15-05-2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು
ಇಂದು 15 ಮೇ ಅಂತಾರಾಷ್ಟ್ರೀಯ ಕುಟುಂಬ ದಿನ
- ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ನೆಮ್ಮದಿಯೂ ಅಗತ್ಯ. ಮನೆಯಲ್ಲಿ ಯಾವುದೇ ಒತ್ತಡ ಇಲ್ಲದೇ ಉತ್ತಮ ಸಂಬಂಧಗಳಿದ್ದರೆ ಬದುಕು ಚಂದ ಎಂದು ಹೇಳಲಾಗುತ್ತದೆ.
- ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1993 ರಲ್ಲಿ (ಎ)ಆರ್‍ಇಎಸ್/47/237 ರ ಅನ್ವಯ ಈ ದಿನಾಚರಣೆಯನ್ನು ಘೋಷಸಿತು.
- ಮನುಕುಲಕ್ಕೆ ಕುಟುಂಬದ ಪ್ರಾಮುಖ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
- ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ಕುಟುಂಬದಲ್ಲಿ ಮಗುವುಇಗೆ ದೊರೆತ ಸಂಸ್ಕಾರ ಮತ್ತು ಸಂಸ್ಕøತಿಯು ಆ ಮಗುವಿನ ಭವಿಷ್ಯವನ್ನು ನಿರ್ಧರಿಸಲಬಲ್ಲದು ಆದ್ದರಿಂದ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರವು ಹಿರಿದಾಗಿದೆ.
- 2021 ರ ಅಂತಾರಾಷ್ಟ್ರೀಯ ಕುಟುಂಬ ದಿನಾಚರಣೆಯ ಥೀಮ್ : “Families and New Technologies”
ರಷ್ಯಾದ ಕೋವಿಡ್ ವ್ಯಾಕ್ಸಿನ್ ‘ಸ್ಪುಟ್ನಿಕ್-ವಿ’ ಗೆ 995 ರೂ.
- ಭಾರತದಲ್ಲಿ ಕೋವಿಡ-19 ಅಬ್ಬರ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಭಾರತವು ಹಲವಾರು ಲಸಿಕೆಗಳ ಮೊರೆ ಹೋಗಿದ್ದು ಅವುಗಳಲ್ಲಿ ರಷ್ಯಾದ ‘ಸ್ಪುಟ್ನಿಕ್-ವಿ’ ಲಸಿಕೆಯೂ ಒಂದು.
- ರಷ್ಯಾದ ‘ಸ್ಪುಟ್ನಿಕ್-ವಿ’ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಹೊಣೆಯನ್ನು ಹೈದರಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರಿಸ್ ಸಂಸ್ಥೆ ಹೊತ್ತುಕೊಂಡಿದೆ.
- ರಷ್ಯಾದ ‘ಸ್ಪುಟ್ನಿಕ್-ವಿ’ ಲಸಿಕೆಯು ಜೂನ್ ತಿಂಗಳಲ್ಲಿ ಬಳಕೆಗೆ ಲಭ್ಯವಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
- ದಿನಾಂಕ:14-05-2021 ರಂದು ‘ಸ್ಪುಟ್ನಿಕ್-ವಿ’ ಲಸಿಕೆಯನ್ನು ಹೈದರಾಬಾದ್‍ನಲ್ಲಿ ಫಲಾನುಭವಿಯೊಬ್ಬರಿಗೆ ಯಶಸ್ವಿಯಾಗಿ ನೀಡಲಾಗಿದೆ.
- ಕೆಲದಿನಗಳ ಹಿಂದೆ ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ತುರ್ತು ಸಂದರ್ಭಗಳಲ್ಲಿ ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಯನ್ನು ಬಳಸಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
- ಭಾರತದಲ್ಲಿರುವ ಕೋವಿಡ್-19 ಲಸಿಕೆಗಲಾದ ಕೋವ್ಯಾಕಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಎರಡು ಬಾರಿ ಪಡೆಯಬೇಕಾಗಿತ್ತು. ಆದರೆ ಸ್ಪುಟ್ನಿಕ್-ವಿ ಲಸಿಕೆಯನ್ನು ಒಂದು ಬಾರಿ ಪಡೆದರೆ ಸಾಕು.
