ ಲಸಿಕೆ ಇಂದಿನಿಂದ ಲಭ್ಯ

DRDO ಅಭಿವೃದ್ಧಿಪಡಿಸಿದ 2-DG ಕೊರೋನಾ ಲಸಿಕೆ ಇಂದಿನಿಂದ ಲಭ್ಯ




ಕೊರೋನಾ ಚಿಕಿತ್ಸೆಗೆ ಭಾರತೀಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿದ 2 ಡಯಾಕ್ಸಿ ಡಿ ಗ್ಲೂಕೋಸ್ ಔಷಧಿಯು ಶೀಘ್ರದಲ್ಲಿ ಲಭ್ಯವಾಗಲಿದೆ.

ಮೊದಲ ಕಂತಿನ 10,000 ಡೋಸ್ ಔಷಧ ಎಂದು ಬಿಡುಗಡೆಯಾಗಿದ್ದು ಇದು ಹೈಡ್ರೋ ಕ್ಲೋರೋಕ್ವಿನ್, ರೆಮ್ಡಿಸಿವಿರ್, ಹಾಗೂ ಐವರ್ ಮೆಕ್ಟೀನ್ ಗಿಂತಲೂ ಪರಿಣಾಮಕಾರಿ ಎಂದು ತಿಳಿದು ಬಂದಿದೆ.

ಈ ಲಸಿಕೆಯನ್ನು 
1) DRDO
2) ಹೈದರಾಬಾದ್ ಮೂಲದ ಡಾ. ರೆಡ್ಡೀಸ್
3) ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲ್ಲೈಡ್ ಸೈನ್ಸಸ್.
ಸಂಸ್ಥೆಗಳು ಉತ್ಪಾದಿಸುವ ಜವಾಬ್ದಾರಿ ಹೊಂದಿವೆ.

ಎಷ್ಟು ಡೋಸ್ ಮತ್ತು ಹೇಗೆ ನೀಡಲಾಗುತ್ತದೆ :


2-DG ಲಸಿಕೆಯು, ಔಷಧಿಯ ಗ್ಲೂಕೋಸ್ ಪುಡಿಯ ರೂಪದಲ್ಲಿರುತ್ತದೆ. ಆದ್ದರಿಂದ ಇದನ್ನು ದಿನಕ್ಕೆ ಎರಡು ಬಾರಿ ನೀರಿನೊಂದಿಗೆ ಮಿಶ್ರಣ ಮಾಡಿ ಸೋಂಕಿತರಿಗೆ ನೀಡಲಾಗುತ್ತದೆ. ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಲು ಐದರಿಂದ ಏಳು ದಿನ ಇದನ್ನು ನೀಡಬೇಕಾಗುತ್ತದೆ.

ಹೇಗೆ ಕೆಲಸ ನಿರ್ವಹಿಸುತ್ತದೆ :


ಕೊರೋನಾ ರೋಗವು ವ್ಯಕ್ತಿಯೊಬ್ಬನ ದೇಹದಲ್ಲಿ ತನ್ನನ್ನು ತಾನು ದ್ವಿಗುಣಗೊಳಿಸಿಕೊಳ್ಳುವಾಗ ಅದಕ್ಕೆ ಗ್ಲುಕೋಸ್ ನ ಅಗತ್ಯವಿರುತ್ತದೆ. DRDO ಸಂಶೋಧಿಸಿದ ಈ ಔಷಧ ದಲ್ಲಿ ಗ್ಲೂಕೋಸ್‌ನ ಅಂಶ ಇರುತ್ತದೆ. ಆದರೆ ಅದು ನಿಜವಾಗಲೂ ಗ್ಲೂಕೋಸ್ ಆಗಿರುವುದಿಲ್ಲ. ಹೀಗಾಗಿ ಕರೋನ ವೈರಸ್ ಔಷಧಿ ಯನ್ನು ಗ್ಲುಕೋಸ್ ಎಂದು ಪರಿಗಣಿಸಿ, ಒಳತೆಗೆದುಕೊಂಡಾಗ ಇದು ದುಪ್ಪಟ್ಟು ಆಗುವುದು ನಿಂತುಹೋಗುತ್ತದೆ‌.