ಸ್ಪುಟ್ನಿಕ್-ವಿ ಲಸಿಕೆಯ ಕುರಿತು
- ಕೋವಿಡ್-19 ವಿರುದ್ಧ ಹೋರಾಡಲು ರಷ್ಯಾ ಅಭಿವೃದ್ಧಿಪಡಿಸಿದ ಕೋವಿಡ್-19ನ ಲಸಿಕೆ ಸ್ಪುಟ್ನಿಕ್-ವಿ ಎಂಬುದಾಗಿದೆ.
- ಸ್ಪುಟ್ನಿಕ್-ವಿ ಲಸಿಕೆಯನ್ನು ಮುಂದಿನ ವಾರದಿಂದ ದೇಶದ ಮಾರುಕಟ್ಟೆಗೆ ಲಭ್ಯವಾಗುವ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರಸರ್ಕಾರ ತಿಳಿಸಿದೆ.
- ‘ದಿ ಲ್ಯಾನ್ಸೆಟ್’ ಎಂಬ ವೈಜ್ಞಾನಿಕ ನಿಯತಕಾಲಿಕೆ ಪತ್ರಿಕೆಯ ವರದಿಯ ಪ್ರಕಾರ ರಷ್ಯಾ ಅಭಿವೃದ್ಧಿಪಡಿಸಿರುವ ಈ “ಸ್ಪುಟ್ನಿಕ್-ವಿ” ಲಸಿಕೆಯು ಎರಡು ಡೋಸ್‍ಗಳನ್ನು ಹೊಂದಿರಲಿದ್ದು, ಸದರಿ ಡೋಸ್‍ಗಳು ಕೋವಿಡ್-19 ವಿರುದ್ಧ ಹೋರಾಟ ನಡೆಸುವಲ್ಲಿ ಶೇ. 91.6 ರಷ್ಟು ಶಕ್ತ ಮತ್ತು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
- ಭಾರತದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಅಲಭ್ಯತೆ ಅಂದರೆ ಕೊರತೆ ಕಂಡು ಬಂದಿದ್ದರಿಂದ ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ತುರ್ತು ಸಂದರ್ಭಗಳಲ್ಲಿ ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಯನ್ನು ಬಳಸಲು ಅನುಮತಿ ನೀಡಿದೆ.
- ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದಿಸುವ ಜವಾಬ್ದಾರಿಯನ್ನು ಹೈದರಾಬಾದ್ ಮೂಲದ ರೆಡ್ಡೀಸ್ ಲ್ಯಾಬೋರೇಟರೀಸ್ ಕಂಪನಿ ಹೊತ್ತುಕೊಂಡಿದೆ.
ಡಿಸಿಜಿಐ ಬಗ್ಗೆ :
- ಡಿಸಿಜಿಐ : ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಭಾರತೀಯ ಔಷಧ ನಿಯಂತ್ರಣ ಮಂಡಳಿ)
- ಡಿಸಿಜಿಐ ಕೇಂದ್ರಸ್ಥಾನ : ನವದೆಹಲಿ
- ಪ್ರಸ್ತುತ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ : ಡಾ. ವೇಣುಗೋಪಾಲ್.ಜಿ. ಸೋಮಾನಿ
- ಇದು ಭಾರತದಲ್ಲಿ ಔಷಧಗಳ ಉತ್ಪಾದನೆ, ಆಮದು, ಮಾರಾಟ, ಮತ್ತು ವಿತರಣೆಗೆ ಮಾನದಂಡಗಳನ್ನು ರೂಪಿಸುತ್ತದೆ.
ಭಾರತದಲ್ಲಿರುವ ಕೋವಿಡ್-19 ಲಸಿಕೆಗಳ ಪಟ್ಟಿ ಇಲ್ಲಿದೆ
1. ಕೋವ್ಯಾಕ್ಸಿನ್: ಇದು 01 ಜನೆವರಿ 2021 ರಿಂದ ಬಳಕೆಯಲ್ಲಿದೆ. ಇದನ್ನು ಭಾರತ್ ಬೈಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಮ್‍ಆರ್) ಸಹಯೋಗದೊಂದಿಗೆ ತಯಾರಿಸಲಾಗಿತ್ತು.