ಈ ಔಷಧಿಯೂ ದೇಹದಲ್ಲಿ ವೈರಾಣು ದುಪ್ಪಟ್ಟುಗೊಳ್ಳುವುದನ್ನು ತಡೆಯುವುದರಿಂದ ಆಮ್ಲಜನಕದ ಕೊರತೆಯನ್ನು ಸಹ ನೀಗಿಸಬಲ್ಲದು.


ಮೇ 16. ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನ


ಮೇ 16. ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನ



  • ರಾಷ್ಟ್ರೀಯತೆ ಲಿಂಗ ಭಾಷೆ ಅಥವಾ ಧರ್ಮವನ್ನು ಲೆಕ್ಕಿಸದೆ ಸಾಮರಸ್ಯದ ಜೀವನದಲ್ಲಿ ಶಾಂತಿಯನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
  • 2017ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಧಿಕೃತವಾಗಿ ಈ ದಿನವನ್ನು 2018 ರಿಂದ ಆಚರಿಸಲಾಗುತ್ತದೆ.
  • ಶಾಂತಿ ಸಹಬಾಳ್ವೆಯ ಅಂತರಾಷ್ಟ್ರೀಯ ದಿನದ ಆಚರಣೆ ಎಲ್ಲ ಜನಾಂಗ ಧರ್ಮ ಹಾಗೂ ಪ್ರಾಂತೀಯ ಜನರು ಶಾಂತಿಯನ್ನು ಬಯಸುವುದನ್ನು ಪ್ರತಿನಿಧಿಸುತ್ತದೆ.



ಮೇ. 16 ರಾಷ್ಟ್ರೀಯ ಡೆಂಗಿ‌ ಜಾಗೃತಿ ದಿನ


ಮೇ. 16 ರಾಷ್ಟ್ರೀಯ ಡೆಂಗಿ‌ ಜಾಗೃತಿ ದಿನ



  • ಭಾರತವು ಸದ್ಯ ಕೋವಿಡ್ ನಿಂದ ತತ್ತರಿಸಿದೆ. ದೇಶದ ವೈದ್ಯ ಸಮೂಹ ಮತ್ತು ನಾಗರಿಕರೆಲ್ಲರೂ ಕೊರೋನ ರೋಗದ ಬಗ್ಗೆಯೇ ಚಿಂತಿಸುವುದನ್ನು ಕಾಣುತ್ತಿದ್ದೇವೆ.
  • ಕೋವಿಡ್ ಬರುವುದಕ್ಕೂ ಮೊದಲು ಹಾಗೂ ಇನ್ನೂ ದೇಶದಲ್ಲಿ ಉಳಿದಿರುವ  ಕೆಲವು ಮಾರಕ‌ ಕಾಯಿಲೆಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
  • ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲ ಕಡೆಯೂ ಡೆಂಗಿ ಜ್ವರದ ಹಾವಳಿ ಸಾಮಾನ್ಯವಾಗಿಯೇ ಇರುತ್ತದೆ. 
  • ಡೆಂಗು ಜ್ವರದ ಸಾಮಾನ್ಯ ಲಕ್ಷಣಗಳು : ತಲೆನೋವು, ಮೈಕೈ ನೋವು, ಸುಸ್ತು ಸಾಮಾನ್ಯವಾಗಿ ಕಂಡು ಬರುತ್ತವೆ.
  • ಡೆಂಗಿ ಎಂಬ ವೈರಸ್ ಸೋಂಕಿನಿಂದ ಬರುವ ಈ ಜ್ವರವು 'ಏಡಿಸ್' ಎಂಬ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ.
  • ಡೆಂಗಿ ಜ್ವರಕ್ಕೂ ಲಾಇಕೆ ಲಭ್ಯವಿಲ್ಲದ ಕಾರಣ, ಈ ರೋಗವನ್ನು ತಡೆಯಲು ಪ್ರಯತ್ನಿಸಬೇಕು ಹಾಗೂ ಏಡಿಸ್ ಸೊಳ್ಳೆಯ ಸಂಖ್ಯೆಯನ್ನು ಕಡಿಮೆಗೊಳಿಸಬೇಕು.
  • ಪ್ರತಿ ವರ್ಷ ಮೇ. 16 ರಂದು ಕೇಂದ್ರ ಆರೋಗ್ಯ ಮಂತ್ರಾಲಯ, ಭಾರತ ಸರ್ಕಾರ ಇದರ ಆದೇಶದಂತೆ ಭಾರತದಾದ್ಯಂತ 'ರಾಷ್ಟ್ರೀಯ ಡೆಂಗಿ ಜಾಗೃತಿ ದಿನ' ಎಂದು ಆಚರಿಸಿ, ಡೆಂಗಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
  • ಡೆಂಗಿ ಜ್ವರಕ್ಕೆ ಸ್ವಯಂ ಮದ್ದು ಮಾಡದೇ, ವೈದ್ಯರ ಸಲಹೆಯಂತೆ ಔಷಧೋಪಚಾರ ತೆಗೆದುಕೊಳ್ಳಬೇಕು.



ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ

ಸೊಳ್ಳೆಗಳಿಂದ ಬರುವ ಪ್ರಮುಖ ರೋಗಗಳು :-

1) ಏಷ್ಯಾದ ಟೈಗರ್ ಸೊಳ್ಳೆ : ಏಡಿಸ್ ಅಲ್ಬೋಪಿಕ್ಟಸ್ (Aedes albopictus) ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಜಿಕಾ ವೈರಸ್ (Zika virus) ಬರುತ್ತದೆ.

2)  ಏಡಿಸ್ ಈಜಿಪ್ತಿ ಸೊಳ್ಳೆ : ಏಡಿಸ್ ಈಜಿಪ್ತಿ (Aedes aegypti) ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಡೆಂಘಿ ಜ್ವರ, ಚಿಕನ್ ಗುನ್ಯ, ಹಳದಿ ಜ್ವರಕ್ಕೆ ಕಾರಣವಾಗುತ್ತದೆ.

3) ಅನಾಫಿಲಿಸ್ ಸೊಳ್ಳೆ : ಈ ಸೊಳ್ಳೆಯ ಕಡಿತವು ಮಲೇರಿಯ ರೋಗವನ್ನು ಉಂಟುಮಾಡುತ್ತದೆ‌.

4) ಕ್ಯೂಲೆಕ್ಸ್ ಸೊಳ್ಳೆ : ಕ್ಯೂಲೆಕ್ಸ್ ಎಂಬ ಜಾತಿಯ ಸೊಳ್ಳೆಯ ಕಡಿತದಿಂದ ಜಪಾನೀಸ್ ಎನ್ಸೆಫಾಲಿಟಿಸ್ ಎಂಬ ರೋಗ ಬರುತ್ತದೆ.



ಮಂಗಳನ ನೆಲದ ಮೇಲೆ ಚೀನಾದ ನೌಕೆ ಝರೋಂಗ್

ಮಂಗಳನ ನೆಲದ ಮೇಲೆ ಚೀನಾದ ನೌಕೆ ಝರೋಂಗ್




  • ಝರೋಂಗ್ ಚೀನಾದ ಮೊದಲ ಮಂಗಳ‌ಗ್ರಹ ಶೋಧಕ ನೌಕೆಯಾಗಿದೆ.
  • ಮಂಗಳ ಗ್ರಹಕ್ಕೆ ಚೀನಾ ಕಳಿಸಿರುವ ಶೋಧಕ‌ ನೌಕೆ ಶನಿವಾರ ಮಂಗಳ ಗ್ರಹದ ಮೇಲೆ ಇಳಿಯಿತು.
  • ಅಲ್ಲದೇ ಈ ನೌಕೆ ಝರೋಂಗ್ ರೋವರ್ ನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ.
  • ಝರೋಂಗ್ ಎಂದರೆ ಚೀನಾದ ಅಗ್ನಿದೇವತೆ.
  • ಮಂಗಳ ಗ್ರಹದ ಉಟೋಪಿಯನ್ ಪ್ಲಾನಿಟಿಯಾ ಎಂಬ ಉತ್ತರ ಭಾಗದ ಜ್ವಾಲಾಮುಖಿ ಪ್ರದೇಶದಲ್ಲಿ ರೋವರ್ ಇಳಿದಿದೆ.
  • ಅಮೇರಿಕ, ರಷ್ಯಾದ ನಂತರ ಮಂಗಳ ಗ್ರಹದ ಮೇಲೆ ರೋವರ್ ಇಳಿಸಿದ ದೇಶ ಎಂಬ ಕೀರ್ತಿಗೆ ಚೀನಾ ಭಾಜನವಾಗಿದೆ.
  • ಮಂಗಳ ಗ್ರಹದ ಅನ್ವೇಷಣೆಯಲ್ಲಿರುವ 3 ನೇ‌ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.
  • ಅಮೇರಿಕ ಈಗಾಗಲೇ ಮಂಗಳಗ್ರಹದಲ್ಲಿ ಪರ್ಸಿವರೆನ್ಸ್ ರೋವರ್ ನ್ನು ಕಳಿಸಿದ್ದು, ಅದು ಇನ್ನೂ ಮಂಗಳ ಗ್ರಹದಲ್ಲಿ ಚಲಿಸುತ್ತಲಿದೆ.
  • ಚೀನಾದ ಝರೋಂಗ್ ರೋವರ್ 6 ಚಕ್ರಗಳನ್ನು ಹೊಂದಿದ್ದು, 240 ಕಿಲೋ ತೂಕ ಹೊಂದಿರುವ ಸೌರ ಶಕ್ತಿಚಾಲಿತ ರೋವರ್ ಆಗಿದೆ‌. 
  • ಝರೋಂಗ್ ರೋವರ್ ಮಂಗಳನ ಅಂಗಳದ ಮಾದರಿ ಸಂಗ್ರಹಿಸಿ ವಿಶ್ಲೇಷಿಸಿ ದತ್ತಾಂಶವನ್ನು ಚೀನಾಕ್ಕೆ ರವಾನಿಸಲಿದೆ.
ಝರೋಂಗ್ ರೋವರ್



ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಚೀನಾದ ಕುರಿತು

  • ಚೀನಾದ ರಾಜಧಾನಿ - ಬೀಜಿಂಗ್
  • ಜನಸಂಖ್ಯೆ : 139.77 ಕೋಟಿ (2019 ಅಂಕಿ ಅಂಶ)
  • ಅಧ್ಯಕ್ಷ - ಕ್ಸಿ ಜಿನ್ ಪಿಂಗ್


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಮಂಗಳ ಗ್ರಹದ ಕುರಿತು





  • ಮಂಗಳ ಗ್ರಹ ಸೌರವ್ಯೂಹದ ನಾಲ್ಕನೆಯ ಗ್ರಹ ಹಾಗೂ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ.
  • ಇದು ಭೂಮಿಯ ಅರ್ಧದಷ್ಟು ಗಾತ್ರವನ್ನು ಹೊಂದಿದ ಗ್ರಹವಾಗಿದೆ.
  • ಮಂಗಳಗ್ರಹದ ಭ್ರಮಣ ಅವಧಿ - 24 ಗಂಟೆ 37 ನಿಮಿಷ, 23 ಸೆಕೆಂಡ್ ಗಳು
  • ಮಂಗಳ ಗ್ರಹವು ಕಂದು, ಮಿಶ್ರಿತ ಕೆಂಪು ಬಣ್ಣದ್ದಾಗಿದ್ದರಿಂದ ಇದನ್ನು ಕೆಂಪುಗ್ರಹ ಎನ್ನುತ್ತಾರೆ.