2. ಕೋವಿಶೀಲ್ಡ್ : Oxford – Astra Zeneca Vaccine ನ ಅನುರೂಪವೇ ಈ ಕೋವಿಶೀಲ್ಡ್. ಇದು 03 ಜನೆವರಿ 2021 ರಿಂದ ಭಾರತದಲ್ಲಿ ಬಳಕೆಯಲ್ಲಿದೆ.
3. ಸ್ಪುಟ್ನಿಕ್-ವಿ : ಇದಕ್ಕೆ ಇತ್ತೀಚೆಗಷ್ಟೇ ಅಂದರೆ ದಿನಾಂಕ:12 ಏಪ್ರಿಲ್ 2021 ರಂದು ಅನುಮತಿ ದೊರೆತಿದ್ದು, ದಿನಾಂಕ:14-05-2021 ರಂದು ಪ್ರಯೋಗಾರ್ಥ ಹೈದರಾಬಾದ್‍ನ ಫಲಾನುಭವಿಯೊಬ್ಬರಿಗೆ ನೀಡಲಾಗಿದ್ದು, ಜೂನ್ ತಿಂಗಳಲ್ಲಿ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗಿದೆ.
ಪ್ರಯೋಗಾರ್ಥ ಹಂತದಲ್ಲಿರುವ ಲಸಿಕೆಗಳ ಪಟ್ಟಿ ಹೀಗಿದೆ
- ZyCoV-D : ಇದನ್ನು ಅಹಮದಾಬಾದ್ ಮೂಲದ ಫಾರ್ಮಸಿ ಸಂಸ್ಥೆ Zydus Cadila ಅಭಿವೃದ್ಧಿಪಡಿಸಿದೆ.
- Bio E COVID-19
- HGCO19
- BBV154
- Covovax
ಲಂಡನ್ನಿನಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ
- ಲಂಡನ್ ನ ಲ್ಯಾಂಬೆತ್ ನಗರದಲ್ಲಿರುವ ಬಸವೇಶ್ವರ ಫೌಂಡೇಶನ್ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್ ಗಾಯತ್ರಿ ಇಸಾರ್ ಕುಮಾರ್ ಮತ್ತು ಡೆಪ್ಯೂಟಿ ಹೈಕಮಿಷನರ್ ಚರಣಜೀತ್ ಸಿಂಗ್ ಪುಷ್ಪನಮನ ಸಲ್ಲಿಸಿದರು.
- 14 ನವೆಂಬರ್ 2015 ರಂದು ಲಂಡನ್‍ನ ಲ್ಯಾಂಬೆತ್ ನಗರದಲ್ಲಿ ಪ್ರಧಾನಿ ಮೋದಿಯವರು ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು.
- ಈ ಪುತ್ಥಳಿಯು ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಂಡೆಯ ಆಲ್ಬರ್ಟ್ ಎಂಬಾಕ್ ಮೆಂಟ್ ಪ್ರದೇಶದಲ್ಲಿದೆ.
- ಕಲಬುರಗಿ ಮೂಲದ ಕನ್ನಡಿಗ ಹಾಗೂ ಲ್ಯಾಂಬೆತ್ ನಗರದ ಮಾಜಿ ಮೇಯರ್ ಆಗಿದ್ದ ಡಾ. ನೀರಜ್ ಪಾಟೀಲ್ ಅವರ ಪರಿಶ್ರಮದ ಫಲವಾಗಿ ಇದನ್ನು ನಿರ್ಮಿಸಲಾಗಿದೆ.
ಅಕ್ಟೋಬರ್ ನವೆಂಬರ್‍ನಲ್ಲಿ ಟಿ20 ವಿಶ್ವಕಪ್?
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 16 ರಿಂದ 20 ಕ್ಕೆ ಏರಿಸಲಿ ಐಸಿಸಿ ಚಿಂತನೆ ನಡೆಸಿದೆ.
- ಬರುವ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಆಡಲಿವೆ.
- 2024 ರ ಟಿ20 ಆವೃತ್ತತಿಗೆ 4 ಹೊಸ ತಂಡಗಳನ್ನು ಹೊಸದಾಗಿ ಸೇರಿಸಲು ಐಸಿಸಿ ಚಿಂತನೆ ನಡೆಸಿದೆ.