          ನಮ್ಮ ಸೌರ ಮಂಡಲದ ಎರಡನೆಯ ಚಿಕ್ಕ ಗ್ರಹವಾಗಿರುವ ಮಂಗಳ ಗ್ರಹದ ಮೇಲೆ 3.5 ಬಿಲಿಯನ್ ವರ್ಷಗಳ ಹಿಂದೆ ಜೀವಿಗಳು ಇದ್ದವೆಂದು ತಿಳಿದುಬಂದಿದೆ. ಸೂರ್ಯನಿಂದ 227.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಗ್ರಹವು ಇಂದು ಯಾವುದೇ ಜೀವಿಗಳಿಗೆ ಆಶ್ರಯ ನೀಡುತ್ತಿಲ್ಲ. ಆದರೆ ಈ ಗ್ರಹದ ಮೇಲೆ ಬೃಹತ್ ಮಂಜು ಗಡ್ಡೆಗಳು ಇದ್ದು ಅದನ್ನು ಕರಗಿಸುವುದರಿಂದ ಸಾಕಷ್ಟು ಪ್ರಮಾಣದ ನೀರು ಪಡೆಯಬಹುದಾಗಿದೆ. ಈ ಗ್ರಹದ ಮೇಲೆ "ಒಲಂಪಸ್" ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಸಂಪೂರ್ಣ ಸೌರ ಮಂಡಲದಲ್ಲಿಯೇ ಅತ್ಯಂತ ದೊಡ್ಡ ಪರ್ವತ ಇದಾಗಿದೆ. ಸೂರ್ಯನ ಸುತ್ತ ಸುತ್ತಲು 687 ದಿನಗಳನ್ನು ತೆಗೆದುಕೊಳ್ಳುವ ಈ ಗ್ರಹದ ಮೇಲೆ ಶೇಕಡ 95 ರಷ್ಟು ಇಂಗಾಲದ ಡೈ ಆಕ್ಸೈಡ್ ಹಾಗು ಶೇಕಡ 5 ರಷ್ಟು ನೈಟ್ರೋಜೆನ್ ಇದೆ. ಆಗಾಗ್ಗೆ ಬೀಸುವ ದೊಡ್ಡ ದೊಡ್ಡ ಬಿರುಗಾಳಿಯು ಈ ಗ್ರಹದ ವಾತಾವರಣದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.


: ನೆನಪಿನಲ್ಲಿಡಬೇಕಾದ ಅಂಶಗಳು :


* ಬರಿಗಣ್ಣಿಗೆ ಕಾಣುವ ಕೆಂಪು ಬಣ್ಣದ ಗ್ರಹ ಮಂಗಳ.

* ಮಂಗಳಗ್ರಹವನ್ನು ಅಂಗಾರಕ, ಕುಜ, ಕೆಂಪುಗ್ರಹ ಎಂದು ಕರೆಯುತ್ತಾರೆ.

* ಮಂಗಳಗ್ರಹದ ವಾತಾವರಣದಲ್ಲಿ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ್ ಮುಖ್ಯವಾಗಿದೆ.

* ತನ್ನ ಸುತ್ತ ತಾನು ತಿರುಗುವ ಅಕ್ಷವು ಪರಿಭ್ರಮಣಾ ಪಥದಿಂದ 24 ಡಿಗ್ರಿ ಕೊನದಲ್ಲಿ ವಾಲಿದೆ. ಹೀಗಾಗಿ ಅದು ಭೂಮಿಯಲ್ಲಿ ಇರುವ ಹಾಗೇಯೇ ಋತುಗಳನ್ನು ಹೊಂದಿದೆ.

* ಮಂಗಳದ ಧ್ರುವಗಳಲ್ಲಿನ ಹಿಮದ ಹೊದಿಕೆಗಳು ಅದರ ಅತ್ಯಂತ ಪ್ರಮುಖ ಲಕ್ಷಣಗಳು. ಇವುಗಳ ಆಕಾರ ಮತ್ತು ಚಹರೆಗಳು ಋತುಮಾನಗಳೊಂದಿಗೆ ಬದಲಾಗುವುದು ಕಂಡುಬಂದಿದೆ.

* ಮಂಗಳ ಗ್ರಹವು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು 687 ದಿನಗಳನ್ನು ತೆಗೆದುಕೊಳ್ಳುತ್ತದೆ.

* ಮಂಗಳನ ಭ್ರಮಣಾ ಅವಧಿ 24 ಗಂಟೆ, 37 ನಿಮಿಷ 23 ಸೆಕೆಂಡ್‍ಗಳು.

* ಮಂಗಳ ಗ್ರಹಕ್ಕೆ 2 ಉಪಗ್ರಹಗಳಿವೆ. "ಪೋಬೋಸ್" ಮತ್ತು "ಡೈಮೋಸ್".


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಈ ಹಿಂದಿನ ಪ್ರಮುಖ ಮಂಗಳಯಾನ ಯೋಜನೆಗಳು ಹೀಗಿವೆ


1) ಮಂಗಳಯಾನ ಕೈಗೊಂಡ ಜಗತ್ತಿನ ಮೊದಲ ರಾಷ್ಟ್ರ :- ಸೋವಿಯತ್ ರಷ್ಯಾ 1971 ರಲ್ಲಿ ಮೊಟ್ಟ ಮೊದಲು 'Mars-3' ಹೆಸರಿನ ಮಂಗಳಯಾನ ಕೈಗೊಂಡಿದೆ. ಹೀಗಾಗಿ ಮಂಗಳಯಾನ ಕೈಗೊಂಡ ಮೊದಲ ದೇಶ ಎಂಬ ಹೆಗ್ಗೆಳಿಕೆಗೆ ರಷ್ಯಾ ಪಾತ್ರವಾಗಿದೆ‌.


2) ಮಂಗಳಯಾನ ಕೈಗೊಂಡ ಜಗತ್ತಿನ ಎರಡನೆಯ ರಾಷ್ಟ್ರ :- ಮಂಗಳಯಾನ ಕೈಗೊಂಡ ಜಗತ್ತಿನ ಎರಡನೆಯ ರಾಷ್ಟ್ರ ಎಂಬ ಖ್ಯಾತಿ ಅಮೇರಿಕ ಹೊಂದಿದೆ. ಅಮೇರಿಕ 1976 ರಿಂದ ಇಲ್ಲಿಯವರೆಗೆ 8 ಮಂಗಳಯಾನಗಳನ್ನು ಯಶಸ್ವಿಯಾಗಿ ಪೂರೈಸಿದೆ‌. Mars Express Mission ಯೋಜನೆಯ ಅಡಿಯಲ್ಲಿ ಯೂರೋಪಿನ್ ಸ್ಪೇಸ್ ಏಜನ್ಸಿ ಈ ನೌಕೆಗಳನ್ನು ಮಂಗಳನ ಅಂಗಳಕ್ಕೆ ಸೇರಿಸಿತ್ತು‌. ಇತ್ತೀಚೆಗೆ ಅಮೇರಿಕದ ಪರ್ಸಿವರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಚಲಿಸಿದ್ದನ್ನು ಗಮನಿಸಬಹುದು. 


ಭಾರತದ ಮಂಗಳಯಾನ ಯೋಜನೆ :-

ಭಾರತದ Mars Orbiter Mission (MOM) ಅಥವಾ ಮಂಗಳಯಾನ ವನ್ನು ಇಸ್ರೋ 05 ನವೆಂಬರ್ 2013 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-25 ರಾಕೆಟ್ ನ ಮೂಲಕ ಉಡಾವಣೆ ಮಾಡಿತ್ತು.