- 2028 ಅಥವಾ 2032 ರ ಒಲಿಂಪಿಕ್ಸ್ ಗೆ ಕ್ರಿಕೆಟ್ ಆಟವನ್ನು ಸೇರಿಸುವ ನಿಟ್ಟಿನಲ್ಲಿ ಐಸಿಸಿ ಈ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.
3ನೇ ಬಾರಿ ನೇಪಾಳದ ಪ್ರಧಾನಿಯಾದ ಕೆ. ಪಿ. ಶರ್ಮಾ ಒಲಿ
- ಕಳೆದ ಕೆಲದಿನಗಳ ಹಿಂದಷ್ಟೇ ನೇಪಾಳ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲಾಗದೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದ ಕೆ. ಪಿ. ಶರ್ಮಾ ಒಲಿ ಅವರು ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ, ಮೂರನೇ ಬಾರಿ ಪ್ರಧಾನಿ ಗದ್ದುಗೆಯನ್ನೇರಿದ್ದಾರೆ.
- ನೇಪಾಳದ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಒಲಿ ಅವರಿಗೆ ಪ್ರಮಾನವಚನ ಬೋಧಿಸಿದರು.
- ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ ಒಲಿ, ದೇಶದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
- 271 ಸದಸ್ಯ ಬಲದ ಸದನದಲ್ಲಿ 121 ಸದಸ್ಯರಿದ್ದು, ಸರಳ ಬಹುಮತಕ್ಕೆ 136 ಮತಗಳು ಬೇಕು.
- ನೇಪಾಳದಲ್ಲಿ ಹೊಸ ಸರ್ಕಾರವನ್ನು ರಚಿಸುವ ಸಂಬಂಧ ಬಹುಮತ ಸಾಬೀತುಪಡಿಸುವಲ್ಲಿ ವಿರೋಧ ಪಕ್ಷಗಳು ವಿಫಲವಾದ ನಂತರ ಕೆ. ಪಿ. ಶರ್ಮಾ ಒಲಿ ಅವರನ್ನೇ ಮತ್ತೊಮ್ಮೆ ನೇಪಾಳದ ಪ್ರಧಾನಿಯಾಗಿ ಗುರುವಾರ ಅಂದರೆ ದಿನಾಂಕ:13-05-2021 ರಂದು ನೇಮಕ ಮಾಡಲಾಗಿದೆ.
- ಶುಕ್ರವಾರ ದಿನಾಂಕ:14-05-2021 ರಂದು ಕೆ. ಪಿ. ಶರ್ಮಾ ಒಲಿ ಅವರಿಗೆ ಶೀತಲ್ ನಿವಾಸದಲ್ಲಿ ನೇಪಾಳದ ರಾಷ್ಟ್ರಪತಿಗಳಾದ ವಿದ್ಯಾದೇವಿ ಭಂಡಾರಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
- ನಿಮಗೆ ಗೊತ್ತೆ: ಕೆ. ಪಿ. ಶರ್ಮಾ ಒಲಿ ಅವರ ಸರಕಾರ ಕಳೆದ ಸೋಮವಾರ ಅಂದರೆ ದಿನಾಂಕ:10-05-2021 ರಂದ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಾಗದೇ ಅಧಿಕಾರದಿಂದ ಪದಚ್ಯುತ ಗೊಂಡಿತ್ತು. ಈಗ ಮತ್ತೆ ಅದೇ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ನೇಪಾಳದ ಕುರಿತು :
- ನೇಪಾಳದ ರಾಜಧಾನಿ : ಕಠ್ಮಂಡು
- ನೇಪಾಳದ ಕರೆನ್ಸಿ: ನೇಪಾಳಿ ರೂಪಾಯಿ
- ನೇಪಾಳದ ಪ್ರಧಾನಮಂತ್ರಿ : ಕೆ. ಪಿ. ಶರ್ಮಾ ಒಲಿ
- ನೇಪಾಳದ ರಾಷ್ಟ್ರಪತಿ : ವಿದ್ಯಾದೇವಿ ಭಂಡಾರಿ
2019 & 2020 ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರಕಟ
- ಚಿತ್ರದುರ್ಗದ ಮುರುಘಾಮಠ ನೀಡುವ ಪ್ರತಿಷ್ಟಿತ ಬಸವಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ.
- ಈ ಬಾರಿ 2019 ಮತ್ತು 2020 ನೇ ಸಾಲಿನ ಪ್ರಶಸ್ತಿಗಳನ್ನು ಒಟ್ಟಾಗಿ ಪ್ರಕಟಿಸಿದೆ.
- 2019 ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಭಾರತದ ಉತ್ಕøಷ್ಟ ಸರೋದ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರು ಭಾಜನರಾಗಿದ್ದಾರೆ.
- 2020 ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಕಸ್ತೀರಿ ರಂಗನ್ ಅವರು ಆಯ್ಕೆಯಾಗಿದ್ದಾರೆ.
- ಮುರುಘಾಮಠದ ಬಸವಜಯಂತ್ಯುತ್ಸವದ ವೇಳೇ ಡಾ. ಶಿವಮೂರ್ತಿ ಮುರುಘಾ ಶರಣರು ಈ ಇಬ್ಬರ ಹೆಸರನ್ನು ಘೋಷಿಸಿದರು, ಕೊರೋನ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದೆಂದು ತಿಳಿಸಿದ್ದಾರೆ.
- ಬಸವಶ್ರೀ ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಐರನ್ ಡೋಮ್
- ಇಸ್ರೇಲ್ ಮತ್ತು ಪ್ಯಾಲೇಸ್ತೀನಿನ ನಡುವಿನ ಬಿಕ್ಕಟ್ಟು ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
- ಪ್ಯಾಲೆಸ್ಟೇನ್ ಕ್ರೌರ್ಯವನ್ನು ಮಟ್ಟಹಾಕಲು ಇಸ್ರೇಲ್ ಕಂಡುಕೊಂಡ ಅತ್ಯಂತ ಪರಿಣಾಮಕಾರಿ ಅಸ್ತ್ರವೇ ಐರನ್ ಡೋಮ್.
- ಶತ್ರು ರಾಷ್ಟ್ರದ ರಾಕೆಟ್ ಮತ್ತು ಕ್ಷಿಪಣಿ ದಾಳಿಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸುವ ಹಾಗೂ ವಿಮಾನ ಮೂಲಕ ನಡೆಸುವ ವೈಮಾನಿಕ ದಾಳಿಗೆ ಪ್ರತಿರೋಧ ವ್ಯವಸ್ಥೆಯೇ ಐರನ್ ಡೋಮ್.
- ಇಸ್ರೇಲ್ ನ ವಾಯು ರಕ್ಷಣಾ ವ್ಯವಸ್ಥೆಯೇ ಐರನ್ ಡೋಮ್
- ಇತ್ತೀಚೆಗೆ ಗಾಜಾದಿಂದ ಪ್ಯಾಲೆಸ್ತೀನ್ ಅರಬ್ಬರು ನಡೆಸಿದ ರಾಕೆಟ್ ದಾಳಿಯನ್ನು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯಾದ ಐರನ್ ಡೋಮ್ (ಕಬ್ಬಿಣದ ಕವಚ/ಗೋಪುರ) ಹಿಮ್ಮೆಟ್ಟಿಸಿದೆ.
- ಪ್ರಸ್ತುತ ಇಸ್ರೇಲ್ ನಲ್ಲಿ 10 ಐರನ್ ಡೋಮ್ ಬ್ಯಾಟರಿಗಳಿವೆ. ಕಳೆದ ಹತ್ತು ವರ್ಷಗಳಲ್ಲಿ 2400 ದಾಳಿಗಳಿಂದ ಇಸ್ರೇಲ್ ನ್ನು ಇವು ರಕ್ಷಿಸಿವೆ.
- ಪ್ರತಿ ಐರನ್ ಡೋಮ್ ಬ್ಯಾಟರಿ ಗೆ 50000 ಶತಕೋಟಿ ಡಾಲರ್ ವೆಚ್ಚವಾಗುತ್ತದೆ.
- 4-70 ಕಿ. ಮೀ ವರೆಗಿನ ದಾಳಿಯನ್ನು ಐರನ್ ಡೋಮ್ ಹಿಮ್ಮೆಟ್ಟಿಸುತ್ತದೆ.
- ಇಸ್ರೇಲ್ ನ ಏರೋಸ್ಪೇಸ್ ಇಂಡಸ್ಟ್ರೀಸ್ ಇದನ್ನು ಅಭಿವೃದ್ಧಿಗೊಳಿಸಿದೆ.
- 2011ರಲ್ಲಿ ನಿಯೋಜನೆಗೊಂಡಿದೆ.
- 2000 ಕ್ಕೂ ಹೆಚ್ಚು ದಾಳಿ ತಡೆಯಬಲ್ಲ ಐರನ ಡೋಮ್ ಶೇ. 90 ರಷ್ಟು ಪರಿಣಾಮಕಾರಿಯಾಗಿದೆ.
- ನಗರ ಪ್ರದೇಶಗಳ ಮೇಲೆ ಯಾವುದೇ ಬಗೆಯ ಹವಾಮಾನದಲ್ಲಿ ನಡೆಯಬಹುದಾದ ವೈಮಾನಿಕ ದಾಳಿಗಳನ್ನು ತಡೆಯುವಲ್ಲಿ ಸಮರ್ಥವಾಗಿದೆ.
- ಅಮೆರಿಕ ಸೇನೆಗೆ ಸಮನಾದ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ ದೇಶ ಇಸ್ರೇಲ್.
- ಇಸ್ರೇಲ್ ನ ಈ ಅತ್ಯುತ್ತಮ ವಾಯು ರಕ್ಷಣಾ ವ್ಯವಸ್ಥೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ 2000 ಕೋಟಿ ರೂಪಾಯಿ ನೆರವು ನೀಡಿದ್ದರು.
ಕರ್ನಾಟಕದ 55.36 ಲಕ್ಷ ರೈತರ ಖಾತೆಗೆ 985.61 ಕೋಟಿ ರೂ.
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎಂಟನೆಯ ಕಂತಿನ ಮೊತ್ತವನ್ನು ಪ್ರಧಾನಿ ಮೋದಿ ಅಕ್ಷಯ ತೃತೀಯ ದಿನದಂದು ಬಿಡುಗಡೆ ಮಾಡಿದ್ದಾರೆ.
- 2021-22 ನೇ ಸಾಲಿಗೆ ರಾಜ್ಯದ 55.36 ಲಕ್ಷ ರೈತರಿಗೆ 985.61 ಕೋಟಿ ರೂಪಾಯಿಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.
- 2019 ರಲ್ಲಿ ದೇಶದ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ "ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ" ಯನ್ನು ಆರಂಭಿಸಿದ್ದರು.
- ದೇಶದ ಎಲ್ಲ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂ.ಗಳನ್ನು 3 ಕಂತುಗಳಲ್ಲಿ ಅಂದರೆ ಪ್ರತಿ ಕಂತಿನಲ್ಲಿ 2000 ರೂ. ನೀಡಲಾಗುತ್ತದೆ.
ತೌಖ್ತೇ ಚಂಡಮಾರುತ
- ತೌಖ್ತೇ Tauktae ಇದು ಮಧ್ಯ ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ಚಂಡಮಾರುತ.
- ಶನಿವಾರ ಮತ್ತು ರವಿವಾರ ಭಾರತದ ಪಶ್ಚಿಮ ಕರಾವಳಿಗೆ ಪ್ರಭಾಸ ಗಾಳಿಯೊಂದಿಗೆ ಅಪ್ಪಳಿಸಿ ಮಳೆ ತರುವ ಚಂಡಮಾರುತದ ಹೆಸರು ತೌಖ್ತೇ.
- ಈ ಚಂಡಮಾರುತಕ್ಕೆ ಮ್ಯಾನ್ಮಾರ್ ದೇಶವು ತೌಖ್ತೇ ಎಂಬ ಹೆಸರು ಸೂಚಿಸಿದೆ.
- ತೌಖ್ತೇ ಎಂದರೆ ಒಂದು ಜಾತಿಯ ಹಲ್ಲಿ.
- ಅರಬ್ಬಿ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಅವುಗಳ ಸುತ್ತ ಇರುವಂತಹ 13 ರಾಷ್ಟ್ರಗಳು ಹೆಸರನ್ನು ಸೂಚಿಸುತ್ತದೆ ಈ ಹೆಸರುಗಳನ್ನು ಮೊದಲೇ ಸೂಚಿಸಲಾಗಿರುತ್ತದೆ.
- ಕಳೆದ ವರ್ಷ ಪ್ರತಿ ರಾಷ್ಟ್ರ ನೀಡಿದ 13 ಹೆಸರುಗಳಲ್ಲಿ ಒಟ್ಟು 169 ಹೊಸ ಹೆಸರುಗಳನ್ನು 'ಇಂಡಿಯನ್ ಮೆಟ್ರೋಲಾಜಿಕಲ್ ವಿಭಾಗ' ಬಿಡುಗಡೆ ಮಾಡಿದೆ.
- ಈ ಪಟ್ಟಿಯಲ್ಲಿ ಕ್ರಮವಾಗಿ 13 ರಾಷ್ಟ್ರಗಳು ಸೂಚಿಸಿದ ಹೆಸರುಗಳು ಬರುತ್ತವೆ. ಹಾಗೆಯೇ ಚಂಡಮಾರುತ್ತಕ್ಕೆ ಮ್ಯಾನ್ಮಾರ್ ನೀಡಿದ ತೌಖ್ತೇ ಎಂಬ ಹೆಸರು ಇಡಲಾಗಿದೆ.
- ಈ ಚಂಡಮಾರುತದ ನಂತರ ಬರುವ ಚಂಡಮಾರುತಕ್ಕೆ 'ಯಾಸ್' ಎಂಬ ಹೆಸರು ಇಡಲಾಗಿದೆ. ಇದನ್ನು ಒಮಾನ್ ದೇಶದವರು ಸೂಚಿಸಿದ್ದಾರೆ.
- ತೌಖ್ತೇ ಚಂಡಮಾರುತ ಭಾರತದ ನೈರುತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಬರುತ್ತದೆ ಅಂದರೆ ನಮ್ಮ ಪಶ್ಚಿಮ ಕರಾವಳಿ ಕಡೆಗೆ ಬರುತ್ತದೆ.
- ಇದು ಮಧ್ಯ ಅರಬ್ಬೀ ಸಮುದ್ರದಲ್ಲಿ ಮೊದಲು ಹುಟ್ಟುತ್ತದೆ.
- ಚಂಡಮಾರುತ ಎಂದರೇನು: ಸಮುದ್ರದಲ್ಲಿ ಒಂದು ಕಡೆ ನಿಮ್ನ ಒತ್ತಡ ಸೃಷ್ಟಿಯಾಗಿ ಸುತ್ತಲಿಂದಲೂ ಅಲ್ಲಿದೆ ಗಾಳಿ ನುಗ್ಗುವುದು. ಆ ಗಾಳಿ ನೇರವಾಗಿ ನುಗ್ಗದೇ ಸುರಳಿ ಆಕಾರದಲ್ಲಿ ಸುತ್ತುತ್ತ, ಮೋಡಗಳನ್ನು ಹೊತ್ತುಕೊಂಡು ಕೆಲವೇ ಗಂಟೆಗಳಲ್ಲಿ ಅತೀ ಪ್ರಬಲ ಶಕ್ತಿಪಡೆದು, ಧಾರಾಕಾರ ಮಳೆ ಮತ್ತು ಬಿರುಗಾಳಿಯೊಂದಿಗೆ ಸಮುದ್ರ ತೀರಕ್ಕೆ ಅಪ್ಪಳಿಸಿ, ಅವಾಂತರ ಉಂಟು ಮಾಡುತ್ತವೆ.
- ತೌಖ್ತೇ ಚಂಡಮಾರುತವು 175 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ.
- ಈ ಚಂಡಮಾರುತದಿಂದಾಗಿ ಕೇರಳ ತಮಿಳುನಾಡು ಕರ್ನಾಟಕ ಗೋವಾ ಗುಜರಾತ್ ರಾಜ್ಯಗಳಿಗೆ ಭೀತಿ ಇದೆ.
No comments:
Post a Comment
If you have any doubts please let me know