ಅಮೇರಿಕ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್ ನೇಮಕ


ಅಮೇರಿಕ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್ ನೇಮಕ



  • ಭಾರತೀಯ ಮೂಲದ ನೀರಾ ಟಂಡನ್ ಈ ಹಿಂದೆ ಶ್ವೇತಭವನದ ಆಫೀಸ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಬಜೆಟ್ (OMB) ನ ಮುಖ್ಯಸ್ಥೆಯಾಗಿದ್ದರು.
  • ಆದರೆ ಸೆನೆಟ್ ನ ವ್ಯಾಪಕ ಟೀಕೆಯಿಂದ ಕಳೆದ ಮಾರ್ಚ್ ನಲ್ಲಿ ಆ ಹುದ್ದಯಿಂದ ಕೆಳಗಿಳಿದಿದ್ದರು ನೀರಾ ಟಂಡನ್.
  • ಟಂಡನ್ ಅವರು ಪ್ರಸ್ತುತ ಸಿಎಪಿಯ ಅಧ್ಯಕ್ಷೆ ಮತ್ತು ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
  • ಇದೀಗ ಅವರು ಅಮೇರಿಕ ಅಧ್ಯಕ ಜೋ ಬಿಡೆನ್ ಅವರ ಹಿರಿಯ ಸಲಹೆಗಾರರಾಗಿ ಶ್ವೇತಭವನವನ್ನು ಪ್ರವೇಶಿಸುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ನೀರಾ ಟಂಡನ್ :

  • ಭಾರತೀಯ ಮೂಲದ ಅಮೆರಿಕ‌ ನಿವಾಸಿ ದಂಪತಿಗಳ ಪುತ್ರಿ.
  • ಜನನ : 10 ಸೆಪ್ಟೆಂಬರ್ 1970
  • ಶಿಕ್ಷಣ : ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಯಾಲೆ ಲಾ ಶಾಲೆಯಿಂದ ಬಿಎ ಪದವಿ.
  • ಪತಿ : ಬೆಂಜಮಿನ್ ಎಡ್ವರ್ಡ್



ಪಂಜಾಬ್ ನ 23 ನೇ ಜಿಲ್ಲೆಯಾಗಿ ಮಾಲೆರ್ ಕೋಟ್ಲಾ 

ಪಂಜಾಬ್ ನ 23 ನೇ ಜಿಲ್ಲೆಯಾಗಿ ಮಾಲೆರ್ ಕೋಟ್ಲಾ


  • ಪಂಜಾಬ್ ನ ಮಾಲೆರ್ ಕೋಟ್ಲಾ ವನ್ನು 23 ನೇ ಜಿಲ್ಲೆ ಎಂದು ಪಂಜಾಬ್ ಸಿಎಂ ಘೋಷಿಸಿದ್ದಾರೆ.
  • ಅಲ್ಲದೇ ಈ ಜಿಲ್ಲೆಗೆ 500 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು ಮಹಿಳಾ ಕಾಲೇಜು ಮಹಿಳಾ ಪೊಲೀಸ್ ಠಾಣೆ ನೂತನ ಬಸ್ ನಿಲ್ದಾಣವನ್ನು ಸಹ ಸಿಎಂ ಅವರು ಘೋಷಿಸಿದ್ದಾರೆ.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಮಾಹಿತಿ


ಪಂಜಾಬ್ ಕುರಿತು

  • ಪಂಜಾಬ್ ನ ರಾಜಧಾನಿ : ಚಂಡೀಗಡ
  • ರಾಜ್ಯ ವೃಕ್ಷ : ಶೀಶಾಮ್
  • ರಾಜ್ಯ ಪಕ್ಷಿ : ಬಾಜ್ (ನಾರ್ಥನ್ ಗೋಶಾಕ್)
  • ರಾಜ್ಯ ಪುಷ್ಪ : ಗ್ಲಾಡಿಯೋಲಸ್
  • ಪಂಜಾಬ್‌ನ ಮುಖ್ಯಮಂತ್ರಿ : ಕ್ಯಾಪ್ಟೇನ್ ಅಮರಿಂದರ್ ಸಿಂಗ್
  • ಪಂಜಾಬ್‌ನ ರಾಜ್ಯಪಾಲ : ವಿ. ಪಿ. ಸಿಂಗ್ ಬದ್ನೋರ್




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads